Author: admin

ಬೆಂಗಳೂರು : ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಗೆ ಕಿಡಿಗೇಡಿಗಳು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ನಡೆದಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋರಮಂಗಲ ಆಟೋ ಸ್ಟಾಂಡ್ ಬಳಿಯಲ್ಲಿ ಕಸ ಎಸೆಯಲು ಹೋಗಿದ್ದ ಯುವತಿಯನ್ನು ಹಿಡಿದುಕೊಂಡು ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದು, ಜ.28ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ಆಟೋ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಕಸವನ್ನು ಎಸೆಯಲು ಹೋಗಿದ್ದ ಯುವತಿ,  ತಾನು ಲೈಂಗಿಕ ಕಿರುಕುಳ ಅನುಭವಿಸಿದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೋರಮಂಗಲ ಆಟೋ ಸ್ಟಾಂಡ್ ಬಳಿ ಕುಳಿತಿದ್ದ ಪುಂಡರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ–ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ನಂತರ, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಸ್ ಬರುವಾಗ ಅವರನ್ನು ಹಿಂಬಾಲಿಸಿದ ಪುಂಡರ ಗುಂಪಿನಲ್ಲಿದ್ದ ನಾಲ್ವರು, ಯುವತಿಯನ್ನು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ.…

Read More

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಸರ್ಕಾರದ 5 ಗ್ಯಾರಂಟಿಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದ ಬಿಜೆಪಿಗೆ ಯಾವುದಾದರೂ ಹೊಸ ಅಸ್ತ್ರ ಸಿಗುತ್ತಾ ಅನ್ನೋದನ್ನು ಕಾಯುತ್ತಲೇ ಇದೆ. ಇದೀಗ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಟೀಕಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸರ್ಕಾರದ ದುರಾಡಳಿತದಿಂದಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನೂ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದು ಆರೋಪಿಸಿದ್ದಾರೆ.

Read More

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದು, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ ಎಂದು ವರದಿ ತಿಳಿಸಿದೆ. ಶಿವಮೊಗ್ಗ ಹರ್ಷ ಕೊಲೆಯ ಪ್ರಕರಣದ ಆರೋಪಿಗಳು ಮತ್ತು ಇತರೆ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಎರಡು ಗುಂಪಿನ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಡಿಸಿಪಿ ನೇತೃತ್ವದಲ್ಲಿ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಾರಕಾಸ್ತ್ರ 10 ಸಾವಿರ ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಾವಗಡ:  ಪಟ್ಟಣದ ಸುಪ್ರಸಿದ್ಧ ಶನಿ ಮಹಾತ್ಮ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ 12:15 ರ ಸಮಯದಲ್ಲಿ ಬ್ರಹ್ಮರಥೋತ್ಸವಕ್ಕೆ ಶನಿಮಹಾತ್ಮಕಾರಿ ನಿರ್ವಾಹಕ ಸಂಘದ ಅಧ್ಯಕ್ಷರಾದ ಸಿ ಎನ್ ಆನಂದ್ ರಾವ್ ಅವರು ಚಾಲನೆ ನೀಡಿದರು ರಥವನ್ನು ಮತ್ತು ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು,  ಈ ಬಾರಿಯ ವಿಶೇಷವೆಂದರೆ ರಥೋತ್ಸವದ ಸಮಯದಲ್ಲಿ ರಥಕ್ಕೆ ಮತ್ತು ದೇವಸ್ಥಾನಕ್ಕೆ ಆಕಾಶದೆತ್ತರದಿಂದ ಗರುಡ ಪಕ್ಷಿಯೊಂದು ಪ್ರದಕ್ಷಿಣ ಹಾಕಿ ಭಕ್ತರ ಅಚ್ಚರಿಗೆ ಕಾರಣವಾಯಿತು. ವಿಷ್ಣುವಿನ ಅವತಾರವಾಗಿರುವ ಗರುಡ ಪಕ್ಷಿಯು ಇಂತಹ ಬ್ರಹ್ಮರಥೋತ್ಸವ ನಡೆಯುವ ಸಂದರ್ಭದಲ್ಲಿ ಆಗಮಿಸಿ ಪ್ರದಕ್ಷಣೆ ಹಾಕುವುದು ವಿಷ್ಣುದೇವ ಆಗಮಿಸಿದಷ್ಟೇ ಪುಣ್ಯ ಇಂದು ಜನರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ರಥ ಎಳೆಯುವ ಸಂದರ್ಭದಲ್ಲಿ ಪಾವಗಡದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ರಾಮಕೃಷ್ಣ ರೆಡ್ಡಿ ಅವರ ಕಾಲಿನ ಮೇಲೆ ರಥದ ಚಕ್ರ ಹರಿದು ಗಂಭೀರ ಗಾಯ ಆಗಿರುವುದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ, ರಥೋತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಪಾವಗಡ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್…

Read More

ಸಮಾಜವಾದಿ ಪಕ್ಷ ಕಾಂಗ್ರೆಸ್ ಗೆ ಗೆಲ್ಲುವ ಅವಕಾಶ ಇಲ್ಲದ ಸ್ಥಾನಗಳನ್ನು ನೀಡಿದೆ ಎನ್ನಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ 17 ಸೀಟು ಹಂಚಿಕೆಯಾಗಿದ್ದು, 12ರಲ್ಲಿ ಪಕ್ಷ ಕಟ್ಟಿದ್ದ ಹಣವನ್ನು ಕಳೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ಉತ್ತರ ಪ್ರದೇಶದ ನಾಯಕರು ರಾಷ್ಟ್ರೀಯ ನಾಯಕತ್ವಕ್ಕೆ ಪ್ರತಿಭಟಿಸಿದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 67 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಉತ್ತರ ಪ್ರದೇಶದಲ್ಲಿ 67 ಸ್ಥಾನಗಳ ಪೈಕಿ 63ರಲ್ಲಿ ಕಾಂಗ್ರೆಸ್ 2019ರ ಪ್ರತಿಜ್ಞೆಯನ್ನು ಕಳೆದುಕೊಂಡಿದೆ. ಭಾರತದ ಮುಂಭಾಗದಲ್ಲಿ, ಉತ್ತರ ಪ್ರದೇಶವು ಸೀಟು ಹಂಚಿಕೆ ಮಾತುಕತೆಯಲ್ಲಿ ಬಿಕ್ಕಟ್ಟನ್ನು ಎದುರಿಸಿದ ಮತ್ತೊಂದು ರಾಜ್ಯವಾಗಿದೆ. ಸಮಾಜವಾದಿ ಪಕ್ಷವು ಮೂಲತಃ ಪ್ರಸ್ತಾಪಿಸಿದ ಸೂತ್ರವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿಲ್ಲ. ಅಂತಿಮವಾಗಿ ಸಮಾಜವಾದಿ ಪಕ್ಷ 17 ಸ್ಥಾನಗಳನ್ನು ನೀಡುವುದಾಗಿ ಕಾಂಗ್ರೆಸ್‌ಗೆ ತಿಳಿಸಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮಾತುಕತೆ ಪೂರ್ಣಗೊಳ್ಳುವವರೆಗೆ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಸುಳಿವು ನೀಡಿದ್ದರು. ಮೊದಲು ಸೀಟು ಹಂಚಿಕೆ ಮಾತುಕತೆ…

Read More

ಹಾಸನ: ಎತ್ತಿನಹೊಳೆ ಯೋಜನೆಯ ಶಂಕು ಸ್ಥಾಪನೆಗೆ ಆಗ ಜೆಡಿಎಸ್ ನಲ್ಲಿದ್ದ ಶಾಸಕ ಶಿವಲಿಂಗೇಗೌಡ ಮಾತ್ರ ಬಂದಿದ್ದರು. ಪದೇಪದೇ ತಮ್ಮನ್ನು ತಾವೇ ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುವ ಮಾಜಿ ಸಿಎಂ ಎಚ್.ಡಿ. ‌ಕುಮಾರಸ್ವಾಮಿ ಮತ್ತು ಕುಟುಂಬದವರು ಈ ಯೋಜನೆ ವಿರೋಧ ವ್ಯಕ್ತಪಡಿಸಿದ್ದರು ಎಂದು‌ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ಎತ್ತಿನ‌ ಹೊಳೆ ಯೋಜನೆಯು ಅರಸಿಕೇರೆ ಕ್ಷೇತ್ರಕ್ಕೆ ಇರಲಿಲ್ಲ. ಶಿವಲಿಂಗೇಗೌಡ ಅವರ ಶ್ರಮದಿಂದ ಕ್ಷೇತ್ರದ ಜನರು ನೀರು ಕಾಣುವಂತಾಯಿತು ಎಂದು ಶಿವಲಿಂಗೇಗೌಡ ಅವರನ್ನು‌ ಸಿಎಂ‌ ಹಾಡಿ ಹೊಗಳಿದರು. ಇದೇ ವೇಳೆ ಸಂಸದ ಅನಂತ ಕುಮಾರ್ ಹೆಗಡೆ ಅವರು ಸಿದ್ದರಾಮುಲ್ಲಾಖಾನ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಲ್ಪ ಸಂಖ್ಯಾತರ ವಿರೋಧಿಗಳು. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ‌ ಎಂದು ಸಿಎಂ ತಿರುಗೇಟು ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ: ತಾಲೂಕಿನ ನಿಡಗಲ್ಲು ಹೋಬಳಿ ವ್ಯಾಪ್ತಿಯ ಸಿ.ಕೆ.ಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಹಾಗೂ ಅಧ್ಯಕ್ಷರು, ಸದಸ್ಯರು ಎಲ್ಲರು ಸೇರಿ ಸಂವಿಧಾನ ಜಾಗೃತಿ ಜಾಥಾ ರಥೋತ್ಸವವನ್ನು ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು. ಕಲಾವಿದ ಹನುಮಂತರಾಯಪ್ಪ ಸಿ.ಕೆ.ಪುರ ಅವರ ತಂಡದಿಂದ ಅಂಬೇಡ್ಕರ್ ಗೀತೆಯ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆ ಮುಂಭಾಗದಿಂದ ವಿದ್ಯಾರ್ಥಿಗಳು ಕಲಾ ವೃಂದದವರು, ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಮಟೆ, ಕುಣಿತ ಕುಂಭಮೇಳ ಮೂಲಕ ಅದ್ದೂರಿಯಾಗಿ ರಥವನ್ನು ಸ್ವಾಗತಿಸಿದರು, ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು. ಕೆಪಿಸಿಸಿ ಮಾಜಿ ಸದಸ್ಯರಾದ ಕೋಟೆ ಪ್ರಭಾಕರ್ ಜಾಗೃತಿ ಜಾಥಾದ ಬಗ್ಗೆ ಮಾತನಾಡಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಥಾ ರಥೋತ್ಸವವನ್ನು ಬಂದಿದೆ, ಅದಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ, ಅಂಬೇಡ್ಕರ್ ಎಂಬ ವ್ಯಕ್ತಿ ಅಸ್ಪೃಶ್ಯತೆಯಿಂದ ಅವಮಾನಗಳನ್ನು ಅನುಭವಿಸುತ್ತ ಎದೆಗುಂದದೆ ಸಂವಿಧಾನವನ್ನು ರಚಿಸಿದರು,…

Read More

ಚಾಮರಾಜನಗರ: ಚಾಮರಾಜನಗರದ‌ ಜನ್ನೂರು ಗ್ರಾಮದಲ್ಲಿ ಮಾವನೊಬ್ಬ ಅಳಿಯನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ. ಉಮೇಶ್(28) ಹತ್ಯೆಯಾದವನು. ಮಾವ ನಂಜುಂಡಯ್ಯ ಆರೋಪಿ ಆಗಿದ್ದಾರೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಳಿಯ ನಿತ್ಯ ಕುಡಿದು ಬಂದು ನಂಜುಂಡಯ್ಯರ ಮಗಳಿಗೆ ತೊಂದರೆ ಕೊಡುತ್ತಿದ್ದ. ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ ಉಮೇಶ್ ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ಇದಲ್ಲದೇ ಕುಡಿದು ಬಂದು ಪತ್ನಿಗೆ ಕಿರುಕುಳ ಮಾಡುತ್ತಿದ್ದ. ಇದರಿಂದ ಬೇಸತ್ತು ಅಳಿಯನನ್ನು ಕೊಡಲಿಯಿಂದ ಕೊಚ್ಚಿ ನಂಜುಂಡಯ್ಯ ಕೊಲೆ ಮಾಡಿದ್ದಾರೆ. ಉಮೇಶ್‌ ಮುಖಕ್ಕೆ ಕೊಡಲಿಯಿಂದ ಕೊಚ್ಚಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುದೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿಲಾಗಿದ್ದು,  ಮಾವ ನಂಜುಂಡಯ್ಯನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ನಾಗರಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಖಾಸಗಿ ಬಸ್ ಹರಿದು ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುರಳಿ(40) ಮೃತ ದುರ್ದೈವಿಯಾಗಿದ್ದಾನೆ. ಮುರಳಿ ಬೈಕ್‌ ನಲ್ಲಿ ತೆರಳುತ್ತಿದ್ದ ಸಂದರ್ಭ ವೇಗವಾಗಿ ಬಂದ ಖಾಸಗಿ ಬಸ್ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಬಸ್ ಮುರಳಿ ತಲೆಯ ಮೇಲೆ ಹರಿದಿದೆ. ಇದರಿಂದ ಮುರಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜ್ಞಾನಭಾರತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ನಡೆದಿದೆ. ಸದ್ಯ ಬಸ್ ಚಾಲಕನನ್ನು ಜ್ಞಾನಭಾರತಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದ ಮುರಳಿ ಮೃತದೇಹವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಜೋಕಾಲಿ ಆಡುತ್ತಿದ್ದ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಪಿ.ಜೆ. ಕೊಟ್ರೇಶ್(14) ಮೃತ ವಿದ್ಯಾರ್ಥಿಯಾಗಿದ್ದಾನೆ. ಈತ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಬಾಲಕನು ಶಾಲೆ ಮುಗಿಸಿ ಬಂದು ಮನೆಯಲ್ಲಿ ಜೋಕಾಲಿಯಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಜೋಕಾಲಿ ಹಗ್ಗವು ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡಿದೆ. ಇದರಿಂದಾಗಿ ಹಗ್ಗ ಬಿಗಿಗೊಂಡು ಬಾಲಕನಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More