Subscribe to Updates
Get the latest creative news from FooBar about art, design and business.
- ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
- ಈ ವರ್ಷ 52 ಸಾವಿರ ಅತಿಥಿ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ
- ಬೀದರ್ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ: 7 ಮಂದಿ ಆರೋಪಿಗಳ ಬಂಧನ
- ತುಮಕೂರು ಜಿಲ್ಲೆಗೆ ‘ತುಮಕೂರು (ಬೆಂಗಳೂರು ಉತ್ತರ)’ ಎಂದು ಮರುನಾಮಕರಣ: ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಮಾದಾವರ–ತುಮಕೂರು ಮೆಟ್ರೋ ರೈಲು ಯೋಜನೆ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ಡಿಪಿಆರ್ ವರದಿ
- ಪಕ್ಷದ ಜವಾಬ್ದಾರಿ ನಿರ್ವಹಿಸದಿದ್ದರೆ ಶಿಸ್ತು ಕ್ರಮ: ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಶಾಸಕ ಕೆ. ಷಡಕ್ಷರಿ ಎಚ್ಚರಿಕೆ
- ಗುಬ್ಬಿ ಶಾಸಕರು, ಪುತ್ರನಿಂದ ಕುತಂತ್ರ ರಾಜಕಾರಣ: ಷಡ್ಯಂತ್ರಗಳಿಗೆ ಜಗ್ಗುವುದಿಲ್ಲ: ಜೆಡಿಎಸ್ ಮುಖಂಡ ನಾಗರಾಜು ಕಿಡಿ
- ತುಮಕೂರು: ಕುಲ್ಲಕ ವಿಷಯಕ್ಕೆ ಜಗಳ: ಕೊಲೆ
Author: admin
ಬೆಳಗಾವಿ ಕಾಕತಿ ಮೇಲೆ ಇರುವ ಗುಡ್ಡಗಾಡು ಪ್ರದೇಶವಾದ ಸೋನಟ್ಟಿಯಲ್ಲಿ ಅಕ್ರಮ ಕಳ್ಳ ಬಟ್ಟಿ ತಾಯಾರಿಕಾ ಪ್ರದೇಶದ ಮೇಲೆ, ಇಂದು ಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು, ಸುಮಾರು 200 ಅಧಿಕ ಪೋಲಿಸರ ಮೂರು-ನಾಲ್ಕು ತಂಡಗಳನ್ನು ರಚಿಸಿಕೊಂಡು ಕಳ್ಳ ಬಟ್ಟಿ ಸಾರಾಯಿ ತಯಾರಿಕಾ ಪ್ರದೇಶಗಳ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿ ನಗರ ಪೋಲೀಸ್ ಅಯುಕ್ತ ಎಸ್. ಎನ್.ಸಿದ್ದರಾಮಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದಾಳಿ ನಡೆಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಒಟ್ಟು 5,700 ಲೀಟರ್ ಕಳ್ಳ ಬಟ್ಟಿ ಸಾರಾಯಿ ವಶ ಪಡಿಸಿಕೊಂಡಿದ್ದಾರೆ. ಗ್ರಾಮದ ಮನೆಗಳನ್ನು ಸಹ ಪರಿಶೀಲಿಸಿದಾಗ ಮನೆಯಲ್ಲಿ ಕೂಡಾ ತಾಯಾರಿಸಿರುವ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು. ದಾಳಿ ನಡೆಸಿದ ವೇಳೆ ಪೋಲಿಸರು ಬಂದಿರುವುದನ್ನು ನೋಡಿ ಎಲ್ಲರೂ ಓಡಿ ಹೋಗಿದ್ದಾರೆ. ಆದರೆ ಪೋಲಿಸರು ಒಬ್ಬ ವ್ಯಕ್ತಿ ಮೂತ್ರ ಸೇರೆ ಸಿಕ್ಕಿದ್ದಾನೆ. ಆರೋಪಗಳನ್ನು ಬಂದಿಸಿ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದರು.
ತುಮಕೂರು: ನಗರ ಸ್ವಚ್ಛವಾಗಿರಲು ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿರುತ್ತಾರೆ. ಇಂತಹ ಪೌರ ಕಾರ್ಮಿಕರಿಗೆ ನಟ ದರ್ಶನ್ ನಟನೆಯ ಕಾಟೇರ ಚಿತ್ರವನ್ನು ವೀಕ್ಷಣೆ ಮಾಡುವ ಅವಕಾಶವನ್ನು ಪಾಲಿಕೆ ಆಯುಕ್ತ ಬಿ. ವಿ. ಅಶ್ವಿಜಾ ಕಲ್ಪಿಸಿದರು. ಐನಾಕ್ಸ್ ನಲ್ಲಿ ಮಧ್ಯಾಹ್ನದ ಪ್ರದರ್ಶನದಲ್ಲಿ 196 ಪೌರ ಕಾರ್ಮಿಕರು ಕಾಟೇರ ಚಿತ್ರವನ್ನು ವೀಕ್ಷಿಸಿದರು. ಕಳೆದ ಜನವರಿ 28 ರಂದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ತುಮಕೂರು ಎಂಬ ಕನ್ನಡ ಪದದ ಕಲಾಕೃತಿಯನ್ನು ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪೌರ ಕಾರ್ಮಿಕರನ್ನು ಕಾಟೇರಾ ಚಿತ್ರ ವೀಕ್ಷಣೆಗೆ ಕರೆದೊಯ್ಯುವ ಮೂಲಕ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ತುಮಕೂರು: ನನಗೂ ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಹಾಕಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ ಎಂದರು. ಯಾಕಂದ್ರೆ ಅಲ್ಲಿ ವಾಮಾಚಾರ ಮಾಡ್ತಾರೆ ಹೋಗಬೇಡಿ ಅಂದಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ತಿಳಿಸಿದ್ದಾರೆ. ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಆಗ ನಾನು ಹೇಳಿದೆ, ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ ನನ್ನ ಮೇಲೆ ವಾಮಾಚಾರ ಮಾಡಿ ಎಂದೆ. ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು, ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ. ಹಾಗಂತ ವಾಮಾಚರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ ಕುಣಿಗಲ್ ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು ಎಂದರು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ…
ಮೇಘಾಲಯದಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು, ಶಿಲ್ಲಾಂಗ್ ಬಾರ್ ಅಸೋಸಿಯೇಷನ್ ಕಟ್ಟಡದಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಬೆಂಕಿಗೆ ಕಾರಣ ಸ್ಪಷ್ಟವಾಗಿಲ್ಲ. ನಿನ್ನೆ ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ಹಲವಾರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಘಟನಾ ಸ್ಥಳಕ್ಕೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಘಟನೆ ದುರದೃಷ್ಟಕರ ಎಂದು ಬಣ್ಣಿಸಿದರು. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಮತ್ತು ದಾಖಲೆಗಳು ಸುಟ್ಟು ಕರಕಲಾಗಿವೆ.
ತಮಿಳುನಾಡು : ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಆರಂಭವಾಗಿದೆ. ಮುಸ್ಲಿಂ ಲೀಗ್ ಗೆ ಒಂದು ಸ್ಥಾನ ನೀಡಲು ಒಪ್ಪಿಗೆ ನೀಡಲಾಯಿತು. ಕೊಂಕುನಾಡು ಮಕ್ಕಳ್ ರಾಷ್ಟ್ರೀಯ ಪಕ್ಷವೂ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದ್ದು, ಡಿಎಂಕೆ ವಿಶೇಷ ಸಮಿತಿಯೊಂದಿಗೆ ಇಂದು ನಡೆದ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ರಾಮನಾಥಪುರ ಕ್ಷೇತ್ರದಿಂದ ಮುಸ್ಲಿಂ ಲೀಗ್ ಸ್ಪರ್ಧಿಸಲಿದೆ. ಮುಸ್ಲಿಂ ಲೀಗ್ ಗೋಣಿ ಚಿಹ್ನೆಯ ಮೇಲೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಹಾಲಿ ಸಂಸದ ನವಾಜ್ ಖೇಣಿ ಅಭ್ಯರ್ಥಿಯಾಗಲಿದ್ದಾರೆ. ನಾಮಕ್ಕಲ್ ಕ್ಷೇತ್ರವನ್ನು ಕೊಂಕುನಾಡ್ ಮಕ್ಕಳ್ ರಾಷ್ಟ್ರೀಯವಾದಿ ಪಕ್ಷಕ್ಕೆ ನೀಡಿದ್ದರು. ಅಭ್ಯರ್ಥಿಯನ್ನು ನಂತರ ನಿರ್ಧರಿಸಲಾಗುವುದು. ಕೊಂಕುನಾಡ್ ಮಕ್ಕಳ್ ರಾಷ್ಟ್ರೀಯ ಪಕ್ಷ ಉದಯ ಸೂರ್ಯನ ಚಿಹ್ನೆಯಡಿ ಸ್ಪರ್ಧಿಸಲಿದೆ. ಕಾಂಗ್ರೆಸ್, ಸಿಪಿಐಎಂ ಮತ್ತು ಸಿಪಿಐ ಪಕ್ಷಗಳೊಂದಿಗೆ ಚರ್ಚೆ ಮುಂದುವರೆದಿದೆ. 2019 ರಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಮತ್ತು ಸಿಪಿಐ(ಎಂ) ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
ತಿಪಟೂರು: ಬೇರೆ ಧರ್ಮಕ್ಕೂ ನಮ್ಮ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಬಗ್ಗೆ ಜನರಲ್ಲಿ ನಾವು ಅರಿವು ಮೂಡಿಸಬೇಕು. ನಮ್ಮದು ಬೇಡುವ ಸಮಾಜವಲ್ಲ ನೀಡುವ ಸಮಾಜ. ಮಠಮಾನ್ಯಗಳು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಅನ್ನ ದಾಸೋಹ, ಅಕ್ಷರ ದಾಸೋಹದಿಂದಲೇ ಖ್ಯಾತಿ ಪಡೆದಿವೆ ಎಂದು ತಿಪಟೂರು ಶಾಸಕ ಕೆ. ಷಡಕ್ಷರಿ ಹೇಳಿದರು. ತಿಪಟೂರು ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ವೀರಶೈವ ಲಿಂಗಾಯತ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೀರಶೈವ ಸಂಘದ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ತಾಲೂಕಿನಲ್ಲಿ ಮನೆಮನೆಗೂ ಹೋಗಿ ಸಂಘಟಿಸಲಾಗುವುದು, ಕುಟುಂಬದ ಒಬ್ಬರಾದರೂ ಸದಸ್ಯರಾಗಬೇಕು. ನಮ್ಮ ಸಮಾಜದ ಬಡವರು, ರೈತ, ಕಾರ್ಮಿಕರ ಸಮಸ್ಯೆ ಪರಿಹರಿಸಲು ನಮ್ಮ ಸಮಾಜ ಸಂಘಟಿತರಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಸಮಾಜದ ಮುಖಂಡರಾದ ಅರಸೀಕೆರೆ ಬಸವರಾಜು ಜಿ.ವಿ.ಟಿ, ಚಲನಚಿತ್ರ ನಟರು ಮತ್ತು ನಿರ್ದೇಶಕರಾದ ಮನು, ನಾಕೇನಹಳ್ಳಿ ಸುರೇಶ್, ಮಾದಿಹಳ್ಳಿ ಪ್ರಕಾಶ್ ಸೇರಿದಂತೆ ಹಲವಾರು ವೀರಶೈವ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ. ನ್ಯಾಯಯಾತ್ರೆ ಆಗ್ರಾ ತಲುಪಿದಾಗ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಚುನಾವಣೆಯಲ್ಲಿ ಸೀಟುಗಳನ್ನು ಒಪ್ಪಿಕೊಂಡಿದ್ದರೆ ನಾನು ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳಿದ್ದರು. ಪ್ರಸ್ತುತ, ಎರಡೂ ಪಕ್ಷಗಳು ಯುಪಿಯಲ್ಲಿ ಕಾಂಗ್ರೆಸ್‌ಗೆ 17 ಮತ್ತು ಎಸ್ ಪಿಗೆ 63 ಸ್ಥಾನಗಳನ್ನು ನೀಡುವುದಾಗಿ ತಿಳುವಳಿಕೆಯನ್ನು ಪ್ರಕಟಿಸಿವೆ. ನಿನ್ನೆ, ಪ್ರಿಯಾಂಕಾ ಗಾಂಧಿ ಕೂಡ ಮೊದಲ ಬಾರಿಗೆ ರಾಹುಲ್ ಪ್ರಯಾಣದ ಭಾಗವಾಗಿದ್ದರು. ಆಗ್ರಾದ ನಂತರ ಭಾರತ್ ಜೋಡೋ ನಯಾ ಯಾತ್ರೆಯು ಸಂಜೆ ರಾಜಸ್ಥಾನದ ಗಡಿಯನ್ನು ದಾಟಲಿದೆ. ಯುಪಿಯಲ್ಲಿ ಎಸ್ಪಿ ಜೊತೆ ಸೀಟು ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಪ್ರಿಯಾಂಕಾ ಗಾಂಧಿ. ಇದರ ಬೆನ್ನಲ್ಲೇ 17 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲು ಎಸ್‌ಪಿ ನಿರ್ಧರಿಸಿದೆ. 2020ರಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಅವರನ್ನು ಪಕ್ಷ ನೇಮಿಸಿದರೂ 2022ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಧಾರಿಸಲಿಲ್ಲ. ಸೋನಿಯಾ ಗಾಂಧಿ ರಾಜ್ಯಸಭೆಗೆ…
ಉತ್ತರ ಪ್ರದೇಶದ ಫತೇಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆನ್‌ಲೈನ್ ಗೇಮಿಂಗ್ ಮೂಲಕ ಮಾಡಿದ ಸಾಲವನ್ನು ತೀರಿಸಲು ಯುವಕ ತನ್ನ ಸ್ವಂತ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ. ಆರೋಪಿ ಹಿಮಾಂಶು ಆನ್ ಲೈನ್ ಗೇಮಿಂಗ್ ಚಟ ಹೊಂದಿದ್ದು, ಸ್ನೇಹಿತರಿಂದ ಸಾಲ ಪಡೆದು ಆಟ ಆಡುತ್ತಿದ್ದ. ಆಟ ಆಡಿ ಸುಮಾರು ನಾಲ್ಕು ಲಕ್ಷ ರೂಪಾಯಿ ಕಳೆದುಕೊಂಡಿದ್ದ. ಈ ನಡುವೆ ಸಾಲ ವಾಪಸ್ ನೀಡುವಂತೆ ಸಾಲ ನೀಡಿದವರು ಒತ್ತಡ ಹಾಕಲು ಆರಂಭಿಸಿದ್ದಾರೆ. ತಾಯಿಯನ್ನು ಕೊಂದರೆ, ವಿಮೆಯ ಹಣದಿಂದ ಸ್ನೇಹಿತರ ಸಾಲ ತುಂಬಬಹುದು ಎಂದು ಸಹೋದರನ ಚಿನ್ನಾಭರಣಗಳನ್ನು ಕದ್ದು ಅದನ್ನು ಮಾರಿ ಆ ಹಣದಲ್ಲಿ ತನ್ನ ತಂದೆ ತಾಯಿಯ ಹೆಸರಿನಲ್ಲಿ 50 ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದಾನೆ. ನಂತರ ಯಾರು ಇಲ್ಲದ ವೇಳೆ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಸೆಣಬಿನ ಚೀಲದಲ್ಲಿ ಹಾಕಿ ಯಮುನಾ ನದಿಯಲ್ಲಿ ಎಸೆದಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ…
ಚಿಕ್ಕಮಗಳೂರು– ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದಲೂ ಒಂದು ರೂ.ಪಡೆದಿಲ್ಲ, ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿ ಆರೋಪವನ್ನು ಮಾಡುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಮ್ಮ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆಗೆ ಸಿದ್ದ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು. ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಮ್ಮ ವಿರುದ್ದ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು…
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಅವರ ಜೊತೆ ಇದ್ದಿದ್ದು ತನಿಷಾ. ಒಳ್ಳೆ ಫ್ರೆಂಡ್ ಆಗಿ, ಗೈಡ್ ಆಗಿ ತನ್ನ ಸ್ನೇಹಿತನನ್ನು ಪ್ರೋತ್ಸಾಹ ಮಾಡಿದ್ದರ ಶ್ರೇಯಸ್ಸು ತನಿಷಾ ಅವರಿಗೆ ಸಲ್ಲುತ್ತೆ. ಇದೀಗ ಅವರ ಫ್ರೆಂಡ್ ಶಿಪ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರವೂ ಮುಂದುವರಿದಿದೆ. ಹೌದು, ತನಿಷಾ ಹಾಗೂ ಕಾರ್ತಿಕ್ ಮಹೇಶ್ ಸಿನಿಮಾ ಸಂಬಂಧ ಮತ್ತೆ ಜೊತೆಗೇ ಕೆಲಸ ಮಾಡುವ ವರದಿಯಾಗಿದೆ. ಕಾರ್ತಿಕ್ ಅವರು ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅವರು ಮಾಡುವ ಸಿನಿಮಾ ಕುರಿತು ಅಷ್ಟಾಗಿ ಹೇಳಿಲ್ಲ. ಅವರು ಈಗ ಬೇರೆ ಕೆಲಸಗಳಲ್ಲಿ ಬಿಝಿ ಇರುವುದರಿಂದ ಬಿಡುವು ಮಾಡಿಕೊಂಡು ಕಥೆ ಕೇಳುವುದಾಗಿ ಹೇಳಿದ್ದಾರೆ. ಹಾಗೂ ನಟನೆ ಮಾಡಲಿದ್ದಾರೆ. ಮಾಹಿತಿ ಪ್ರಕಾರ, ತನಿಷಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತದೆ ಹಾಗೂ ಅದರಲ್ಲಿ ಕಾರ್ತಿಕ್ ಅವರು ನಟಿಸಲಿದ್ದಾರೆ ಎಂಬ ಮಾಹಿತಿಯೊಂದು ವರದಿಯಾಗಿದೆ.