Author: admin

ಮಡಿಕೇರಿ: ನವಜಾತ ಶಿಶುವಿನ ಮೃತದೇಹವೊಂದು ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ಮಣ್ಣಿನೊಳಗೆ ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಗದ್ದೆಯಲ್ಲಿ ಯಾರೋ ಗುಂಡಿ‌ ಅಗೆದು ಹಾಕುತ್ತಿರುವುದನ್ನು ಸ್ಥಳೀಯರು ನೋಡಿಧ್ದರೂ ಸತ್ತ ಪ್ರಾಣಿಗಳ ಮೃತದೇಹವನ್ನು ಹೂಳಿರಬಹುದು ಎಂದು ಭಾವಿಸಿದ್ದರು. ಆದರೂ ಸಂಜೆ ವೇಳೆಗೆ ಸ್ಥಳೀಯರಲ್ಲಿ ಸಂಶಯ ಮೂಡಿ ಆ ಸ್ಥಳದ ಮಣ್ಣನ್ನು ತೆಗೆದು ನೋಡಿದಾಗ ಇಂದೇ ಜನಿಸಿದ ಮಗುವಿನ ಮೃತದೇಹ ಕಂಡುಬಂದಿದೆ. ಈ ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು ಯಾರು? ಯಾಕಾಗಿ ಹೂತು ಹಾಕಿದರು? ಎಂಬ ಪ್ರಶ್ನೆಗಳು ಗೊಂದಲಕ್ಕೀಡು ಮಾಡಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಗುವಿನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಔರಾದ: ಇಲ್ಲಿನ ಹಂದಿಖೇರಾ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಯಂತಾಗಿವೆ. ಇದರಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಚಿಮ್ಮೆಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಆದರೆ ಸೂಕ್ತ ಚರಂಡಿ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದಾರೆ. ಈಗಾಗಲೇ ಹಲವು ಬಾರಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ. ಆದರೂ ಕೂಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ, ಬದಲಾಗಿ ಎರಡು ಮೂರು ದಿನಗಳಲ್ಲಿ ಬಂದು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಸ್ಥಳಕ್ಕೆ ಬರುವುದೇ…

Read More

ದೆಹಲಿ: ತಂದೆಯೇ ಮಗನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಮದುವೆ ಗೆಲವೇ ಗಂಟೆಗಳು ಬಾಕಿ ಇರುವಾಗ ಈ ಘಟನೆ ನಡೆದಿದೆ. 29 ವರ್ಷದ ಜಿಮ್ ತರಬೇತುದಾರ ಗೌರವ್ ಸಿಂಘಾಲ್ ಮೃತ ದುರ್ದೈವಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಗೌರವ್ ಎಂಬಾತನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮದುವೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಜಿಮ್ ಟ್ರೈನರ್ನನ್ನು ತಂದೆಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಮುಂಜಾನೆ, ಮದುವೆಗೂ ಕೆಲವೇ ಗಂಟೆಗಳ ಮೊದಲು ಅವರ ಎದೆಗೆ 15 ಬಾರಿ ಇರಿಯಲಾಗಿದ್ದು, ಕೊಲೆಯ ಪ್ರಮುಖ ಆರೋಪಿಯಾಗಿರುವ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ, ಇಲ್ಲಿಯವರೆಗೆ, ತಂದೆ ಮತ್ತು ಮಗನ ನಡುವೆ ವೈಮನಸ್ಸು ಇತ್ತು ಎಂದಷ್ಟೇ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಯ ಬಂಧನದ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಅಧಿಕಾರಿ ಹೇಳಿದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಶವಾಗಾರಕ್ಕೆ…

Read More

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದಲ್ಲಿ ತಾಯಿ, ಮಗು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಗೀತಾ (26) ಯಶವಂತ್ (6) ಮೃತ ದುರ್ದೈವಿಗಳಾಗಿದ್ದಾರೆ. ಕೋಡಿಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಯಶವಂತ್ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಗೀತಾ ಕೂಡ ನೀರುಪಾಲಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚಿತ್ರದುರ್ಗ: ಹೆರಿಗೆ ಬಳಿಕ ಮಗುವಿಗೆ ಚಿಕಿತ್ಸೆ ನೀಡದೇ 4 ದಿನದ ಹಸುಗೂಸು ಸಾವನ್ನಪ್ಪಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ವೈದ್ಯರ ವಿರುದ್ಧ ಮೃತ ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. 4 ದಿನದ ಹಿಂದೆ ಹೆರಿಗೆಗಾಗಿ ಕವಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಮಗುವಿಗೆ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ ತೋರಿದ್ದಾರೆ. ಮಕ್ಕಳ ತಜ್ಞ ವೈದ್ಯ‌ ಶ್ರೀರಾಮ್ ವಿರುದ್ಧ ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿನ್ನಲೆ ಜಿಲ್ಲಾ ಸರ್ಜನ್ ಡಾ.ರವೀಂದ್ರ ಅವರು ಈ ಕುರಿತು ಸೂಕ್ತ ಕ್ರಮದ ಭರವಸೆ‌ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ನವದೆಹಲಿ: ಇನ್‌ಫೋಸಿಸ್‌ ಸಹಸಂಸ್ಥಾಪಕಿ ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಸುಧಾ ಮೂರ್ತಿ ನಾಮನಿರ್ದೇಶನಕ್ಕೆ ಸಂತಸ ವ್ಯಕ್ತಪಡಿಸಿ ಅವರಿಗೆ ಅಭಿನಂದಿಸಿದ್ದಾರೆ. ಸಮಾಜಸೇವೆ, ಉದ್ಯಮರಂಗ,ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸುಧಾಮೂರ್ತಿಯವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಈ ಮೂಲಕ ನಾರಿಯರಿಗೆ ಹೆಚ್ಚು ಬಲ ತುಂಬಿರುವ ಬಿಜೆಪಿ, ನಾರಿಶಕ್ತಿ ಎಂಬ ಧ್ಯೇಯವನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮೋದಿ ಬರೆದುಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

“ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ. ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಚಿವ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದರು. ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು. ಅನೇಕರು…

Read More

ಇತ್ತೀಚೆಗೆ ಹೆತ್ತ ತಾಯಿಯಿಂದಲೇ ಮಕ್ಕಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಇದೀಗ ಬೆಂಗಳೂರು ನಗರದಲ್ಲಿ  ಮತ್ತೊಬ್ಬ ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಮೂರು ವರ್ಷದ ಮಗುವಿಗೆ ತಾಯಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ ಪತಿಯಿಂದ ವಿಚ್ಛೇದನ ಪಡೆದುಕೊಂಡ ಆಯೇಷಾ ತವರಿಗೆ ಹೋಗಿ ನೆಲೆಸಿದ್ದಳು. ಆಯೇಷಾಗೆ ಸಲೀಂ ಎಂಬ ಪ್ರಿಯಕರ ಇದ್ದು, ಅದರಂತೆ, ಪತಿ ಇಮ್ರಾನ್ ಖಾನ್ ಮೇಲಿನ ಕೋಪಕ್ಕೆ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿಕೊಂಡು,  ಮಗುವಿಗೆ ಹಲ್ಲೆ ನಡೆಸಿದ್ದಾಳೆ. ಮಗುವನ್ನು ಕಚ್ಚಿ, ಮಗುವಿಗೆ ಫ್ರಿಡ್ಜ್ ನೀರು ಸರಿದು ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ, ಮಗಳ ಕೈಗೆ ಸಿಗರೇಟ್ ​ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ…

Read More

ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಹೈದರಾಬಾದ್ ನಲ್ಲಿ ತಂದೆ ವಿನಯ್ ರೊಂದಿಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸುವಾಗ ನಟಿಯ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಈಗ ವೀಡಿಯೋ ವೈರಲ್ ಆಗಿದೆ. ಫೋಟೊ ಕ್ಲಿಕ್ಕಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಕಾಜಲ್ ಸೊಂಟವನ್ನು​ ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ನಟಿ ತಕ್ಷಣ ಕೈ ಸನ್ನೆ ಮಾಡಿ ದೂರ ಸರಿದಿದ್ದಾರೆ ಮತ್ತು ಮುಜುಗರಗೊಂಡಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದಕ್ಕಾಗಿ ಭಾರಿ ತಯಾರಿಗಳು ಈಗಾಗ್ಲೇ ಆರಂಭಗೊಂಡಿವೆ. ರಾಜಕಾರಣಿಗಳು , ಕಾರ್ಯಕರ್ತರು ತೆರೆ ಮರೆಯಲ್ಲಿಯೇ ನಾನಾ ರೀತಿಯ ಪ್ಲ್ಯಾನ್‌ ಗೆ ರೆಡಿಯಾಗುತ್ತಿದ್ದಾರೆ. ಹೀಗಿರುವಾಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹಲವರು ಕನಸು ಕಾಣುತ್ತಿದ್ದಾರೆ. ಅದರಲ್ಲಿ ಇಲ್ಲೊಬ್ಬರು ಅಜ್ಜಿ ಮೋದಿಗಾಗಿ ಮಲೆಮಾದೇಶ್ವರ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡು ಬೆಟ್ಟ ಹತ್ತಿದ ಘಟನೆಯೊಂದು ಬೆಳಕಿಗೆ ಬಂದಿದೆ. 102 ವರ್ಷದ ಅಜ್ಜಿ ಈ ಸಾಹಸ ಮಾಡಿದ್ದು ಅಚ್ಚರಿಯನ್ನುಂಟು ಮಾಡಿದೆ. ಅಜ್ಜಿಯು ಕಾಲು ನಡಿಗೆಯ ಮೂಲಕ ಕಾಡು ದಾರಿಯಲ್ಲಿ ಬೆಟ್ಟ ಹತ್ತಿದ್ದಾರೆ. ಮೋದಿ ಗೆಲ್ಲಬೇಕು, ದೇಶಕ್ಕೆ ಒಳ್ಳೆದು ಮಾಡಬೇಕು ಎಂದು ಹೇಳುತ್ತಾ ಬೆಟ್ಟ ಏರಿದ್ದಾರೆ. ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀಡಿಯೋದಲ್ಲಿ ಅಜ್ಜಿ “ದೇಶಕ್ಕೆ ಒಳ್ಳೆದಾಗಬೇಕು, ರೈತರಿಗೆ ಒಳ್ಳೆದಾಗಬೇಕು, ಕಾಡು ಪ್ರಾಣಿಗಳಿಗೆ ನೀರಿಲ್ಲ. ದೇಶನೂ ಉದ್ಧಾರ ಆಗುತ್ತೆ. ಮೋದಿ ಬರ್ಬೇಕು” ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟುತ್ತಾ, ಸೂಪರ್​ ಅಜ್ಜಿ ಎಂದು ಜೋರಾಗಿ ಕೂಗಿದ್ದಾರೆ. ಸದ್ಯ ಟ್ವಿಟ್ಟರ್ ​ನಲ್ಲಿ ಈ…

Read More