ಹೊನ್ನವಳ್ಳಿ: ತಿಪಟೂರು ತಾಲೂಕು ಹೊನ್ನವಳ್ಳಿಯಲ್ಲಿ ಗೃಹ ಬಳಕೆ ಸಿಲಿಂಡರ್ ಗಳನ್ನು ಬಳಸುತ್ತಿದ್ದ ಕೋಳಿ ಅಂಗಡಿ, ಬೇಕರಿ, ಹೋಟೆಲ್, ಅಂಗಡಿಗಳು, ಟೀ ಸ್ಟಾಲ್ ಗಳ ಮೇಲೆ ದಾಳಿನಡೆಸಿದ ತಿಪಟೂರು ತಾಲೂಕು ಅಧಿಕಾರಿಗಳು ತಾಲೂಕಿನ ದಂಡಾಧಿಕಾರಿಗಳ ಮಾರ್ಗದರ್ಶನದಂತೆ ಮುಸ್ಸಂಜೆ ಸಮಯದಲ್ಲಿ ದಾಳಿ ನಡೆಸಲಾಗಿದೆ.
ಹೋಬಳಿಯ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ 14.2 ಕೆ.ಜಿ ಗೃಹ ಉಪಯೋಗಿ ಸಿಲಿಂಡರ್ ಗಳನ್ನು ಕೋಳಿ ಅಂಗಡಿ, ಬೇಕರಿ, ಹೋಟೆಲ್ ಗಳು, ಟೀ ಸ್ಟಾಲ್ ನವರು ಉಪಯೋಗಿಸುವುದು ಕಂಡುಬಂದಿದ್ದು, ಈ ಬಗ್ಗೆ ತಾಲೂಕು ಆಡಳಿತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಜು.29ರ (ಬುಧವಾರ) ವಶಕ್ಕೆ ಪಡೆದುಕೊಂಡಿರುತ್ತಾರೆ.
ಸಂಬಂಧಪಟ್ಟವರ ಮೇಲೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರ್ ತಿಳಿಸಿದ್ದಾರೆ. ತಾಲೂಕು ಆಡಳಿತದ ವತಿಯಿಂದ ಉತ್ತಮ ಕಾರ್ಯ ಕೈಗೊಂಡಿದ್ದರ ಬಗ್ಗೆ ಜನಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಆದರೆ ಗ್ಯಾಸ್ ಸಿಲಿಂಡರ್ ಗಳಿಗೆ ಹೆಚ್ಚಿನ ದರವನ್ನು ಪಡೆಯುತ್ತಿರುವ ಬಗ್ಗೆ ಸಹ ಸಾರ್ವಜನಿಕರು ದೂರು ನೀಡಿದ್ದರು.
ಕೂಡಲೇ ಬಿಲ್ ನಲ್ಲಿ ನಮೂದಾಗುವ ದರಕ್ಕಿಂತ ಹೆಚ್ಚಿನ ದರ ಪಡೆಯುವುದು ಕಂಡುಬಂದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರು ಕ್ರಮ ಕೈಗೊಳ್ಳಬೇಕೆಂಬುದು ಜನಸಾಮಾನ್ಯರ ಆಗ್ರಹವಾಗಿರುತ್ತದೆ.
ಈ ವೇಳೆ ಆಹಾರ ಶಿರಸ್ತೇದಾರ್ ರೇಣುಕ ಪ್ರಸಾದ್ ಕೆ.ಎಲ್., ಪೊಲೀಸ್ ಮುಖ್ಯ ಪೇದೆ ಶೇಷಗಿರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
