Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ನಾಗಾಲ್ಯಾಂಡ್ ನಲ್ಲಿ ಕೇಂದ್ರ ಸರ್ಕಾರ ಎಎಫ್ ಎಸ್ ಪಿಎ ಕಾಯ್ದೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸಿದೆ. ಅಫ್ಸಾ ಕಾನೂನನ್ನು ಈ ವರ್ಷ ಸೆಪ್ಟೆಂಬರ್ 30 ರವರೆಗೆ 8 ಜಿಲ್ಲೆಗಳು ಮತ್ತು 21 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಸ್ತರಿಸಲಾಗಿದೆ. AFSPA ಕಾಯಿದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಕೇಂದ್ರ ಗೃಹ ಸಚಿವಾಲಯದ ಕ್ರಮ ಬಂದಿದೆ. 1958 ರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (AFSPA) ಸೈನ್ಯಕ್ಕೆ ವಿಶೇಷ ಅಧಿಕಾರವನ್ನು ನೀಡುವ ಕಾನೂನು. AFSPA ಕಾಯಿದೆಯು ಸಶಸ್ತ್ರ ಪಡೆಗಳಿಗೆ ಪೂರ್ವ ವಾರಂಟ್ ಇಲ್ಲದೆ ಶೋಧಗಳನ್ನು ನಡೆಸಲು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಬಂಧಿಸಲು ಅಧಿಕಾರ ನೀಡುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ಹೃದಯಾಘಾತ ಏಕೆ ಹೆಚ್ಚುತ್ತಿದೆ ಮತ್ತು ಅದನ್ನು ತಡೆಯುವುದು ಹೇಗೆ? ಬನ್ನಿ ತಿಳಿಯೋಣ. ವೈದ್ಯರ ಪ್ರಕಾರ, ಕೆಲವು ಮಕ್ಕಳು ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುತ್ತಾರೆ. ತಾಯಿಯ ಗರ್ಭದಲ್ಲಿರುವಾಗಲೇ ಮಗು ಜನ್ಮಜಾತ ಹೃದ್ರೋಗಕ್ಕೆ ಬಲಿಯಾಗುತ್ತದೆ. ಇವುಗಳಲ್ಲಿ ಹೃದಯದ ರಂಧ್ರಗಳು ಮತ್ತು ಕೆಲವು ಹೃದ್ರೋಗಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ, ಮಗುವಿನ ಹೃದಯ ಕವಾಟಗಳು ಮತ್ತು ನಾಳಗಳು ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಅನೇಕ ಸಂದರ್ಭಗಳಲ್ಲಿ, ತಮ್ಮ ಮಗುವಿಗೆ ಅಂತಹ ಅಪಾಯಕಾರಿ ಕಾಯಿಲೆ ಇದೆ ಎಂದು ಪೋಷಕರಿಗೆ ತಿಳಿದಿರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಮಕ್ಕಳಲ್ಲಿ ಹೃದ್ರೋಗಗಳು ಹೆಚ್ಚಾಗಲು ಸ್ಥೂಲಕಾಯತೆ ದೊಡ್ಡ ಕಾರಣ. ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನಶೈಲಿಯಿಂದ ಅವರಲ್ಲಿ ಸ್ಥೂಲಕಾಯತೆ ಹೆಚ್ಚುತ್ತಿದೆ, ಇದು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತಿದೆ. ಇಷ್ಟೇ ಅಲ್ಲ ಇಂದಿನ ದಿನಗಳಲ್ಲಿ ಮಕ್ಕಳು…
ಏ.1 ರಿಂದ ಅನ್ವಯವಾಗುವಂತೆ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ಹೆದ್ದಾರಿ ಲೋಕಾರ್ಪಣೆಗೊಂಡ ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಟೋಲ್ ದರ ಹೆಚ್ಚಳವಾಗಿದ್ದು, ಮೂರನೇ ದರ ನಿಗದಿಯಾಗಿದೆ. 2023ರ ಮಾರ್ಚ್ ನಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು. ನಂತರ ಜೂನ್ ನಲ್ಲಿ ಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಶುಲ್ಕ ಹೆಚ್ಚಳದ ಬಗ್ಗೆ ಟೋಲ್ ಸಿಬ್ಬಂದಿ ವಾಹನ ಸವಾರರಿಗೆ ಕರಪತ್ರ ಹಂಚುತ್ತಿದ್ದಾರೆ. ದರಪಟ್ಟಿ ಫಲಕ ತಿದ್ದುಪಡಿ ಮಾಡಲಾಗುತ್ತಿದೆ. ಹೂತನ ಪರಿಷ್ಕರಣೆಯಲ್ಲಿ ಶೇ.3 ತಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಏಕಮುಖ ಸಂಚಾರ ಕಾರು/ವ್ಯಾನ್ / ಜೀಪ್ ಗಳಿಗೆ ಶುಲ್ಕ 155 ರೂ.ನಿಂದ 160ಕ್ಕೆ, ಲಘು ವಾಣಿಜ್ಯ ಬಳಕೆ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್ / ಬಸ್/ಎರಡು…
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ದಾಖಲೆ ಇಲ್ಲದೇ ಸಂಗ್ರಹಿಸಿದ್ದ 3.55 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ವಶಪಡಿಸಿಕೊಂಡ ಚಿನ್ನಾಭರಣವು ದಾವಣಗೆರೆಯ ವರ್ಧಮಾನ ಜುವೆಲ್ಲೆರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ದಾಖಲೆ ಇಲ್ಲದ ಚಿನ್ನ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜೇಶ್ ಹಾಗೂ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತಮಿಳುನಾಡು ಸಂಸದ ಗಣೇಶಮೂರ್ತಿ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಡಿಎಂಕೆ ಸಂಸದ ಗಣೇಶಮೂರ್ತಿ ನಿಧನರಾಗಿದ್ದಾರೆ. ಸಂಸದರು ಕೀಟನಾಶಕವಾದ ಸಲ್ಫೇಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಗೊತ್ತಾದ ಕೂಡಲೇ ಅವರ ಕುಟುಂಬದವರು ಈರೋಡ್ ನ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಂದಿನಿಂದ ಅವರು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ ಬೆಂಬಲದೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಇಂದು (ಗುರುವಾರ) ಬೆಳಗ್ಗೆ 5.05ರ ಸುಮಾರಿಗೆ ನಿಧನರಾಗಿರುವ ವರದಿಯಾಗಿದೆ. ಪಾರ್ಥಿವ ಶರೀರವನ್ನು ಈರೋಡ್ ನ ಪೆರಿಯಾರ್ ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ವಿರಾಟ್ ಕೊಹ್ಲಿ ಕುಡಿಯುವ ನೀರಿಗೆ ಪ್ರತಿ ಲೀಟರ್ ಗೆ 700 ರೂಪಾಯಿಯಂತೆ. ಅಂದರೆ ಕೊಹ್ಲಿ ವರ್ಷಕ್ಕೆ ಸುಮಾರು 8 ಲಕ್ಷವನ್ನು ನೀರಿನ ಮೇಲೆ ಹರಿಸುತ್ತಾರೆ ಅಂದ್ರೆ ನೀವು ನಂಬಲೇ ಬೇಕು. ಹಾಗಾದರೆ ವಿರಾಟ್ ಕೊಹ್ಲಿಯವರು ಕುಡಿಯುವ ನೀರಿನ ವಿಶೇಷತೆಗಳೇನು? ಅವರು ಕುಡಿಯೋ ನೀರಿನಲ್ಲಿ ಅಂಥದ್ದೇನಿದೆ ಎನ್ನುವ ಕುತೂಹಲ ಕಾಡದೇ ಇರದು. ಹೌದು ಇದು ಸಾಮಾನ್ಯ ನೀರಲ್ಲ. ಇದೊಂದು ವಿಶೇಷ ಬ್ರಾಂಡ್ ನ ನೀರು. ವಿರಾಟ್ ಕೊಹ್ಲಿ ಫ್ರಾನ್ಸ್ ನಿಂದ ಬರುವ ಇವಿಯನ್ ನ್ಯಾಚುರಲ್ ಮಿನರಲ್ ವಾಟರ್ ಅನ್ನು ಕುಡಿಯುತ್ತಾರೆ. ವಿರಾಟ್ ಕೊಹ್ಲಿ ಎಲ್ಲಿಗೆ ಹೋಗಬೇಕಾದರೂ ಈ ನೀರನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಾರಂತೆ. ಈ ನೀರನ್ನು ಎವಿಯನ್–ಲೆಸ್-ಬೈನ್ಸ್ ಪ್ರದೇಶದಿಂದ ತೆಗೆದುಕೊಳ್ಳಲಾಗಿದೆ. ಅಂದ ಹಾಗೆ ಇದನ್ನು ರಾಸಾಯನಿಕವಾಗಿ ಸಂಸ್ಕರಿಸಲಾಗುವುದಿಲ್ಲ. ಇವಿಯನ್ ನೀರು ಜಗತ್ತಿನಾದ್ಯಂತ ಅತ್ಯಂತ ಖನಿಜಯುಕ್ತ ನೀರಿನಲ್ಲಿ ಒಂದಾಗಿದೆ. ಅದರ ನೈಸರ್ಗಿಕ ಗುಣಲಕ್ಷಣಗಳನ್ನು 100% ಉಳಿಸಿಕೊಂಡಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕ್ಲೋರೈಡ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಅಂಶವು ಸಾಮಾನ್ಯ ನೀರಿಗಿಂತ ಉತ್ತಮ ಪ್ರಮಾಣದಲ್ಲಿರುತ್ತದೆ.…
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.ಆದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನಲಾಗುತ್ತಿದೆ. ಹಾಗಾದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ನಿಜವಾಗಿಯೂ ದೇಹದಲ್ಲಿ ಅತಿಯಾದ ಶಾಖವನ್ನು ಉಂಟುಮಾಡಬಹುದೇ? ಈ ಬಗೆಗಿನ ಡಿಟೇಲ್ಸ್ ಇಲ್ಲಿದೆ ನೋಡಿ… ಹೆಚ್ಚಿನ ಸಂಖ್ಯೆಯ ಜನರು ತಮ್ಮ ದಿನವನ್ನು ಮೊಟ್ಟೆಗಳೊಂದಿಗೆಯೇ ಪ್ರಾರಂಭಿಸುತ್ತಾರೆ. ಇದು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿದೆ. ಮಾತ್ರವಲ್ಲ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗಾಗಿ ಮುಂಜಾನೆ ಮೊಟ್ಟೆ ತಿಂದರೆ ದಿನವಿಡೀ ನೀವು ಎನರ್ಜಿಟಿಕ್ ಆಗಿ ಇರಬಹುದು ಎಂದು ಅನೇಕರು ನಂಬಿದ್ದಾರೆ. ಆದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಜನರು ಭಾವಿಸುತ್ತಾರೆ. ಮೊಟ್ಟೆಯ ಉಷ್ಣ ಗುಣದಿಂದ ಅನಾರೋಗ್ಯ ಉಂಟಾಗಬಹುದು ಎಂದು ಸಹ ಜನರು ಹೇಳುತ್ತಾರೆ. ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ನಿಜವಾಗಿಯೂ ಆರೋಗ್ಯಕ್ಕೆ ಹಾನಿ ಯಾಗುತ್ತದೆಯೇ? ಆಹಾರ ತಜ್ಞರು ತಿಳಿಸುವಂತೆ ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಯಾವುದೇ ಸೀಸನ್ ನಲ್ಲಿ ಮೊಟ್ಟೆ ತಿನ್ನೋದು ಹಾನಿಕಾರಕವಲ್ಲ. ಜನರು ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದು, ಆದರೆ ಅವುಗಳ ಪ್ರಮಾಣವು ಚಳಿಗಾಲಕ್ಕಿಂತ…
ಸಿಎಂ ಸಿದ್ದು ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಬಸ್ ಪ್ರಯಾಣಕ್ಕೆ ಮಹಿಳೆಯರಿಗೆ ಮಾತ್ರ ಫ್ರೀ ಕೊಟ್ಟಿರೋದು.. ಅದು ಬಿಟ್ಟು ಬಸ್ ನಲ್ಲಿ ಪ್ರಾಣಿ-ಪಕ್ಷಿಗಳನ್ನು ಕೊಂಡೊಯ್ದರೆ ಆಗುತ್ತಾ..? ಹೌದು, ಬಸ್ ನಿರ್ವಾಹಕನೊಬ್ಬ ಬಸ್ ನಲ್ಲಿ ಪ್ರಯಾಣಿಸಿದ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ಕೊಟ್ಟಿದ್ದು, ಅವರು ತೆಗೆದುಕೊಂಡು ಹೋದ ಪಕ್ಷಿಗಳಿಗೆ ಮಾತ್ರ ದುಡ್ಡು ಕೊಟ್ಟು ಪ್ರಯಾಣಿಸಿರುವ ರೋಚಕ ಘಟನೆ ಬಗ್ಗೆ ವರದಿಯಾಗಿದೆ. ಒಂದು ಪಕ್ಷಿಗೆ 111 ರಂತೆ ಟಿಕೇಟ್ ಕೊಟ್ಟಿರೋದನ್ನು ನೋಡಿ ಅಜ್ಜಿಗೆ ಶಾಕ್ ಆಗಿದೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೂ ಕೂಡ ಅನೇಕ ಕಡೆ ಬಸ್ ಕಂಡಕ್ಟರ್ ಹಾಗೂ ಜನರ ನಡುವೆ ಗಲಾಟೆಗಳಾಗಿವೆ. ಪ್ರಾಣಿ – ಪಕ್ಷಿಗಳಿಗೆ ಟಿಕೆಟ್ ನೀಡದ ನಿರ್ವಾಹಕರು ಪರಿಶೀಲನೆ ವೇಳೆ ಸಿಕ್ಕಾಕಿಕೊಂಡು ಅಮಾನತು ಆದ ಉದಾಹರಣೆಗಳು ಇವೆ. ಇದೀಗ ಈ ನಾಲ್ಕು ಪಕ್ಷಿಗಳಿಗೆ ಬರೋಬ್ಬರಿ 444 ರೂಪಾಯಿ ಕೊಟ್ಟು, ಇವರು ಫ್ರೀ ಟಿಕೆಟ್ ನಲ್ಲಿ ಪ್ರಯಾಣಿಸಿದ್ದಾರೆ. ಮಾರ್ಚ್ 27ರಂದು ಈ ಘಟನೆ ನಡೆದಿದ್ದು,ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್…
ಪಾವಗಡ: ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯಿಂದ ಆಂಧ್ರಪ್ರದೇಶಕ್ಕೆ ಹಾದುಹೋಗುವ ರಸ್ತೆಯ ಗಡಿಯಾದ ನಾಗಲಾಪುರ ಗೇಟ್ ಬಳಿ ನಿರ್ಮಿಸಿರುವ ತಾತ್ಕಾಲಿಕ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಬುಧವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿದ್ದು, ಪಕ್ಕದ ಆಂಧ್ರಪ್ರದೇಶದಿಂದ ವೈ.ಎನ್.ಹೊಸಕೋಟೆ ಹೋಬಳಿಯ ಮೂಲಕ ರಾಜ್ಯಕ್ಕೆ ಅಕ್ರಮ ಸಾಗಾಣಿಕೆ ತಡೆಯುವಲ್ಲಿ ಈ ಚೆಕ್ ಪೋಸ್ಟ್ ಪ್ರಮುಖವಾಗಿದೆ. ಅದರಂತೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕ ಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದಿಂದಲೂ ಮಧ್ಯ ಇನ್ನಿತರೆ ರವಾನೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಾಗಲಾಪುರ ಚೆಕ್ ಪೋಸ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ , ಡಿಓಎಸ್ ಪಿ ರಾಮಕೃಷ್ಣಪ್ಪ, ಚುನಾವಣಾ ಶಿರಸ್ತೇದಾರ್ ಪ್ರತಾಪ್ ಕುಮಾರ್, ತಹಶೀಲ್ದಾರ್ ಸಂತೋಷ್ ಕುಮಾರ್, ಎಇಇ ಹನುಮಂತರಾಯಪ್ಪ, ಸಿಪಿಐ ಗಿರೀಶ್ …
ಸರಗೂರು : ಗ್ರಾಮ ದೇವತೆ ಶ್ರೀ ಕಾಳಿಕಾಂಬ ಮಹೇಶ್ವರಿ ಕಾಳಮ್ಮ ದೇವಿಯ ಜಾತ್ರೆ ಬುಧವಾರ ನಡೆಯಿತು. ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ತಾಲ್ಲೂಕಿನ ಹೆಗ್ಗನೂರು ಗ್ರಾ.ಪಂ. ವ್ಯಾಪ್ತಿಯ ಹೆಗ್ಗನೂರು ಗ್ರಾಮದಲ್ಲಿ ಮಂಗಳವಾರ ಆರಂಭವಾದ ಜಾತ್ರೆಯ ಎರಡನೇ ದಿನವಾದ ಬುಧವಾರ ರಂದು ಬೆಳಿಗ್ಗೆಯಿಂದಲೇ ದೇವಿಗೆ ಜಾತ್ರೆಯ ದಿನದಂದು ದೇವಸ್ಥಾನದಲ್ಲಿ ವಿಶೇಷ ಹೋಮ, ಮುಂಜಾನೆ 5 ಗಂಟೆಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ 4 ಗಂಟೆಗೆ ಭಕ್ತಾದಿಗಳಿಂದ ಉರುಳು ಸೇವೆ ಮಾಡಿ, ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳದ ತೊರೆಯಿಂದ ಗಂಗಾ ಪೂಜೆ ಮಾಡಿ, ನಂತರ ಅದೇ ದಿನದ 9 ಗಂಟೆಗೆ ಭಕ್ತಾದಿಗಳು ಬಾಯಿಬೀಗ ಹರಕೆ, ಮುಡಿ ಮುಗಿಸಿ ಸುತ್ತಿಗೆಗಳು, ನಂದಿಧ್ವಜ ಉಮಾ ಮಹೇಶ್ವರಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪೆಂಜಿನಸೇವೆ, ನಾದಸ್ವರ, ವಾದ್ಯಗೋಷ್ಠಿ, ಬ್ಯಾಂಡ್ ಸೆಟ್, ವೀರಗಾಸೆ ನೃತ್ಯ, ಗಾರುಡಿಗೊಂಬೆ, ಕೋಲಾಟ, ನೃತ್ಯವಾದ್ಯ, ಚಂಡಿವಾದ್ಯ, ಮಂಗಳವಾದ್ಯದ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ.ನಂತರ …