ಬೆಳಗಾವಿ : ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತವಾಗಿ ಇಂದು ಬೆಳಗಾವಿ ನಗರದ ಅಶೋಕ್ ಸ್ಥಬದಿಂದ ಚೆನ್ನಮ್ಮ ಸರ್ಕಲ್ ಅವರಿಗೆ ಫಿಟ್ ಇಂಡಿಯಾ ರನ್ ಕಾರ್ಯಕ್ರಮವನ್ನು ಬೆಳಗಾವಿ ನಗರಾಭಿವೃದ್ಧಿಮತ್ತು ಬೆಳಗಾವಿ ಸ್ಮಾರ್ಟ್ ಸಿಟಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ದೇಶವಾಗಿ ಫಿಟ್ ಇಂಡಿಯಾ ದೇಶದ ಜನರು ಆರೋಗ್ಯಕರವಾಗಿರಬೇಕು. ಆರೋಗ್ಯವೇ ಭಾಗ್ಯ ಎಂಬ ಘೋಷವಾಕ್ಯದಿಂದ ಕಾಲೇಜ್ ವಿದ್ಯಾರ್ಥಿಗಳು , ಬೆಳಗಾವಿ ನಾಗರಿಕರು, ಬೆಳಗಾವಿ ನಗರದ ಅಶೋಕ ಸ್ತಂಭದಿಂದ ಚೆನ್ನಮ್ಮ ವೃತ್ತದದಿಂದ ಓಡುವ ಮೂಲಕ ಫಿಟ್ ಇಂಡಿಯಾ ಸಂದೇಶವನ್ನು ಸಾರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಾರ್ಟ್ ಸಿಟಿ ನಿರ್ದೇಶಕರಾದ ಪ್ರವೀಣ್ ಬಾಗೇವಾಡಿ, ಆಜಾದಿಕಾ ಅಮೃತ್ ಮಹೋತ್ಸವ ನಿಮಿತವಾಗಿ ಇಂದು ಬೆಳಗಾವಿಯಲ್ಲಿ ಕಾಲೇಜ್ ವಿದ್ಯಾರ್ಥಿಗಳು, ನಾಗರಿಕರು ಮತ್ತು ಸ್ಮಾರ್ಟ್ ಸಿಟಿ ಮತ್ತು ನಗರ ಅಭಿವೃದ್ಧಿ ಇಲಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.
ಸ್ಮಾರ್ಟ್ ಸಿಟಿ ವತಿಯಿಂದ ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy