ತುಮಕೂರು: ನಿನ್ನೆ ಮತ್ತು ಇಂದು AIDSO ವಿದ್ಯಾರ್ಥಿ ಸಂಘಟನೆಯ ವತಿಯಿಂದ “ಶಹೀದ್ ಏ ಅಜಮ್ ಭಗತ್ ಸಿಂಗ್” ರವರ 94ನೇ ಹುತಾತ್ಮ ದಿನದ ಅಂಗವಾಗಿ ನಗರದೆಲ್ಲೆಡೆ ಕಾರ್ಯಕ್ರಮಗಳು ಮಾಡಲಾಯಿತು.
ಭಗತ್ ಸಿಂಗ್, ಸುಖದೇವ್, ರಾಜ್ ಗುರು ನಗುನಗುತ್ತಾ ಗಲ್ಗಂಬಕ್ಕೆ ಏರಿ ಇಂದಿಗೆ 94 ವರ್ಷಗಳು. ಇಂದಿಗೂ ಈ ಮಹಾನ್ ವ್ಯಕ್ತಿಗಳೇ ನಮಗೆ ಆದರ್ಶ. ಭಗತ್ ಸಿಂಗ್ ಹೆಸರೇ ಇಂದಿಗೂ ಎಲ್ಲರಲ್ಲೂ ಹೊಸ ಚೈತನ್ಯ ತುಂಬುತ್ತದೆ. ಆದರೆ, ಭಗತ್ ಸಿಂಗ್ ಕನಸು ಕಂಡ ಯಾವ ಮಗುವು ಹಸಿವಿನಿಂದ ನರಳದ, ಎಲ್ಲರಿಗೂ ಸಮಾನ ಶಿಕ್ಷಣ ಸಿಗುವ, ಉಚಿತ ಆರೋಗ್ಯ ಸಿಗವ ಸಮಾಜವಾದಿ ಭಾರತ ಇಂದಿಗೂ ಕನಸಾಗಿಯೇ ಉಳಿದಿದೆ.
ಈ ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ತೆಗೆದುಕೊಂಡು, ಅವರ ವಿಚಾರಗಳನ್ನು ಸಾರುತ್ತ AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಭಗತ್ ಸಿಂಗ್, ಸುಖದೇವ್, ರಾಜಗುರು ರವರ 94ನೇ ಹುತಾತ್ಮ ದಿನದ ಕಾರ್ಯಕ್ರಮಗಳನ್ನು ನಗರದೆಲ್ಲೆಡೆ ಹಮ್ಮಿಕೊಳ್ಳಲಾಯಿತು.
ಹಾಗೆಯೇ, ಇಂದಿನ ರಾಜ್ಯ ಸರ್ಕಾರ, ಹಿಂದಿನ ಸರ್ಕಾರದಂತೆ ಸಂಯೋಜನೆ ಹೆಸರಿನಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇದರ ವಿರುದ್ಧ ಬಲಿಷ್ಠವಾಗಿ ಹೋರಾಟವನ್ನು ಬೆಳೆಸುತ್ತಿರುವ AIDSO ವಿದ್ಯಾರ್ಥಿ ಸಂಘಟನೆಯು “ಸರ್ಕಾರಿ ಶಾಲೆಗಳನ್ನು ಉಳಿಸುವ” ಸಂಕಲ್ಪದೊಂದಿಗೆ ಭಗತ್ ಸಿಂಗ್ ರ ಹುತಾತ್ಮ ದಿನದ ಸಂದೇಶವನ್ನು ಎಲ್ಲೆಡೆ ಸಾರಲಾಯಿತು.
ನಗರದ ಉದ್ಯಾನಳಲ್ಲಿ, ಮೈದಾನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸುಕತೆಯಿಂದ ಭಗತ್ ಸಿಂಗರ ಭಾವಚಿತ್ರಕ್ಕೆ ಹೂವು ಅರ್ಪಿಸುವುದರ ಮೂಲಕ ಅವರಿಗೆ ಗೌರವ ಸಲ್ಲಿಸಿದರು.
ವರದಿ: ಲಕ್ಕಪ್ಪ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4