Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಭೂಮಿಯ ಮೇಲೆ ಚಿತ್ರ ವಿಚಿತ್ರ ಪ್ರಾಣಿ ಪಕ್ಷಿಗಳಿವೆ. ಅದರಲ್ಲೂ ಈ ಜಗತ್ತಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇವುಗಳಲ್ಲಿ ಕೆಲವು ಹೆಚ್ಚು ವಿಷಕಾರಿ. ಕೆಲವು ವಿಷಕಾರಿಯಲ್ಲದ ಹಾವುಗಳು. ಆದರೂ ಹಾವುಗಳಿಗೆ ಹೆದರುವ ಮಂದಿ ಜಾಸ್ತಿ.. ದೂರದಲ್ಲಿ ಹಾವು ಇದೆ ಎಂದು ತಿಳಿದರೆ ಅದೆಷ್ಟೋ ಜನ ಪ್ರಾಣ ಭಯದಿಂದ ಓಡುತ್ತಾರೆ. ಆದರೆ, ಇದೀಗ ಅಪರೂಪದ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಕಲರ್ ನೋಡಿದ್ರೆ ನಿಮಗೂ ಶಾಕ್ ಆಗುತ್ತೆ.. ವೈರಲ್ ಆದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಕೆಂಪು ಹಾವನ್ನು ಹಿಡಿದಿರುವುದನ್ನು ಕಾಣಬಹುದು. ಇದು ನಾಗರಹಾವು. ಇಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಹಾವಿನ ಬಣ್ಣ ಕೆಂಪು. ಇದು ಬಹಳ ಅಪರೂಪದ ಹಾವು. ಕೆಂಪು ಬಣ್ಣದ ಹಾವನ್ನು ರೆಡ್ ಸ್ಪಿಟಿಂಗ್ ಕೋಬ್ರಾ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ. ಅನಿಮಲ್ ಡೈವರ್ಸಿಟಿ ವೆಬ್‌ಸೈಟ್ ಪ್ರಕಾರ, ಕೆಂಪು ಬಣ್ಣವನ್ನು ಹೊಂದಿರುವ ಈ ನಾಗರ ಹಾವು…
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ಸ್ಫೋಟಕಗಳು ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಬಾಗದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಡಲಾಗಿತ್ತು. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ಬಗ್ಗೆ ಸಿಸಿಬಿ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದ…
ತಮ್ಮ ಮಕ್ಕಳಿಗೆ ಉತ್ತಮ ಅಂಕ ಸಿಗಬೇಕು ಎಂದು ಪಾಲಕರು ಕನಸು ಕಂಡರೆ, ಶಾಲೆಗೆ ಒಳ್ಳೆಯ ಹೆಸರು ಬರಲೆಂದು ಮಾಲೀಕರು ಬಯಸೋದು ಸಹಜ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವಾಗ ಸಹಜವಾಗಿಯೇ ಈ ಒತ್ತಡ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಅಂತೆಯೇ ನಿನ್ನೆಯಷ್ಟೇ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ವೈದ್ಯರು ಪರಿಶೀಲನೆ ನಡೆಸಿದಾಗ ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ. ಹಿಂದೆಲ್ಲ ವಯಸ್ಸಾದವರಿಗೆ ಮಾತ್ರ ಹೃದಯಾಘಾತ ಆಗುತ್ತದೆ ಎನ್ನುತ್ತಿದ್ದರು. ಆದರೆ, ಈಗ ಯಾವುದೇ ವಯಸ್ಸಿನ ಮಿತಿ ಇಲ್ಲದೆ, ಹೃದಯಾಘಾತ ಸಾಮಾನ್ಯವಾಗಿದೆ. ದಿಢೀರನೇ ಸಾಯುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಇದೀಗ ಆಂಧ್ರ ಪ್ರದೇಶದ ವೈಎಸ್ ಆರ್ ಜಿಲ್ಲೆಯ ರಾಜುಪಾಲೆಂ ಮಂಡಲದಲ್ಲಿ ದುರಂತವೊಂದು ಸಂಭವಿಸಿದೆ. ಕೊರ್ರಪಾಡುವಿನಲ್ಲಿ 10ನೇ ತರಗತಿ ಓದುತ್ತಿದ್ದ ಲಿಖಿತಾ(15) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ನಿನ್ನೆ ಪರೀಕ್ಷೆಗೆ ಹಾಜರಾಗಿದ್ದ ಬಾಲಕಿ, ಮಧ್ಯಾಹ್ನದ ಊಟದ ನಂತರ ಸಹ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಾಳೆ. ಆಕೆ…
ಚುನಾವಣೆಗೆ ಹಂಚಲು ಸೀರೆ, ಕುಕ್ಕರ್ ಶೇಖರಣೆ ಮಾಡಿರುವುದು ಕಂಡುಬಂದಲ್ಲಿ ಬೆಂಕಿ ಹಚ್ಚಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ ಎನ್ನಲಾಗಿದೆ. ಚುನಾವಣೆ ಘೋಷಣೆಗೂ ಮುಂಚೆ ಸೀರೆ ಹಂಚಿದ್ದಾರೆ. ಚುನಾವಣೆ ಘೋಷಣೆ ಆಗಿರುವುದರಿಂದ ಮತ್ತೆ ಸೀರೆ, ಕುಕ್ಕರ್ ಹಂಚಿಕೆಯಾಗುತ್ತಿದೆ. ಹಣ ಬಲ ಮತ್ತು ತೋಳ್ಬಲದಿಂದ ಚುನಾವಣೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊರಟ್ಟಿದ್ದಾರೆ. ಅದಕ್ಕೆ ನಾವು ಹೆದವುದಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯನವರೇ ಗ್ಯಾರಂಟಿ ಕೊಟ್ಟಿದ್ದೀರಿ, ಯಾಕೆ ಮತ್ತೆ ಕುಕ್ಕರ್ ಹಂಚುತ್ತಿದ್ದೀರಿ? ನಮ್ಮ ಕಾರ್ಯಕರ್ತರಿಗೆ ಕರೆ ಕೊಡುತ್ತೇನೆ. ಸೀರೆ, ಕುಕ್ಕರ್ ಶೇಖರಣೆ ಇಟ್ಟ ಜಾಗದಲ್ಲೇ ಬೆಂಕಿ ಇಡಿ. ಯಾರು ಮೊಕದ್ದಮೆ ಹಾಕುತ್ತಾರೆ ನಾನೂ ನೋಡುತ್ತೇನೆ. ಮುಖ್ಯ ಚುನಾವಣಾ ಅಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಪ್ಯಾರಾ ಮಿಲಿಟರಿ ಪೋರ್ಸ್ ಗ್ರಾಮಾಂತರ ಕ್ಷೇತ್ರಕ್ಕೆ ಹಾಕಬೇಕು. ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮಿಲಿಟರಿ ಬರಲಿಲ್ಲ ಅಂದರೆ ಗ್ರಾಮಾಂತರ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯಲ್ಲ ಎಂದು ಹೇಳಿದ್ದಾರೆ. ನಮ್ಮ ಮೈತ್ರಿ ಬಗ್ಗೆ ಡಿ.ಕೆ.…
ಪಕ್ಕದ ಮನೆ ದಂಪತಿಯ ಸರಸ ಸಲ್ಲಾಪದಿಂದ ನಮಗೆ ಕಿರಿಕಿರಿಯಾಗುತ್ತದೆ ಎಂದು ಮಹಿಳೆಯೋರ್ವರು ದೂರು ದಾಖಲಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 44 ವರ್ಷದ ಮಹಿಳೆಯೊಬ್ಬರು ಆವಲಹಳ್ಳಿ, ಬಿಡಿಎ ಲೇಔಟ್ ನಲ್ಲಿ ವಾಸವಾಗಿದ್ದು, ಈಕೆಯ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್ ರೂಂ ಇರುವ ಕಾರಣ ಪಕ್ಕದ ಮನೆಯಲ್ಲಿ ವಾಸವಾಗಿರುವ ದಂಪತಿ ಬೆಡ್ ರೂಂ ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುವುದು, ಹಾಗೂ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಪಕ್ಕದ ಮನೆಯರಲ್ಲಿ ದೂರು ನೀಡಿದ ಮಹಿಳೆ, ದಯವಿಟ್ಟು ಬೆಡ್ ರೂಂ ಕಿಟಕಿ ಹಾಕಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಕುಟುಂಬದವರಿಗೆ ನಿಂದನೆ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಮಾಡುವುದಾಗಿ ಬೆದರಿಕೆ ಕೂಡಾ ಹಾಕಿದ್ದಾನೆ. ಅಲ್ಲದೆ ಹಲ್ಲೆಗೆ ಕೂಡಾ ಯತ್ನ ಮಾಡಿದ್ದಾನೆ. ಇಷ್ಟು ಸಾಲದು…
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಾಬೀರ್ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ನಿವಾಸಿ 35 ವರ್ಷದ ಜಾಬೀರ್, ತನ್ನ ಕಸ್ಟಡಿ ವಿಸ್ತರಿಸಿ ಡೀಫಾಲ್ಟ್ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ನ್ಯಾಯಾಲಯ 2023ರ ಫೆಬ್ರವರಿ 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ (ವಿಶೇಷ ನ್ಯಾಯಾಲಯ) ಎನ್‌ಐಎ ಪರವಾಗಿ ಹಾಜರಾಗಿ ಅರ್ಜಿದಾರರ ಕಸ್ಟಡಿ ಆದೇಶ ವಿಸ್ತರಿಸುವಂತೆ ಕೋರಿರುವವರು ವಿಶೇಷ ಸರ್ಕಾರಿ ಅಭಿಯೋಜಕರಲ್ಲ. ಅಲ್ಲದೇ, ಅವರ ಮೌಖಿಕ ಕೋರಿಕೆಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಪರಿಗಣಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರರ ಪರ…
ಕೇರಳ: ನಟಿ ಪ್ರಿಯಾಮಣಿಯವರು ದೇಗುಲವೊಂದಕ್ಕೆ ಭಕ್ತಿಯಿಂದ ಯಾಂತ್ರಿಕ ಆನೆಯೊಂದನ್ನು ಕೊಡುಗೆ ನೀಡಿದ್ದಾರೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (PETA) ಎನ್ಜಿಒ ಜತೆ ಸೇರಿಕೊಂಡು ಬಹುಭಾಷ ನಟಿ ಈ ಕೆಲಸ ಮಾಡಿದ್ದಾರೆ. ಕೊಚ್ಚಿಯಲ್ಲಿರುವ ಥ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಈ ಕೊಡುಗೆ ನೀಡಿದ್ದು ಇದನ್ನು ನೋಡಿ ಭಕ್ತರು ಸಂತಸಗೊಂಡಿದ್ದಾರೆ. ಜೀವಂತ ಆನೆಗಳನ್ನು ಎಂದಿಗೂ ಹೊಂದಬಾರದು ಅಥವಾ ಬಾಡಿಗೆಗೆ ತೆಗೆದುಕೊಳ್ಳಬಾರದು ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ, ಪ್ರಿಯಾಮಣಿ ಅವರು ಯಾಂತ್ರಿಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಮೆಕಾನಿಕಲ್ ಆನೆಗೆ ಮಹಾದೇವನ್ ಎಂದು ಹೆಸರಿಡಲಾಗಿದೆ. ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಲು ಈ ಯಾಂತ್ರಿಕ ಆನೆಯನ್ನು ಬಳಸಲಾಗುತ್ತದೆ ಎಂದು PETA ತಿಳಿಸಿದೆ. ಈ ರೀತಿಯ ಯಾಂತ್ರಿಕ ಆನೆಯನ್ನು ಕೇರಳದಲ್ಲಿ ಪರಿಚಯಿಸಿದ್ದು, ಇದು ಎರಡನೇ ಬಾರಿ. ದೇವಸ್ಥಾನದಲ್ಲಿ ಭಾನುವಾರ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ತಂಡದವರಿಂದ ಚೆಂಡ ಮೇಳ…
ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ನಾಯರ್ ಮಾರ್ಚ್ 14 ರಂದು ಅಪಘಾತಕ್ಕೀಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ನಟಿ ಅರುಂಧತಿ ನಾಯರ್ ಅವರನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿದೆ ಎಂದು ಅವರ ಸಹೋದರಿ ಹೇಳಿಕೆ ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರುಂಧತಿ ನಾಯರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತಮಿಳುನಾಡಿನ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಪ್ರಕಟವಾದ ಸುದ್ದಿಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕೆಂದು ನಾವು ಭಾವಿಸಿದ್ದೇವೆ. ಮೂರು ದಿನಗಳ ಹಿಂದೆ ನನ್ನ ಸಹೋದರಿ ಅರುಂಧತಿ ನಾಯರ್ ಅವರಿಗೆ ಅಪಘಾತವಾಗಿದ್ದು ನಿಜ. ಆಕೆ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ. ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ನಟಿ ಅರುಂಧತಿ ಅವರ ಸಹೋದರಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೋವಲಂ ಬೈಪಾಸ್‌ನಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಅರಂಧತಿ ಅವರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ತಮ್ಮ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದ…
ದೊಡ್ಡಬಳ್ಳಾಪುರ: ತಾಲೂಕು ಕಾಡನೂರು ಗ್ರಾಮದ ಅಬ್ದುಲ್ ಗಫರ್ ಶರೀಫ್ ಎಂಬುವವರ ಜಮೀನಿನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳು ಸುಟ್ಟು ಭಸ್ಮವಾಗಿದ್ದು, ಇದರ ಪಕ್ಕದಲ್ಲಿ ಇದ್ದ ಹುಣಸೆಹಣ್ಣಿನ ರಾಶಿ ಕೂಡ ಉರಿದು ಭಸ್ಮವಾಗಿದ್ದು, ತುಂಬು ಫಸಲಿನಿಂದ ಮೈತುಂಬಿದ್ದ ಹುಣಸೆ ಮರವು ಕೂಡ ಸುಟ್ಟು ಹಾಳಾಗಿದೆ. ಈ ಬಗ್ಗೆ ಅಬ್ದುಲ್ ಗಫರ್ ಶರೀಫ್ ಮಾಧ್ಯಮದೊಂದಿಗೆ ಮಾತನಾಡಿ, ನಾನು ಅನೇಕ ಕಾಯಿಲೆಗಳಿಂದ ಅನಾರೋಗ್ಯಪೀಡಿತನಾಗಿದ್ದು, ಎದ್ದು ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇನೆ. ಇದನ್ನು ಕಂಡ ಕಿಡಿಗೇಡಿಗಳು ಈ ರೀತಿಯ ಹೀನ ಕೃತ್ಯ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪರಿಹಾರ ನೀಡುವಂತೆ ಮನವಿ ಮಾಡಿದರು. ಅನಾರೋಗ್ಯ ಪೀಡಿತರಾಗಿ ಯಾವುದೇ ರೀತಿಯ ಸಹಕಾರವಿಲ್ಲದ ಅಮಾಯಕರಾದ ಇಂಥ ರೈತರಿಗೆ ಸರ್ಕಾರ ಯಾವ ರೀತಿ ಸಹಕಾರ ಮಾಡುತ್ತದೆ…
ರಾಷ್ಟ್ರಧ್ವಜ ಹಾರಿಸದೇ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಮಧುಗಿರಿ ಪುರಸಭೆಯ ಅಧಿಕಾರಿಗಳ ಮೇಲೆ ಕಾನೂನೂ ರೀತಿಯ ಕ್ರಮ ಜರುಗಿಸುವಂತೆ ಇಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ. ಕರಾಳೆ ಅವರಿಗೆ ಕಾಳಜಿ ಫೌಂಡೇಶನ್ ತುಮಕೂರು ಮತ್ತು ಕರ್ನಾಟಕ ರಣಧೀರರ ವೇದಿಕೆ ಕಾರ್ಯಕರ್ತರು ದೂರು ನೀಡಿದರು. ದಿನಾಂಕ :16/03/2024 ರ ಶನಿವಾರದಂದು ಮಧುಗಿರಿಯ ಪುರಸಭೆ ಕಾರ್ಯಾಲಯದ ಧ್ವಜಸ್ತಂಭ ರಾಷ್ಟ್ರಧ್ವಜ ಹಾರಿಸದೇ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಪುರಸಭೆ ಮ್ಯಾನೇಜರ್ ಗುರುಪ್ರಸಾದ್ ರಾಷ್ಟ್ರಧ್ವಜ ಹಾರಿಸಲು ನಮಗೆ ಯಾವುದೇ ಆದೇಶವಿಲ್ಲ ಹಾಗಾಗಿ ನಾನು ಧ್ವಜ ಹರಿಸಿಲ್ಲ ಎಂದು ಸಬೂಬು ಹೇಳಿದ್ದರು. ಈ ಸಂಬಂಧ ಹೋರಾಟಗಾರರು ಸರ್ಕಾರದ ಆದೇಶ ಪತ್ರ ಲಗತ್ತಿಸಿ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಹೋರಾಟಗಾರರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…