ಬೆಂಗಳೂರು: ದೇವೇಗೌಡರಿಗೆ ಈ ಗತಿ ಬರಬಾರದಿತ್ತು ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸಿದ್ಧಾಂತವನ್ನೇ ಮಾರಿಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸ್ಥಿತಿ ಜೆಡಿಎಸ್ ಗೆ ಬರಬಾರದಿತ್ತು ಎಂದ ಡಿ.ಕೆ. ಶಿವಕುಮಾರ್, ಗೌಡರ ಮನೆ ಅಳಿಯನಿಗೆ ಜೆಡಿಎಸ್ ನಿಂದ ಟಿಕೆಟ್ ಕೊಡಲಾಗದೆ ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ದೇವೇಗೌಡರಿಗೆ ಬರಬಾರದಿತ್ತು ಎಂದರು.
ಮಾಜಿ ಪ್ರಧಾನಿಗಳ ಈ ಸ್ಥಿತಿ ನೋಡುತ್ತಿದ್ದರೆ ನನಗೆ ಬೇಸರವಾಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಜೆಡಿಎಸ್ ನವರು ಮೂರು ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಜೆಡಿಎಸ್ ಬಿಜೆಪಿ ಅಭ್ಯರ್ಥಿಗಳೆಲ್ಲರೂ ಠೇವಣಿ ಕಳೆದುಕೊಳ್ಳೋದು ಗ್ಯಾರೆಂಟಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಮಗೆ ಇನ್ನೂ ನಾಲ್ಕುವರೆ ವರ್ಷ ಆಡಳಿತ ಅವಧಿ ಇದೆ ಅದಾದ ನಂತರ ಮುಂದಿನ ಐದು ವರ್ಷವೂ ಕಾಂಗ್ರೆಸ್ ಸರ್ಕಾರವೇ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296