Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
1 ಗಂಟೆ ಫೇಸ್ಬುಕ್, ಇನ್ ಸ್ಟಾಗ್ರಾಮ್ ಸ್ಥಗಿತ: ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಗೆ 24,871 ಕೋಟಿ ರೂಪಾಯಿ ನಷ್ಟ
ಮೆಟಾ ಸಂಸ್ಥೆಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಂ ಇವುಗಳು ಮಂಗಳವಾರ(ಮಾರ್ಚ್ 6) ಒಂದು ಗಂಟೆ ಕಾಲ ಎದುರಿಸಿದ ಜಾಗತಿಕ ಸ್ಥಗಿತದ ನಂತರ ಒಂದೇ ದಿನದಲ್ಲಿ ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು 3 ಬಿಲಿಯನ್ ಡಾಲರ್ (ಸುಮಾರು 24,871 ಕೋಟಿ ರೂ.) ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಝುಕರ್ ಬರ್ಗ್ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್ ಡಾಲರ್ ಇಳಿಕೆಯಾಗಿ 176 ಬಿಲಿಯನ್ ಡಾಲರ್ ಗೆ ತಲುಪಿದೆ. ಒಂದು ಗಂಟೆ ಕಾಲ ಇದ್ದ ಜಾಗತಿಕ ಸ್ಥಗಿತದಿಂದಾಗಿ ಮೆಟಾ ಷೇರುಗಳ ಮೌಲ್ಯವೂ ಶೇ 1.6ರಷ್ಟು ಕುಸಿತ ಕಂಡು ಝುಕರ್ ಬರ್ಗ್ ಅವರ ಸಂಪತ್ತಿನ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಯಿತು. ಮಂಗಳವಾರದ ಟ್ರೇಡಿಂಗ್ ಅವಧಿ ವಾಲ್ ಸ್ಟ್ರೀಟ್ ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಇಲ್ಲೊಬ್ಬಳು ಸೊಸೆ ಅತ್ತೆಯ ಮೇಲಿನ ಸಿಟ್ಟಿನಿಂದ 50 ರೂಪಾಯಿ ನೋಟು ತೆಗೆದುಕೊಂಡು ಅದರಲ್ಲಿ ಅತ್ತೆಯ ಮೇಲಿನ ಸಿಟ್ಟು ತೋರಿಸಿದ್ದಾಳೆ. ಈಕೆಯ ಕೆಲಸ ಇದೀಗ ವೈರಲ್ ಆಗುತ್ತಿದೆ. ಅತ್ತೆಗೆ ಒಳ್ಳೆಯದಾಗಲಿ ಎಂದು ಕೆಲವು ಸೊಸೆಯರು ದೇವರಲ್ಲಿ ಕೇಳಿಕೊಂಡಿದ್ದರೆ ಇಲ್ಲೊಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವರಿಗೆ ಹರಕೆ ನೀಡಿದ್ದಾಳೆ. ಅಂದ ಹಾಗೆಯೇ ಇದು ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವರಲ್ಲಿ ಬೇಡಿಕೊಂಡಿರುವ ಪರಿ. ಈ ವಿಚಿತ್ರವನ್ನು ಕಂಡು ಇದೀಗ ಎಲ್ಲರು ಕೂಡ ಬೆರಗಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ಗುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟ್ ನಲ್ಲಿ ಇಂತಹದ್ದೊಂದು ಬರಹ ಪತ್ತೆಯಾಗಿದೆ. ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಅನ್ನೋದನ್ನ ಬರೆಯಲಾಗಿದೆ. ಇದನ್ನು ಕಂಡು ಕೆಲವರು ಇದೆಂಥ ಕಾಲವಯ್ಯ ಎಂದು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ ದತ್ತನ ಹುಂಡಿ ಎಣಿಕೆ ಸಂದರ್ಭದಲ್ಲಿ ವಿಚಿತ್ರವಾಗಿ ಬರೆದಿರುವ 50 ರೂಪಾಯಿ ನೋಟ್…
ತುಮಕೂರು: ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ತುಮಕೂರು ನಗರದ ಕಡೆಗೆ ಓಡಾಡಿರುವ ಶಂಕೆಯ ಮೇರೆಗೆ ಬೆಂಗಳೂರು ಪೊಲೀಸ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ನಗರದ ಪ್ರಮುಖ ಸಿಸಿಟಿವಿಗಳ ಪರಿಶೀಲನೆಯಲ್ಲಿ ತೊಡಗಿದೆ. ನಿನ್ನೆ ರಾತ್ರಿ ದಿಢೀರ್ ಎಂದು ಬಂದ ಬೆಂಗಳೂರು ಪೊಲೀಸರ ತಂಡ ಸ್ಥಳೀಯ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರ ಅವರ ಜೊತೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿ ಯ ಸಿಸಿಟಿವಿ ಕಂಟ್ರೋಲ್ ರೂಮ್ ಗೆ ತೆರಳಿ ಸಾಕಷ್ಟ್ ಮಾಹಿತಿಯನ್ನು ಕಲೆ ಹಾಕಿತು. ಈ ನಡುವೆ ತುಮಕೂರು ನಗರದ ಹಾಗೂ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿರುವ ಸಿಸಿಟಿವಿಗಳ ವೀಡಿಯೊವನ್ನು ಪಡೆದುಕೊಂಡಿತು. ಅಲ್ಲದೆ ತಡ ರಾತ್ರಿಯವರೆಗೂ ಪೊಲೀಸರ ತಂಡ ಸುದೀರ್ಘ ಪರಿಶೀಲನೆ ನಡೆಸಿತು. ವಿಡಿಯೋ ನೋಡಿ: ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ತೆಲಂಗಾಣ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ 30 ವರ್ಷದ ಯುವಕ ಉದ್ಯೋಗ ಅರಸಿ ರಷ್ಯಾ ತೆರಳಿದ್ದ. ಅಲ್ಲಿ ಆತನಿಗೆ ನೌಕರಿ ನೀಡುವುದಾಗಿ ಹೇಳಿ ರಷ್ಯಾ ಸೇನೆಯ ವ್ಯಾಗ್ನರ್ ಗ್ರೂಪ್ ಗೆ ಸೇರಿಸಿ ಮೋಸ ಮಾಡಲಾಗಿತ್ತು. ಇದೀಗ ಸಂಘರ್ಷದಲ್ಲಿ ಅವರು ಮೃತಪಟ್ಟಿದ್ದಾರೆ. ಪ್ರವಾಸ, ಉದ್ಯೋಗ ಅರಸಿ ರಷ್ಯಾಗೆ ತೆರಳಿರುವ ಭಾರತದ (India to Russia) ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಅಥವಾ ಆಸೆ ತೋರಿಸಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಇದರಿಂದ ಭಾರತದ ಯುವಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎನ್ನುವ ಕೂಗು ಕೇಳಿಬಂದಿದೆ. ಮೊಹಮ್ಮದ್ ಸಾವಿನ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಮಾಹಿತಿ ಒದಗಿಸಿದ್ದು, ಈತನನ್ನು ಕೂಡಾ ರಷ್ಯಾ ಅಧಿಕಾರಿಗಳು ಬಲವಂತದಿಂದ ಸೇನೆ ಸೇರಿಸಿದ್ದರು ಎನ್ನುವ ಆಘಾತಕಾರಿ ಮಾಹಿತಿಯನ್ನು ರಾಯಭಾರಿ ಕಛೇರಿಯ ಅಧಿಕಾರಿಗಳು ಹೊರ ಹಾಕಿದ್ದಾರೆ. ಮೊಹಮ್ಮದ್ ಅಸ್ಫಾನ್ ಅವರು ಮೃತಪಟ್ಟಿರುವ ಅವರ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದೇವೆ. ಮೊಹಮ್ಮದ್ ಅಸ್ಫಾನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಾಯಭಾರಿ ಕಚೇರಿ…
ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ನಿಮಿತ್ತ, ಮಾರ್ಚ್ 10 ರಿಂದ 19 ರವರೆಗೆ ಒಟ್ಟು ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ ಲೈನ್ ಸೇವೆಗಳು (RAPDRP) ನಗರ ಪ್ರದೇಶದ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಈ ಬಗ್ಗೆ ಪ್ರಕಟಣೆ ನೀಡಿರುವ ಇಂಧನ ಇಲಾಖೆ, ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಆನ್ ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕ ಸ್ಥಗಿತಗೊಂಡಿರುತ್ತವೆ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ. ಬಿಲ್ ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಬಹುದು ಎಂದು ಪ್ರಕಟಣೆ ತಿಳಿಸಿದೆ. ಆದರೆ ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದಲ್ಲಿ…
ಖೇಲೋ ಇಂಡಿಯಾ ಕ್ರೀಡಾ ಕೂಟಗಳಲ್ಲಿ ಪದಕ ಗೆಲ್ಲುವ ಅಥ್ಲೀಟ್ ಗಳಿಗೆ ಇನ್ನು ಮುಂದೆ ಸರ್ಕಾರಿ ಹುದ್ದೆ ಪಡೆಯುವುದಕ್ಕೆ ಅರ್ಹರು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಬುಧವಾರ ಅನುರಾಗ್ ಠಾಕೂರ್ “ಅತ್ಯುತ್ತಮ ಕ್ರೀಡಾ ವ್ಯವಸ್ಥೆ, ತಳಮಟ್ಟದಲ್ಲೇ ಪ್ರತಿಭೆಗಳನ್ನು ಪೋಷಿಸುವುದು ಪ್ರಧಾನಿ ಮೋದಿ ಅವರ ಕನಸು. ಇದಕ್ಕೆ ಅನುಗುಣವಾಗಿ ಖೇಲೋ ಇಂಡಿಯಾದ ಯೂತ್, ಯುನಿವರ್ಸಿಟಿ, ಪ್ಯಾರಾ ಹಾಗೂ ಚಳಿಗಾಲದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರು ಇನ್ನು ಮುಂದೆ ಸರ್ಕಾರಿ ಹುದ್ದೆಗೆ ಅರ್ಹತೆ ಪಡೆಯಲಿದ್ದಾರೆ” ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ಕ್ರೀಡಾ ಸಚಿವಾಲಯದೊಂದಿಗೆ ಸಮಾಲೋಚಿಸಿ ಕ್ರೀಡಾಪಟುಗಳು ಸರ್ಕಾರಿ ಉದ್ಯೋಗ ಪಡೆಯಲು ಎದುರು ನೋಡುತ್ತಿರುವವರಿಗೆ ಈ ಪರಿಷ್ಕೃತ ಆದೇಶ ಸಹಾಯಕವಾಗಲಿದೆ ಎಂದು ಠಾಕೂರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬದಲಾದ ಜಗತ್ತಿನಲ್ಲಿ ಹಣ ಗಳಿಸಲು ಸಾಕಷ್ಟು ಒಳ್ಳೆಯ ಮಾರ್ಗಗಳಿವೆ. ಆದರೆ ದುರಾಸೆಗೆ ಬಲಿಯಾಗಿ, ಸುಲಭದಲ್ಲಿ ಹೆಚ್ಚು ದುಡ್ಡುಮಾಡುವ ನಿಟ್ಟಿನಲ್ಲಿ ಅನೇಕರು ಅನ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಲೈಂಗಿಕ ಕ್ರಿಯೆಯೂ ಒಂದು. ಅಂತೆಯೇ ಇದೀಗ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ದುಡ್ಡು ಮಾಡಲು ಬೆಂಗಳೂರಿನ ಜೋಡಿಯೊಂದು ತಮ್ಮದೇ ಪೋರ್ನ್ ವೀಡಿಯೋ ಮಾಡಿ ಅದನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಹೌದು, ಬೆಂಗಳೂರು ಮಹಾನಗರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆ ನಡೆಸಿ, ಚಿತ್ರೀಕರಿಸಿದ ವೀಡಿಯೋವನ್ನು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರ ಅಮರ್ ನಾಥ್ ಎಂಬವರು ಐಟಿ ಆಕ್ಟ್ (ಮಾಹಿತಿ ತಂತ್ರಜ್ಞಾನ ಕಾಯ್ದೆ) (IT Act) ಅಡಿಯಲ್ಲಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ದೂರು ದಾಖಲಿಸುತ್ತಿದ್ದಂತೆ ಅಮರನಾಥ್ ಗೆ ಖತರ್ನಾಕ್ ಜೋಡಿಗಳು ಧಮ್ಕಿ ಹಾಕಿದ್ದು, ಪೊಲೀಸರ ಬಳಿ ದೂರುದಾರರು ರಕ್ಷಣೆ ಕೋರಿದ್ದಾರೆ. ದುಡ್ಡು ಮಾಡುವ…
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬಂಧಿಸಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ಏರ್ಪಡಿಸಿದ್ದ 5ನೆ ರಾಜ್ಯ ಮಟ್ಟದ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರ ಮತ್ತು ನೀಡುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುವ ಅಧಿಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸಿಗಲಿದೆ. ಇದರಿಂದ ನಕಲಿ ಜಾತಿ ಪ್ರಮಾಣಪತ್ರ ಹಾವಳಿಗೆ ಕಡಿವಾಣ ಬೀಳಲಿದೆ ಎಂದರು. ಜಾತಿಗಣತಿ ವರದಿಯಲ್ಲಿ ಯಾವ ಜಾತಿಯ ಜನಸಂಖ್ಯೆ ಹೆಚ್ಚಿದ್ದಾರೆ, ಯಾವ ಜಾತಿ ಜನ ಕಡಿಮೆ ಇದ್ದಾರೆ ಎಂಬುದು ಅನಧಿಕೃತವಾಗಿ ಗೊತ್ತಾದ ತಕ್ಷಣ ಅಸಹನೆಯ ಮಾತು ಕೇಳಿ ಬರುತ್ತಿವೆ. ಜಾತಿಗಣತಿ ವರದಿಗೆ ತೀವ್ರ ವಿರೋಧವಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಸ್ವೀಕರಿಸಿದ್ದಾರೆ. ಈ ವರದಿಯನ್ನು ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸದನದಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಎಸ್ಸಿ,…
ಬೀದರ: ಜಿಲ್ಲಾ ಪೊಲೀಸ್ ನ ವಿಶೇಷ ಮಹಿಳಾ ಘಟಕವಾದ ‘ಅಕ್ಕ ಪಡೆ’ಯ ಪಿ.ಎಸ್.ಐ ಸುವರ್ಣಾ ಅವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಮತ್ತು ರಸ್ತೆ ಸುರಕ್ಷತೆ ಅರಿವು ಮುಡಿಸಲು ಜಿಲ್ಲಾದ್ಯಂತ ಬೈಕ್ ಜಾಥಾಕ್ಕೆ ಚಾಲನೆ ನೀಡಲಾಯಿತು. ರೋಟರಿ ಕ್ಲಬ್ ರವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಜಾಥಾವು ಮಾರ್ಚ್ 5ರಿಂದ ಆರಂಭಗೊಂಡಿದ್ದು, 8ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಪೊಲೀಸ್ ಇಲಾಖೆಯ ಶ್ರೇಯೊಭಿವೃದ್ದಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕೊಡುಗೆ ಅಪಾರವಾದದ್ದು, ಸಮಾಜದ ದುರ್ಬಲ ವರ್ಗದವರ (ಮಹಿಳೆಯರು & ಮಕ್ಕಳು) ನ್ಯಾಯ ಮತ್ತು ಹಕ್ಕುಗಳನ್ನು ಕಾಪಾಡಲು ಬೀದರ ಜಿಲ್ಲಾ ಪೊಲೀಸ್ ಅದರಲ್ಲೂ ನಮ್ಮ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರು ಸದಾ ಶ್ರಮಿಸುತ್ತಿದ್ದಾರೆ. ಈ ಜಾಥಾಕ್ಕೆ ಸಹಕರಿಸಿದ ರೋಟರಿ ಕ್ಲಬ್ ನ ಪದಾಧಿಕಾರಿ ಬೀದರ್ ಜಿಲ್ಲಾ ಪೊಲೀಸರು ಅಭಿನಂದನೆ ತಿಳಿಸಿದ್ದಾರೆ. ವರದಿ: ಅರವಿಂದ್ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಭೋಪಾಲ್: ‘ ಮನೆಯ ಟಿವಿಯಲ್ಲಿ ಮೋದಿ ಫೋಟೊ ಬಂದರೆ ಆ ಮನೆಗೆ ದಾರಿದ್ರ್ಯ ಸುತ್ತಿಕೊಳ್ಳುತ್ತದೆ’ ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ. ಮಧ್ಯಪ್ರದೇಶದ ಧಾರ್ ನಲ್ಲಿ ನಡೆಯುತ್ತಿರುವ ‘ಭಾರತ ಜೋಡೊ ಯಾತ್ರೆ’ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ‘ ಬೆಳಿಗ್ಗೆ ಟಿವಿ ಆನ್ ಮಾಡಿದರೆ ಮೊದಲು ಮೋದಿ ಅವರ ಫೋಟೊ ಕಾಣುತ್ತದೆ. ಯಾರ ಮನೆಯಲ್ಲಿ ಮೋದಿ ಫೋಟೊ ಕಾಣುವುದೋ ಆ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಖರ್ಗೆ ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಗೆ ಅಭಿವೃದ್ಧಿ ಬೇಡ, ಅವರಿಗೆ ಬಡವರನ್ನು ಕಂಡರೆ ಆಗುವುದಿಲ್ಲ. ಬಡವರ ಮಕ್ಕಳು ಓದಿ ಮುಂದೆ ಬಂದರೆ ಬಿಜೆಪಿಗೆ ಸಮಸ್ಯೆ ಹೀಗಾಗಿ ಬಡವರ ವಿರುದ್ಧವೇ ಯೋಜನೆ ರೂಪಿಸುತ್ತಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…