Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಬೆಂಗಳೂರು: ಬಿಜೆಪಿ-ಜೆಡಿಎಸ್ ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು. ಮೈತ್ರಿ ನಾಯಕರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಯಾವುದೇ ಕಾರಣಕ್ಕೂ ಮುರಿಯೋದಿಲ್ಲ. ಒಂದು ಸೀಟಿನ ವಿಚಾರದಲ್ಲಿ ಗೊಂದಲ ಇದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ಬಿಜೆಪಿ-ಜೆಡಿಎಸ್‍ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನಮ್ಮ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಜೊತೆ ಮಾತಾಡ್ತಾರೆ. ಎಷ್ಟು ಸೀಟು ಜೆಡಿಎಸ್‍ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಇಂದೇ ಬಹುತೇಕ ಅಂತಿಮ ಆಗುತ್ತದೆ. ಬಿಜೆಪಿ-ಜೆಡಿಎಸ್ ಸ್ಥಳೀಯವಾಗಿ ಹೊಂದಾಣಿಕೆ ಆಗಿದೆ. ಸೀಟು ಹಂಚಿಕೆ ಆದ ಮೇಲೆ ಎಲ್ಲಾ ಕಡೆ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಓಡಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಜೆಡಿಎಸ್ 3 ಸೀಟು ಕೇಳಿದ್ದರು,…
ರಾಮನಗರ: ನಾವು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು ಎಂದು ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ದೇವೇಗೌಡರ ಬದುಕಿಗೆ ವಿಷ ಹಾಕಿದ್ದೇ ಡಿ.ಕೆ.ಬ್ರದರ್ಸ್ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ವಾಗ್ದಾಳಿ ವಿಚಾರಕ್ಕೆ ಹಾರೋಹಳ್ಳಿಯಲ್ಲಿ ಪ್ರತಿಕ್ರಿಯಿಸಿದರು. ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಫ್ಯಾರ ಮಿಲಿಟರಿ ಕರೆಸಬೇಕೆಂಬ ವಿಚಾರ ಸಂಬಂಧ, ಯಾರನ್ನ ಬೇಕಾದ್ರೂ ಕರೆಸಲಿ. ಪ್ಯಾರ ಮಿಲಿಟರಿಯನ್ನೇ ಕರೆಸಲಿ, ಪ್ರಧಾನಿ ಮೋದಿಯನ್ನೇ ಕರೆಸಲಿ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಕೂಲಿ ಕೇಳ್ತಿದ್ದೇನೆ. ನನಗೆ ಬಲವಂತ ಮಾಡುವ ಅವಶ್ಯಕತೆ ಇಲ್ಲ. ಅವರ ನಾಯಕರನ್ನ ಮೆಚ್ಚಿಸಲು ಸಿಪಿವೈ ಮಾಧ್ಯಮದ ಮುಂದೆ ಹೇಳ್ತಾರೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ನವದೆಹಲಿ: MNS ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಅವರ ಮಗ ಅಮಿತ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಸೋಮವಾರ ದೆಹಲಿಗೆ ಆಗಮಿಸಿದ ರಾಜ್ ಠಾಕ್ರೆ ಅವರು ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ರಾಜ್ ಠಾಕ್ರೆ, “ನನಗೆ ಯಾವುದೇ ಕಲ್ಪನೆ ಇಲ್ಲ … ನನಗೆ ಬರಲು ಮಾತ್ರ ಹೇಳಲಾಗಿದೆ … ನನಗೆ ಯಾವುದೇ ಸಭೆಗಳ ಬಗ್ಗೆ ಮಾಹಿತಿ ಇಲ್ಲ” ಎಂದು ಹೇಳಿದರು. ಎಂಎನ್ ಎಸ್ ಮುಖ್ಯ ವಕ್ತಾರ ಸಂದೀಪ್ ದೇಶಪಾಂಡೆ ಅವರು ಈ ಬೆಳವಣಿಗೆಗಳನ್ನು ದೃಢಪಡಿಸಿದ್ದು, “ರಾಜ್ ಠಾಕ್ರೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷ ಮತ್ತು ರಾಜ್ಯದ ಹಿತಾಸಕ್ತಿಯಿಂದ ಇರುತ್ತದೆ” ಎಂದು ಹೇಳಿದ್ದಾರೆ. ಎಂಎನ್‌ಎಸ್ – ಬಿಜೆಪಿ ಮೈತ್ರಿಗೆ ಗ್ರೀನ್ ಸಿಗ್ನಲ್…
ತುಮಕೂರು: ನಾನು ಹೊರಗಿನವನು ಎಂಬುದರಲ್ಲಿ ಅರ್ಥವಿಲ್ಲ. ತುಮಕೂರಿನ ಮೂಲ ಎಂದರೆ ಐದಾರು ಸಾವಿರ ಜನ ದೊರೆಯಬಹುದು. ಹಾಗೆ ನೋಡಿದರೆ ಬೆಂಗಳೂರಿಗೂ ನಾನು ಹೊರಗಿನವನು. ನನ್ನನ್ನು ಹೊರಗಿನವ ಎಂದು ಪ್ರಚಾರ ಮಾಡುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು, ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿ. ಸೋಮಣ್ಣ ಹೇಳಿದರು. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳಿ ಹೋಗುವ ಜಾಯಮಾನ ನನ್ನದಲ್ಲ. ಇಂದು ಅನೇಕ ಜನ ಹಿಂದುಳಿದ ವರ್ಗಗಳ ನಾಯಕರು ನಮ್ಮೊಂದಿಗೆ ಕೈಜೋಡಿಸಿ ಇಲ್ಲಿಗೆ ಆಗಮಿಸಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಮುಂದಿರುವ ಗುರಿ ಎಂದರು. 2047ಕ್ಕೆ ಈ ದೇಶವನ್ನು ವಿಶ್ವದ ನಂಬರ್ ಒನ್ ಅರ್ಥಿಕತೆ ಹೊಂದಿದ ದೇಶವನ್ನಾಗಿಸುವ ಗುರಿ ಹೊಂದಿದ್ದಾರೆ. ಅವರ ಕೈ ಬಲಪಡಿಸುವ ಕೆಲಸ ತುಮಕೂರಿನಿಂದಲೂ ಆಗಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ. ಜೋತಿಗಣೇಶ್, ಪಕ್ಷದ ಮುಖಂಡರಾದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣ, ಪಂಚಾಕ್ಷರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ…
ಮಧುಗಿರಿ: ಪೂರ್ವಜನರ ಕಾಲದಿಂದ ಶವ ಹೂಳುತಿದ್ದ ಗ್ರಾಮದ ಸ್ಮಶಾನದ ಜಾಗವನ್ನು ತನ್ನೆದೆಂದು ವ್ಯಕ್ತಿಯೊಬ್ಬರು ಸ್ಮಶಾನದಲ್ಲಿದ್ದ ಗೋರಿಗಳನ್ನು ಜೆಸಿಬಿ ಯಂತ್ರ ಬಳಸಿ ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ, ನೂರಾರು ವರ್ಷಗಳಿಂದ ಪೂರ್ವಜರ ಅನುಮತಿ ಮೇರೆಗೆ ಗ್ರಾಮದ ಸರ್ವೆ ನಂ೪/೧ ರಲ್ಲಿ, ಸುಮಾರು ೧೦ ಗುಂಟೆ ಜಾಗದಲ್ಲಿ ತಲೆ ತಲಾಂತರಗಳಿಂದ ಅಂತ್ಯ ಸಂಸ್ಕಾರ ಮಾಡುತಿದ್ದು, ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಸದರಿ ಜಾಗ ತನ್ನೆದೆಂದು ಏಕಾಏಕಿ ಜೆಸಿಬಿ ಯಂತ್ರಗಳನ್ನು ಬಳಸಿ ೧೯ ಗೋರಿಗಳ ಧ್ವಂಸ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಪ್ರತಿ ವರ್ಷ ಯುಗಾದಿ ಹಬ್ಬದ ಸಮೀಪದಲ್ಲಿ ಹಿರಿಯ ಸಮಾಧಿಗಳಿಗೆ ಸುಣ್ಣಬಣ್ಣ ಮಾಡಿಸಿ ಪೂಜೆ ಮಾಡುತಿದ್ದೇವು. ಆದರೆ, ಇದೀಗಾ ಸಮಾಧಿಗಳೇ ಇಲ್ಲದ ಕಾರಣ ಯಾರಿಗೆ ಪೂಜೆ ಸಲ್ಲಿಸಬೇಕು ಎಂದು ದಿಕ್ಕು ತೋಚದಂತಾಗಿದೆ” ಎಂದು ಗ್ರಾಮಸ್ಥರು ಸಮಾಧಿಗಳ ಕಲ್ಲುಗಳ ಮೇಲೆ ಗೋಳಾಡುತ್ತಾ ಕಣ್ಣಿರಿಟ್ಟ ಘಟನೆ ಮನಕಲುಕುವಂತಿತ್ತು. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು…
ಆನೇಕಲ್: ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹರ್ಷಿತ್ ನೇಣಿಗೆ ಶರಣಾದ ಪ್ರಿಯಕರನಾಗಿದ್ದಾನೆ. ಇಂದ್ರಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್, ತುಮಕೂರು ಮೂಲದ ಮೃದುಲ ಯಾನೆ ಮೇಘ ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದ. ಆನೇಕಲ್ ಎಎಸ್ ಬಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಇವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ತಂದೆ-ತಾಯಿ ಇಲ್ಲದ ಮೃದುಲ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ದಳು. ಇವರ ಪ್ರೀತಿಯ ವಿಚಾರ ಯುವತಿಯ ಮನೆಗೆ ತಿಳಿದಿದ್ದು, ಯುವಕ ಹರ್ಷಿತ್ ಗೆ ನಿಂದಿಸಿ, ಯುವತಿಯ ಬಳಿ ಮಾತನಾಡದಂತೆ ಧಮಕಿ ಹಾಕಿದ್ದರು. ಯುವತಿಗೂ ಆಕೆಯ ಅತ್ತೆ ಮಾವ ನಿರ್ಬಂಧ ಹಾಕಿದ್ದರು. ಯುವತಿಯೂ ಇದರಿಂದ ಬೆದರಿ ಹರ್ಷಿತ್ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಹರ್ಷಿತ್ ಕೈ ಕೊಯ್ದುಕೊಂಡು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಮೃದುಲ ಮೇಘ,…
ಎಚ್.ಡಿ.ಕೋಟೆ: ನ್ಯಾಯಾಲಯದ ಮೊರೆಯಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳು ನ್ಯಾಯಾಧೀಶರು ಮತ್ತು ವಕೀಲರ ಮಧ್ಯಸ್ಥಿಕೆಯಲ್ಲಿ ಒಂದುಗೂಡಿದ್ದಾರೆ. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಮತ್ತು ವಕೀಲರ ಸಮ್ಮುಖದಲ್ಲಿ, ಒಬ್ಬರಿಗೊಬ್ಬರು ಹಾರ ಬದಲಿಸುವ ಮೂಲಕ ಪುನಹ ಜೊತೆಗೂಡಿದರು. ತಾಲ್ಲೂಕಿನ ಬಾಚೇಗೌಡನಹಳ್ಳಿ ಗ್ರಾಮದ ಮಹದೇವಮ್ಮ ಮತ್ತು ಮಹಾದೇವ ನಾಯಕ ಹಾಗೂ ಹಿರೇಹಳ್ಳಿ ಗ್ರಾಮದ ಎಚ್. ಎಲ್. ಶಿವಪ್ಪ ಮತ್ತು ಛಾಯಾದೇವಿ ದಂಪತಿಗಳು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಲ್ಲರೂ ಸುಮಾರು ಹತ್ತು ವರ್ಷಗಳಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡು ಜೋಡಿಗಳು ಪುನಃ ಒಂದಾಗಿ ಮಕ್ಕಳೊಂದಿಗೆ ಅನನ್ಯ ಜೀವನ ನಡೆಸುವುದಾಗಿ ಮಾಲಾರ್ಪಣೆ ಮಾಡಿಕೊಂಡು ಕುಟುಂಬದೊಂದಿಗೆ ತಮ್ಮ ಮನೆಗಳಿಗೆ ತೆರಳಿದರು. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಕೆ.ಜಿ. ಸತೀಶ, ಸರ್ಕಾರಿ ವಕೀಲ ಮಹಾದೇವ, ಹಿರಿಯ ವಕೀಲರಾದ ಜಿ.ಎನ್. ನಾರಾಯಣಗೌಡ, ಎ.ಟಿ. ಕೃಷ್ಣ, ಎಸ್. ಕರಿಗೌಡ, ಪ್ರವೀಣ್ ಇದ್ದರು.…
ಆನೇಕಲ್: ಬೆಂಗಳೂರು ಹೊರವಲಯದ ಆನೆಕಲ್ ತಾಲೂಕಿನ ಗೌರೇನ ಹಳ್ಳಿಯಲ್ಲಿ ಪತಿಯೇ ತನ್ನ ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಡೆದಿದೆ. ಚಾಂದ್ ಪಾಷಾ(45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಂದ್ ಪಾಷಾ ಮತ್ತು ನಾಜಿಯಾ ಬೇಗಂ ಹಲವು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಆರಂಭದಿಂದಲೇ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಗಂಡನ ಕಿರಿಕಿರಿಯಿಂದ ನಾಜಿಯಾ ಬೇಸತ್ತಿದ್ದರು. ಆತ ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಹಿಂಸೆ ನೀಡುತ್ತಿದ್ದ. ಆದರೆ ನಾಜಿಯಾ ಅದನ್ನೆಲ್ಲ ಸಹಿಸಿಕೊಂಡಿದ್ದರು. ಇತ್ತೀಚೆಗೆ ಕೌಟುಂಬಿಕ ಕಲಹ ತಾರಕ್ಕಕ್ಕೇರಿ ಕೋಪಗೊಂಡ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ. ರಾತ್ರಿ ಮಲಗಿದ್ದ ಪತ್ನಿಯ ಮೇಲೆ ನೀಚ ಪತಿಯು ಆಸಿಡ್ ದಾಳಿ ನಡೆಸಿದ್ದಾನೆ. ಮನೆಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡನ್ನೇ ಆತ ಆಕೆಯ ಮೇಲೆ ಎರಚಿದ್ದಾನೆ.…
ತುಮಕೂರು: ಶಕ್ತಿ ಕೇಂದ್ರದ ಕೂಗಳತೆ ದೂರದಲ್ಲೇ ಇರುವ ಶಾಲೆಯ ದುಸ್ಥಿತಿ ಇದು. ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇರುವ ಸರ್ಕಾರಿ ಶಾಲೆಯೊಂದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಅಲ್ಲಿನ ಶಾಲೆಯ ದುಸ್ಥಿತಿ ಕಂಡು ಮರುಗಿದ್ದಾರೆ. ಶತಮಾನಕ್ಕೂ ಹೆಚ್ಚು ಪುರಾತನ ಕಾಲದ ಶಾಲೆ ಇದಾಗಿದ್ದು, ಇಷ್ಟೊಂದು ಅದ್ವಾನದ ಪರಿಸ್ಥಿತಿಯಲ್ಲಿ ಮಕ್ಕಳು ಅದು ಹೇಗೆ ಕಳಿಯುತ್ತಾರೆ ದೇವರೇ ಬಲ್ಲ ಎಂದು ಡಾ.ತಿಪ್ಪೇಸ್ವಾಮಿ ಕೆ.ಟಿ. ಆತಂಕ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ 1,300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಈ ಶಾಲೆ ಈಗ 48 ಮಕ್ಕಳು ಇರುವುದು ಶಾಲೆಯ ಅವಾಸಾನದ ದ್ಯೋತಕ. ಶಕ್ತಿ ಕೇಂದ್ರದ ಕೂಗಳತೆ ದೂರದಲ್ಲೇ ಇರುವ ಈ ಶಾಲೆಯ ದುಸ್ಥಿತಿ ಜಿಲ್ಲಾಡಳಿತದ ಕಣ್ಣಿಗೆ ಬಿದ್ದಿಲ್ಲದಿರುವುದು ವಿಷಾದನೀಯ. ಸ್ಥಳಕ್ಕೆ ಆಗಮಿಸಿದ ಬಿಇಓ ರವರಿಂದ ಈ ಬಗ್ಗೆ ವಿವರಣೆ ಪಡೆದುಕೊಂಡಿರುವುದಾಗಿ ಅವರು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತುಮಕೂರು: ಜಿಲ್ಲೆಯ ಸಿರಾ ತಾಲೂಕಿನ ಶಾಲೆಯೊಂದರಲ್ಲಿ ಅಗ್ನಿ ಅವಘಡಕ್ಕೆ ತುತ್ತಾಗಿದ್ದ ಮಗು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಸೋಮವಾರ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಸಿರಾ ತಾಲ್ಲೂಕಿನ ಮೆಳೆಕೋಟೆ ಸರ್ಕಾರಿ ಶಾಲೆಯಲ್ಲಿ ಶಾಲಾ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅಗ್ನಿ ಅವಘಡಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದಳು. ಈಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ನೂರ್ ಉನ್ನಿಸಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಮಗುವಿಗೆ ಪರಿಹಾರ ನೀಡುವ ಸಂಬಂಧ ಚರ್ಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಶಾಲಾ ಸಮಯದಲ್ಲಿ ಈ ಘಟನೆಯಾಗಿರುವುದರಿಂದ ಶಿಕ್ಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ…