Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದರೆ, ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಮೈತ್ರಿ ಪಕ್ಷಗಳ ಸಮನ್ವಯ ಸಭೆ ಸಂದರ್ಭದಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಬಹಳ ಹಿಂದೆನೇ ಆಗಬೇಕಿತ್ತು. ಕಾರಣಾಂತರದಿಂದ ಸಭೆ ಇಂದು ನಿರ್ಧಾರವಾಗಿದೆ. ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಒಂದೇ ವೇದಿಕೆಗೆ ಬಂದಿದ್ದೇವೆ” ಎಂದರು. “ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಆನೆಬಲ ಬಂದಂತೆ ಆಗಿದೆ. ಮಂಡ್ಯ ಹಾಗೂ ಮೈಸೂರಲ್ಲಿ ನಾನು, ಕುಮಾರಸ್ವಾಮಿ ಜಂಟಿ ಪ್ರವಾಸ ಮಾಡಿದ್ದೇವೆ. ಬಹಳಷ್ಟು ಸಲ ಹೊಂದಾಣಿಕೆ ರಾಜಕೀಯ ನಡೆದಿದೆ. ಬಿಜೆಪಿ-ಜೆಡಿಎಸ್ ಹಾಗೂ ಜೆಡಿಎಸ್-ಕಾಂಗ್ರೆಸ್ ಸಾಕಷ್ಟು ಸಲ ಹೊಂದಾಣಿಕೆಯಾಗಿದೆ. ಈ ಸಮ್ಮಿಲನ ರಾಜ್ಯದ ಜನರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ” ಎಂದರು. ಬಿಜೆಪಿ-ಜೆಡಿಎಸ್ ಸಮ್ಮಿಲನದಿಂದ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕೆಲಸ ಆಗುತ್ತದೆ. ಜೆಡಿಎಸ್-ಎನ್ಡಿಎ ಕೂಟಕ್ಕೆ ಬಂದಿರುವುದನ್ನು ನಮ್ಮ ನಾಯಕರು ಘೋಷಣೆ ಮಾಡಿ…
ಮಂಡ್ಯ: ಚುನಾವಣೆ ಬಂತು ಅಂದ್ರೆ ಸಾಕು ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ. ಅದು ಹೇಗೆ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಚುನಾವಣೆ ಬಂದಾಗ ಹೃದಯದ ಸಮಸ್ಯೆ ಅಂತಾರೆ. ಚುನಾವಣೆ ಹತ್ತಿರ ಇದ್ದಾಗ ಆಸ್ಪತ್ರೆ ಸೇರ್ತಾರೆ. ಮೂರೇ ದಿನಕ್ಕೆ ಆಸ್ಪತ್ರೆಯಿಂದ ಹೊರಗೆ ಬಂದು ರಾಜ್ಯ ಸುತ್ತಾಡ್ತಿರ್ತಾರೆ. ಅದೆಂಗೆ ಸಾಧ್ಯ ಅಂತ ಅರ್ಥ ಆಗ್ತಾ ಇಲ್ಲ ಎಂಬುದಾಗಿ ಹೇಳಿದರು. ಯಾರಾದ್ರು ಹಾರ್ಟ್ ಪೇಸೆಂಟ್ ಹೀಗೆ ಓಡಾಡುತ್ತಾರಾ? ನಮ್ಮ ಚಲುವಣ್ಣನಿಗೂ ಅದೇ ರೀತಿ ಹೃದಯದ ಸಮಸ್ಯೆ ಇದೆ. ಆದ್ರೆ ಇವರು ಆಸ್ಪತ್ರೆ ಸೇರಿದ್ರೆ ತಿಂಗಳು ಗಟ್ಟಳೆ ಬರಲ್ಲ. ಆಪರೇಷನ್ ಆದ ಎರಡೇ ದಿನಕ್ಕೆ ಹೊರಗೆ ಬರೋದು ಗೊತ್ತಿಲ್ಲ. ಇದು ಹೆಂಗೆ ಹೊಸ ಟೆಕ್ನಿಕ್ ಹೆಂಗೆ ಅಂತ ಗೊತ್ತಾಗ್ತಿಲ್ಲ ಎಂದರು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆಯುತ್ತಿರೊ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಟೀಕೆ ಮಾಡಿದರು. ನಮ್ಮತುಮಕೂರಿನ ಕ್ಷಣ…
ಬೆಂಗಳೂರು: ಜ.23ರಂದು ನಡೆಸಿದ್ದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ, ಮರುಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ, ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಒಟ್ಟು 545 ಹುದ್ದೆಗಳ ನೇಮಕಕ್ಕೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನವದೆಹಲಿ: ಕೃಷಿ, ಶಿಕ್ಷಣ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ. ಲೋಕೋಪಕಾರಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದದಲ್ಲಿ ಅವರು, “ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳುತ್ತಿದ್ದೇನೆ. ಭಾರತದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳ ಅಭಿವೃದ್ಧಿ: ಗರ್ಭಕಂಠದ ಕ್ಯಾನ್ಸರ್ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಶೋಧನೆಗಾಗಿ ವಿಜ್ಞಾನಿಗಳಿಗೆ ಹಣವನ್ನು ವಿನಿಯೋಗಿಸಲು ಮುಂದೆ ಬರಲಿರುವ ತಮ್ಮ ಹೊಸ ಸರ್ಕಾರವು ವಿಶೇಷವಾಗಿ ಎಲ್ಲಾ ವರ್ಗದ ಹುಡುಗಿಯರಿಗೆ ಲಸಿಕೆಯನ್ನು ನೀಡಲು ಶ್ರಮವಹಿಸುತ್ತದೆ ಎಂದಿದ್ದಾರೆ. ಸಾರ್ವತ್ರಿಕ ಚುನಾವಣೆಯ ನಂತರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. “ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಗತ್ಯವಿದೆ, ಭಾರತವು ಈ ನಿಟ್ಟಿನಲ್ಲಿ ಮುನ್ನಡೆಯಲಿದೆ” ಎಂದು ಹೇಳಿದರು. ಹವಾಮಾನ…
ಬೆಂಗಳೂರು: ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ದಾಳಿ ಮಾಡಿರುವ ಘಟನೆ ನಡೆದಿದೆ. ಆರೋಪಿ ರಾಮಕೃಷ್ಣಯ್ಯ ನಿವೃತ್ತ ಪಿಎಸ್‌ಐ ಆಗಿದ್ದಾರೆ. ಆ್ಯಸಿಡ್ ದಾಳಿಯಿಂದ ಕಿರಣ್ ಅವರ ಒಂದು ಕಣ್ಣಿಗೆ ಮತ್ತು ದೇಹಕ್ಕೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೃಷ್ಟಿ ಬರುವುದು ಡೌಟು ಎಂದು ನಾರಾಯಣ ನೇತ್ರಾಲಯದ ವೈದ್ಯರು ಹೇಳಿದ್ದಾರೆ. ಮಾರ್ಚ್ 25 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಿವೃತ್ತ ಪಿಎಸ್‌ಐ ರಾಮಕೃಷ್ಣಯ್ಯ ಈ ಕೃತ್ಯ ಎಸಗಿದ್ದು ಅವರ ಜೊತೆ ಅಣ್ಣ ಉಪೇಂದ್ರ ಕುಮಾರ್, ಅಕ್ಕ ಕಲಾವತಿಯೂ ಸೇರಿರುವ ಆರೋಪ ಮಾಡಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 60ರ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕೃಷ್ಣ(60) ಮೃತ ವ್ಯಕ್ತಿಯಾಗಿದ್ದಾರೆ. ಬಸ್ ನಲ್ಲಿ ಕುಳಿತಿದ್ದ ವ್ಯಕ್ತಿ ದಿಢೀರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಮೆಜೆಸ್ಟಿಕ್ ನಲ್ಲಿ ಬಸ್ ಹತ್ತಿದ್ದ ಮೃತ ವ್ಯಕ್ತಿ, ರಾಜಾಜೀನಗರದ ನವರಂಗ್ ವೃತ್ತದ ಬಳಿ ಬರುತ್ತಿದ್ದ ವೇಳೆ ಸಾವು ಸಂಭವಿಸಿದೆ. ಕೂಡಲೇ ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಕೊಡಿಸುವಷ್ಟರಲ್ಲಿ ವ್ಯಕ್ತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೀದರ್: ಬೀದರ್ ತಾಲೂಕಿನ ಅಣದೂರ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆಗೆ ಶರಣಾ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ದಾಸರ್ (27) ಎಂದು ಗುರುತಿಸಲಾಗಿದೆ. ಪತ್ನಿಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊದಿದ್ದು, ಆತನೊಂದಿಗೆ ಪರಾರಿಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ನಲ್ಲಿಯಲ್ಲಿ ಬರುತ್ತಿದ್ದ ನೀರು ವಾಸನೆ ಬರುತ್ತಿದ್ದ ಕಾರಣ, ಟ್ಯಾಂಕ್‍ನ್ನು ಜನ ಪರಿಶೀಲಿಸಿದಾಗ ದಾಸರ್ ನ ಮೃತದೇಹ ಪತ್ತೆಯಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಎರಡು ದಿನಗಳ ಹಿಂದೆಯೇ ಟ್ಯಾಂಕ್‍ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ಯಾಂಕ್ ನಲ್ಲಿ ಮೃತದೇಹ ಇರುವುದನ್ನು ನೋಡಿ ಗ್ರಾಮಸ್ಥರು ಶಾಕ್ ಗೆ ಒಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅದೇ ರೀತಿ ಸಿಬ್ಬಂದಿ ಟ್ಯಾಂಕ್ ಶುದ್ಧೀಕರಣಕ್ಕೆ ಮುಂದಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ದಾವಣಗೆರೆ: ದಾವಣಗೆರೆ ಜಿಲ್ಲೆಯ ಬಸವಾ ಪಟ್ಟಣದಲ್ಲಿ ಸ್ನಾನಕ್ಕೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಭದ್ರಾ ನಾಲೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮಣಿಕಂಠ(16) ಮೃತ ಬಾಲಕನಾಗಿದ್ದಾನೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋಗಿದ್ದ ಮಣಿಕಂಠ ಪರೀಕ್ಷೆ ಮುಗಿಸಿ ವಾಪಸ್ ಬರುವಾಗ ಭದ್ರಾ ಕಾಲುವೆಯಲ್ಲಿ ಸ್ನಾನಕ್ಕೆಂದು ಹೋಗಿದ್ದಾನೆ. ಅವಾಗ ಈ ದುರ್ಘಟನೆ ಸಂಭವಿಸಿದೆ. ಹರೋಸಾಗರದ ಬಳಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೊಡಗಿನ ಬೆಡಗಿ, ಕನ್ನಡ ಚಿತ್ರರಂಗವನ್ನು ಹಲವು ಸಮಯಗಳ ಕಾಲ ಆಳಿದ ನಟಿ, ಕನ್ನಡದ ಟಾಪ್ ನಟಿಯರಲ್ಲಿ ಪ್ರೇಮಾ ಒಬ್ಬರಾಗಿದ್ದರು. 2006 ರಲ್ಲಿ ಪ್ರೇಮಾ ಜೀವನ್ ಅಪ್ಪಾಚು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿರಂಗದಿಂದ ದೂರ ಉಳಿದರು. ಜೀವನ್ ಅಪ್ಪಾಚು ಜೊತೆ ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಎದುರಾಯ್ತು. ಬಳಿಕ ಸಂಬಂಧ ಮುರಿದು ಹೋಯಿತು. ಇದಾದ ನಂತರ ಇವರ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿ ಉಳಿಯಲಿಲ್ಲ. ಡಿವೋರ್ಸ್ ಪಡೆದು ಇಬ್ಬರೂ ದೂರವಾದರು. ಸಂದರ್ಶನವೊಂದರಲ್ಲಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದ ನಟಿ ಪ್ರೇಮಾ, ಇದು ನನ್ನ ವೈಯಕ್ತಿಕ ನಿರ್ಧಾರ. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತ ಎರಡನೇ ಮದುವೆ ಆಗುತ್ತೇನೆ ಎಂದು ಹೇಳಿದ್ದರು. ಕೆಲ ವರ್ಷಗಳ ಹಿಂದೆ ನಟಿ ಪ್ರೇಮಾ ಅವರು ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್ ಆಗಿದೆ ಎಂಬ ಗುಸುಗುಸು ಕೇಳಿಬಂದಿತ್ತು. ನಾನು ಡಿಪ್ರೆಷನ್ ಗೆ ಹೋಗಿದ್ದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿ ಇದ್ದೆ. ನಾನು ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಎಂಬ…
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು, ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿದ ನಂತರ, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ಈ ವಿಷಯದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತು. ಇದು ನ್ಯಾಯಾಂಗ ಹಸ್ತಕ್ಷೇಪದ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಿದೆ. “ಕಾನೂನಿಗೆ ಅನುಸಾರವಾಗಿ ಪರಿಶೀಲಿಸುವುದು ಸರ್ಕಾರದ ಇತರ ವಿಭಾಗಗಳಿಗೆ” ಎಂದು ನ್ಯಾಯಮೂರ್ತಿ ಮಲ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ಪೀಠ ಹೇಳಿದೆ. ವಿಚಾರಣೆಯ ಸಂದರ್ಭದಲ್ಲಿ, ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಕಾನೂನು ಅಡ್ಡಿಯನ್ನು ತೋರಿಸುವಂತೆ, ನ್ಯಾಯಾಲಯವು ಅರ್ಜಿದಾರರಾದ ಸುರ್ಜಿತ್ ಸಿಂಗ್ ಯಾದವ್ ಅವರ ವಕೀಲರನ್ನು ಕೇಳಿತು. ಪ್ರಾಯೋಗಿಕ ತೊಂದರೆಗಳಿರಬಹುದು, ಆದರೆ ಅದು ಬೇರೆಯದು. ಕಾನೂನು ತಡೆ ಎಲ್ಲಿದೆ?” ಎಂದು ನ್ಯಾಯಾಲಯ ಕೇಳಿದೆ. ಪ್ರಸ್ತುತ ನ್ಯಾಯಾಲಯವು ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ಏಪ್ರಿಲ್ ಒಂದರವರೆಗೂ ವಿಸ್ತರಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…