nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ

    October 2, 2026

    ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ

    October 2, 2026
    Facebook Twitter Instagram
    ಟ್ರೆಂಡಿಂಗ್
    • ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ
    • ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ
    • ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ
    • ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್
    • ಚಿನ್ನದ ಕರಡಿಗೆ, ನೈಸ್ ರಸ್ತೆ ಜಮೀನು ವಿವಾದ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಸ್ಪಷ್ಟನೆ!
    • ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಪ್ರಕಟ
    • ಸಿಂಹಾದ್ರಿ ಕುಟುಂಬಕ್ಕೆ ಕೆ.ಎನ್.ಆರ್ ಸಾಂತ್ವನ: ತಾಯಿಗೆ ಉದ್ಯೋಗ, ಮನೆ ಕಟ್ಟಿಸಿಕೊಡುವ ಭರವಸೆ
    • ಚಿನ್ನದ ಕರಡಿಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ
    Uncategorized October 2, 2026

    ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ

    By Ganesh TumkuruOctober 2, 2026No Comments2 Mins Read
    simhadri home

    ಮಧುಗಿರಿ: ಇತ್ತೀಚೆಗೆ ತಾಲೂಕಿನ ಕಸಪುರ ಗ್ರಾಮದಲ್ಲಿ ದಲಿತ ಸಮುದಾಯದ ಸಿಂಹಾದ್ರಿ ಎಂಬ ಯುವಕನ ಸಾವಿನ ಹಿನ್ನೆಲೆಯಲ್ಲಿ ಕಾಸಪುರ ಗ್ರಾಮಕ್ಕೆ ಗುಬ್ಬಿ ತಾಲೂಕಿನ ದಲಿತ ಮುಖಂಡರುಗಳ ತಂಡ ಭೇಟಿ ನೀಡಿ ಸಾಂತ್ವನ ಹೇಳಿ ಐವತ್ತು ಸಾವಿರ ರೂಗಳ ಸಹಾಯ ಹಸ್ತ ನೀಡಲಾಯಿತು.

    ಗುಬ್ಬಿ ತಾಲೂಕಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಗನ್ನಾಥ್, ಜಿಲ್ಲಾ ಮಾದರ ಮಹಾಸಭಾ ಮುಖಂಡ ರಘು ಅವರ ನೇತೃತ್ವದಲ್ಲಿ ಸುಮಾರು 30 ಜನರ ತಂಡ ಕಾಸಪುರ ಗ್ರಾಮದ ಸಿಂಹಾದ್ರಿ ಅವರ ತಾಯಿ ಅನ್ನಪೂರ್ಣ ಅವರಿಗೆ ₹50,000 ನೀಡಿ, ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಧೈರ್ಯ ಹೇಳಿದರು.

    ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸೇವಾ ರಾಜ್ಯ ಉಪಾಧ್ಯಕ್ಷರಾದ ಮರಾಸೆಟ್ಟಹಳ್ಳಿ ಬಸವರಾಜ್ ಅವರು ಮಾತನಾಡಿ, ಸಿಂಹಾದ್ರಿಯ ಕೊಲೆ ಪ್ರಕರಣ ಇಡೀ ದಲಿತ ಸಮುದಾಯಕ್ಕೆ ಬರಸಿಡಿಲು ಬಡಿದಂತಾಗಿದೆ, ಕೂಡಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

    ಮಾದರ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ರಘು ಅವರು ಮಾತನಾಡುತ್ತಾ, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ನೆಪ ಮಾತ್ರಕ್ಕೆ ಕುಟುಂಬದ ಸದಸ್ಯರಿಗೆ ಬಂದು ಸಾಂತ್ವನ ಹೇಳುತ್ತಿದ್ದಾರೆ, ಆದರೆ ಇವರಿಗೂ ಯಾವುದೇ ರೀತಿಯ ಪರಿಹಾರ ಮತ್ತು ನ್ಯಾಯದ ಬಗ್ಗೆ ಭರವಸೆ ನೀಡುತ್ತಿಲ್ಲ. ಇಲ್ಲಿನ ಸ್ಥಳೀಯರು ಪ್ರತಿನಿತ್ಯ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಪ್ರಕರಣವನ್ನು ಬೇರೆಡೆಗೆ ಕೊಂಡೊಯ್ಯುವ ಹುನ್ನಾರಗಳು ನಡೆಯುತ್ತಿವೆ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸಬೇಕು, ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭವಿಷ್ಯವನ್ನು ನಿರ್ಧರಿಸುವ ಯುವಕರನ್ನು ಅಮಾನವೀಯವಾಗಿ ಕೊಲೆ ಮಾಡುತ್ತಿರುವ ಘಟನೆಗಳನ್ನು ನೋಡಿದರೆ ನಾವುಗಳು ಅಂಬೇಡ್ಕರ್ ಅವರು ನೀಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೇ ಎಂಬ ಅನುಮಾನಗಳು ಕಾಡುತ್ತಿವೆ. ಹೀಗಾಗಿ ಸಿಂಹಾದ್ರಿಯ ಕೊಲೆ ಪ್ರಕರಣವನ್ನು ಸರ್ಕಾರ ಗಮನಿಸಿ ಸೂಕ್ತ ತನಿಖೆಯನ್ನು ಕೈಗೊಂಡು ಸಿಂಹಾದ್ರಿಯ ಕುಟುಂಬಕ್ಕೆ ನ್ಯಾಯವನ್ನು ಒದಗಿಸಬೇಕು.

    — ಜಗನ್ನಾಥ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ.

    ಗುಬ್ಬಿ ತಾಲೂಕಿನ ದಲಿತ ಸೇವಾ ಸಮಿತಿ ಮುಖಂಡರಾದ ಬಸವರಾಜು ಮಾರಶೆಟ್ಟಿಹಳ್ಳಿ, ಪಣೆಯಪ್ಪ ಬಿಧ್ರೆಹಳ್ಳಿ, ಕಾವಲ್ ಹಾಗಲವಾಡಿ, ನಟರಾಜು ಕುಂದರನಹಳ್ಳಿ, ನರೇಂದ್ರ ಕುಮಾರ್ ಕಪಾಲಿ, ಗುಬ್ಬಿ ತಾಲೂಕಿನ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನೆ ಸಂಚಾಲಕರಾದ ಕೃಷ್ಣಪ್ಪ, ಎಂ.ಎನ್. ಕೋಟೆ ಕಲ್ಲೇಶ್, ಮಂಚಳ್ಳಿ ಶಿವಸ್ವಾಮಿ, ನಾಗಭೂಷಣ್, ಕಲ್ಲೂರು ರವಿ, ಎನ್.ಎ. ನಾಗರಾಜು, ನರೇಂದ್ರ ಕುಮಾರ್, ಬಸವರಾಜ್ ಗುಬ್ಬಿ, ನಾಗರಾಜು ಚುಟುಕುಪ್ಪ ಸೇರಿದಂತೆ ದಲಿತ ಸಮುದಾಯದ ಇತರೆ ಮುಖಂಡರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಸಾಲ ಸೌಲಭ್ಯ : ಪರಿಶಿಷ್ಟ ಪಂಗಡದವರಿಂದ ಅರ್ಜಿ ಆಹ್ವಾನ

    September 30, 2026

    ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಶಾಕ್!

    September 22, 2026

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    September 21, 2026

    Leave A Reply Cancel Reply

    Our Picks

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ನೋಂದಾಯಿತ ಜೈನ ಬಸದಿಗಳ ಅರ್ಚಕರು, ಬೌದ್ಧ ವಿಹಾರಗಳ ಧಮ್ಮಚಾರಿ ಮತ್ತು ಸಿಖ್…

    ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ

    October 2, 2026

    ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ

    October 2, 2026

    ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್

    October 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.