nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು

    September 9, 2026

    ಸೆಪ್ಟೆಂಬರ್ 12 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಪದಗ್ರಹಣ ಸಮಾರಂಭ

    September 9, 2026

    ಕೆ.ಎನ್. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ

    September 9, 2026
    Facebook Twitter Instagram
    ಟ್ರೆಂಡಿಂಗ್
    • ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು
    • ಸೆಪ್ಟೆಂಬರ್ 12 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಪದಗ್ರಹಣ ಸಮಾರಂಭ
    • ಕೆ.ಎನ್. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ
    • ಬಿಸಿಲಿನ ತಾಪಕ್ಕೆ ಬ್ಯಾಟರಿಗಳ ಸ್ಫೋಟ : ಹೊತ್ತಿ ಉರಿದ ವಾಹನ
    • ಇ–ಕೆವೈಸಿ:  ಸರ್ವರ್ ಸಮಸ್ಯೆ ಬಗೆಹರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ತಹಶೀಲ್ದಾರ್ ಅವರಿಗೆ ಮನವಿ
    • ಕೊಳಗೇರಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಐತಿಹಾಸಿಕ ಹೆಜ್ಜೆ
    • ಆಧ್ಯಾತ್ಮಿಕ ಸಾಧನೆಯಿಂದ ಬದುಕಿಗೆ ಆನಂದ: ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ
    • ಪಡಿತರ ಚೀಟಿ: 5 ವರ್ಷಗಳಿಗೊಮ್ಮೆ ಇ–ಕೆವೈಸಿ ಕಡ್ಡಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು
    ಚಿಕ್ಕನಾಯಕನಹಳ್ಳಿ September 9, 2026

    ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು

    By Ganesh TumkuruSeptember 9, 2026No Comments2 Mins Read

    ಚಿಕ್ಕನಾಯಕನಹಳ್ಳಿ: ರೈತರು ಸಹಕಾರ ನೀಡಿದರೆ ಸಾದ್ಯವಾದಷ್ಟು ಬೇಗ ಕಾಮಗಾರಿಯನ್ನು ಮುಗಿಸಲಾಗುವುದು ಭೂಸ್ವಾಧೀನ ಪಡಿಸಿಕೊಂಡಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ನಿಮ್ಮ ಪರಿಹಾರದ ಹಣವನ್ನು ಪಡೆಯಬಹುದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ತಿಳಿಸಿದರು.

    ತಾಲ್ಲೂಕಿನ ಸಾಸಲು ಗ್ರಾಮದ ಬಳಿಯಲ್ಲಿ ಪಟ್ಟದೇವರಕೆರೆ ಭಾಗದ ನಾಲಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾಗದ ರೈತರ ಸಹಕಾರದಿಂದ ಇಂದು ಪಟ್ಟದೇವರ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ, ಈ ಕಾಮಗಾರಿಯಲ್ಲಿ ಭೂಮಿಯನ್ನು ಕಳೆದು ಕೊಂಡಿರುವಂತಹ ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಿದರೆ ಅವರಿಗೆ ಪರಿಹಾರದ ಹಣ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

    ರೈತರು ಅತಂಕ ಪಡುವ ಅಗತ್ಯವಿಲ್ಲ ಸಾಧ್ಯವಾದಷ್ಟು ಈ ಕಾಮಗಾರಿಯು ಆದರೆ ಈ ಭಾಗದಿಂದ ಹಾಲ್ಕುರಿಕೆ ಕೆರೆ, ಕುಪ್ಪೂರುಚಿಕ್ಕೆರೆ, ಮಂಚಸಂದ್ರ ಕೆರೆ, ತಮ್ಮಡಿಹಳ್ಳಿಕೆರೆ, ದಾಸಿಹಳ್ಳಿ ಕೆರೆ, ಕುಪ್ಪೂರು ಕೆರೆಗಳಿಗೆ ಹರಿಯಲಿದೆ ಆದ್ದರಿಂದ ರೈತರ ಸಹಕಾರ ಮುಖ್ಯವಾಗಿದೆ ಎಲ್ಲರೂ ಸಹಕಾರ ನೀಡಿದರೆ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಬಹುದಾಗಿದೆ ಎಂದರು.

    ಈ ಸಂದರ್ಭದಲ್ಲಿ ಎಇಇ ಸೌಜನ್ಯ ಮಾತನಾಡಿ, ಹಾಲ್ಕುರಿಕೆ ಬ್ರಾಂಚ್ ಒಂದರಿoದ ಒಟ್ಟು 13.5ಕಿ.ಮೀ ಉದ್ದ ಇರುವ ಚಾನಲ್ ಕಾಮಗಾರಿಯಲ್ಲಿ ಈಗಾಗೇ 9.8 ಕಿ.ಮೀ ಆಗಿದ್ದು ಇದರಲ್ಲಿ 1.2 ಕಿ.ಮೀ ಅರಣ್ಯ ಪ್ರದೇಶವಿದೆ ಈಗಾಗಲೇ ಅಲ್ಲಲ್ಲಿ ಚಾನಲ್ ಕೆಲಸಗಳು ಅಲ್ಪಸ್ವಲ್ಪ ಆಗಿದ್ದು ಇನ್ನು ಅವಾರ್ಡ್ ಆಗಿರದಂತಹ ರೈತರಿಗೆ ಇನ್ನು ಹತ್ತು ದಿನದಲ್ಲಿ ಅವಾರ್ಡ್ ನೀಡಲಾಗುವುದು ರೈತರು ಸಹಕಾರ ನೀಡಿದರೆ ಕಾಮಗಾರಿಯು ಪೂರ್ಣವಾಗಲಿದೆ ಎಂದರು.

    ಸ್ಥಳೀಯ ಯಶೋಧಮ್ಮ ತಮ್ಮ 20 ಗುಂಟೆ ಜಮೀನು ಕಾಮಗಾರಿಗೆ ಭೂಸ್ವಾಧೀನಗೊಳ್ಳಲಿದ್ದು ಇದಕ್ಕೆ ಸರಿಯಾಗಿ ಪರಿಹಾರ ನೀಡಬೇಕು ಇಲ್ಲದಿದ್ದರೆ ನಾನು ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ವಿರೋಧಿಸಿದರು.

    ಈ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿ ನಿಮ್ಮ ಪರಿಹಾರದ ಹಣಕ್ಕೆ ನಾನು ಜವಾಬ್ದಾರಿ ಕಾಮಗಾರಿಗೆ ಅವಕಾಶ ಮಾಡಿಕೊಡಿ ಇದರಿಂದ ರೈತರಿಗೆ ಅನುಕೂಲವಾಗಲಿದ್ದು ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ ನಿಮ್ಮ ಸಮಸ್ಯೆಗಳಿಗೆ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಭರವಸೆ ನೀಡಿದ ನಂತರ ಅವರು ಕಾಮಗಾರಿಗೆ ಅವಕಾಶ ಮಾಡಿಕೊಟ್ಟರು.

    ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ ಕುಮಾರ್, ನೀರಾವರಿ ಹೋರಾಟಗಾರ ಅಜ್ಜೇನಹಳ್ಳಿ ಶರತ್, ಸಾಸಲು ಶಶಿಧರ್, ತರಬೇನಹಳ್ಳಿ ಷಡಾಕ್ಷರಿ ಸೇರಿದಂತೆ ಇತರರು ಇದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಡೈರಿ ಕಟ್ಟಡದ ಪಿಲ್ಲರ್ ಕುಸಿದು ಬಿದ್ದು 10 ವರ್ಷದ ಶಾಲಾ ಬಾಲಕ ಸ್ಥಳದಲ್ಲೇ ಸಾವು!

    August 19, 2026

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!

    July 31, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು

    September 9, 2026

    ಚಿಕ್ಕನಾಯಕನಹಳ್ಳಿ: ರೈತರು ಸಹಕಾರ ನೀಡಿದರೆ ಸಾದ್ಯವಾದಷ್ಟು ಬೇಗ ಕಾಮಗಾರಿಯನ್ನು ಮುಗಿಸಲಾಗುವುದು ಭೂಸ್ವಾಧೀನ ಪಡಿಸಿಕೊಂಡಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ನಿಮ್ಮ…

    ಸೆಪ್ಟೆಂಬರ್ 12 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಪದಗ್ರಹಣ ಸಮಾರಂಭ

    September 9, 2026

    ಕೆ.ಎನ್. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ

    September 9, 2026

    ಬಿಸಿಲಿನ ತಾಪಕ್ಕೆ ಬ್ಯಾಟರಿಗಳ ಸ್ಫೋಟ : ಹೊತ್ತಿ ಉರಿದ ವಾಹನ

    September 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.