ಗರ್ಭಿಣಿ ಮಹಿಳೆಯ ಹೆರಿಗೆಗೆ ನೆರವಾದ ರೈಲ್ವೇ ಸಿಬ್ಬಂದಿಯ ಮಾನವೀಯ ಸ್ಟೋರಿ ವರದಿಯಾಗಿದೆ. ಇಂತಹುದೇ ಘಟನೆಯೊಂದು LTT-ಪ್ರಯಾಗರಾಜ್ ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ್ದು, ತುಂಬು ಗರ್ಭಿಣಿ ಮಹಿಳೆಯೋರ್ವರಿಗೆ ಪ್ರಯಾಣ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ, ಸಹಪ್ರಯಾಣಿಕರೊಂದಿಗೆ ಟಿಕೆಟ್ ಸಿಬ್ಬಂದಿಯೂ ಮಹಿಳೆಗೆ ನೆರವು ನೀಡಿದ ರೀತಿ ವಿಶೇಷವಾಗಿತ್ತು.
ಟಿಕೆಟ್ ತಪಾಸಣಾ ತಂಡದಲ್ಲಿದ್ದ ಅಧಿಕಾರಿಗಳಾದ ನಂದ್ ಬಿಹಾರಿ ಮೀನಾ, ಅಲೋಕ್ ಶರ್ಮಾ, ರಾಜಕರಣ್ ಯಾದವ್ ಮತ್ತು ಇಂದ್ರ ಕುಮಾರ್ ಮೀನಾ, ಸಹಪ್ರಯಾಣಿಕರೊಂದಿಗೆ ಗರ್ಭಿಣಿ ಸ್ತ್ರೀಯ ಹೆರಿಗೆಗೆ ನೆರವಾಗುವ ಮೂಲಕ, ತಾಯಿ ಹಾಗೂ ನವಜಾತ ಶಿಶುವಿನ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಪ್ರಯಾಣ ಸಮಯದಲ್ಲಿಯೇ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ಸೌಕರ್ಯಗಳನ್ನೊದಗಿಸಿ ರೈಲ್ವೇ ಸಿಬ್ಬಂದಿ ನೆಲದ ಮೇಲೆ ಮಲಗಿಸಿದ್ದಾರೆ.
ಅಧಿಕಾರಿಗಳ ಸಮಯೋಚಿತ ಸಹಕಾರ ಹಾಗೂ ಸಹಪ್ರಯಾಣಿಕರ ನೆರವಿನಿಂದ ಮಹಿಳೆಗೆ ಸುರಕ್ಷಿತ ಹೆರಿಗೆಯನ್ನು ಮಾಡಲಾಯಿತು ಎಂದು ಮಹಿಳೆಯ ಕುಟುಂಬಸ್ಥರು ತಿಳಿಸಿದ್ದು, ಅನಿರೀಕ್ಷಿತ ಪರಿಸ್ಥಿತಿಯಲ್ಲೂ ತಂಡವು ಸಂಯೋಜಿತವಾಗಿ ಒಗ್ಗೂಡಿ ಕಷ್ಟದಲ್ಲಿರುವ ಮಹಿಳೆಗೆ ನೆರವಿನ ಹಸ್ತ ಚಾಚಿತು ಎಂದು ವರದಿ ತಿಳಿಸಿದೆ. ಸಹಪ್ರಯಾಣಿಕರೂ ಕೂಡ ಗರ್ಭಿಣಿ ಮಹಿಳೆಯ ಹೆರಿಗೆಗೆ ಸಹಾಯವನ್ನು ಮಾಡಿದ್ದಾರೆ. ಪ್ರಯಾಣದ ಮಧ್ಯೆ ಗರ್ಭಿಣಿ ಸ್ತ್ರೀಯು ನವಜಾತ ಶಿಶುವಿಗೆ ಜನ್ಮ ನೀಡಿರುವ ಘಟನೆಯನ್ನು ಇಲಾಖೆ ಹಂಚಿಕೊಂಡಿದ್ದು, ಟಿಕೆಟ್ ತಪಾಸಣೆ ಅಧಿಕಾರಿಗಳು ಹಾಗೂ ಸಹಪ್ರಯಾಣಿಕರು ತೋರಿದ ಕಾಳಜಿ ಹಾಗೂ ಮಾನವೀಯತೆಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296