nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ

    May 24, 2026

    ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ

    May 24, 2026

    ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

    May 24, 2026
    Facebook Twitter Instagram
    ಟ್ರೆಂಡಿಂಗ್
    • ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
    • ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ
    • ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
    • ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ
    • ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!
    • ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
    • ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ
    • ಕೆಎಸ್‌ ಆರ್‌ ಟಿಸಿ ಬಸ್ ದರ ಏರಿಕೆ ಖಚಿತ: ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಧುಗಿರಿ: ರಾತ್ರೋ ರಾತ್ರಿ ನೀರಿಲ್ಲದೇ ಪರದಾಡಿದ ರೋಗಿಗಳು: ಮಾನವೀಯತೆ ಮೆರೆದ ಕಾಳಜಿ ತಂಡ
    ಮಧುಗಿರಿ March 16, 2024

    ಮಧುಗಿರಿ: ರಾತ್ರೋ ರಾತ್ರಿ ನೀರಿಲ್ಲದೇ ಪರದಾಡಿದ ರೋಗಿಗಳು: ಮಾನವೀಯತೆ ಮೆರೆದ ಕಾಳಜಿ ತಂಡ

    By adminMarch 16, 2024No Comments2 Mins Read
    madhugiri hospital

    ಮಧುಗಿರಿಯ ಸಾರ್ವಜನಿಕ  ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ  ರಾತ್ರೋ ರಾತ್ರಿ  ನೀರಿನ ಸಮಸ್ಯೆ ಉಂಟಾಗಿ ರೋಗಿಗಳು ಪರದಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ತಿಳಿದು ಕಾಳಜಿ ತಂಡದ ಸದಸ್ಯರು ರೋಗಿಗಳಿಗೆ ಸೂಕ್ತ ಸಮಯದಲ್ಲಿ ನೀರು ಒದಗಿಸಿ ಕೊಡುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸಾರ್ವಜನಿಕ  ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮಧುಗಿರಿಯ ರೋಗಿಗಳಿಗೆ ನೀರಿಲ್ಲದೆ ತೊಂದರೆಯಾಗಿ ರೋಗಿಗಳು ಪರದಾಡುತ್ತಿದ್ದಾರೆ ಎಂಬ ಬಗ್ಗೆ ಕಾಳಜಿ ತಂಡದ ವಾಟ್ಸಾಪ್ ಗ್ರೂಪ್ ನಲ್ಲಿ ಅಧಿಕಾರಿಗಳ ಗಮನ ಸೆಳೆಯಲು ತಂಡದ ಸದಸ್ಯರು ಪ್ರಯತ್ನಿಸಿದ್ದರು. ಆದರೆ, ಈ ವೇಳೆ ಯಾವುದೇ ಅಧಿಕಾರಿಗಳು ಸ್ಪಂದಿಸಲಿಲ್ಲ.


    Provided by
    Provided by

    ಹೀಗಾಗಿ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲು  ಕಾಳಜಿ ಪೌಂಡೇಷನ್  ಸದಸ್ಯರಾದ  ಮಧುಗಿರಿ ಮಹೇಶ್ ಮತ್ತು ಸತೀಶ ರವರು ಖುದ್ದು ತಡ ರಾತ್ರಿಯವರೆಗೂ ಆಸ್ಪತ್ರೆಯ ಬಳಿ ಇದ್ದು ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು,  ಕೊಡಿಗೆನಹಳ್ಳಿ  ಸಿಂಗೆನಹಳ್ಳಿ  ಪ್ರಸಾದ್ ಬಾಬು ಅವರ ಗಮನಕ್ಕೆ ತಂದರು.  ಪ್ರಸಾದ್ ಬಾಬು ಅವರು, ಮಾಹಿತಿ ತಿಳಿದು ತಕ್ಷಣವೇ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಆಸ್ಪತ್ರೆಗೆ ನೀರು ಸರಬರಾಜು ಮಾಡಿದರು.

    ಆಸ್ಪತ್ರೆಯಲ್ಲಿ ನೀರಿಲ್ಲದ ಪರಿಣಾಮ ಆಸ್ಪತ್ರೆಯ ಶೌಚಾಲಯ ಬಳಸಿ ರೋಗಿಗಳು ನೀರು ಹಾಕದೇ ಮಲೀನವಾಗಿತ್ತು.  ಆಸ್ಪತ್ರೆಯಲ್ಲಿ ರಾತ್ರಿ ನೀರು ಖಾಲಿಯಾಗಿದ್ದು, ಇದೇ ಪರಿಸ್ಥಿತಿ ಬೆಳಗ್ಗಿನವರೆಗೆ ಮುಂದುವರಿದಿದ್ದರೆ, ರೋಗಿಗಳ ಸ್ಥಿತಿ ಮತ್ತು ಆಸ್ಪತ್ರೆಯ ನೈರ್ಮಲ್ಯದ ಸ್ಥಿತಿ ಏನಾಗಬಹುದಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ, ಕಾಳಜಿ ತಂಡ ಸೂಕ್ತ ಸಮಯದಲ್ಲಿ ಕೊಡಿಗೆನಹಳ್ಳಿ  ಸಿಂಗೆನಹಳ್ಳಿ  ಪ್ರಸಾದ್ ಬಾಬು ಅವರ ಸಹಕಾರದೊಂದಿಗೆ ನೀರು ಸರಬರಾಜು ಮಾಡುವ ಮೂಲಕ ರೋಗಿಗಳಿಗೆ ನೆರವಾಗಿದ್ದಾರೆ. ತಂಡದ ಕಾರ್ಯಕ್ಕೆ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಶ್ಲಾಘಿಸಿದ್ದಾರೆ.

    ನೀರಿನ ವ್ಯವಸ್ಥೆ ಎಲ್ಲ, ಮಾಡಿದ ನಂತರ,  ಅಧಿಕಾರಿಗಳು ಆಸ್ಪತ್ರೆಗೆ ಓಡಿ ಬಂದಿದ್ದು, ಸ್ಥಳೀಯ ಅಧಿಕಾರಿಗಳಾದ ಸುರೇಶ್ ಮತ್ತು ಸಂಜೀವ್ ಮೂರ್ತಿ ಅವರು ಆಸ್ಪತ್ರೆಗೆ ಆಗಮಿಸಿ, ರೋಗಿಗಳಿಗೆ ಆಗಿರುವ ಸಮಸ್ಯೆಗೆ ಕಾಳಜಿ ತಂಡದ ಬಳಿ ಕ್ಷಮೆ ಕೇಳಿದರು. ಇನ್ನು ಮುಂದೆ ಈ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

    ಇದೇ ವೇಳೆ ರೋಗಿಗಳಿಗೆ ಆಪತ್ಕಾಲದಲ್ಲಿ ತಡರಾತ್ರಿಯಾದರು ತಮ್ಮದೇ ಟ್ರ್ಯಾಕ್ಟರ್ ನಲ್ಲಿ ನೀರನ್ನು ಸರಬರಾಜು ಮಾಡಿದ ಪ್ರಸನ್ನ  ಬಾಬು ರವರಿಗೆ ಕಾಳಜಿ ತಂಡದ ಕೃತಜ್ಞತೆಗಳನ್ನು ಸಲ್ಲಿಸಿದೆ.

    ಕಾಳಜಿ ಪೌಂಡೇಶನ್ ನ ಕಾಳಜಿಗೆ  ರೋಗಿಗಳು, ರೋಗಿಗಳ ಸಂಬಂಧಿಕರು ಅಲ್ಲಿನ ಸಾರ್ವಜನಿಕರು ಪ್ರಶಂಸೆ ವ್ಯಕ್ತಕಡಿಸಿದರು.

    ಸ್ಥಳೀಯ ಆಡಳಿತ ರೋಗಿಗಳಿಗೆ ಇನ್ನಾದರೂ ಮೂಲಭೂತ ಸೌಕರ್ಯಗಳನ್ನು ಜವಾಬ್ದಾರಿಯುತವಾಗಿ ಕಲ್ಪಿಸಿಕೊಟ್ಟು, ರೋಗಿಗಳ ಹಿತಕಾಯಬೇಕಿದೆ ಎಂದು ಕಾಳಜಿ ತಂಡ ಅಭಿಪ್ರಾಯ ವ್ಯಕ್ತಪಡಿಸಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಜನರ ಏಳಿಗೆಗಾಗಿ ಯೋಜನೆಗಳು ಜಾರಿ, ಸರ್ಕಾರಿ ಯೋಜನೆಗಳು ಮತಗಳಿಕೆಗೆ ಅಲ್ಲ: ಶಾಸಕ ಕೆ.ಎನ್.ರಾಜಣ್ಣ

    May 24, 2026

    ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?

    May 21, 2026

    ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ

    May 21, 2026

    Comments are closed.

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ

    May 24, 2026

    ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಳವಾಯಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ…

    ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ

    May 24, 2026

    ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

    May 24, 2026

    ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ

    May 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.