Author: admin

ಬೆಂಗಳೂರಿನ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅಕ್ರಮವಾಗಿ ಗಳಿಸಿದ್ದ ಜಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. ಜಯಲಲಿತಾ ಪುತ್ರಿ ಜೆ.ದೀಪಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ಅರ್ಜಿದಾರರ ಪರ ವಕೀಲರು, ”ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂಕೋರ್ಟ್‌ನಿಂದ ತೀರ್ಪು ಬರುವ ಮುನ್ನವೇ ಅವರು ಮೃತರಾಗಿದ್ದರು. ಆದ ಕಾರಣ ಅವರನ್ನು ಆರೋಪಮುಕ್ತರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ, ಅರ್ಜಿದಾರರು ಜಯಲಲಿತಾ ಅವರ ಕಾನೂನುಬದ್ದ ವಾರಸುದಾರರಾಗಿದ್ದು, ಅವರಿಗೆ ಎಲ್ಲ ಚಿನ್ನಾಭರಣಗಳನ್ನು ಹಸ್ತಾಂತರ ಮಾಡುವಂತೆ ನಿರ್ದೇಶನ ನೀಡಬೇಕು,” ಎಂದು ಕೋರಿದರು. ಈ ವಾದ ದಾಖಲಿಸಿಕೊಂಡ ನ್ಯಾಯಪೀಠ, ನಗರದ ವಿಶೇಷ ನ್ಯಾಯಾಲಯದಿಂದ ತಮಿಳು ನಾಡು ಸರಕಾರಕ್ಕೆ ಬುಧವಾರದಿಂದ ನೀಡಬೇಕಾಗಿದ್ದ ಚಿನ್ನಾಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ…

Read More

ಮಧುಮೇಹಿಗಳಿಗೆ ಅವಲಕ್ಕಿ ಬೆಸ್ಟ್ ಉಪಹಾರ! ಅವಲಕ್ಕಿಯನ್ನು ಮಧುಮೇಹಿಗಳಿಗೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ನಾರಿನಂಶ ಸಮೃದ್ಧವಾಗಿರುವುದರಿಂದ ಅವಲಕ್ಕಿ ರಕ್ತದಲ್ಲಿನ ಸಕ್ಕರೆಯ ನಿಧಾನ ಮತ್ತು ಸ್ಥಿರ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಯಾವುದೇ ಹಠಾತ್ ಸೈಕ್‌ಗಳನ್ನು ತಡೆಯುತ್ತದೆ. ಅವಲಕ್ಕಿಯಲ್ಲಿ ಕಾರ್ಬೋಹೈಡ್ರೆಟ್‌ಗಳು ಸಮೃದ್ಧವಾಗಿದೆ. ನಿಮ್ಮ ದಿನವನ್ನು ಕಿಕ್‌ಸ್ಟಾರ್ಟ್ ಮಾಡಲು ತ್ವರಿತ ಶಕ್ತಿಯ ಮೂಲವನ್ನು ಒದಗಿಸುತ್ತದೆ. ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿ, ಮತ್ತೆ ನೋಡಿ ಮ್ಯಾಜಿಕ್: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನೊಂದಿಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ತುಂಬಾ ಲಾಭಗಳಿವೆ. ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…

Read More

ಬೆಂಗಳೂರು: ವೀಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ವಂಚಿಸುತ್ತಿದ್ದವನನ್ನ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿ. ಈ ಆರೋಪಿ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ನೂರಾರು ಜನ ಇತನನ್ನು ನಂಬಿ ಹಣ ಕಳೆದುಕೊಂಡಿದ್ದಾರೆ. ವಂಚಕ ಕಿಶನ್, ನೀವು ಮಾಡಿದ ಹೂಡಿಕೆ ಹಣಕ್ಕೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಜನರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗದಿದ್ದರೂ ಎಲ್ಲ ಮೋರ್ಚಾಗಳು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ ಚುನಾವಣಾ ಪ್ರಚಾರವು ಗೀಚುಬರಹವನ್ನು ಮೀರಿದೆ ಮತ್ತು ಬೃಹತ್ ಸಭೆಗಳು ಸಾಲುಗಟ್ಟಿ ನಿಂತಿವೆ. ಡಿಜಿಟಲ್ ಪ್ರಚಾರದಲ್ಲಿ ಬಿಜೆಪಿ ಬಹಳ ಮುಂದಿದೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಉತ್ತರ ಭಾರತದಲ್ಲಿ ಜಾಹೀರಾತುಗಳೊಂದಿಗೆ ಬಿಜೆಪಿ ತನ್ನ ಡಿಜಿಟಲ್ ಪ್ರಚಾರವನ್ನು ತೀವ್ರಗೊಳಿಸುತ್ತಿದೆ. ಗೂಗಲ್, ಮತ್ತು ಅದರ ಸಂಬಂಧಿತ ಪ್ಲಾಟ್‌ ಫಾರ್ಮ್‌ಗಳಾದ ಯೂಟ್ಯೂಬ್‌ ನಲ್ಲಿ ಬಿಜೆಪಿ ಒಂದು ತಿಂಗಳಲ್ಲಿ ಜಾಹೀರಾತುಗಳಿಗೆ ಕೋಟಿಗಳನ್ನು ನೀಡಿದೆ. ಫೆಬ್ರವರಿ 1 ರಿಂದ ಮಾರ್ಚ್ 4 ರವರೆಗೆ ಬಿಜೆಪಿ ಈ ರೀತಿಯ ಡಿಜಿಟಲ್ ಪ್ರಚಾರಕ್ಕಾಗಿ, 30 ಕೋಟಿ ರೂ. ಬಿಜೆಪಿಯ ಜಾಹೀರಾತು ಡಿಜಿಟಲ್ ಪ್ರಚಾರಕ್ಕೆ ಬಳಸಬಹುದಾದ ಎಲ್ಲಾ ವೇದಿಕೆಗಳನ್ನು ತಲುಪಲು ಪ್ರಾರಂಭಿಸಿದೆ. ಈ ಜಾಹೀರಾತುಗಳನ್ನು ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಬಹು ಭಾರತೀಯ ಭಾಷೆಗಳಲ್ಲಿ ಪ್ರಚಾರ ಮಾಡಲು ಬಳಸಲಾಗುತ್ತದೆ. 2019ರ ಲೋಕಸಭೆ…

Read More

ಎಲ್ಲಿ ನೋಡಿದರೂ ನೀರಿಗಾಗಿ ಜನ ಪರದಾಡುವಂತಾಗಿದೆ. ಆದರೆ ಈ ನಡುವೆ ಸಿಎಂ ಕಚೇರಿಗೂ ನೀರಿನ ಸಮಸ್ಯೆಯ ಬಿಸಿ ಮುಟ್ಟಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಸಿಎಂ ಕಚೇರಿಗೂ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಜಲಮಂಡಳಿ ಟ್ಯಾಂಕರ್‌ ನಿಂದ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಕಚೇರಿಗೆ ಇಂದು(ಮಾರ್ಚ್ ೫) ನೀರು ಪೂರೈಕೆ ಮಾಡಲಾಗಿದೆ. ಸಿಎಂ ಕಚೇರಿಯಲ್ಲಿ ನೀರಿಲ್ಲ ಎನ್ನುವ ಸುದ್ದಿ ಜನರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಸಿಎಂ ಕಚೇರಿಗೇ ನೀರಿಲ್ಲ ಎನ್ನುವುದಾದರೆ ಜನಸಾಮಾನ್ಯರ ಗತಿ ಏನು ಎಂದು ಎಲ್ಲರೂ ಹೇಳಿಕೊಳ್ಳುವಂತಾಗಿದೆ. ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆರಂಭದಲ್ಲೇ ಡ್ಯಾಂಗಳಲ್ಲಿ ನೀರು ಕಾಣಸಿಗುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮೂಲಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗದೇ ಹೋಗುವ ಆತಂಕ ಎದುರಾಗಿದೆ. ಹೀಗಾಗಿ ಈಗಾಗಲೇ ಬೇಸಿಗೆ ಮುನ್ನವೇ ಬೆಂಗಳೂರಿಗೆ ಬರಗಾಲ ಎದುರಾಗಿದೆ. ಇಷ್ಟು ಮಾತ್ರವಲ್ಲದೆ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.ಈ ಬಗ್ಗೆ ಡಿಸಿಎಂ ಸಭೆ ಮಾಡಿದರೂ…

Read More

ತಮಿಳುನಾಡಿನಲ್ಲಿ ನಾಪತ್ತೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಮೃತದೇಹ ಆಕೆಯ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಟ್ಟಲಾಗಿತ್ತು. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಶವವನ್ನು ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮುತ್ಯಾಲಪೆಟ್ಟ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮಾರ್ಚ್ 2ರಂದು ಸಂಜೆ ನಾಪತ್ತೆಯಾಗಿದ್ದಳು. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿ ಮಗುವಿನ ಹುಡುಕಾಟ ಆರಂಭಿಸಿದ್ದಾರೆ. ನಿನ್ನೆ ಮಧ್ಯಾಹ್ನ ಶೋಲೈನಗರದ ಮನೆಯ ಸಮೀಪದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಕಾಲುಗಳನ್ನು ಕಟ್ಟಲಾಗಿತ್ತು. ದೇಹ ಕೊಳೆಯಲು ಆರಂಭಿಸಿತ್ತು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪುದುಚೇರಿ ಮೂಲದ ವಿವೇಕಾನಂದನ್(54) ಮತ್ತು ಕರುಣಾಸ್(19) ಬಂಧಿತರು. ವಿವರವಾದ ತನಿಖೆ ನಡೆಯುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

‘ಬೆಳ್ಳುಳ್ಳಿ ಕಬಾಬ್ ಮಾಡ್ಕೊಳಿ ತಿನ್ಕೊಳಿ’ ಅಂತ ರೆಸಿಪಿಗಳ ವಿಡಿಯೋ ಮಾಡ್ತಿದ್ದ ಚಂದ್ರು, ಕರಿಮಣಿ ಮಾಲೀಕಾ ರಾವುಲ್ಲಾ ಅಂತ ಡೈಲಾಗ್ ಹೇಳ್ತಾ ಫೇಮಸ್ ಆದವರು ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ. ಇನ್ಸ್ಟಾಗ್ರಾಮ್ ನಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಚಂದ್ರು ಇದೀಗ ಹಾಸಿಗೆ ಹಿಡಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಂದ್ರು ವಿಡಿಯೋ ಸಿಕ್ಕಪಟ್ಟೆ ಸದ್ದು ಮಾಡುತ್ತಿದ್ದು ಈಗ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಹೋಟೆಲ್ ಹತ್ತಿರ ಕಾಲು ಜಾರಿ ಬಿದ್ದೆ. ಮೂಳೆ ಮುರಿದಿದೆ ಅಂತ ಡಾಕ್ಟರ್ ಹೇಳಿದ್ರು. ವಯಸ್ಸಾಗಿದೆ ರಿಸ್ಕ್ ಬೇಡ ಅಂತ ಆಪರೇಷನ್ ಮಾಡಿಸಿಕೊಂಡು ರೆಸ್ಟ್ ಮಾಡ್ತಿದ್ದೀನಿ ಎಂದು ಬೆಳ್ಳುಳ್ಳಿ ಕಬಾಬ್ ಚಂದ್ರು ಹೇಳಿಕೊಂಡಿದ್ದಾರೆ. ಉಪ್ಪಿ ಯುಐ ಚಿತ್ರದ ಹಾಡಿನ ಬಗ್ಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಡನ್ನು ಬರೆಯೋಕು ಮುನ್ನ ನನಗೆ ಉಪ್ಪಿ ಸರ್ ಕಾಲ್ ಮಾಡಿ ಕೇಳಿದ್ರು. ನಾನು ನಿಮ್ಮಿಷ್ಟ ಬಂದ ಹಾಗೇ ಮಾಡಿಕೊಳ್ಳಿ ಸರ್ ಅಂತ ಹೇಳ್ದೆ. ಮೊನ್ನೆ ಹಾಡು ಕಳ್ಸಿದ್ರು ನೋಡಿದೆ, ಹಾಡು…

Read More

ಮಾಲ್ಡೀವ್ಸ್ ಮತ್ತು ಭಾರತದ ಲಕ್ಷದ್ವೀಪಗಳ ಪ್ರವಾಸೋಧ್ಯಮ ಮತ್ತು ರಾಜತಾಂತ್ರಿಕ ಜಟಾಪಟಿಯ ನಡುವೆ, ಮಾಲ್ಡೀವ್ಸ್‌ ಗೆ ಸನಿಹದಲ್ಲೇ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ ಎಂದು ವರದಿ ತಿಳಿಸಿದೆ. ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್ ‌ನಲ್ಲಿ ‘ಐಎನ್‌ ಎಸ್‌ ಜಟಾಯು’ ಹೆಸರಿನ ವಾಯುನೆಲೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ. ಮಾಲ್ಡೀವ್ಸ್‌ ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ. ಜಟಾಯು ವಾಯುನೆಲೆಯಿಂದ ಅರಬ್ಬೀ ಸಮುದ್ರದಲ್ಲಿ ಭಾರತದ ಬಲ ಮತ್ತಷ್ಟು ವೃದ್ಧಿಯಾಗಲಿದೆ. ಹಡಗು ಕಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಜತೆಗೆ ಭಾರತದ ಮುಖ್ಯ ಭೂಮಿ ಹಾಗೂ ಲಕ್ಷದ್ವೀಪ ನಡುವಣ ಸಂಪರ್ಕಕ್ಕೂ ಅನುಕೂಲವಾಗಲಿದೆ. ಭಾರತ ಈಗಾಗಲೇ ಲಕ್ಷದ್ವೀಪದ ಕರವಟ್ಟಿಯಲ್ಲಿ ‘ದ್ವೀಪರಕ್ಷಕ’ ಎಂಬ ನೌಕಾ ನೆಲೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಮೊಹಮ್ಮದ್‌ ಮುಯಿಜು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ…

Read More

ಸನಾತನ ಧರ್ಮದ ವಿರುದ್ಧ ಸದಾ ಕಿಡಿಕಾರುವ ಡಿಎಂಕೆ ನಾಯಕರಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ ಹೊರ ಬಿದ್ದಿದೆ. ಡಿಎಂಕೆ ಸಂಸದ ಎ. ರಾಜಾ ತಮ್ಮ ಭಾಷಣದಲ್ಲಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದು ತೀವ್ರ ಸಂಚಲನ ಸೃಷ್ಟಿಸಿದೆ. ತಮಿಳುನಾಡಿನಲ್ಲಿ ನಡೆದಿರುವ ಡಿಎಂಕೆ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಎ.ರಾಜಾ ನಾವು ಶ್ರೀರಾಮನ ಶತ್ರುಗಳು. ನಾವು ಜೈ ಶ್ರೀರಾಮ ಘೋಷಣೆಯನ್ನು ಒಪ್ಪಲ್ಲ. ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಒಪ್ಪಲ್ಲ. ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ನಮ್ಮ ರಾಮ ಜಾತಿ, ಧರ್ಮ ನೋಡಲ್ಲ. ಬಿಜೆಪಿಯ ರಾಮ ಅಸಹ್ಯಕರ. ತಮಿಳುನಾಡು ಬಿಜೆಪಿಯ ಶ್ರೀರಾಮನನ್ನು‌ ಒಪ್ಪಲ್ಲ. ನಾವು ಬಿಜೆಪಿಯವರ ಶ್ರೀರಾಮಚಂದ್ರನ ಶತ್ರುಗಳು. ನಾವು ಬಿಜೆಪಿಯವರ ರಾಮಾಯಣದಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳದವರು. ಮೂರ್ಖರಿಗೆ ಮಾತ್ರ ಜೈ ಶ್ರೀರಾಮ್ ಘೋಷಣೆ ಎಂದು ಎ. ರಾಜಾ ಟೀಕಿಸಿದ್ದಾರೆ. ಭಾರತ ದೇಶವಲ್ಲ, ಭಾರತವು ಒಂದು ಉಪಖಂಡ. ತಮಿಳುನಾಡೇ ಒಂದು ದೇಶ. ಕೇರಳವೇ ಒಂದು ದೇಶ. ಒಡಿಶಾವೇ ಒಂದು ದೇಶ, ಒಂದು ನಾಡು. ಈ ಎಲ್ಲಾ ದೇಶಗಳು…

Read More

ಸಿಲಿಕಾನ್‌ ಸಿಟಿಯಲ್ಲಿ ಬೇಸಿಗೆ ಧಗೆ ಹೆಚ್ಚಾಗಿದೆ. ಜೊತೆ ಜೊತೆಗೆ ನೀರಿನ ಹಾಹಾಕಾರ ಕೂಡಾ ಉಂಟಾಗಿದೆ. ಈ ಬಾರಿ ಬೇಸಿಗೆಗೆ ಕೂಡಾ ಕುಡಿಯುವ ನೀರಿನ ಸಮಸ್ಯೆ ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಿದೆ. ಇದರ ಮಧ್ಯೆ ಒಬ್ಬರಿಗೆ ಒಂದೇ ಕ್ಯಾನ್‌ ನೀರು ಮಾತ್ರ ನೀಡಲಾಗುತ್ತಿರುವ ಕುರಿತು ವರದಿಯಾಗಿದೆ. ಬೋರ್‌ ವೆಲ್ ‌ನಲ್ಲಿ ನೀರಿಲ್ಲ, ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ. ಟ್ಯಾಂಕರ್‌ ನೀರಿನ ಬೆಲೆ ದುಬಾರಿಯಾಗಿದೆ. ಇದರಿಂದ ಬಹುತೇಕ ಮಂದಿ ನೀರಿಗಾಗಿ ಮುಗಿ ಬೀಳುತ್ತಿದ್ದಾರೆ. ಇದೀಗ ನೀರಿನ ಅಭಾವದ ಜೊತೆಗೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮವೊಂದು ಶುರುವಾಗಿದೆ. ಒಬ್ಬರಿಗೆ ಒಂದೇ ಕ್ಯಾನ್‌ ನೀರು ಎಂದು ನೀಡಲಾಗುತ್ತಿದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್‌ಒ ಪ್ಲಾಂಟ್ ‌ನಲ್ಲಿ ಈ ಬೋರ್ಡ್‌ ಕಾಣಸಿಗುತ್ತಿದೆ. ಈಗಾಗಲೇ ಕೆಲವು ಕಡೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ನೀರು ಬಿಡಲಾಗುತ್ತಿತ್ತು. ಇದೀಗ ಎರಡು ಗಂಟೆ ಬೆಳಗ್ಗೆ ಸಂಜೆ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಆರ್‌ಓ…

Read More