Author: admin

ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಬಸ್, ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. 38 ಮಂದಿ ಗಾಯಗೊಂಡಿದ್ದಾರೆ. ಕಳಪೆ ರಸ್ತೆಗಳು, ಅಜಾಗರೂಕ ಚಾಲನೆ ಮತ್ತು ನಿಯಮಗಳ ಕೊರತೆಯಿಂದಾಗಿ ಮಾರಣಾಂತಿಕ ರಸ್ತೆ ಅಪಘಾತಗಳು ದೇಶದಲ್ಲಿ ಸಾಮಾನ್ಯವಾಗಿದೆ. ಹೆಲ್ಮಂಡ್ ಪ್ರಾಂತ್ಯದ ಗ್ರಿಷ್ಕ್ ಜಿಲ್ಲೆಯ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಪ್ರಯಾಣಿಕ ಬಸ್ ಹೆರಾತ್ ನಗರದಿಂದ ರಾಜಧಾನಿ ಕಾಬೂಲ್‌ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ಬೈಕ್‌ ಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ತೈಲ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಅಪಘಾತದಲ್ಲಿ 16 ಬಸ್‌ ಪ್ರಯಾಣಿಕರು, ಟ್ಯಾಂಕರ್ ‌ನಲ್ಲಿದ್ದ ಮೂವರು ಹಾಗೂ ಇಬ್ಬರು ಬೈಕ್‌ ಸವಾರರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. 38 ಮಂದಿ ಗಾಯಗೊಂಡಿದ್ದು, 11 ಮಂದಿಯ ಸ್ಥಿತಿ ಗಂಭೀರವಾಗಿದೆ. ನಮ್ಮತುಮಕೂರಿನ ಕ್ಷಣ…

Read More

ಐದನೇ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಗೆದ್ದಿದ್ದಾರೆ. 87ಕ್ಕೂ ಹೆಚ್ಚು ಮತಗಳನ್ನು ಪಡೆದು ಪುಟಿನ್ ಅಧಿಕಾರಕ್ಕೆ ಮರಳಿದ್ದಾರೆ. ಪುಟಿನ್ ತಮ್ಮ ಮುಂದಿನ ಆರು ವರ್ಷಗಳ ಆಡಳಿತವನ್ನು ಭದ್ರಪಡಿಸಿಕೊಳ್ಳುತ್ತಿದ್ದಂತೆ, ಜೋಸೆಫ್ ಸ್ಟಾಲಿನ್ ಅವರ ದಾಖಲೆಯನ್ನು ಅವರು ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಆಡಳಿತಗಾರ ಎಂಬ ದಾಖಲೆಯನ್ನು ಮೀರಿಸುವುದು ಖಚಿತವಾಗಿದೆ. ಆದರೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವವರನ್ನು ಬಂಧಿಸಿ ಮುಕ್ತ ಚುನಾವಣಾ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಮೂಲಕ ಪುಟಿನ್ ಮತ್ತೆ ರಷ್ಯಾ ಅಧ್ಯಕ್ಷರಾಗಿದ್ದಾರೆ ಎಂದು ಅಮೆರಿಕ, ಬ್ರಿಟನ್ ಮತ್ತು ಜರ್ಮನಿ ಪ್ರತಿಕ್ರಿಯಿಸಿವೆ. ಕಮ್ಯುನಿಸ್ಟ್ ನಾಯಕ ನಿಕೊಲಾಯ್ ಖರಿಟೋನೊವ್ ಅವರು ಚುನಾವಣೆಯಲ್ಲಿ ಕೇವಲ ನಾಲ್ಕು ಪ್ರತಿಶತದಷ್ಟು ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಹೊಸಬರಾದ ವ್ಲಾಡಿಸ್ಲಾವ್ ದಾವಂಕೋವ್ ಅವರು ಮೂರನೇ ಮತ್ತು ಅಲ್ಟ್ರಾ-ನ್ಯಾಷನಲಿಸ್ಟ್ ಲಿಯೊನಿಡ್ ಸ್ಲಟ್ಸ್ಕಿ ನಾಲ್ಕನೇ ಸ್ಥಾನವನ್ನು ಪಡೆದರು, ರಾಯಿಟರ್ಸ್ ಪ್ರಕಾರ, ಇತ್ತೀಚಿನ ಚುನಾವಣಾ ಡೇಟಾವನ್ನು ಬಿಡುಗಡೆ ಮಾಡಿದೆ. ಐದನೇ ವಿಜಯದ ನಂತರ, ಪುಟಿನ್ ಅವರು ರಷ್ಯಾದ ಮಿಲಿಟರಿಯನ್ನು ಬಲಪಡಿಸುವುದಾಗಿ ಮತ್ತು ಉಕ್ರೇನ್‌ ನಲ್ಲಿನ ವಿಶೇಷ…

Read More

ಬಾಲಿವುಡ್ ನ ಟಾಪ್ ನಟಿಯರ ಪೈಕಿ ಆಲಿಯಾ ಭಟ್ ಸಹ ಒಬ್ಬರು. ಆಕೆಯ ಅದ್ಭುತ ನಟನೆಯಿಂದಾಗಿ ಎಲ್ಲಾ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ, ಆಲಿಯಾ ಭಟ್ ಅವರು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ 2 ರಿಂದ 3 ಚಲನಚಿತ್ರಗಳನ್ನು ನಟಿಸುತ್ತಿದ್ದಾರೆ. ಆಲಿಯಾ 10 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ ಮತ್ತು ಪ್ರತಿ ಚಿತ್ರದಲ್ಲೂ ಎಲ್ಲರ ನೆಚ್ಚಿನ ನಟಿಯಾಗಿ ಮಿಂಚಿದ್ದಾರೆ. ನೀವೂ ಸಹ ಆಲಿಯಾ ಭಟ್ ಅವರ ಅಭಿಮಾನಿಯಾಗಿದ್ದರೆ, ಆಲಿಯಾ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ. ಆಲಿಯಾ ಒಬ್ಬ ಉತ್ತಮ ನಟಿ ಮಾತ್ರವಲ್ಲದೆ ಉದ್ಯಮಿ ಕೂಡ ಆಗಿದ್ದಾರೆ. ನಟನೆಯ ಜೊತೆಗೆ ಆಲಿಯಾ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೆ, ಆಲಿಯಾ ಅನೇಕ ವ್ಯವಹಾರಗಳನ್ನು ಸಹ ನಡೆಸುತ್ತಿದ್ದಾರೆ. ಆಲಿಯಾ ಭಟ್ ಒಂದು ಸಿನಿಮಾ ಮಾಡಲು ಸಾಕಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ. ವರದಿಗಳ ಪ್ರಕಾರ, ಆಕೆ ಒಂದು ಚಿತ್ರದಲ್ಲಿ ನಟಿಸಲು ಸುಮಾರು 20 ಕೋಟಿ…

Read More

ಲೋಕಸಭಾ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚುನಾವಣಾ ಪ್ರಚಾರ ಕೂಡ ಆರಂಭಿಸಿದೆ. ಆದರೆ ಕಾಂಗ್ರೆಸ್ ಮಾತ್ರ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಸುಮ್ಮನಾಗಿದೆ. ಕೈ ಪಾಳಯದಲ್ಲಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಸಿಗದಾಗಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ರಾಜ್ಯದ ಮಂತ್ರಿಗಳು ಕೂಡ ಲೋಕ ಸಮರದಲ್ಲಿ ಸೆಣೆಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್’ಗೆ ಅಭ್ಯರ್ಥಿಗಳದ್ದೇ ಕಗ್ಗಂಟಾಗಿದೆ. ಹೌದು, ರಾಜ್ಯದ ಬಹುಪಾಲು ಸ್ಥಾನಗಳಿಗೆ ಸ್ಪರ್ಧಿಗಳನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕೆಲವು ಮಂತ್ರಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮೊದಲೇ ಯೋಚಿಸಿತ್ತು. ಈ ಬಗ್ಗೆ ಸಾಕಷ್ಟು ಅಂತಿಮ ನಿರ್ಧಾರಗಳೂ ಆಗಿದ್ದವು. ಆದರೀಗ ಕೊನೇ ಕ್ಷಣಕ್ಕೆ ಕೆಲವು ಸಚಿವರು ಮತ್ತು ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ‘ಗೆಲ್ಲುವ’ ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ. ಅಂದಹಾಗೆ ಏಳರಿಂದ ಎಂಟು ಸಚಿವರನ್ನು ಕಣಕ್ಕಿಳಿಸಲು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ…

Read More

ಭಾರತೀಯ ಸಾರಿಗೆ ಇಲಾಖೆಯು ವಾಹನಗಳಿಗೆ ಹಾಗೂ ರಸ್ತೆಯ ನಿಯಮಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ಕಾನೂನು, ನಿಯಮಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಕಾರು ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿಯಾಗಿದ್ದು ಎಲ್ಲಾ ಕಾರು ಮಾಲೀಕರು ಸದ್ಯದಲ್ಲೇ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಖಡಕ್ ಆದೇಶ ಮಾಡಲಾಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿವೆ. ಈ ರಸ್ತೆ  ಅಪಘಾತ ಕ್ಕ ಚಾಲಕರ ನಿರ್ಲಕ್ಷ್ಯ ಮತ್ತು ಕಳಪೆ ರಸ್ತೆ ಕಾರಣವಾದ್ರೆ ಇನ್ನೊಂದು ಪ್ರಯಾಣಿಕ ರ ನಿರ್ಲಕ್ಷ್ಯವೂ ಸಹ ಕಂಡು ಬಂದಿದೆ. ಅದರಲ್ಲೂ ಕಾರಿನ ಪ್ರಯಾಣಿಕರಲ್ಲಂತೂ ನಿರ್ಲಕ್ಷವೇ ಎದ್ದು ಕಾಣುತ್ತದೆ. ಕಾರುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್  ವರದಾನವಾಗಿದೆ. ಚಾಲಕ ಹಾಗೂ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ ಧರಿಸಿದ್ದರೆ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವ ಕಾರಣ ಅನೇಕರ ಜೀವ ಉಳಿಯುತ್ತದೆ. ಆದರೆ ಕಾರಿನಲ್ಲಿ ಪ್ರಯಾಣಿಸುವ ಬಹುತೇಕರು ಹಿಂದಿನ ಸೀಟ್ ನಲ್ಲಿ…

Read More

ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಯುವಕರಿಂದ ಯುವಕನೋರ್ವನ ಮೇಲೆ ಹಲ್ಲೆ ನಡೆದಿರುವ ಕುರಿತು ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಮುಖೇಶ್‌ ಎಂಬಾತನೇ ಹಲ್ಲೆಗೊಳಗಾದ ಯುವಕ ಈತ ವರ್ಧಮಾನ್‌ ಟೆಲಿಕಾಮ್‌ ಎಂಬ ಮೊಬೈಲ್‌ ಶಾಪ್‌ ನಡೆಸುತ್ತಿದ್ದು, ಸಂಜೆ ಸಮಯ ಮೊಬೈಲ್‌ ಶಾಪ್‌ ನಲ್ಲಿ ಭಕ್ತಿಗೀತೆ ಹಾಕುತ್ತಿದ್ದ ಯುವಕ, ಈ ಸಮಯದಲ್ಲಿ ಅಂಗಡಿಗೆ ಬಂದ ನಾಲ್ಕೈದು ಮುಸ್ಲಿಂ ಯುವಕರು ಸಂಜೆ ನಮಾಜ್‌ ಸಮಯದಲ್ಲಿ ಹನುಮಾನ್‌ ಚಾಲೀಸ್‌ ಹಾಕ್ತೀಯ ಎಂದು ಕಿರಿಕ್‌ ಮಾಡಿದ್ದರು. ಮೊಬೈಲ್‌ ಸ್ಪೇರ್‌ ಪಾರ್ಟ್ಸ್‌ ಅಂಗಡಿಯಿಂದ ಹೊರಗೆಳೆದು ಮುಖೇಶ್‌ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಈ ಮುಸ್ಲಿಂ ಯುವಕರು. ಈ ಕುರಿತು ಹಲ್ಲೆಗೊಳಗಾದ ಯುವಕ ಮುಖೇಶ್‌ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ಮಾಡಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು…

Read More

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಎದರಿಸಲು ಬಿಜೆಪಿಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದು ಕೆಲ ಸಮಯದ ಹಿಂದೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಇದೀಗ ಈ ಕುರಿತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ದುಡ್ಡು ಕಾಂಗ್ರೆಸ್‌ಗೆ ಬಂದಿರಬೇಕು. ಅದು ಬಿಜೆಪಿಗೆ ಬಂದಿಲ್ಲ ಎಂದು ಕುಟುಕಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಆರೋಪಕ್ಕೆ ಕಿಡಿಕಿಡಿಯಾದರು. ಕಾಂಗ್ರೆಸಿಗೆ ಹಣ ಬಂದಿದೆ. ಬಿಜೆಪಿಗೆ ಇಂತಹ ಹಣದ ಅವಶ್ಯಕತೆ ಇಲ್ಲ ಎಂದರು. ಅಲ್ಲದೆ ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ. ಕ್ಯಾಲೆಂಡರ್ ಆಫ್ ದಿ‌ ಇವೆಂಟ್ ಕೂಡ ಬಂದಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ಅವಧಿಯ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೌತಮ್‌ ನ ಮೋಹನ್‌ಪುರ ಢಮಾರಾದಿಂದ ಮದುವೆ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಪರ್ಬಟ್ಟಾ ಬ್ಲಾಕ್‌ ನ ಬೆಸಾ ಗ್ರಾಮದ ನಿವಾಸಿ ಇಂದ್ರದೇವ್ ಠಾಕೂರ್ ಅವರ ಪುತ್ರನ ಮದುವೆಗೆ ತೆರಳಿ ಮದುವೆ ಮೆರವಣಿಗೆ ವಾಪಸಾಗುತ್ತಿತ್ತು ಎನ್ನಲಾಗಿದೆ. ಮಾಹಿತಿ ಪ್ರಕಾರ, ಮದುವೆ ಮೆರವಣಿಗೆಯು ಪರ್ಬಟ್ಟಾದ ಬಿಥಾಲ ಗ್ರಾಮದಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಿಮೆಂಟ್ ತುಂಬಿದ್ದ ಟ್ರ್ಯಾಕ್ಟರ್‌ಗೆ ಎಸ್‌ಯುವಿ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಎಕ್ಸ್ ಯುವಿಯಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಗ್ಗೆ (ಇಂದು) 6:30ಕ್ಕೆ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ನಾಲ್ವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಪೊಲೀಸರು…

Read More

ಕರ್ನಾಟಕದಲ್ಲಿ ಬಿಸಿಲ ಬೇಗೆಯಿಂದ ಜನ ತತ್ತರಿಸಿ ಹೋಗಿರುವ ಜೊತೆಗೆ ನೀರಿನ ಅಭಾವ ಕೂಡಾ ಉಂಟಾಗಿದೆ. ಈ ಸಂದರ್ಭದಲ್ಲಿ ಹವಾಮಾನ ಇಲಾಖೆಯು ಖುಷಿಯ ಸುದ್ದಿಯೊಂದನ್ನು ನೀಡಿದೆ. ಹೌದು, ಬೆಳಗಾವಿ, ಬೀದರ್, ಧಾರವಾಡ, ರಾಯಚೂರು, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಉಳಿದ ಹಾಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಒಣಹವೆ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗೊಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲಿ ಬಿಸಿಲಿನ ಧಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ ಸೂರಜ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಒಬ್ಬರು, ಇಬ್ಬರು ಮಾತ್ರ ಕೆಲಸ ಮಾಡುವುದರಿಂದ ಅಂತಹ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆ ಸಂಬಂಧ ಆರೋಪಿಗಳು ಯಡವಟ್ಟು ಮಾಡಿದ್ದು, ಶೂಟೌಟ್ ವೇಳೆ ತಮ್ಮದೇ ಗ್ಯಾಂಗ್‌ನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ…

Read More