ತಿಪಟೂರು: ತಾಲೂಕು ಕೆರಗೋಡಿ, ರಂಗಾಪುರ ಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿಯವರ 73ನೇ ಜನ್ಮ ವರ್ಧಂತಿ ಮಹೋತ್ಸವ ಏಪ್ರಿಲ್ 5ರಂದು ಶನಿವಾರ ಶ್ರೀಮಠದ ಆಭರಣದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಸುಕ್ಷೇತ್ರದ ಹಿರಿಯ ವಿದ್ಯಾರ್ಥಿ ಹಾಗೂ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಯು.ಕೆ.ಶಿವಪ್ಪ ತಿಳಿಸಿದರು.
ಅಂದು ಸುಕ್ಷೇತ್ರ ಆರಾಧ್ಯ ದೈವ ಗಳಾದ ಶ್ರೀ ಶಂಕರೇಶ್ವರ ಸ್ವಾಮಿ, ಶ್ರೀರಂಗನಾಥ ಸ್ವಾಮಿ ಎಲ್ಲ ಹಿರಿಯರ ಆರುಗುರುವರೇಣ್ಯರ ಗದ್ದೆಗೆ ದೇವಾಲಯಗಳಿಗೆ ಅಲಂಕಾರ, ರುದ್ರಾಭಿಷೇಕ ಶ್ರೀಗಳ ಪಾದಪೂಜೆ, ಭಕ್ತರಿಂದ ಭಕ್ತಿ ಸಮರ್ಪಣೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾಡಾಳು ಶ್ರೀ ರುದ್ರಮುನಿ ಸ್ವಾಮಿ ಗೋಡೆಕೆರೆ ಮೃತ್ಯುಂಜಯ ದೇಶಿಯ ಕೇಂದ್ರ ಸ್ವಾಮೀಜಿ ಸೇರಿದಂತೆ ಹರ ಗುರು ಚರಮೂರ್ತಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ರೋಟರಿ ಕ್ಲಬ್ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಂದು 5,000 ಜನ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು, ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗುವುದು ತಿಪಟೂರಿನಿಂದ ಬಂದು ಹೋಗುವ ಸಾರ್ವಜನಿಕರಿಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಹುಂಡಿಗನಾಳು ಬಸವರಾಜು ಸಹ ಕಾರ್ಯದರ್ಶಿ ಕೆ.ಆರ್.ಶಂಕರಪ್ಪ ಆಡಳಿತ ಅಧಿಕಾರಿಗಳ ಲೋಕೇಶ್ ಐಟಿಐ ಕಾಲೇಜಿನ ಪ್ರಾಂಶುಪಾಲ ಎಂ.ಎನ್.ಶಶಿಧರ್ ಮತ್ತಿತ್ತರು ಇದ್ದರು
ವರದಿ: ಆನಂದ, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4