Author: admin

ಮುಸ್ಲಿಂ ಯುವತಿಯೋರ್ವಳು ಹಿಜಾಬ್‌ ಧರಿಸಿದ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಹಾಸನದ ಖಾಸಗಿ ಕಾಲೇಜಿನಲ್ಲಿ. ವಿದ್ಯಾಸೌಧ ಕಾಲೇಜಿನ ಪ್ರಾಂಶುಪಾಲ ರಂಗೇಗೌಡ ಅವರು ಹೇಳಿರುವ ಪ್ರಕಾರ, ಈ ಘಟನೆ ನಡೆದಿರುವುದು ಎರಡು ದಿನಗಳ ಹಿಂದೆ. ಅಧಿಕಾರಿಗಳು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದು, ಅವರು ಮತ್ತೆ ಹಿಜಾಬ್‌ ಧರಿಸದಿರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಅದು ಹಿಜಾಬ್‌ ಆಗಿರಲಿಲ್ಲ. ಹಿಜಾಬ್‌ ಅನ್ನು ಹೋಲುವ ಬಟ್ಟೆಯನ್ನು ಧರಿಸಲಾಗಿತ್ತು. ಅದನ್ನು ಧರಿಸಿದ ವಿದ್ಯಾರ್ಥಿನಿ ತನಗೆ ಕಿವಿ ಸಮಸ್ಯೆ ಇದೆ ಮತ್ತು ಅದ್ದರಿಂದ ಕಿವಿಯನ್ನು ಮುಚ್ಚಿಕೊಂಡಿರುವುದಾಗಿ ಹೇಳಿದ್ದಳು. ನಾವು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದಾಗಿ ಮತ್ತು ಅದನ್ನು ಪುನರಾವರ್ತನೆ ಮಾಡುವುದಿಲ್ಲ ಎಂದು ಹೇಳಿರುವುದಾಗಿ ಪ್ರಾಂಶುಪಾಲರು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ನಿನ್ನೆ ದಿನ ಮಧ್ಯಾಹ್ನದಿಂದಲೇ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನರು ಸೇರಿದ್ದರು. ಆದರೆ ಕೊನೇ ಕ್ಷಣಕ್ಕೆ ಕಾರ್ಯಕ್ರಮ ರದ್ದು ಆಗಿರುವ ಬಗ್ಗೆ ಯಾದಗಿರಿ ಡಿಸಿ ಸುಶೀಲಾ ಬಿ ಮತ್ತು ಎಸ್ಪಿ ಸಂಗೀತಾ ಜಿ ಮಾಹಿತಿ ನೀಡಿದ್ದಾರೆ. ಹೀಗಾಗಿ ರಿಯಾಲಿಟಿ ಶೋ ನೋಡಲು ಬಂದಿದ್ದ ಸಾವಿರಾರು ಪ್ರೇಕ್ಷಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲದೆ ಇದರಿಂದಾಗಿ ಬೇರೆ ಬೇರೆ ಜಿಲ್ಲೆಗಳಿಂದ ಕಾರ್ಯಕ್ರಮ ನೋಡಲು ಬಂದಿದ್ದ ಸಾವಿರಾರು ಜನರಿಗೂ ತುಂಬಾ ಬೇಸರವಾಗಿದೆ. ಆದರೆ ಯಾಕೆ ಕಾರ್ಯಕ್ರಮ ರದ್ಧುಪಡಿಸಲಾಗಿದೆ ಎಂದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಮತ್ತು ಹಿರಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದೇ ಶೋ ರದ್ದಾಗಲು ಕಾರಣವೆನ್ನಲಾಗುತ್ತಿದೆ. ಬೆಂಗಳೂರಿನ ಗುಂಡೂರಾವ್ ಅವರನ್ನು ಆಹ್ವಾನಿಸಿ ಸ್ಥಳೀಯ ಕಾಂಗ್ರೆಸ್ ನಾಯಕ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ್ ಅವರನ್ನು ಕಡೆಗಣಿಸಿದ ಕಾರಣಕ್ಕೆ ಸಾವಿರಾರು ಜನರು ಸೇರಿದ್ದ sa re ga ma pa ಕಾರ್ಯಕ್ರಮ ರದ್ದಾಯ್ತಾ? ಎಂದು ಪ್ರಶ್ನಿಸಿದ್ದಾರೆ ಇನ್ನು ಯಾದಗಿರಿ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಸಂಚಾರ…

Read More

ಭಾರತೀಯರು ಆಚರಿಸುವ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಹಬ್ಬದ ಕುರಿತು ಅನೇಕ ಕಥೆಗಳಿವೆ. ​ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಗೆ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನ ಮಹಾಶಿವರಾತ್ರಿ. ಅಲ್ಲದೆ, ದೇವತೆ ಹಾಗೂ ಅಸುರರ ನಡುವೆ ನಡೆದ ಸಮುದ್ರ ಮಂಥನ ಕಾಲದಲ್ಲಿ ಉದ್ಭವವಾದ ವಿಷ ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜೊತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ…

Read More

ಎನ್‌ ಕೌಂಟರ್‌ ಗೆ ಹೆಸರಾಗಿರುವ ಉತ್ತರಪ್ರದೇಶ ಪೊಲೀಸರು ಎನ್‌ ಕೌಂಟರ್‌ ಗೆ ಬಲಿಯಾದ ಆರೋಪಿಯೋರ್ವನ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ. ಪೊಲೀಸರೇ ವೆಚ್ಚ ಹಾಕಿ ನಡೆಸಿಕೊಟ್ಟ ಈ ಅದ್ದೂರಿ ಮದುವೆಯನ್ನು ನೋಡಿದ ವಧುವಿನ ತಾಯಿ, ನನ್ನ ಮಗಳ ಮದುವೆ ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಪೊಲೀಸರು ಬರೀ ಮದುವೆಯ ವೆಚ್ಚ ಹಾಕಿಲ್ಲ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಮದುವೆ ಮಾಡಿಸಿಕೊಟ್ಟಿರುವುದು ವಿಶೇಷ. ವರ್ಷಗಳ ಹಿಂದೆ ಅಂದರೆ 2023ರ ಮೇ 10 ರಂದು ಉತ್ತರಪ್ರದೇಶ ಪೊಲೀಸ್ ಕಾನ್ಸ್‌ ಟೇಬಲ್ ಬೆಡ್ಜಿತ್ ಸಿಂಗ್ ಎಂಬುವವರನ್ನು ದುಷ್ಕರ್ಮಿಗಳು ಒರೈ ಜಿಲ್ಲೆಯ ಕೊತ್ವಾಲಿ ಪೊಲೀಸ್ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಾಗಿ ನಾಲ್ಕು ದಿನದಲ್ಲೇ ಈ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳಾದ ರಮೇಶ್ ರೈಕ್ವಾರ್ ಹಾಗೂ ಕಲ್ಲು ಅಹ್ರಿವಾರ್ ಎಂಬುವವರನ್ನು ಸಮೀಪದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು ಎನ್‌ ಕೌಂಟರ್ ‌ನಲ್ಲಿ ಮುಗಿಸಿದ್ದರು. ಹೀಗೆ…

Read More

ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ನೀಡುವ ಸಬ್ಸಿಡಿ ಅವಧಿಯನ್ನು ಕೇಂದ್ರ ಸರ್ಕಾರ ಒಂದು ವರ್ಷ ವಿಸ್ತರಿಸಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಉಜ್ವಲ ಯೋಜನೆಯಡಿ ನೀಡಲಾಗುತ್ತಿರುವ 300 ರೂ.ಗಳ ಸಹಾಯಧನದ ಕಾಲಮಿತಿಯನ್ನು 2025ರ ಮಾರ್ಚ್ 31ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ ಎಂದರು. ಇಂದು ನಡೆದ ಸಂಪುಟ ಸಭೆಯಲ್ಲಿ ಆರು ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂ ಸಬ್ಸಿಡಿ ನೀಡಲು ಇಂದು ಕ್ಯಾಬಿನೆಟ್ ನಿರ್ಧರಿಸಿದೆ, ಅದರ ಅವಧಿಯನ್ನು ಮಾರ್ಚ್ 31, 2024 ರವರೆಗೆ 1 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು. ಈಗ 10 ಕೋಟಿಗೂ ಹೆಚ್ಚು ಮಹಿಳೆಯರು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳ ಮಿತಿಯವರೆಗೆ ಪ್ರತಿ ಸಿಲಿಂಡರ್‌ಗೆ 300 ರೂ.ಗಳ ಪ್ರಯೋಜನವನ್ನು ಪಡೆಯುತ್ತಾರೆ.…

Read More

ಹವಾಮಾನ ಇಲಾಖೆ ಬಿಸಿಲು ಮಳೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಾರ್ಚ್ ನಿಂದ ಮೇ ತನಕ ರಾಜ್ಯದ ಉತ್ತರ ಒಳಭಾಗಗಳಲ್ಲಿ ವಿಪರೀತ ಶಾಖವು ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ನೀಡಿದೆ. ಹೀಗಿದ್ದರೂ ಮಾರ್ಚ್‌ನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಂಟಿಗ್ರೇಡ್ ದಾಟದೆ ಇರಬಹುದು. ಜತೆಗೆ ಮಾರ್ಚ್ ತಿಂಗಳಲ್ಲಿ ಅಲ್ಲಲ್ಲಿ ಸಾಮಾನ್ಯವಾಗಿ ಮಳೆಯಾಗುವ ಸಾಧ್ಯತೆ ಇದೆ. ಸುಡುವ ಶಾಖದಿಂದ ರಾಜ್ಯದ ಕೆಲ ಭಾಗಗಳಲ್ಲಿ ಜನರಿಗೆ ಇದು ಇನಿತು ವಿರಾಮ ನೀಡುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಳೆಯ ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ 2005ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2016, 2017, 2018 ಮತ್ತು 2019ರಲ್ಲಿ, ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಮಾತ್ರ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಮಂಗಳವಾರ…

Read More

ತುಮಕೂರು:  ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ  ಪೀಠಾಧ್ಯಕ್ಷರಾಗಿದ್ದ ಬಾಲಮಂಜುನಾಥ್ ಸ್ವಾಮೀಜಿಯನ್ನು  ಪೋಕ್ಸೋ ಕೇಸ್ ನಡಿ ತಡರಾತ್ರಿ  ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆಬ್ರುವರಿ 10 ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ದಾಖಲು ಆಗಿತ್ತು. ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ದೂರು ದಾಖಲಾಗಿತ್ತು. ಸ್ವಾಮೀಜಿಯ ಆಪ್ತ ಸಹಾಯಕ ಅಭಿಲಾಷ್ ಎಂಬಾತನಿಂದ ಎಫ್ಐಆರ್ ದಾಖಲು ಆಗಿತ್ತು. ಈ ಹಿಂದೆ ಸ್ವಾಮೀಜಿಯ ಸೇವಕ ಅಭಿಷೇಕ್ ಅಂಡ್ ಟೀಂ ನಿಂದ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಇಡಲಾಗಿದೆ ಎಂದು, ಒಟ್ಟು 6 ಜನರ ಮೇಲೆ ದೂರು ನೀಡಲಾಗಿತ್ತು. ಈ ಪ್ರಕರಣ ಬೆನ್ನಲ್ಲೇ ಸ್ವಾಮೀಜಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಮಾಹಿತಿ ಪಡೆದು ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು.…

Read More

ಮಾರ್ಚ್ 8 ರಂದು ಆಚರಿಸುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಪಂಚದ ಎಲ್ಲಾ ಮಹಿಳೆಯರ ಸ್ಥಾನಮಾನ ಹೆಚ್ಚಿಸುವತ್ತ ಹಾಗೂ ಹಾಗೂ ಅವರು – ಅವರ ಕುಟುಂಬದ ಬಗೆಗಿನ ಆರೋಗ್ಯ ರಕ್ಷಣೆಯತ್ತ ಒತ್ತುಕೊಡುತ್ತಿದ್ದಾರೆ. ಈ ನಮ್ಮ ದೇಶದಲ್ಲಿ “ ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವ್ವನೇ, ರಕ್ಷಂತೆ ಸ್ಥಾವರೇ ಪುತ್ರ, ನಾ ಸ್ತ್ರೀ ಸ್ವಾತಂತ್ರ್ಯ ಮರ್ಹತೀ”. ಅಂದರೆ ಇಲ್ಲಿ ಬಾಲಕಿಯಾಗಿದ್ದಾಗ ತಂದೆ, ಯವ್ವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಗ ಮಹಿಳೆಯನ್ನು ಕಾಪಾಡುವನು. ಸ್ತ್ರೀಗೆ ಸ್ವಾತಂತ್ರ್ಯವು ಬೇಕಿಲ್ಲ. ಈ ಮಾತು ಶತಮಾನದಲ್ಲಿ ಹಾಸ್ಯಸ್ಪದವಾಗಿ ಕಾಣಿಸುತ್ತದೆ. ಈ ಮಹಿಳಾ ದಿನಾಚರಣೆ ಎಂದಾಕ್ಷಣ ನೆನಪಿನಂಗಳದಲ್ಲಿ ಬರುವುದು ನಮ್ಮ ಮನೆಯಲ್ಲಿ ಏನು ಪ್ರತಿಫಲ ಅಪೇಕ್ಷೆಯಿಲ್ಲದೆ ಕೆಲಸ ಮಾಡುವ ಅಮ್ಮಂದಿರು. ಆದರೆ ಸಾಮಾನ್ಯವಾಗಿ ಹೇಳುವುದು ಇವತ್ತೊಂದು ಮಹಿಳೆಯರ ದಿನ. ಉಳಿದ ದಿನಗಳು ಪುರುಷರಿಗೆ ಎಂದು. ಇದು ಸರಿಯಲ್ಲ ಪ್ರತಿದಿನ ನಮ್ಮದೇ. ಸ್ತ್ರೀ ಅಮೂಲ್ಯವಾದ ಸೃಷ್ಟಿ. ಹೆಣ್ಣು ಎಂಬವಳು ಎಲ್ಲ ಕೆಲಸವನ್ನು ಮಾಡುವಳು ಅಂದರೆ ಇವರು ಬೈಕ್, ರಿಕ್ಷಾ, ಟ್ಯಾಕ್ಸಿಗಳನ್ನು ಚಲಾಯಿಸುವುದರಲ್ಲದೆ ತೆಂಗಿನ…

Read More

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ – ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ತುಟ್ಟಿ ಭತ್ಯೆ ಜತೆಯಲ್ಲೇ ತುಟ್ಟಿ ಭತ್ಯೆ ಪರಿಹಾರದ ಹೆಚ್ಚುವರಿ ಕಂತನ್ನು ನೀಡಲು ಗುರುವಾರ ಕೇಂದ್ರ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಈ ಮೂಲಕ 49.18 ಲಕ್ಷ ಉದ್ಯೋಗಿಗಳು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಶೇಕಡ 4 ಪ್ರಮಾಣದ ಬೊಕ್ಕಸಕ್ಕೆ ವಾರ್ಷಿಕ 12,868.72 ಕೋಟಿ ರೂಪಾಯಿ ಹೊರೆಯಾಗಲಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಅಂಗೀಕೃತ ಸೂತ್ರದಂತೆ ಈ ಹೆಚ್ಚಳ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ ನೀಡಲಾಗುವ 300 ರೂಪಾಯಿ ಸಬ್ಸಿಡಿ ಮುಂದುವರಿಸಲೂ ಕೂಡ ಸಭೆ ಸಮ್ಮತಿಸಿದೆ. ಸಬ್ಸಿಡಿಯನ್ನು ಉಜ್ವಲ ಯೋಜನೆಯ 10.27 ಕೋಟಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದಕ್ಕಾಗಿ 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 12,000 ಕೋಟಿ ರೂ. ವೆಚ್ಚವಾಗಲಿದೆ. 14.2 ಕೆಜಿ ಸಿಲಿಂಡ‌ರ್ ಗೆ ವರ್ಷಕ್ಕೆ 12 ರೀಫಿಲ್‌ ರೆಗೆ ಸಬ್ಸಿಡಿ ಕೊಡಲಾಗುತ್ತದೆ. 2016ರ ಮೇ ತಿಂಗಳಲ್ಲಿ…

Read More

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ  ಸುಜಾತ ಸರ್ಕಲ್ ‌ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದಾನೆ. ತುಮಕೂರಿನಿಂದ ಬಳ್ಳಾರಿಗೆ ಬಸ್ ‌ನಲ್ಲಿ ಬಂದು ನಂತರ ಮಂತ್ರಾಲಯ- ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ (NIA) ಬಳ್ಳಾರಿ ಮತ್ತು ತುಮಕೂರು ಬಸ್‌ ನಿಲ್ದಾಣಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ. ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ ಐಎ ತಂಡ ಮಾಹಿತಿ ಪಡೆದಿದ್ದು ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಹಕಾರ ನೀಡಿದ್ದಾರೆ. ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಎನ್‌ ಐಎ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದು, ಶಂಕಿತನ…

Read More