ಮಧುಗಿರಿ: ದಾದಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಜಂಗಲ್ ತೆರವುಗೊಳಿಸುವ ವೇಳೆ ವಿದ್ಯುತ್ ಗುತ್ತಿಗೆ ನೌಕರ ದೊಡ್ಡಯನ್ನೂರು ಗ್ರಾಮದ ಅಂಜಪ್ಪ ಎಂಬುವರ ಪುತ್ರ ನರೇಂದ್ರ (30) ವಿದ್ಯುತ್ ಕಂಬದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆಗೆ ಐ.ಡಿ.ಹಳ್ಳಿ ಬೆಸ್ಕಾಂ ಇಲಾಖೆಯ ಶಾಖಾಧಿಕಾರಿ ವೀರೇಂದ್ರ ನಿರ್ಲಕ್ಷ್ಯವೇ ನರೇಂದ್ರ ಸಾವಿಗೆ ಕಾರಣ, ತಕ್ಷಣ ಅವರನ್ನು ಅಮಾನತು ಮಾಡಬೇಕು ಮತ್ತು ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದರೆ ಮೃತದೇಹವನ್ನು ಬೆಸ್ಕಾಂ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ಮಾಡುವುದಾಗಿ ಮೃತ ನರೇಂದ್ರ ಅಕ್ಕನ ಮಗ ತಿಪ್ಪೇಸ್ವಾಮಿ ಹಾಗೂ ವಿವಿಧ ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಬೆಸ್ಕಾಂ ಇಇ ಜಗದೀಶ್, ಸಿಪಿಐ ಎಸ್. ರವಿ, ಮಿಡಿಗೇಶಿ ಪಿಎಸ್ ಐ ಅಮ್ಮಣಗಿ ಭೇಟಿ ನೀಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296