Author: admin

ಬಿಗ್​​ ಬಾಸ್ 9 ವಿನ್ನರ್ ರೂಪೇಶ್ ಶೆಟ್ಟಿ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ತಮಿಳಿನ ಖ್ಯಾತ ಹಾಸ್ಯನಟ ಯೋಗಿ ಬಾಬು ಜೊತೆಗೆ ಸಿನಿಮಾ ನಟಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಅವರಿಬ್ಬರು ಜೊತೆಯಾಗಿರುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, “ಇಂದು ತುಂಬಾ ಖುಷಿಯ ದಿವಸ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ ಸನ್ನಿಧಾನಮ್ P. O ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ನಟ ರೂಪೇಶ್ ಶೆಟ್ಟಿ ಬರೆದಿದ್ದಾರೆ. ರೋಜಾ ಸಿನಿಮಾ ಖ್ಯಾತಿಯ ನಟಿ ಮಧು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಸಾರಥಿ ನಿರ್ದೇಶನ ಮಾಡಲಿದ್ದಾರೆ. ರೂಪೇಶ್ ಶೆಟ್ಟಿ ತುಳು ಹಾಗೂ ಕನ್ನಡ ಸಿನಿಮಾ ಮಾಡಿದ್ದರೂ ಕೂಡಾ…

Read More

ಹೃದಯಾಘಾತವು ಗಂಭೀರ ಕಾಯಿಲೆಯಾಗಿದೆ. ಈ ರೋಗದಲ್ಲಿ, ಹೃದಯವು ರಕ್ತವನ್ನು ಪಂಪ್ ಮಾಡುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ರಕ್ತ ಸಂಚಾರದಲ್ಲಿ ತೊಂದರೆಯಾದರೆ ಪಾದಗಳಲ್ಲಿ ನೀರು ನಿಲ್ಲುವ ಸಮಸ್ಯೆ ಇರುತ್ತದೆ. ಇದರಿಂದಾಗಿ ಪಾದಗಳಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಕಾಲುಗಳಲ್ಲಿ ಗೋಚರಿಸುವ ಊತವು ಹೃದ್ರೋಗದ ಆರಂಭಿಕ ಚಿಹ್ನೆಯಾಗಿರಬಹುದು. ಅದನ್ನು ತಡೆಯುವುದು ಹೇಗೆ ಎಂದು ತಿಳಿಯೋಣ. ಪಾದಗಳ ಊತವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು ಏಕೆಂದರೆ ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಪಾದಗಳು, ಕಣಕಾಲುಗಳು ಮತ್ತು ಹೊಟ್ಟೆಯಲ್ಲಿ ಊತವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಪರಿಸ್ಥಿತಿಯಲ್ಲಿ ರಕ್ತ ಕಟ್ಟಿ ಹೃದಯ ಸ್ಥಂಭನದ ಚಿಹ್ನೆಗಳು ಇರಬಹುದು. ಕಾಲುಗಳು ಮತ್ತು ಪಾದಗಳಲ್ಲಿ ಊತವನ್ನು ಬಾಹ್ಯ ಎಡಿಮಾ ಎಂದು ಕರೆಯಲಾಗುತ್ತದೆ. ಇವು ಜನರಲ್ಲಿ ಹೃದಯ ವೈಫಲ್ಯದ ಆರಂಭಿಕ ಚಿಹ್ನೆಗಳಾಗಿರಬಹುದು. ಈ ಕಾಯಿಲೆಯಿಂದಾಗಿ ಕಾಲುಗಳಲ್ಲಿ ಭಾರ, ಚರ್ಮದಲ್ಲಿಯೂ ಊತ ಕಾಣಿಸಿಕೊಳ್ಳಬಹುದು. ಬೂಟುಗಳನ್ನು ಧರಿಸಲು ಕಷ್ಟವಾಗಬಹುದು. ಊತದಿಂದಾಗಿ, ಪಾದಗಳು ಬಿಸಿಯಾಗಬಹುದು ಮತ್ತು ಗಟ್ಟಿಯಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯ ಸಂಬಂಧಿ…

Read More

ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಂಸ್ಥೆಯಾದ ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು, ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. 16.68 ಮೀಟರ್ (54 ಅಡಿ 8.69 ಇಂಚು) ಉದ್ದದ ದೋಸೆಯು ಇಲ್ಲಿಯವರೆಗೆ ದಾಖಲಾಗಿತ್ತು. ನಗರದ ಬೊಮ್ಮಸಂದ್ರದಲ್ಲಿರುವ ಕಂಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಸಿಗ್ನೇಚರ್ ರೆಡ್ ಬ್ಯಾಟರ್ ಅನ್ನು ಬಳಸಿಕೊಂಡಿದೆ. ಉದ್ದನೆಯ ತವಾದಲ್ಲಿ ಈ ದಾಖಲೆಯ ದೋಸೆ ತಯಾರಿಸಲಾಗಿದೆ. ಎಂಟಿಆರ್‌ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕ ಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್…

Read More

ದೇಗುಲದ ಪ್ರಸಾದ ಸಿಕ್ಕಿದ್ರೆ ಸಾಕು, ದೇವರ ಹೆಸರು ಹೇಳಿ ಪ್ರಸಾದ ಸೇವಿಸುತ್ತೇವೆ. ಇನ್ನೂ ಕೆಲವರು ಪ್ರಸಾದ ಸ್ವೀಕಾರ ಮಾಡದೇ ಬರೋದೇ ಇಲ್ಲ.. ದೇವರ ಪ್ರಸಾದವನ್ನು ಸ್ವಲ್ಪವಾದರೂ ತಿಂದ್ರೆನೆ ಕೆಲವರಿಗೆ ಸಮಾಧಾನ. ಹೀಗೆ ಇನ್ನೇನು ದೇವರ ಪ್ರಸಾದ ಬಾಯಿಗಿಡಬೇಕು ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರಿಗೆ ಸತ್ತ ಇಲ್ಲಿ ಪತ್ತೆಯಾಗಿದೆ ಎನ್ನಲಾದ ಘಟನೆ ಬಗ್ಗೆ ತೆಲಂಗಾಣದಿಂದ ವರದಿಯಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ತೆಲಂಗಾಣದ ಯಾದಾದ್ರಿಯಲ್ಲಿ ಭಕ್ತರಿಗೆ ನೀಡಿದ ಪ್ರಸಾದದಲ್ಲಿ ಸತ್ತ ಇಲ್ಲಿ ಪತ್ತೆಯಾಗಿದೆ.  ಆದರೆ ದೇಗುಲ ಸಮಿತಿ ಈ ಆರೋಪವನ್ನು ನಿರಾಕರಿಸಿದ್ದು, ವೀಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರೋ ತೆಲಂಗಾಣದ ಪ್ರಸಿದ್ಧ ತೀರ್ಥಕ್ಷೇತ್ರ ಯಾದಾದ್ರಿ ದೇಗುಲದಲ್ಲಿ ಪ್ರಸಾದವಾಗಿ ನೀಡಿದ ಪುಳಿಯೊಗ್ಗರೆಯಲ್ಲಿ ಇಲಿ ಇತ್ತು ಎಂದು ಬರೆದು  ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಘಟನೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ನಾವು ವಿಚಾರಣೆ…

Read More

ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ ದ್ರೋಹ ಮಾಡಲ್ಲ. 2014ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತ ಹೈಕಮಾಂಡ್ ಹೇಳಿರಲಿಲ್ಲ. ನಾನು ಸಹ ಯಾಕೆ ಕೊಟ್ರಿ ಅಂತ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ತಪ್ಪಿಸಿದ್ದೀರಿ ಅಂತಾನೂ ಕೇಳಿಲ್ಲ ಎಂದು ಹೇಳಿದ್ದಾರೆ. ನಂತರ ಬಿಜೆಪಿ ಅಭ್ಯರ್ಥಿ ರಾಜ ಯದುವೀರ್ ಮಾತನಾಡಿ ನಮ್ಮ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ನಮಗೆ ಎಲ್ಲ ಪಕ್ಷದವರೊಂದಿಗೆ ಸಂಬಂಧ ಇದೆ. ನನ್ನ ಪರಿಕಲ್ಪನೆಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇದೆ. ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ನಾನೂ ಸಹ ಸಾಮಾನ್ಯ ಸಂಸದನ ರೀತಿ ಕೆಲಸ ಮಾಡುತ್ತೇನೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದು. ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ. ನಾನು ರಾಜ ಅಂತ ಇದನ್ನು ಹೇಳಿಲ್ಲ. ಅರಮನೆಗೆ ಒಂದು ಪರಂಪರೆ ಇದೆ. ಅದನ್ನು ಹೊರತುಪಡಿಸಿ ನಾನು ಸಾಮಾನ್ಯನಾಗಿ ಇರುತ್ತೇನೆ. ನನ್ನನ್ನು ಸಂಸದ, ಪ್ರತಿನಿಧಿ…

Read More

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಿದೆ. ಜೊತೆಗೆ ವಿದ್ಯುತ್‌ ಬೇಡಿಕೆ ಕೂಡಾ ಹೆಚ್ಚಿದೆ. ಜನರು ಬಿಸಿಲ ಧಗೆಯನ್ನು ಕಡಿಮೆ ಮಾಡಲು ಎಸಿ, ಫ್ಯಾನ್‌, ಕೂಲರ್‌ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ವಿದ್ಯುತ್‌ ಬಳಕೆ ಹೆಚ್ಚಾಗಿದೆ. ಗೃಹಜ್ಯೋತಿ ಗ್ರಾಹಕರು ಕೂಡಾ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಯೂನಿಟ್‌ಗೂ ನಿಗದಿತ ದರದಂತೆ ಇದೀಗ ಬಿಲ್‌ ಪಾವತಿಸಬೇಕಿದೆ. 2022-23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಲಾಗಿದೆ. ನಿಗದಿತ ಸರಾಸರಿಗಿಂತ 150 ಉಚಿತ ಯೂನಿಟ್‌ ಗಿಂತ 50 ಯೂನಿಟ್‌ ಹೆಚ್ಚು ಬಳಕೆ ಮಾಡಿದ್ದಲ್ಲಿ ಪ್ರತಿ ಯೂನಿಟ್‌ ಗೆ 7 ರೂ.ಪಾವತಿ ಮಾಡಬೇಕು. ಇದೀಗ ಬಿಸಿಲ ಝಳ ಹೆಚ್ಚಾಗಿರುವ ಕಾರಣ ವಿದ್ಯುತ್‌ ಬಳಕೆ ಶೇ.20 ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ಗೃಹಜ್ಯೋತಿ ಬಳಕೆದಾರರು ಕೂಡಾ ಸಾಮಾನ್ಯ ಗ್ರಾಹಕರ ರೀತಿ ನಿಗದಿತ ದರದಂತೆ ಬಿಲ್‌ ಪಾವತಿ ಮಾಡಬೇಕಿದೆ. ಶೇ.20ಕ್ಕೂ ಅಧಿಕ ಗೃಹಜ್ಯೋತಿ ಗ್ರಾಹಕರಿಗೆ ಇದು ಶಾಕಿಂಗ್‌ ನ್ಯೂಸ್‌…

Read More

ಈ ಬಾರಿ ಮಾರ್ಚ್ 22ರಿಂದ ಮೇ 26ರವರೆಗೆ ಬಹುನಿರೀಕ್ಷಿತ ಐಪಿಎಲ್ ಟೂರ್ನಿ ನಡೆಯಲಿದೆ. ಇಂದು (ಮಾರ್ಚ್ 19ಕ್ಕೆ) ಆರ್‌ ಸಿಬಿ ಅನ್‌ ಬಾಕ್ಸ್ ಈವೆಂಟ್‌ ಗೆ ವೇದಿಕೆ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಇವೆಂಟ್ ಕುರಿತ ಪ್ರೋಮೊದಲ್ಲಿ  ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಆರ್‌ ಸಿಬಿ ಅನ್‌ ಬಾಕ್ಸ್  ಇವೆಂಟ್ ಪ್ರೋಮೊದಲ್ಲಿ ಈಗಾಗಲೇ ಶಿರಾಜ್‌ ಕುಮಾರ್‌, ಸುದೀಪ್‌, ರಿಷಬ್‌, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಅರ್ಥ ಆಯ್ತಾ? ಎಂದು ಆರ್‌ ಸಿಬಿ ಚಮಕ್ ಕೊಡುತ್ತಲೇ ಬರುತ್ತಿದೆ. ಇದೀಗ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರ ಸರದಿ. Royal Challengers Bangalore ಎನ್ನುವ ಹೆಸರಿನಲ್ಲಿ ಬೆಂಗಳೂರು ಪದದ ಇಂಗ್ಲೀಷ್ ಅಕ್ಷರಗಳನ್ನು, ಉಚ್ಚಾರಣೆ ಬದಲಿಸಿದೆ. ಬೆಂಗಳೂರು ಎಂದು ಮಾಡಲಾಗುತ್ತಿದೆ. ಇಂದು(ಮಾರ್ಚ್‌ 19)ಕ್ಕೆ ನಡೆಯುವ ಆರ್‌ ಸಿಬಿ ಅನ್‌ ಬಾಕ್ಸ್ ಇವೆಂಟ್‌ ನಲ್ಲಿ ಇದು ಅಧಿಕೃತವಾಗುತ್ತಿದೆ. ಆರ್​ ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ…

Read More

ಕೊಡಗು ಪೊಲೀಸ್ ಶ್ವಾನ ದಳದ ‘ಕಾಪರ್’ ವಿಶೇಷ ಸಾಧನೆ ಮಾಡಿದೆ. ಹೌದು,ಅಕ್ರಮವಾಗಿ ಗಾಂಜಾ ಸರಬರಾಜು, ಮಾರಾಟ ಹಾಗೂ ಬಳಕೆ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾವನ್ನು ಪತ್ತೆಹಚ್ಚುವಲ್ಲಿ ಕೊಡಗು ಪೊಲೀಸ್ ಶ್ವಾನ ದಳದ ಕಾಪರ್​ ಹೆಸರಿನ ಶ್ವಾನವು ಪ್ರಮುಖ ಪಾತ್ರ ವಹಿಸಿದೆ. ಈ ಹಿಂದೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸರಬರಾಜು, ಬಳಕೆ ಹಾಗೂ ಮಾರಾಟದ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿತ್ತು. ಮಾದಕ ವಸ್ತುಗಳ ಮಾರಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿತ್ತು. ಅದರಂತೆ, ಮಾರ್ಚ್‌ ​​ 17 ರಂದು ಬಸವನಹಳ್ಳಿ ಗ್ರಾಮ ಸಮೀಪ ತೆಪ್ಪದಕಂಡಿ ಎಂಬಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಟ ಹಾಗೂ ಸರಬರಾಜು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ದ್ವಿ-ಚಕ್ರ ವಾಹನದ ಜತೆಗೆ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು. ಬಂಧಿತ ಆರೋಪಿಯನ್ನು 37 ವರ್ಷದ ಬಸವರಾಜು ಎಂದು…

Read More

ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ ಗೆ ನುಗ್ಗಿದ ಗುಂಪೊಂದು, ನಮಾಜ್ ಮಾಡಿದ ಆರೋಪದ ಮೇಲೆ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ತುರ್ಕಮೆನಿಸ್ತಾನ್‌ ನ ತಲಾ ಒಬ್ಬರು ಮತ್ತು ಆಫ್ರಿಕನ್ ದೇಶಗಳ ಇಬ್ಬರ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಬರುವಷ್ಟರಲ್ಲಿ ಗುಂಪು ಓಡಿಹೋಗಿತ್ತು. ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿದ್ದಾರೆ. ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಉಳಿದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ಬೈಕ್‌ ಗಳು, ಒಡೆದ ಲ್ಯಾಪ್‌ ಟಾಪ್ ‌ಗಳು ಮತ್ತು ಧ್ವಂಸಗೊಂಡ ಕೊಠಡಿಗಳ ದೃಶ್ಯಗಳಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗುಂಪು ಹಾಸ್ಟೆಲ್‌ ಗೆ ಕಲ್ಲು ಎಸೆಯುತ್ತಿರುವುದು ಮತ್ತು ವಿದೇಶಿ ವಿದ್ಯಾರ್ಥಿಗಳನ್ನು ನಿಂದಿಸುತ್ತಿರುವ ದೃಶ್ಯದ ವೀಡಿಯೋ ಕೂಡ ವೈರಲ್‌ ಆಗಿದೆ ಎಂದು ವರದಿ ತಿಳಿಸಿದೆ. ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಹಮದಾಬಾದ್ ಮೂಲದ ಕ್ಯಾಂಪಸ್‌ ನಲ್ಲಿ ಯಾವುದೇ ಮಸೀದಿ ಇಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದ್ದರಿಂದ ರಂಜಾನ್ ಸಮಯದಲ್ಲಿ ರಾತ್ರಿ ನೀಡಲಾಗುವ…

Read More

ಹೈದರಾಬಾದ್ ನ ನೆಹರೂ ಮೃಗಾಲಯದಲ್ಲಿದ್ದ ದೈತ್ಯ ಆಮೆ ಚಾಣಕ್ಯ ತನ್ನ 125ನೇ ವಯಸ್ಸಿಗೆ  ಕೊನೆಯುಸಿರೆಳೆದಿದೆ. ಮೃಗಾಲಯದ ಅತ್ಯಂತ ಹಿರಿಯ ನಿವಾಸಿ ಎಂದು ಗುರುತಿಸ್ಪಡುತ್ತಿದ್ದ ಚಾಣಕ್ಯ ಹೆಸರಿನ ಆಮೆಯ ನಿಧನಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಚಾಣಕ್ಯ ತನ್ನ ವಯೋಸಹಜ ಸಮಸ್ಯೆಗಳಿಂದ ಕೊನೆಯುಸಿರೆಳೆದಿದೆ ಎನ್ನಲಾಗಿದೆ. ಕಳೆದ 10 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ ಎಂದು ಮೃಗಾಲಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಮೃಗಾಲಯದ ಸಿಬ್ಬಂದಿ ಆವರಣವನ್ನು ಸ್ವಚ್ಛಗೊಳಿಸಲು ಹೋದಾಗ ಚಾಣಕ್ಯ ಕೊನೆಯುಸಿರೆಳೆದ ಬಗ್ಗೆ ತಿಳಿದಿದೆ. 1963ರಲ್ಲಿ ನಾಂಪಲ್ಲಿಯ ಸಾರ್ವಜನಿಕ ಉದ್ಯಾನದಿಂದ (ಬಾಗ್-ಎ-ಆಮ್) ಚಾಣಕ್ಯನನ್ನು ಹೈದರಾಬಾದ್‌ನ ನೆಹರೂ ಮೃಗಾಲಯಕ್ಕೆ ಕರೆ ತರಲಾಗಿತ್ತು. ಮೃಗಾಲಯ ಸ್ಥಾಪಿಸುವ ಮುನ್ನ ಇದು ಉದ್ಯಾನವನ ಆಗಿತ್ತು. ಈ ಹಿರಿಯ ಆಮೆಯ ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ ಹೊರ ಬಂದಿದೆ. ಬಹು ಅಂಗಾಂಗ ವೈಫಲ್ಯದಿಂದಾಗಿ ಚಾಣಕ್ಯ ನಿಧನವಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹೆಚ್ಚಿನ ತನಿಖೆಗಾಗಿ ಆಮೆಯ ಮಾದರಿಗಳನ್ನು ಪಶು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More