Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ಪರೀಕ್ಷೆ ಅಂದರೆ ಅಲ್ಲಿ ಗಂಭೀರತೆ ಇರುತ್ತೆ. ಯಾರೂ ಅತ್ತ ಸುಳಿಯಬಾರದು ಎನ್ನುವ ನಿಯಮವಿದೆ. ಮಾತ್ರವಲ್ಲ ವಿದ್ಯಾರ್ಥಿಗಳನ್ನು ಪರೀಕ್ಷಿಸಿಯೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತೆ. ಆದರೆ ಇಲ್ಲೊಂದು ಕಡೆ ಇದು ಉಲ್ಟಾ ಆಗಿದೆ. ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಮಕ್ಕಳಿಗೆ ಪೂರ್ಣ ಪಾಠ ಮಾಡದ ಶಿಕ್ಷಕರು ವಾರ್ಷಿಕ ಪರೀಕ್ಷೆಯಲ್ಲಿ ತಾವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ. ಜತೆಗೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮನೆಗೆ ಕೊಟ್ಟು ನಿಧಾನವಾಗಿ ಉತ್ತರ ಬರೆದುಕೊಂಡು ಬನ್ನಿ ಎಂದು ಹೇಳಿರುವ ಘಟನೆ ಬಗ್ಗೆ ವರದಿಯಾಗಿದೆ. ಇದರಿಂದ ಕೆರಳಿದ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಂಡಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂಡಗದ ಸ.ಹಿ.ಪ್ರಾ. ಪಾಠಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ 42 ಮಕ್ಕಳು, ನಾಲ್ವರು ಶಿಕ್ಷಕರು ಇದ್ದಾರೆ. ಆದರೆ ಪಠ್ಯದಲ್ಲಿರುವ ಪಾಠಗಳನ್ನು ಪೂರ್ಣ ಮಾಡಿಲ್ಲ ಎಂಬುದು ಪಾಲಕರ ಆರೋಪವಾಗಿದೆ. ಶಾಲೆಯಲ್ಲಿ ನಾಲ್ಕನೇ ತರಗತಿಯ ಪರೀಕ್ಷೆ ಇತ್ತು. ಹೀಗಾಗಿ ಮಕ್ಕಳು ಆದ ಪಾಠವನ್ನು ಓದಿಕೊಂಡು…
ಪಾವಗಡ: ತಾಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹರಿಹರಪುರ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಪ್ರಾಂಶುಪಾಲರಾದ ಪಾತಲಿಂಗಪ್ಪ ಮಾತನಾಡಿ, ಶಿವರಾತ್ರಿ ಹಬ್ಬದ ಪ್ರಯುಕ್ತದಿಂದ ಶ್ರೀ ಸಿದ್ಧೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣೋತ್ಸವದಿಂದ ಕೊನೆತನಕ ಮಹಾಮಂಡಲ ದಿನದವರೆಗೂ ಎಂಟು ದಿನಗಳವರೆಗೂ ಹಬ್ಬವನ್ನು ಆಚರಣೆ ಮಾಡುತ್ತಾ ನಾವು ಬಂದಿದ್ದೇವೆ. ಇವತ್ತು ವಿಶೇಷವಾಗಿ ಕಲ್ಲುಗಾಲ್ಲಿನ ರಥೋತ್ಸವವನ್ನು ಈ ದೇವಸ್ಥಾನದ ಹರಿಹರಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ಅಕ್ಕ ಪಕ್ಕದ ಗ್ರಾಮದ ಎಂಟು ಹಳ್ಳಿಗಳಿಂದ ಭಕ್ತರು ಬಂದು ಸ್ವಾಮಿಗೆ ಪಾತ್ರರಾಗಿರುತ್ತಾರೆ ಎಂದರು. ಭಕ್ತಾದಿಗಳು ರಥೋತ್ಸವವನ್ನು ಮುಂದಕ್ಕೆ ಎಳೆದು ಮತ್ತೆ ಸಾಯಂಕಾಲ ಅದೇ ಜಾಗಕ್ಕೆ ರಥವನ್ನು ಎಳೆಯುತ್ತಾರೆ, ಈ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿರುವುದರಿಂದ ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ರಾಮಲಿಂಗಪ್ಪ, ಅರುಂಧತಿ ನಾಗಲಿಂಗಪ್ಪ ಗ್ರಾಮ ಪಂಚಾಯತ್ ಸದಸ್ಯ, ದೊಡ್ಡಣ್ಣ…
ಬೆಂಗಳೂರು: ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಭ್ರಷ್ಟರು ಬಿದ್ದಿದ್ದಾರೆ. ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮತ್ತು ಪಿಎಸ್‌ಐ ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದವರು ಕೆಆರ್ ಪುರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಜ್ರಮುನಿ ಮತ್ತು ಪಿಎಸ್‌ಐ ರಮ್ಯಾ ಎಂದು ತಿಳಿದು ಬಂದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್ ರಮ್ಯ ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆತನನ್ನು ತಮ್ಮ ವಶದಿಂದ ಬಿಡಲು ಐದು ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಇದರಲ್ಲಿ ಆಗಲೇ ಐವತ್ತು ಸಾವಿರ ರೂ. ಮೊದಲು ಪಡೆದುಕೊಂಡಿದ್ದರು. ಎರಡನೇ ಕಂತಾಗಿ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ವಂಚನೆ ಆರೋಪಿಯ ಕಡೆಯವರು ಎರಡನೇ ಕಂತು ಕೊಡುವ ಮುನ್ನ ಲೋಕಾಯುಕ್ತರಿಗೆ…
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಕಾವು ಹೆಚ್ಚುತ್ತಿರುವ ಹಿನ್ನೆಲೆ ಇದೀಗ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಒಂದು ಹೇಳಿಕೆ ಬಿಜೆಪಿ ನಾಯಕರಿಗೆ ನಡುಕ ಹುಟ್ಟಿಸಿದೆ. ಬಿಜೆಪಿಯಲ್ಲಿನ 10 ಮಂದಿ ಹಾಲಿ ಸಂಸದವರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಆಗ ಹೇಳಿದ್ದೆ, ಅದು ಈಗ ಸತ್ಯವಾಗಿದೆ. ಬಿಜೆಪಿಯ ಟಿಕೆಟ್ ವಂಚಿತರು ಕಾಂಗ್ರೆಸ್ ನತ್ತ ಮುಖ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಟಿಕೆಟ್ ವಂಚಿತರ ಸೇರ್ಪಡೆ ಸದ್ಯಕ್ಕೆ ಗುಟ್ಟಾಗಿಯೇ ಇರಲಿ. ಮುಂದಿನ ದಿನಗಳಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಇಚ್ಚಿಸಿದರೆ ಅವರಿಗೆ ಖಂಡಿತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಸದ್ಯಕ್ಕೆ ಬಿಜೆಪಿ ಪಕ್ಷದ ಬೆಳವಣಿಗೆಯನ್ನು ಕಾದು ನೋಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಬಿಜೆಪಿ ರೆಬೆಲ್ ನಾಯಕರು ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಬೀದರ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯತ್ ನಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು. ಸುಮಾರು ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದರೂ ಏನು ಪ್ರಯೋಜನ ಆಗಿಲ್ಲ, ತಕ್ಷಣವೇ ಮೂಲಭೂತ ಸೌಕರ್ಯ ಕಲ್ಪಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರತಿಭಟನಾಕಾರರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಒತ್ತಾಯಿಸಿದರು. ಗ್ರಾಮದ ಸಮಸ್ಯೆ ಬಗ್ಗೆ ಹೇಳಿದರೆ ಪಿಡಿಓ ಉದ್ಧಟತನದಿಂದ ಮಾತನಾಡುತ್ತಾರೆ, ನಾನು ಬೆಳಕುಣಿ ಗ್ರಾಮ ಪಂಚಾಯತ್ ಗೆ ಬಂದು ಒಂದು ತಿಂಗಳಾಯಿತು, ನನಗೆ ಏನೂ ಗೊತ್ತಿಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ವೇಳೆ ಔರಾದ ತಾಲೂಕು ಪಂಚಾಯತ್ ಅಧಿಕಾರಿಗಳು, ಸುದೀಸ್ ಕುಮಾರ್ ಸಹಾಯಕ ನಿರ್ದೇಶಕರು ಭೇಟಿ ನೀಡಿ ಸುಮಾರು ಒಂದು ತಾಸು ಗ್ರಾಮಸ್ಥರ ಜೊತೆಗೆ ಮಾತಕತೆ ನಡೆಸಿದರು. ನಮಗೆ ಯಾವುದೇ ಸೌಲಭ್ಯ ಸಿಗ್ತಾ ಇಲ್ಲ, ಪಂಚಾಯತ್ ನಲ್ಲಿ ಭೋಗಸ್ ಕಾಮಗಾರಿ ನಡೆದಿದೆ. ವಸತಿ ಯೋಜನೆಯಡಿ…
ಮಾಜಿ ಐಪಿಎಸ್ ಅಧಿಕಾರಿ, ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಟಿಸಿರುವ ಮೊದಲ ಕನ್ನಡ ಸಿನಿಮಾ ʼಅರಬ್ಬಿʼಯ ಟ್ರೈಲರ್ ಬಿಡುಗಡೆ ಆಗಿದೆ. ಅಣ್ಣಾಮಲೈ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಐಪಿಎಸ್ ಅಧಿಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಮೇಲೆ. ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ವಹಿಸಿರುವ ಅಣ್ಣಾಮಲೈ ಅವರು ಆಕ್ಷನ್ ದೃಶ್ಯಗಳಲ್ಲಿ ಸಖತ್ ಮಿಂಚಿದ್ದಾರೆ. ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕನ್ನಡಿಗ ಕೆ.ಎಸ್.ವಿಶ್ವಸ್ ಅವರ ಜೀವನದ ಕುರಿತ ನಿರ್ಮಿಸಲಾಗಿರುವ ಸಿನಿಮಾವೇ ʼಅರಬ್ಬಿʼ. ವಿಶ್ವಾಸ್ ಅವರು ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದು, ಸಮಾಜದಲ್ಲಿ ಅವರು ಕೈಗಳಿಲ್ಲದೆ ಹೇಗೆ ಸಮಸ್ಯೆಗಳನ್ನು ಎದುರಿಸಿದರು ಎಂದು ಹೇಳಲಾಗಿದೆ. ಅಣ್ಣಾಮಲೈ ಅವರು ಈ ಸಿನಿಮಾದಲ್ಲಿ ವಿಶ್ವಾಸ್ ಅವರ ತರಬೇತುದಾರನ ಪಾತ್ರ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಸಂಸದ ಬಿ.ವೈ ರಾಘವೇಂದ್ರ ಅವರ ಎಕ್ಸ್ ಖಾತೆ ಹ್ಯಾಕ್ ಆಗಿದೆ. ಇದೀಗ ಬಿ.ವೈ. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಆಗಿರುವ ಕುರಿತು ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯಾವುದೇ ಅಸಂಬದ್ಧ ಪೋಸ್ಟ್ ಅಥವಾ ಸಂದೇಶ ಬಂದರೆ ನಿರ್ಲಕ್ಷಿಸುವಂತೆ ಮನವಿ ಮಾಡಿದ್ದಾರೆ. ಎಕ್ಸ್ ಖಾತೆಯನ್ನು ಮರಳಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಘವೇಂದ್ರ ಅವರು ಪೋಸ್ಟ್ ಮಾಡಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು ಎಂದಿದ್ದಾರೆ. ಜೆಡಿಎಸ್ ಶಾಸಕರು, ಮುಖಂಡರು, ನಾಯಕರು, ಕಾರ್ಯಕರ್ತರಲ್ಲಿ ಈ ಮನವಿ ಮಾಡಿದ್ದು ಮರೆಯದೇ 25 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್ ಇಬ್ಬರು ಒಗ್ಗಟ್ಟಾಗಿದ್ದೇವೆ. ಕೋಲಾರ, ಮಂಡ್ಯ, ಹಾಸನ ನಮಗೆ ಕೊಟ್ಟಿದ್ದಾರೆ. ಉಳಿದ 25 ಕ್ಷೇತ್ರದಲ್ಲಿ ನೀವು ನಮ್ಮವರು ಬಿಜೆಪಿ ಚಿಹ್ನೆಗೆ ಮತ ಹಾಕಬೇಕು. ಚಾಚೂ ತಪ್ಪದೇ ಮತ ಹಾಕಬೇಕು ಎಂದಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ಮಾಡುತ್ತಾರೆ. 3 ಜೆಡಿಎಸ್ ಕ್ಷೇತ್ರಕ್ಕೂ ಹೋರಾಟ ಮಾಡುತ್ತಾರೆ. ನಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಯಿಂದ ನಿಲ್ಲಿಸಬೇಕು ಎಂದು ಕೇಂದ್ರದ ನಾಯಕರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದರು.ಇವತ್ತು ಡಾ. ಮಂಜುನಾಥ್ ಒಪ್ಪಿಗೆ ಕೊಟ್ಟಿದ್ದಾರೆ ಎಂದರು. ಬುಧವಾರ ಮಂಜುನಾಥ್ ಅವರು ಯಡಿಯೂರಪ್ಪ ಅವರ ಆಶೀರ್ವಾದ…
ಬೆಂಗಳೂರು: ಅಪರಿಚಿತ ಮಹಿಳೆಯ ಕಾಲುಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಕಾಡಂಚಿನ ಗ್ರಾಮ ಮುನಿಮಾರಾಯ್ಯನದೊಡ್ಡಿ ಸಮೀಪ ಮಹಿಳೆಯನ್ನು ಕೊಲೆ ಮಾಡಿ ನಂತರ ಅನುಮಾನ ಬಾರದಿರಲಿ ಎಂದು ಹಂತಕರು ದೇಹವನ್ನು ಕತ್ತರಿಸಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ಕಾಲುಗಳು ಪತ್ತೆಯಾಗಿದ್ದು, ಇದೇ ಜಾಗದ ಸಮೀಪ ಕಳೆದ ಹದಿನೈದು ದಿನಗಳ ಹಿಂದೆ ಮಹಿಳೆಯ ಕೈ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಕೈ ಸಿಕ್ಕ ಜಾಗದ ಸಮೀಪವೇ ಮಹಿಳೆಯ ಎರಡು ಕಾಲುಗಳು ಸಿಕ್ಕಿದ್ದು, ಆಘಾತಕಾರಿ ವಿಷಯವಾಗಿದೆ. ಮುಂಜಾನೆ ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂತಕರು ಮಹಿಳೆಯನ್ನು ಕೊಂದು ಅಂಗಾಂಗಳನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು,ಸದ್ಯ ಪೊಲೀಸರು ಮಹಿಳೆಯ ಉಳಿದ ಅಂಗಾಂಗಗಳ ಹುಡುಕಾಟವನ್ನು ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಹಂತಕರ ಬೆನ್ನತ್ತಿರುವ ಬನ್ನೇರುಘಟ್ಟ ಪೊಲೀಸರು ಕೈ ಮತ್ತು…
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹಣೆಯ ಮೇಲೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಾಯಕ್ಕೆ ಹೊಲಿಗೆ ಹಾಕಿದ ನಂತರ ಮಮತಾ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಮಮತಾ ಅವರು ತಮ್ಮ ನಿವಾಸದಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. SSKM ಆಸ್ಪತ್ರೆಯಲ್ಲಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಅವರು ಪ್ರವೇಶ ಪಡೆದು ಪ್ರಾರ್ಥಿಸಿದ್ದಾರೆ ಎಂದು ಎಕ್ಸ್ ಪ್ಲಾಟ್ ಫಾರ್ಮ್ ಮೂಲಕ ಮಾಹಿತಿ ನೀಡಿತ್ತು. ತೃಣಮೂಲ ಕಾಂಗ್ರೆಸ್ ಕೂಡ ಮಮತಾ ಬ್ಯಾನರ್ಜಿ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296