ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗೆಮಲ್ಲಿಗೆ ಬಳಗದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಂದು ಸಂಜೆ 4 ಗಂಟೆಗೆ ನಗರದ ಕನ್ನಡಭವನದಲ್ಲಿ 30ನೇ ವರ್ಷದ “ಮೂರ್ಖರ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಭವನದಲ್ಲಿ ನಿರ್ಮಿಸಲಾಗುವ ಹಾಸ್ಯ ಸಾಹಿತಿ ಗೌಡನಕಟ್ಟೆ ತಿಮ್ಮಯ್ಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗೆಮಲ್ಲಿಗೆ ಬಳಗದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ವಹಿಸಲಿದ್ದು, ಸಂಸ್ಕಾರ ಭಾರತಿ ಅಧ್ಯಕ್ಷ ಬಿ.ಆರ್.ನಟರಾಜ ಶೆಟ್ಟಿ ಉದ್ಘಾಟಿಸುವರು. ಜಿಲ್ಲಾ ಕಸಾಪ ಕೊಡಮಾಡುವ ಗೌ.ತಿ.ದತ್ತಿ ಪ್ರಶಸ್ತಿಯನ್ನು ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಪ್ರದಾನ ಮಾಡುವರು.
ದಿನಾಚರಣೆ ಪ್ರಯುಕ್ತ ಡಾ: ಬಿ.ಸಿ. ಶೈಲಾನಾಗರಾಜ್ ಅವರ ಉಪಸ್ಥಿತಿಯಲ್ಲಿ ಹಾಸ್ಯ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಜಿ.ಕೆ.ಕುಲಕರ್ಣಿ, ಸುಮ ಬೆಳಗೆರೆ, ಓಂಕಾರಪ್ರಿಯ ಬಾಗೇಪಲ್ಲಿ, ಕಮಲಾರಾಜೇಶ್, ಸಿಹಿಜೀವಿ ವೆಂಕಟೇಶ್ವರ, ಅಬ್ಬಿನಹೊಳೆ ಸುರೇಶ್, ತುರುವೇಕೆರೆ ಪ್ರಸಾದ್, ಸಂಕೇತ್ ಗುರುದತ್ತ, ಅರುಣಕುಮಾರ್ ಕಲ್ಲೂರು, ಇಂದಿರಾ ಸಿ.ಎ. ಸೇರಿದಂತೆ ಹಲವಾರು ಕವಿಗಳು ಭಾಗವಹಿಸಲಿದ್ದಾರೆ.
ಹಿರೇಮಗಳೂರು ಕಣ್ಣನ್ ಆಕರ್ಷಣೆ:
ನಂತರ, ಹರಟೆ ಖ್ಯಾತಿಯ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮತ್ತು ಗಂಗಾವತಿಯ ಲಿಂಗಾರೆಡ್ಡಿ ಅವರು ಹಾಸ್ಯ ರಸಾಯನ ಉಣಬಡಿಸಲಿದ್ದಾರೆ. ಅತಿಥಿಯಾಗಿ ಬಿ.ಎಂ.ಮAಜುನಾಥ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಇಂಜಿನಿರ‍್ಸ್ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಿ.ಎನ್. ರಾಧಾಕೃಷ್ಣ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಕೊಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ತುಮಕೂರು ಜಿಲ್ಲೆಯ ವ್ಯಂಗ್ಯಚಿತ್ರ ಕಲಾವಿದರಿಂದ ಕನ್ನಡ ಭವನದ ಆವರಣದಲ್ಲಿ ಬೆಳಿಗ್ಗೆ 10:30 ರಿಂದ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಎಂ.ಕೆ.ನಾಗರಾಜರಾವ್ ಹಾಗೂ ಡಿ.ವಿ. ಶೇಷಾಚಲ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿ.ವಿ.ವಿ. ಶಾಸ್ತ್ರಿ, ಸಿ.ಎ.ಸೋಮೇಶ್ವರ ಗುಪ್ತ, ತು.ಮ.ಬಸವರಾಜು ಅವರನ್ನು ಸನ್ಮಾನಿಸಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4