Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾವಚಿತ್ರದ ಪೋಸ್ಟರ್ ವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪೋಸ್ಟರ್‌ನಲ್ಲಿ ಎಂಕೆ ಸ್ಟಾಲಿನ್ ಅವರ ಚಿತ್ರವಿದೆ, ಅದರ ಮೇಲೆ ‘ತಮಿಳುನಾಡಿನ ವಧು’ (bride of tamilnadu ) ಎಂದು ಬರೆಯಲಾಗಿದೆ. ಮೂಲಗಳ ಪ್ರಕಾರ, ಪೋಸ್ಟರ್ ಅನ್ನು ‘ಪ್ರೈಡ್ ಆಫ್ ತಮಿಳುನಾಡು’ ಅಂದ್ರೆ ʼ ತಮಿಳು ನಾಡಿನ ಹೆಮ್ಮೆ ʼ ಎಂದು ಮುದ್ರಿಸಲು ಯೋಜಿಸಲಾಗಿದೆ. ಆದರೆ ಮುದ್ರ ರಾಕ್ಷಸನ ಪರಿಣಾಮ, ಕಾಗುಣಿತ ದೋಷದಿಂದ ಪ್ರೈಡ್ ಬದಲಾಗಿ ಬ್ರೈಡ್ ಎಂದು ಪ್ರಿಂಟ್ ಮಾಡಲಾಗಿದೆ. ಇದರಿಂದ ಪೋಸ್ಟರ್ ನ ಭಾವಾರ್ಥ ಎಡವಟ್ಟಾಗಿದೆ. ಇದರ ಫಲಿತಾಂಶವು ಸಾಕಷ್ಟು ಸ್ವಾರಸ್ಯಗಳಿಗೆ ಕಾರಣವಾಗಿದೆ. ಪೋಸ್ಟರ್ ಹಾಕಿದ್ದು ಯಾರು, ಎಲ್ಲಿ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. “ತಮಿಳುನಾಡಿನ ವಧು,” X ನಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ಹಲವಾರು ಮಂದಿ ಹಲವು ಬಗೆಯ ಕಮೆಂಟ್ಸ್ ಹಂಚಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ಶಂಕಿತ ಉಗ್ರನ ರೇಖಾಚಿತ್ರವನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ನಿನ್ನೆಯಷ್ಟೇ ಶಂಕಿತ ಉಗ್ರನ ಸುಳಿವು ನೀಡಿದರೆ 10ಲಕ್ಷ ನಗದು ಬಹುಮಾನ ಕೊಡುವುದಾಗಿ ಸಿಸಿಟಿವಿ ಫೋಟೋವೊಂದನ್ನು ಎನ್ ಐಎ ಬಿಡುಗಡೆ ಮಾಡಿತ್ತು. ಖ್ಯಾತ ಸ್ಕೆಚ್ ಆರ್ಟಿಸ್ಟ್ ನಿಂದ ಬಾಂಬರ್ ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದ್ದು, ಎನ್ ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಲಾಗಿದೆ. ಆರ್ಟಿಸ್ಟ್ ಹರ್ಷ ಈ ರೇಖಾಚಿತ್ರವನ್ನು ಬಿಡಿಸಿರುವುದಾಗಿ ವರದಿಯಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮದುವೆಯದ್ದೇ ಎಲ್ಲೆಡೆ ಸುದ್ದಿ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇವರೇನು ಮದುವೆಯಲ್ಲಿ ಖುಷಿಯಿಂದ ಕುಣಿದವರಲ್ಲ. ಇಂಥ ಮದುವೆಗಳಲ್ಲಿ ಕುಣಿಯುವುದಕ್ಕಾಗಿಯೇ ಹಲವು ನಟ-ನಟಿಯರು ಕೋಟಿ ಕೋಟಿಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ ನೋಡುಗರಿಗೆ ಮಾತ್ರ ಅವರು ಮದುವೆಯ ದಿನ ತಮ್ಮ ಇಷ್ಟದಿಂದ ಖುಷಿಯಾಗಿ ಕುಣಿದರು ಎಂದೇ ಕಾಣಿಸುವುದು ಉಂಟು. ಇದೇ ಕಾರಣಕ್ಕೆ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕೂಡ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಎರಡು ತಿಂಗಳ ಗರ್ಭಿಣಿಯಾದರೂ ದುಡ್ಡಿನ ಆಸೆಗೆ ಬಿದ್ದು ಪತಿಯ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು ಎನ್ನಲಾಗಿದೆ. ಅದೇ ಇನ್ನೊಂದೆ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಒಟ್ಟಿಗೇ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದೂ ಸದ್ದು ಮಾಡುತ್ತಿದೆ. ಈ ಬಗ್ಗೆ ಟಾಂಗ್ ಕೊಟ್ಟಿರೋ ಕಾಂಟ್ರವರ್ಸಿ ಲೇಡಿ ಕಂಗನಾ ರಣಾವತ್…
ಮಲೆಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಈಗ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣಗಳಿಕೆ ಮಾಡಿದ ಸಿನಿಮ ಎಂಬ ಗರಿಮೆಗೆ ಪಾತ್ರವಾಗಿದೆ. ಈ ತನಕ ದೇಶದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಲನಚಿತ್ರದ ದಾಖಲೆಯನ್ನು ‘೨೦೧೮ʼ ಮಲೆಯಾಳಂ ಸಿನಿಮಾ ಹೊಂದಿದೆ. ಎರಡು ವಾರದಲ್ಲಿ ರೂ.107 ಕೋಟಿ ಸಂಗ್ರಹದ ದಾಖಲೆ. ಆದರೆ, ಈಗ ಮಂಜುಮ್ಮೆಲ್ ಬಾಯ್ಸ್ ಇದನ್ನು ಮೀರಿ ಅಂತಿಮವಾಗಿ 125 ಕೋಟಿ ರೂ. ಸಂಗ್ರಹಿಸಿದೆ ಎನ್ನಲಾಗಿದೆ. ಮಂಜುಮ್ಮೆಲ್ ಬಾಯ್ಸ್ ನಿನ್ನೆ ಗಳಿಕೆ ಸುಮಾರು 5.50 ಕೋಟಿ ರೂ. ಇದು 2 ನೇ ಶುಕ್ರವಾರಕ್ಕಿಂತ 15 ಶೇಕಡಾ ಹೆಚ್ಚಾಗಿದೆ. ಇದು ತಮಿಳುನಾಡು ಮತ್ತು ಕರ್ನಾಟಕದಿಂದ ಬಂದ ಅಂಕಿಅಂಶ. ಇದರ ಮಧ್ಯೆ, ಕೇರಳದಲ್ಲಿ ಸಿನಿಮಾದ ಬಳಿಕೆ ಅತ್ಯಂತ ಹೆಚ್ಚಾಗಿಯೇ ಇದೆ. ಬಾಕ್ಸ್ ಆಫೀಸ್ ನಲ್ಲಿ ಮಂಜುಮ್ಮೆಲ್ ಬಾಯ್ಸ್ ಒಂದು ವಾರ – ರೂ. 32 ಕೋಟಿ (8 ದಿನಗಳು) 2 ನೇ ಶುಕ್ರವಾರ – ರೂ. 4.75 ಕೋಟಿ 2ನೇ ಶನಿವಾರ – ರೂ. 9…
ಶಿವಮೊಗ್ಗ: ಸೊರಬ ಪುರಸಭೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುವ ವೇಳೆ ರೆವಿನ್ಯೂ ಇನ್ ಸ್ಪೆಕ್ಟರ್ (ಕಂದಾಯ ನಿರೀಕ್ಷಕ) ವಿನಾಯಕ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎನ್ನುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದೂರುದಾರೆ ಪ್ರತಿಭಾ ಹಳೇ ಸೊರಬ ವ್ಯಾಪ್ತಿಯ ಕಸಬಾ ಹೋಬಳಿಯಲ್ಲಿ ಖಾಲಿ ನಿವೇಶನ ಹೊಂದಿದ್ದು, ಗ್ರಾಮ ಪಂಚಾಯಿತಿಯಿಂದ ಸೊರಬ ಪುರಸಭೆಗೆ ಸೇರಿದ್ದ ಇ ಸ್ವತ್ತಿನ ಜಾಗ ಸೇರಿತ್ತು. ಇದರಿಂದಾಗಿ ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಪ್ರತಿಭಾ ಅರ್ಜಿ ಸಲ್ಲಿಸಿದ್ದರು. ಆದರೆ, ಕಂದಾಯ ನಿರೀಕ್ಷಕ ಅರ್ಜಿದಾರರ ಕೆಲಸ ಮಾಡಿಕೊಡಲು 40 ಸಾವಿರ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಇದರಿಂದ ಪ್ರತಿಭಾ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಇದರಂತೆ ಲೋಕಾಯುಕ್ತ ಡಿಎಸ್ ಪಿ ಉಮೇಶ್ ಈಶ್ವರ ನಾಯ್ಕ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 40 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ರೆವಿನ್ಯೂ ಇನ್ಸ್ ಪೆಕ್ಟರ್ ನನ್ನು ರೆಡ್…
ಬೆಂಗಳೂರು ಗ್ರಾಮೀಣ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ನೀಡಿದ ದೂರಿನ ಮೇರೆಗೆ, ನೆಲಮಂಗಲ ಪೊಲೀಸರು ಇತ್ತೀಚೆಗೆ ಬೆಂಗಳೂರು-ಹೊನ್ನಾವರ ರಸ್ತೆಯ ಸುಭಾಷನಗರದಲ್ಲಿರುವ ಆಸರೆ ಆಸ್ಪತ್ರೆಯ ಮೇಲೆ ದಾಳಿ ನಡೆಸಿದರು. ಡಾ. ಎಸ್. ಆರ್. ಮಂಜುನಾಥ ಅವರ ದೂರಿನಲ್ಲಿ, ಡಾ. ರವಿಕುಮಾರ್ ಅವರು ಸ್ಥಾಪಿಸಿದ ಆಸ್ಪತ್ರೆಯು 2021 ರಿಂದ ಕನಿಷ್ಠ 74 ಅಕ್ರಮ ಭ್ರೂಣ ಹತ್ಯೆಗಳನ್ನು ನಡೆಸಿದೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಗರ್ಭಪಾತವಾದ ಭ್ರೂಣಗಳು ಹೆಣ್ಣು ಮಕ್ಕಳದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. “ಅಂತಹ ಕಾರ್ಯಾಚರಣೆಗಳನ್ನು ನಡೆಸಲು ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಆಸ್ಪತ್ರೆಗೆ ಪರವಾನಗಿ ಇಲ್ಲ. ಭ್ರೂಣ ಹತ್ಯೆಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯು ಎಂ. ಟಿ. ಪಿ. ಪ್ರವೇಶ ದಾಖಲಾತಿಗಳನ್ನು ನಿರ್ವಹಿಸಿಲ್ಲ. ಬದಲಿಗೆ, ಅವರು 74 ಭ್ರೂಣ ಹತ್ಯೆಗಳ ವಿವರಗಳನ್ನು ಆಪರೇಷನ್ ಥಿಯೇಟರ್ ನಲ್ಲಿ ಇರಿಸಲಾಗಿರುವ ಲೆಡ್ಜರ್ನಲ್ಲಿ ದಾಖಲಿಸಿದ್ದಾರೆ. ಇದಲ್ಲದೆ, ಶೇಕಡಾ 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವರದಿಗಳು ಕಾಣೆಯಾಗಿವೆ “ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಸರೆ ಆಸ್ಪತ್ರೆ ಪ್ರಕರಣದಲ್ಲಿ, ನೆಲಮಂಗಲ ಪೊಲೀಸರು ತಾವು ಎಲ್ಲಾ ಸಂಬಂಧಿತ…
ತುಮಕೂರು: ಗೆಳೆಯನ ಜತೆ ಜಾತ್ರೆಗೆ ಬಂದಿದ್ದ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಬಂಡೇಪಾಳ್ಯದಲ್ಲಿ ವಾಸವಿದ್ದ ಬಾಗಲಕೋಟೆ ಮೂಲದ ಅಮೋಘ (22), ಹನುಮಂತ (22), ಪತಾಪ್ (20) ಬಂಧಿತರು. ಸೋಮವಾರ ಸ್ನೇಹಿತನ ಜತೆ ಸಿದ್ಧಗಂಗಾಮಠದ ಜಾತ್ರೆಗೆ ಬಂದಿದ್ದ ಪಿಯು ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದರು. ಬಳಿಕ ಬೈಕ್ ನಲ್ಲಿ ಬಾಲಕಿಯನ್ನು ರೂಮ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ತೆಯನ್ನು ಮತ್ತೆ ಮಠದ ಬಳಿ ತಂದು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದಲ್ಲಿ ಕೆಲವು ಮಹತ್ವದ ಸುಳಿವು ಸಿಕ್ಕಿದೆ. ಬಟ್ಟೆ ಬದಲಾಯಿಸಿಕೊಂಡ ಸುಳಿವು ಸಿಕ್ಕಿದೆ. ಅದಷ್ಟು ಬೇಗ ಆರೋಪಿಯನ್ನ ಹಿಡಿಯುತ್ತಾರೆ. ಬಸ್ ನಲ್ಲಿ ಪ್ರಯಾಣ ಮಾಡಿರೋದು ಗೊತ್ತಾಗಿದೆ. ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನ ಕರೆದು ವಿಚಾರಣೆ ನಡೆಸಲಾಗಿದೆ. ಈವರೆಗೆ ಯಾರನ್ನು ಬಂಧಿಸಿಲ್ಲ. ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ ಎಂದು ಸಿಎಂ ಗೊಂದಲದಲ್ಲೇ ಹೇಳಿದ್ದಾರೆ. ಯಾರನ್ನು ಬಂಧಿಸಿಲ್ಲ ತನಿಖೆ ಮುಂದುವರೆಯುತ್ತಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಅರಣ್ಯ ರಕ್ಷಕ ಅಪ್ಪಣ್ಣ ರೈ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ 10 ವರ್ಷ ಶಿಕ್ಷೆ ಮತ್ತು 15,500 ರೂ.ದಂಡ ವಿಧಿಸಿದ ಕೋರ್ಟ್
2022ರ ಮೇ 11ರಂದು ಅರಣ್ಯ ರಕ್ಷಕರೋರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಶಿಕ್ಷೆ ವಿಧಿಸಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 15,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಗಾಳಿಬೀಡು ಕಾನೆಕಂಡಿ ನಿವಾಸಿ ತಿಮ್ಮಯ್ಯ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅರಣ್ಯ ರಕ್ಷಕ ಅಪ್ಪಣ್ಣ ರೈ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರನ್ನು ದಾರಿ ಮಧ್ಯೆ ತಡೆದ ತಿಮ್ಮಯ್ಯ ಈ ಕೃತ್ಯವೆಸಗಿದ್ದಾನೆ. ಗಾಳಿಬೀಡು ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ತಮ್ಮ ಮನೆಯ ಪಕ್ಕದ ಜಾಗವನ್ನು ತೋರಿಸಿಕೊಟ್ಟಿದ್ದೀಯ ಎಂದು ಪ್ರಶ್ನಿಸಿ ಕತ್ತಿಯಿಂದ ಕಡಿಯಲು ಮುಂದಾಗಿದ್ದ. ಈ ವೇಳೆ ಅಪ್ಪಣ್ಣ ರೈ ಅವರು ಎಡಕೈಯಿಂದ ತಡೆದಾಗ ಅವರ ಕೈ ಬೆರಳುಗಳು ತುಂಡಾಗಿದ್ದವು. ತಿಮ್ಮ ಯ್ಯ ಮತ್ತೂಮ್ಮೆ ಹಲ್ಲೆ ಮಾಡಿದಾಗ ಅಪ್ಪಣ್ಣ ರೈ ತಮ್ಮ ಬಲಕೈಯಿಂದ ತಡೆಯಲು ಪ್ರಯತ್ನಿಸಿದಾಗ ಬಲ ಕೈಗೆ ಕೂಡ ಗಂಭೀರ ಗಾಯವಾಗಿತ್ತು…
ರೆಸ್ಟೋರೆಂಟ್ ಗೆ ಆಹಾರ ಸೇವಿಸಲು ಬಂದ ಐವರು ಗ್ರಾಹಕರಿಗೆ ಡ್ರೈ ಐಸ್ ನೀಡಲಾಗಿದೆ. ಮೌಥ್ ಫ್ರೆಶ್ನರ್ ಆಗಿ ಈ ಡ್ರೈಸ್ ಐಸ್ ನೀಡಿದ್ದಾರೆ. ಆದರೆ ಡ್ರೈ ಐಸ್ ಸೇವಿಸದ ಬೆನ್ನಲ್ಲೇ ಗ್ರಾಹಕರಲ್ಲಿ ವಾಂತಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಯಿ ತುರಿಕೆ ಆರಂಭಗೊಂಡು ರಕ್ತ ವಾಂತಿ ಮಾಡಿದ ಘಟನೆ ಗುರುಗ್ರಾಂನ ಲ್ಯಾಫೋರೆಸ್ಟಾ ರೆಸ್ಟೋರೆಂಟ್ ನಲ್ಲಿ ನಡೆದಿದೆ. ಇದರಿಂದ ರೆಸ್ಟೋರೆಂಟ್ ಮ್ಯಾನೇಜರ್ ಇದೀಗ ಅರೆಸ್ಟ್ ಆಗಿದ್ದಾರೆ ಎಂದು ವರದಿ ತಿಳಿಸಿದೆ. ಐವರು ಗೆಳೆಯರು ಹಾಗೂ ಗೆಳತಿಯರು ಗುರುಗ್ರಾಂ 90 ಸೆಕ್ಟರ್ ನಲ್ಲಿರುವ ಲ್ಯಾಫೋರೆಸ್ಟಾ ಕೆಫ್ ಕಮ್ ರೆಸ್ಟೋರೆಂಟ್ ಗೆ ತೆರಳಿದ್ದಾರೆ. ತಮಗಿಷ್ಟವಾದ ತಿನಿಸುಗಳನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮ್ಯಾನೇಜರ್ ಮೌಥ್ ಫ್ರೆಶ್ನರ್ ಆಗಿ ಡ್ರೈ ಐಸ್ ನೀಡಿದ್ದಾರೆ. ಈ ಡ್ರೈಸ್ ಐಸ್ ತಿಂದ ಬೆನ್ನಲ್ಲೇ ತುರಿಕೆ ಆರಂಭಗೊಂಡಿದೆ. ಬಾಯಿ ಸುಟ್ಟ ಅನುಭವವಾಗಿದೆ. ಕೆಲವೇ ಕ್ಷಣಗಳಲ್ಲಿ ವಾಂತಿ ಶುರುವಾಗಿದೆ. ಕೆಲ ಹೊತ್ತಲ್ಲೇ ರಕ್ತ ವಾಂತಿ ಮಾಡಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಐವರು ಸ್ಥಳೀಯ ಆಸ್ಪತ್ರೆಗೆ ತೆರಳಿ…