Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್), ಬೆಂಗಳೂರಿನಲ್ಲಿ ಸ್ವದೇಶಿ ಲಘು ಯುದ್ಧ ವಿಮಾನದ (ಎಲ್‌ಸಿಎ) ತೇಜಸ್ ಮಾರ್ಕ್ 1 ಎ ಫೈಟರ್ ಜೆಟ್ ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. “ಭಾರತದಲ್ಲಿಯೇ ತಯಾರಿಸಿದ ಸ್ಥಳೀಯ LCA ಮಾರ್ಕ್ 1A ತೇಜಸ್ ಯುದ್ಧ ವಿಮಾನದ ಮೊದಲ ಹಾರಾಟವನ್ನು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು ಪೂರ್ಣಗೊಳಿಸಿದೆ” ಎಂದು ಸಂಸ್ಥೆ HAL ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು 15 ನಿಮಿಷಗಳ ಕಾಲ ಹಾರಾಟ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಗಡಿಯ ಸಮೀಪವಿರುವ ರಾಜಸ್ಥಾನದ ಬಿಕಾನೇರ್ ನಲ್ಲಿರುವ ನಲ್ ವಾಯುನೆಲೆಯಲ್ಲಿ ಯುದ್ಧ ವಿಮಾನವನ್ನು ನಿಯೋಜಿಸುವ ಸಾಧ್ಯತೆಯಿದೆ. ವಿಮಾನದ ಮೊದಲ ಸ್ಕ್ಯಾಡ್ರನ್ ಅನ್ನು ನಲ್ ವಾಯುನೆಲೆಯಲ್ಲಿ ನಿಯೋಜಿಸಲು ಯೋಜಿಸಲಾಗಿದೆ, ಅದು ಪಶ್ಚಿಮ ದಿಕ್ಕಿನಿಂದ ಎದುರಾಳಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. “ಈ ತಿಂಗಳ ಆರಂಭದಲ್ಲಿ ಏಜೆನ್ಸಿಯು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಘಟಕವು, ಮೊದಲ ಅವಳಿ-ಆಸನಗಳ ತರಬೇತುದಾರ ಆವೃತ್ತಿಯ ವಿಮಾನವನ್ನು, ಐಎಎಫ್ ಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ರಕ್ಷಣಾ ಮೂಲಗಳನ್ನು…
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು, ಕಣಕ್ಕಿಳಿಸುವ ಬಿಜೆಪಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ಪುತ್ರ ಎಂ.ಸಿ. ರಘು ಚಂದನ್, ಪಕ್ಷದ ನಿರ್ಧಾರವನ್ನು ಖಂಡಿಸಿ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಪ್ರಕಟಿಸುವುದಾಗಿ ಹೇಳಿದ್ದಾರೆ. ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ರಘು ಚಂದನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತವರ ಪುನರ್ವಸತಿ ಕೇಂದ್ರವಾಗಿ ಚಿತ್ರದುರ್ಗ ಮಾರ್ಪಟ್ಟಿದೆ. ಮೂಡಿಗೆರೆ ಮತ್ತು ಆನೇಕಲ್ ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಚಿತ್ರದುರ್ಗದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಮುಧೋಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಜೋಳ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. “ಮದಕರಿ ನಾಯಕ ಸೇರಿದಂತೆ ಯೋಧರ ನಾಡಿನಲ್ಲಿ ಪುರುಷರೇ ಇಲ್ಲವೇ? ಎಂದು ಪ್ರಶ್ನಿಸಿದರು. ಪಕ್ಷದ ನಿರ್ಧಾರ ನೋವು ತಂದಿದ್ದು, ಜಿಲ್ಲೆಯಿಂದ ಯಾರನ್ನಾದರೂ ನಾಮನಿರ್ದೇಶನ ಮಾಡಬೇಕಿತ್ತು. ಇದು ಚಿತ್ರದುರ್ಗದ ಸ್ವಾಭಿಮಾನದ ಪ್ರಶ್ನೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ…
ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಸಂಭವಿಸಲಿದೆ. ಈ ಗ್ರಹಣವು ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಇದು 50 ವರ್ಷಗಳಲ್ಲಿ ಅತ್ಯಂತ ದೀರ್ಘವಾದ ಸೂರ್ಯಗ್ರಹಣವಾಗಲಿದೆ. ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 25 ನಿಮಿಷಗಳ ಕಾಲ ಇರುತ್ತದೆ. ಈ ಗ್ರಹಣವು ಮೀನ ಮತ್ತು ರೇವತಿ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣವು ಏಪ್ರಿಲ್ 8 ರ ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿ 01:25 ಕ್ಕೆ ಕೊನೆಗೊಳ್ಳುತ್ತದೆ. ಅಮೆರಿಕದ ಪ್ರಕಾರ, ಆ ಸಮಯದಲ್ಲಿ ಮಧ್ಯಾಹ್ನ 2:15. ಸಂಪೂರ್ಣ ಸೂರ್ಯಗ್ರಹಣದ ಒಟ್ಟು 4 ಗಂಟೆ 25 ನಿಮಿಷಗಳಲ್ಲಿ, ಸುಮಾರು 7 ನಿಮಿಷಗಳ ಅವಧಿಯು ಇಡೀ ಭೂಮಿಯನ್ನು ಕತ್ತಲೆಯಲ್ಲಿ ಆವರಿಸುತ್ತದೆ. ಈ ಸೂರ್ಯಗ್ರಹಣವನ್ನು ಹಲವು ದೇಶಗಳಲ್ಲಿ ನೋಡಬಹುದಾದರೂ, ಅಮೆರಿಕದಲ್ಲಿ ಇದು ಅತ್ಯಂತ ಸ್ಪಷ್ಟವಾಗಿ ಗೋಚರಿಸಲಿದೆ. ಈ ಸಂಪೂರ್ಣ ಸೂರ್ಯಗ್ರಹಣವು ವಿಶೇಷವಾಗಿ ಅಮೆರಿಕದ ಉತ್ತರ ಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೆ, ಈ ಸೂರ್ಯಗ್ರಹಣವು ಪಶ್ಚಿಮ ಯುರೋಪ್, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್ ಮೆಕ್ಸಿಕೋ, ಕೆನಡಾ, ಮಧ್ಯ…
ಬೆಂಗಳೂರು: ಸ್ನೇಹಿತನ ಖಾಸಗಿ ಅಂಗ (ಗುದದ್ವಾರ) ಕ್ಕೆ ಸ್ನೇಹಿತನೋರ್ವ ಗಾಳಿ ಬಿಟ್ಟ ಪರಿಣಾಮ ಯುವಕನ ಕರುಳು ಬ್ಲಾಸ್ಟ್ ಆಗಿ ಮೃತ ಹೊಂದಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಯೋಗೀಶ್(28) ಎಂಬಾತನೇ ಮೃತ ಯುವಕ. ಈ ಘಟನೆ ಮಾರ್ಚ್ 25 ರಂದು ನಡೆದಿದೆ. ಅಂದು ಬೈಕ್ ರಿಪೇರಿಗೆಂದು ಸಂಪಿಗೆಹಳ್ಳಿಯ ನಿವಾಸಿ ಯೋಗೇಶ್ ಬೈಕ್ ಸರ್ವಿಸ್ ಸೆಂಟರ್ಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತ ಮುರಳಿ ಕೆಲಸ ಮಾಡುತ್ತಿದ್ದು, ಆತ ಗಾಡಿ ಸರ್ವಿಸ್ ಮಾಡಿದ್ದಾನೆ. ಅನಂತರ ಮುರಳಿ ಏರ್ ಫ್ರೆಶರ್ ಪೈಪ್ ನಿಂದ ಸ್ನೇಹಿತ ಯೋಗೇಶ್ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಆತನ ಕರುಳು ಬ್ಲಾಸ್ಟ್ ಆಗಿ ಯುವಕ ಮೃತ ಹೊಂದಿದ್ದಾನೆ. ಇದೀಗ ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುರಳಿಯ ಬಂಧನ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಉತ್ತರಪ್ರದೇಶದ 5 ಬಾರಿಯ ಶಾಸಕ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ(60) ಗುರುವಾರ ಮೃತ ಹೊಂದಿದ್ದಾರೆ. 2005 ರಿಂದಲೂ ಜೈಲಿನಲ್ಲಿದ್ದ ಅನ್ಸಾರಿ ಗುರುವಾರ ಸಂಜೆ ರಂಜಾನ್ ಉಪವಾಸ ಮುಗಿಯುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೃದಯಾಘಾತದಿಂದ ಮೃತ ಹೊಂದಿದರು. ಮಂಗಳವಾರ ಕಿಬ್ಬೊಟ್ಟೆ ನೋವು ಎಂದು ಅಸ್ವಸ್ಥರಾಗಿ 14 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಮರಳಿದ್ದರು. 68ಕ್ಕೂ ಹೆಚ್ಚು ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಗ್ಯಾಂಗ್‌ಸ್ಟಾರ್ 8 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿ ಜೈಲಿನಲ್ಲಿದ್ದರು. ಇತ್ತ ಉ.ಪ್ರದೇಶದಾದ್ಯಂತ ಅನ್ಸಾರಿ ಸಾವಿನ ಕಾರಣ ನಿಷೇಧಾಜ್ಞೆ ಹೊರಡಿಸಲಾಗಿದೆ. ಮುಖ್ತಾರ್ ಅನ್ಸಾರಿ ಸಾವಿನ ಹಿಂದೆ ಸಂಚು ಇದ್ದು, ಯಾರೋ ಜೈಲಲ್ಲಿ ವಿಷವುಣಿಸಿ ಕೊಲೆ ಮಾಡಿದ್ದಾರೆ ಎಂದು ಅವರ ಸಹೋದರ, ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಆರೋಪ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಮನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ ಡಿ.ಕೆ. ಸುರೇಶ್ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಭರ್ಜರಿ ರೋಡ್ ಶೋ ನಡೆಸಿದ ಡಿ.ಕೆ. ಸುರೇಶ್ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರ ಅಫಿಡವಿಟ್ ನಲ್ಲಿ ಡಿ.ಕೆ. ಸುರೇಶ್ ಅವರು ಬರೋಬ್ಬರಿ 593.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಡಿ.ಕೆ. ಸುರೇಶ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ (2019ರಲ್ಲಿ) ಆಸ್ತಿ ಮೌಲ್ಯ 333.86 ಕೋಟಿ ರೂಪಾಯಿ ಇದೆ ಎಂದು ಘೋಷಿಸಿಕೊಂಡಿದ್ದರು. ಅಲ್ಲದೇ 8 ತಿಂಗಳ ಹಿಂದೆ ಅಷ್ಟೇ ಸುರೇಶ್ ಅವರು ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆ ವೇಳೆ ತಮ್ಮ ಹೆಸರಿನಲ್ಲಿ ಒಟ್ಟು ಆಸ್ತಿ ಮೌಲ್ಯ 353.7 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಡಿ.ಕೆ. ಸುರೇಶ್ ಒಟ್ಟು 593.04 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ…
ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕಾದ ಶಿಕ್ಷಕನೇ ದಿನಾ ಶಾಲೆಗೆ ಕುಡಿದು ಬಂದು ಪಾಠ ಮಾಡದೇ ಕೊಠಡಿಯಲ್ಲಿ ಮಲಗುತ್ತಿರುವ ಘಟನೆ ಛತ್ತೀಸ್ ಗಢದ ಬಸ್ತಾರ್ ನಲ್ಲಿ ನಡೆದಿದೆ. ಶಿಕ್ಷಕನ ಕಾರ್ಯಕ್ಕೆ ರೊಚ್ಚಿಗೆದ್ದ ಅದೇ ಶಾಲೆಯ ವಿದ್ಯಾರ್ಥಿಗಳು ಕುಡುಕ ಶಿಕ್ಷಕನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಶಾಲೆಯ ಶಿಕ್ಷರೊಬ್ಬರು ದಿನಾ ಕುಡಿದು ಶಾಲೆಗೆ ಬರುತ್ತಿದ್ದರು ಇದರಿಂದ ರೋಸಿಹೋದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎಲ್ಲರೂ ಜೊತೆಯಾಗಿ ಚಪ್ಪಲಿ, ಕಲ್ಲುಗಳಿಂದ ಹೊಡೆದು ಓಡಿಸಿದ್ದಾರೆ. ಈ ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದರ ಕುರಿತು ಕೆಲವರು ಏನೇ ಆದರೂ ಶಿಕ್ಷಕರಿಗೆ ವಿದ್ಯಾರ್ಥಿಗಳ ಕೈಯಿಂದ ಹಾಗೆ ಮಾಡಬಾರದಿತ್ತು, ಶಿಕ್ಷಕರು ಯಾವತ್ತಿದ್ದರೂ ಶಿಕ್ಷಕರೇ ಹಾಗಾಗಿ ಮಕ್ಕಳ ಕೈಯಿಂದ ಈ ರೀತಿ ಚಪ್ಪಲಿ ಎಸೆದಿರುವುದು ತಪ್ಪು. ಬದಲಾಗಿ ವಿದ್ಯಾರ್ಥಿಗಳ ಪೋಷಕರು ಬಂದು ಈ ವಿಚಾರದಲ್ಲಿ ಮಾತುಕತೆ ನಡೆಸಬಹುದಿತ್ತು. ಅಲ್ಲದೆ, ಶಿಕ್ಷಕನ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ…
ಸಾಮಾನ್ಯ ಆಟೋ ಚಾಲಕನೊಬ್ಬ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಭಾರಿ ಅಪರೂಪದ ಘಟನೆ ಬಗ್ಗೆ ವರದಿಯಾಗಿದೆ. ಹೌದು, ಈ ವ್ಯಕ್ತಿಗೆ ಅದೃಷ್ಟ ದೇವತೆಯೇ ಒಲಿದು ಬಂದಿದ್ದಾಳೆ. ಲಾಟರಿಯಲ್ಲಿ ಬರೋಬ್ಬರಿ 10 ಕೋಟಿ ರೂ. ಗೆಲ್ಲುವ ಮೂಲಕ ಆ ವ್ಯಕ್ತಿಯ ಬಾಳಿಗೆ ಬೆಳಕಾಗಿದ್ದಾಳೆ. ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ ಅವರು 10 ಕೋಟಿ ರೂ. ಬಂಪರ್ ಲಾಟರಿ ಗೆದ್ದವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ನಾಸರ್ ಇದೀಗ ಬಂಪರ್ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಕೇರಳದ ಕಾರ್ತಿಕಪುರದ ರಾರರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದು, ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣವನ್ನು ಗೆದ್ದಿದ್ದಾರೆ. ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ಹೇಳಿದ್ದಾರೆ. ಇದೀಗ ಟಿಕೆಟ್ ಖರೀದಿ ಮಾಡಿದ ಮರು ದಿನವೇ ನಾಸಿರ್ ಅವರಿಗೆ 10. ಕೋಟಿ…
ಮಧುಗಿರಿ: ದಾದಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಜಂಗಲ್ ತೆರವುಗೊಳಿಸುವ ವೇಳೆ ವಿದ್ಯುತ್ ಗುತ್ತಿಗೆ ನೌಕರ ದೊಡ್ಡಯನ್ನೂರು ಗ್ರಾಮದ ಅಂಜಪ್ಪ ಎಂಬುವರ ಪುತ್ರ ನರೇಂದ್ರ (30) ವಿದ್ಯುತ್ ಕಂಬದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಗೆ ಐ.ಡಿ.ಹಳ್ಳಿ ಬೆಸ್ಕಾಂ ಇಲಾಖೆಯ ಶಾಖಾಧಿಕಾರಿ ವೀರೇಂದ್ರ ನಿರ್ಲಕ್ಷ್ಯವೇ ನರೇಂದ್ರ ಸಾವಿಗೆ ಕಾರಣ, ತಕ್ಷಣ ಅವರನ್ನು ಅಮಾನತು ಮಾಡಬೇಕು ಮತ್ತು ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದರೆ ಮೃತದೇಹವನ್ನು ಬೆಸ್ಕಾಂ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ಮಾಡುವುದಾಗಿ ಮೃತ ನರೇಂದ್ರ ಅಕ್ಕನ ಮಗ ತಿಪ್ಪೇಸ್ವಾಮಿ ಹಾಗೂ ವಿವಿಧ ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಬೆಸ್ಕಾಂ ಇಇ ಜಗದೀಶ್, ಸಿಪಿಐ ಎಸ್. ರವಿ, ಮಿಡಿಗೇಶಿ ಪಿಎಸ್ ಐ ಅಮ್ಮಣಗಿ ಭೇಟಿ ನೀಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಆಂಟೋನಿ ಬೇಗೂರು HSRP: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಇದೀಗ ಎಲ್ಲೆಡೆ ನೀತಿ ಸಂಹಿತೆ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಬಿಸಿ ಇದುವರೆಗೂ HSRP ನಂಬರ್ ಪ್ಲೇಟ್ ಹಾಕಿಸದ ವಾಹನಗಳಿಗೂ ಮುಟ್ಟಿದೆ. ದೇಶಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟು ನೆಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಎಸ್‌ಆರ್‌ಪಿ (HSRP) ಇಲ್ಲದೆ ಇರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ. ಅಂದ ಹಾಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31ರ ವರೆಗೆ ಸಮಯವಕಾಶವಿದ್ದರೂ ಚುನಾವಣೆ ನಿಮಿತ್ತ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ, ನೋಯಿಡಾ, ಗ್ರೇಟರ್ ನೋಯಿಡಾ, ಫರೀದಾಬಾದ್, ಗೌತಮ್ ಬುದ್ಧ ನಗರ ಮೊದಲಾದ ಕಡೆ ಅಧಿಕಾರಿಗಳು ನಂಬರ್ ಪ್ಲೇಟ್ ಪರೀಕ್ಷೆಯಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಇಲ್ಲದೇ ಇರುವ ವಾಹನಗಳನ್ನು ತಡೆಹಿಡಿದು ಫೈನ್ ಹಾಕಲಾಗುತ್ತಿದೆ. ಸದ್ಯಕ್ಕೆ ದೆಹಲಿಯಲ್ಲಿ ಇರುವ ನಿಯಮ ಆಗಿದ್ದರೂ ಕೂಡ…