Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಟಾಸ್ ಗೆದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗಿನ ಟಿವಿಯಲ್ಲಿ ಹಾರ್ದಿಕ್ ಪಾಂಡ್ಯ ಮಾತನಾಡುತ್ತಿರುವ ವೇಳೆ ರೋಹಿತ್ ಶರ್ಮ ಅಭಿಮಾನಿಗಳು ಚಪ್ಪಲಿಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿಪ್ ನಿಂದ ಇಳಿಸಿದ ಬಳಿಕ ರೋಹಿತ್ ಶರ್ಮ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಅದಾಗ್ಯೂ ಇತ್ತೀಚಿಗೆ ನಡೆದ ಮ್ಯಾಚ್ ಒಂದರಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರನ್ನು ಫೀಲ್ಡಿಂಗ್ ನಲ್ಲಿ ನಿಲ್ಲಿಸುವ ಸಂದರ್ಭದಲ್ಲಿ ಆದ ಗೊಂದಲಗಳಿಂದ ರೋಹಿತ್ ಶರ್ಮಾ ಅಭಿಮಾನಿಗಳು ಪಾಂಡ್ಯ ಮೇಲೆ ಸಾಕಷ್ಟು ಕುಪಿತಗೊಂಡಿದ್ದರು. ಆದರೆ ರೋಹಿತ್ ಶರ್ಮ ಅವರಿಗೆ ಕ್ಯಾಪ್ಟನ್ಸಿ ಬಿಟ್ಟುಕೊಡಲು ಮನಸ್ಸಿಲ್ಲದಿದ್ದರೂ ಅವರನ್ನು ಕ್ಯಾಪ್ಟನ್ಸಿ ಇಂದ ಇಳಿಸಲಾಗಿದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ರೋಹಿತ್ ಶರ್ಮ ಈ ಕುರಿತು ಎಲ್ಲಿಯೂ ಸಹ ತಮ್ಮ ಬೇಸರ ವ್ಯಕ್ತಪಡಿಸಿಲ್ಲ. ನಾವು ಸಕಾರಾತ್ಮಕವಾಗಿದ್ದೇವೆ ಮತ್ತು ಸವಾಲನ್ನು ಎದುರು ನೋಡುತ್ತಿದ್ದೇವೆ. ಎಲ್ಲಾ ಆಟಗಾರರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ, ಆಟಗಾರರನ್ನು ಚೆನ್ನಾಗಿ…
ಚೆನ್ನೈನ ಅಲ್ವಾರ್ ಪೇಟ್ ಪಬ್ ನ ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಮಣಿಪುರ ಮೂಲದ ಮ್ಯಾಕ್ಸ್ ಮತ್ತು ಲಾಲಿ ಎಂದು ಗುರುತಿಸಲಾಗಿದ್ದು, ಅವರು ಪಬ್ ಉದ್ಯೋಗಿಗಳಾಗಿದ್ದಾರೆ. ಮೃತ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಆಳ್ವಾರಪೇಟೆಯ ಶೆಕ್ಮೆಟ್ ಪಬ್ನ ಮೇಲ್ಛಾವಣಿ ಕುಸಿದಿದೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ವೇಳೆ ಪಬ್ ನಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ರಕ್ಷಣಾ ಕಾರ್ಯಕರ್ತರು ಮತ್ತು ಅಗ್ನಿಶಾಮಕ ದಳ ತಿಳಿಸಿದ್ದಾರೆ. ಐಪಿಎಲ್ ನಡೆಯುತ್ತಿದ್ದು ನಾಳೆ ರಜೆ ಇದ್ದ ಕಾರಣ ಹಲವರು ಪಬ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟರಲ್ಲಿ ಮೇಲ್ಛಾವಣಿ ಸಂಪೂರ್ಣ ಕುಸಿದು ಕೆಳಗೆ ಬಿದ್ದಿದೆ. ಪಬ್ ಒಳಗೆ ಬೇರೆ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ಖಚಿತಪಡಿಸಿದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಈಗ ಹಿಂತೆಗೆದುಕೊಳ್ಳಲಾಗಿದೆ. ಮೃತ ಮೂರನೇ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಗದಗ: ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಇದ್ದಂತೆ. ಆದರೆ ಇದೀಗ ಮುದುಕರಾಗಿದ್ದಾರೆ. ಆದರೆ ಹೊಸ ಕುಸ್ತಿ ಪಟು ಬಿಟ್ಟಾಗ ಯಾರು ಗೆಲ್ಲುತ್ತಾರೆಂದು ಗೊತ್ತಾಗುತ್ತದೆ ಸಚಿವ ಎಚ್.ಕೆ.ಪಾಟೀಲ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಚಾರ್ಲಿ ಜೊತೆಗೆ ಹೊಸ ಜಾಣ ಕುಸ್ತಿಪಟು ಇಂದು ಕಣದಲ್ಲಿ ಇದ್ದಾನೆ. ಹೀಗಾಗಿ ಆನಂದ ಗಡ್ಡದ್ದೇವರಮಠ ಗೆಲುವು ನಿಶ್ಚಿತ ಎಂದು ಅವರು ಹೇಳಿದರು. ಕುಸ್ತಿಯಲ್ಲಿ ಬೊಮ್ಮಾಯಿ ಅವರು ದಾವಣಗೆರೆ ಚಾರ್ಲಿ ಇದ್ದರು ಆದರೆ ಇದೀಗ ಮುದುಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಹಿಂದೆ ದೊಡ್ಡದೊಂದು ಲಗೇಜ್ ಇದೆ. ದೊಡ್ಡ ಭಾರ ಇದೆ. ಅವರು ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ ಎಂದರು. ಮೋದಿ ಅಂತ ಹೇಳಿದಾಕ್ಷಣ 15 ಲಕ್ಷ ಆಪ್ ಕಿ ಅಕೌಂಟ್ ಗೆ ಪಂದ್ರಾಲಾಕ್ ಡಾಲೂಂಗಾ ಇದು ಜನರ ಮನಸ್ಸಿಗೆ ಒಮ್ಮೆಲೆ ಥಟ್ಟನೆ ಅಂತ ಬರುತ್ತದೆ. ರೈತರಿಗೆ ಆದಾಯ ದುಪ್ಪಟ್ಟಾಗುತ್ತೆ ಅಂತ ಹೇಳಿದ್ದರು. ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತಿವಿ ಅಂದಿದ್ರು ಇವೆಲ್ಲ ಅವರ ಹಿಂದೆ ದೊಡ್ಡ ಭಾರಗಳಿವೆ ಬಿಜೆಪಿಯ ಸುಳ್ಳು…
ತಿಪಟೂರು: ಕಾಂಗ್ರೆಸ್ ಮುಖಂಡ ಸಮಾಜ ಸೇವಕ ನಿವೃತ್ತ ಎಸಿಪಿ ಲೋಕೇಶ್ವರ್ ಅವರ ಮನೆಗೆ ಇಂದು ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ ನೀಡಿ ಲಘು ಉಪಹಾರ ಸೇವಿಸಿದರು. ಲೋಕೇಶ್ವರ್ ಮತ್ತು ಲೋಕೇಶ್ವರ್ ಬೆಂಬಲಿಗರಿಗೆ ನಾನು ಮುಂದಿನ ದಿನಗಳಲ್ಲಿ ಎಲ್ಲಾ ವೈ ಮನಸುಗಳನ್ನು ಸರಿಪಡಿಸಿ ಲೋಕೇಶ್ವರ್ ಬೆಂಬಲಿತರಿಗೆ ಉತ್ತಮ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ನೀವು ನನ್ನ ಜೊತೆ ಕೈ ಜೋಡಿಸಿ ಈ ಬಾರಿ ಗೆಲ್ಲಿಸಿದರೆ, ನಾನು ಲೋಕೇಶ್ವರ್ ಮತ್ತು ಅವರ ಹಿಂಬಾಲಕರು ಮತ್ತು ಬೆಂಬಲಕರಿಗೆ ಕಾರ್ಯಕರ್ತರಿಗೆ ಏನು ಸ್ಥಾನಮಾನಗಳು ಮತ್ತು ಕಾರ್ಯ ಚಟುವಟಿಕೆಗಳು ಬರಬೇಕು ಎಂಬುದನ್ನು ನಾನು ಉತ್ತಮ ರೀತಿಯಲ್ಲಿ ಅವರಿಗೆ ಒದಗಿಸಿಕೊಡುವಲ್ಲಿ ಯಶಸ್ವಿ ಆಗುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಕೊರಟಗೆರೆ ಪೊಲೀಸರು ಹೆಡೆಮುರಿಕಟ್ಟಿದ್ದು, ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿಸಿದ್ದಾರೆ. ಕೊರಟಗೆರೆ ತುಮಕೂರು ಮಾರ್ಗ ಮಧ್ಯದಲ್ಲಿ ಅಜ್ಜಿಹಳ್ಳಿ ಸಮೀಪಗ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸುಮಾರು ನಾಲ್ಕು ಬೈಕ್ ವಶಪಡಿಸಿಕೊಂಡು 7 ಜನ ಪುಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಯಿದ್ ಖಾನ್(19), ಸಲ್ಮಾನ್ (20), ಸಾದತ್ ಪಾಷ(20), ನಸೀಬ್‍ಉಲ್ಲಾ (19) ಸಾಧಿಕ್ ಪಾಷ(19), ಫರ್ದೀನ್ ಖಾನ್(21), ಇಸ್ಮಾಯಿಲ್(20) ವರ್ಷದ ಬಂಧಿತ ಆರೋಪಿಗಳಾಗಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ರವರ ಮಾಹಿತಿ ಮೇರೆಗೆ ಕೊರಟಗೆರೆ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮಕೈಗೊಂಡಿದ್ದು, ಪುಂಡರ ಬೈಕ್ ವ್ಹೀಲಿಂಗ್ ಗೆ ಬ್ರೇಕ್ ಹಾಕಿದ್ದಾರೆ. ರಸ್ತೆಗಳಲ್ಲಿ ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಇಲ್ಲದೆ ಹೋಗುವುದೇ ಮೊದಲನೇ ತಪ್ಪು, ಅದರಲ್ಲಿಯೂ ಈ ಪುಂಡರು ವೀಲಿಂಗ್ ಮಾಡುತ್ತಾ ವಾಹನ ಸವರರಿಗೆ ಕಿರಿಕಿರಿ ಮಾಡಿದ್ದಾರೆ. ಇತರ ವಾಹನ ಸವಾರರಿಗೆ ಸೈಡ್ ಕೊಡದೆ ರಸ್ತೆ ಮಧ್ಯದಲ್ಲಿ ವೀಲಿಂಗ್ ಮಾಡುತ್ತಾ ಪುಂಡಾಟಿಕೆ ಮೆರೆದಿದ್ದಾರೆ. ಇನ್ನು ಮುಂದಾದರೂ…
ನಮ್ಮ ಹಿರಿಯರು ಮೊದಲಿನಿಂದಲೂ ಅಡುಗೆಗೆಂದು, ಆರೋಗ್ಯಕರ ಜೀವನಕ್ಕಾಗಿ, ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಸಂಶೋಧನೆ ಕೂಡಾ ಉಲ್ಲೇಖಿಸಿದೆ. ಪ್ರಸ್ತುತ ಕಾಲ ಬದಲಾದಂತೆ ಮಾರುಕಟ್ಟೆಯಲ್ಲಿ ಈಗ ಅನೇಕ ಆಯ್ಕೆಗಳಿವೆ. ಇವುಗಳು ಮನುಷ್ಯನ ಅಡುಗೆ ಕೆಲಸವನ್ನು ಸುಲಭ ಮಾಡಿದೆ. ಆದರೆ ನಾವು ಆರೋಗ್ಯದ ಬಗ್ಗೆ ಮಾತನಾಡಿದರೆ, ಕಬ್ಬಿಣದ ಪಾತ್ರೆಯಿಂದ ಸಿಗುವ ಪ್ರಯೋಜನ ಅನೇಕ. ಹಾಗಾದರೆ ಇದಕ್ಕೆ ಸಂಬಂಧಿಸಿದ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕಬ್ಬಿಣದ ಬಾಣಲೆಯಲ್ಲಿ ನಾವು ಏನೇ ಅಡುಗೆ ಮಾಡಿದರೂ ಅದರಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿನ ರಕ್ತದ ಕೊರತೆ (ರಕ್ತಹೀನತೆ) ಸಮಸ್ಯೆಗಳು ದೂರವಾಗುತ್ತವೆ. ಆದರೆ ಟೊಮೆಟೊಗಳು ಅಥವಾ ಇತರ ಹುಳಿ ಆಹಾರವನ್ನು ಅಡುಗೆ ಮಾಡುವ ಮೊದಲು, ಕಬ್ಬಿಣದ ಪ್ಯಾನ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಿ ಎಂಬುದನ್ನು ನೆನಪಿನಲ್ಲಿಡಿ. ಕಬ್ಬಿಣದ ಹರಿವಾಣವನ್ನು ಕಬ್ಬಿಣದ ನಿಧಿ ಎಂದು ಕರೆದರೆ ತಪ್ಪಾಗದು. ಕಬ್ಬಿಣದ ಪ್ಯಾನ್ ಅನ್ನು ಸ್ವಚ್ಛಗೊಳಿಸಲು ಸುಲಭ, ಅದರಲ್ಲಿ ಅಂಟಿಕೊಂಡಿರುವ ಪದಾರ್ಥದ ಜಿಡ್ಡನ್ನು ಸೋಪಿನಿಂದ…
ಹಿಂದಿನಿಂದಲೂ ಬ್ರಿಟೀಷರ ಕಾಯಿಲೆ ಎಂದೇ ಜನರಿಗೆ ಪರಿಚಿತವಾಗಿದ್ದ ಮಧುಮೇಹ(ಸಕ್ಕರೆ ಕಾಯಿಲೆ) ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಮಧುಮೇಹದ ಬಂದರೆ ಆದರ ಲಕ್ಷಣಗಳು ನಮಗೆ ಗೊತ್ತಾಗಿ ಬಿಡುತ್ತವೆ ಎಂದು ನೀವು ಭಾವಿಸಬಹುದು. ಆದರೆ ದುರದೃಷ್ಟವಶಾತ್, ಮಧುಮೇಹವು ಇನ್ನೂ ಆರಂಭದಲ್ಲಿರುವಾಗ ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ಯಾವುದೋ ಒಂದು ಪರಿಣಾಮ ಕಂಡುಬಂದ ಬಳಿಕವೇ ಮಧುಮೇಹ ಆವರಿಸಿರುವುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಮಧುಮೇಹ ಪ್ರಾರಂಭಿಕ ಹಂತದಲ್ಲಿದ್ದುದೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ನಿಮ್ಮ ದೇಹದಲ್ಲಿ ಈ 6 ಲಕ್ಷಣಗಳು ಕಂಡುಬಂದರೆ ನಿಮಗೆ ಶುಗರ್ ಬಂದಿದೆ ಎಂಬುದು ಪಕ್ಕಾ ಆಗುತ್ತದೆ. ಹಾಗಿದ್ರೆ ಆ ಲಕ್ಷಣಗಳು ಯಾವುವು? ಕಾಲುಗಳಲ್ಲಿ ನೋವು ಅಥವಾ ಗಾಯ ಒಣಗದಿರುವುದು: ಸಕ್ಕರೆಯ ಮಟ್ಟವು ಹೆಚ್ಚಾದಾಗ, ಪಾದಗಳು ಎರಡು ರೀತಿಯಲ್ಲಿ ತೋರಿಸುತ್ತವೆ. ಮೊದಲನೆಯದಾಗಿ ಕಾಲಿನಲ್ಲಿ ಕೆಲವು ರೀತಿಯ ಸಂವೇದನೆಯನ್ನು ಅನುಭವಿಸಬಹುದು. ಎರಡನೆಯದು- ಕಾಲುಗಳಲ್ಲಿ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ನಿಮ್ಮ ಕಾಲಿನ ಗಾಯಗಳು ಎಷ್ಟು ದಿನವಾದರೂ ಗುಣವಾಗುವುದಿಲ್ಲ. ಈ ಲಕ್ಷಣಗಳು ಕಂಡುಬಂದಾಗ ಎಂದಿಗೂ ಉದಾಸೀನ ಮಾಡಬೇಡಿ. ಯಾಕೆಂದರೆ ಶುಗರ್…
ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಏನು ಶಾಶ್ವತ ಶತ್ರುನಾ..? ಅಗತ್ಯವಿದ್ದರೆ ಸಂಸದೆ ಸುಮಲತಾರನ್ನ ಭೇಟಿ ಮಾಡುತ್ತೇವೆ ಎಂದಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ನಮಗೆ ಶಾಶ್ವತ ಶತ್ರುವಲ್ಲ. ರಾಮಾಂಜನೇಯ ಯುದ್ದವೇ ಈ ಮಣ್ಣಿನಲ್ಲಿ ನಡೆದು ಹೋಗಿದೆ. ನಾವೆಲ್ಲಾ ಹುಲು ಮಾನವರು ಅದರ ಮುಂದೆ ಯಾವ ಲೆಕ್ಕ ಹೇಳಿ. ರಾಜಕೀಯದಲ್ಲಿ ಹೋರಾಟ ಜಗಳಿದ್ದೇ ಇರುತ್ತದೆ. ನಮಗೇನು ಸುಮಲತಾ ದೂರ ಅಲ್ಲ. ಅಂಬರೀಶ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಗಿದ್ದವು. ಅಗತ್ಯವಿದ್ದರೆ ಸಂಸದೆ ಸುಮಲತಾರನ್ನ ಭೇಟಿ ಮಾಡುತ್ತೇವೆ ಎಂದರು. ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ. ನೀರಾವರಿಗೆ ಹೆಚ್. ಡಿ ದೇವೇಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದರು. ನಮ್ಮತುಮಕೂರಿನ ಕ್ಷಣ…
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಂಟೇನರ್ ಮತ್ತು ಈರುಳ್ಳಿ ತುಂಬಿದ ಕ್ಯಾಂಟರ್ ನಡುವೆ ಡಿಕ್ಕಿಯಾದ ಘಟನೆ ನಡೆದಿದೆ. ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಆಂಧ್ರಪ್ರದೇಶ: ಲೋಕಸಭಾ ಚುನಾವಣೆ ಕಣ ದೇಶಾದ್ಯಂತ ರಂಗೇರಿದ್ದು ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಸಂಭ್ರಮಾಚರಣೆಗಳು ಜೋರಾಗಿವೇ. ಟಿಕೆಟ್ ಸಿಕ್ಕಿದ್ದು ಚುನಾವಣೆ ಗೆದ್ದಂತೆ ಎನ್ನುವ ರೀತಿ ಅಭ್ಯರ್ಥಿಗಳು ಭಾವೋದ್ವೇಗಕ್ಕೆ ಒಳಗಾದ ಘಟನೆಗಳೂ ನಡೆದಿವೆ. ಅದರಂತೆ ಆಂಧ್ರಪ್ರದೇಶದ ನರಸಾಪುರಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಭೂಪತಿ ರಾಜು ಶ್ರೀನಿವಾಸ್ ಹೆಸರು ಘೋಷಣೆಯಾಗಿದ್ದು, ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಪಕ್ಷದ ಕಚೇರಿ ಎದುರು ಮಲಗಿ ಕಣ್ಣೀರಿಟಿದ್ದಾರೆ. 30 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದೇ, ಇಂದು ಆ ಘಳಿಗೆ ಬಂದಿದೆ ಎನ್ನುತ್ತಾ ಪಕ್ಷದ ಕಚೇರಿ ಎದುರಿನ ಕಮಲ ಚಿತ್ರದ ಮೇಲೆ ಬೋರಲು ಮಲಗಿ ಭೂಪತಿ ರಾಜು ಶ್ರೀನಿವಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ಮೇಲೆ ಭರವಸೆ ಇಟ್ಟು ಲೋಕಸಭಾ ಟಿಕೆಟ್ ನೀಡಿದ್ದಕ್ಕೆ ವರಿಷ್ಟರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296