Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ಈ ಎಣ್ಣೆ ಹಾಕಿ.. ನಿಮ್ಮ ಆರೋಗ್ಯಕ್ಕೂ ಬೆಸ್ಟ್: ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ ಒಂದು ಚಮಚ ಎಳ್ಳು ಎಣ್ಣೆ ಹಾಕಿಕೊಂಡರೆ ದೇಹ ತಂಪಾಗಿರುತ್ತದೆ ಹಾಗೂ ಕಣ್ಣಿನ ಬದಿಯಲ್ಲಿ ಬರುವ ಮಡ್ಡಿ ದೂರವಾಗುತ್ತದೆ. ಚಳಿಗಾಲದಲ್ಲಿ ಕೈ, ಕಾಲು ಸೆಳೆತ ಎನ್ನುವವರು ಒಂದು ಚಮಚ ಎಳ್ಳೆಣ್ಣೆಯನ್ನು ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿ ಕೈ ಕಾಲಿಗೆ ಮಸಾಜು ಮಾಡಬೇಕು. ಇದರಿಂದ ದಿನವಿಡೀ ತ್ವಚೆ ಮೃದುವಾಗಿರುತ್ತದೆ. ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಎಳ್ಳೆಣ್ಣೆ ಅಂಟು ಜಾಸ್ತಿ.. ಹಿಂಸೆ ಅನ್ನಸಿದ್ರೂ ಆರೋಗ್ಯದ ದೃಷ್ಟಿಯಿಂದ ಇದು ಬೆಸ್ಟ್. ಚಕೋತ ಹಣ್ಣು ತಿನ್ನುವುದರಿಂದ ಇವೆ ಹಲವಾರು ಆರೋಗ್ಯ ಪ್ರಯೋಜನಗಳು: ಚಕೋತ ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದು ತೂಕ ಇಳಿಸುವ ಆಹಾರದ ಭಾಗವಾಗಿ ಬಳಕೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಕೋತ ಹಣ್ಣುಗಳು ಮಧುಮೇಹವನ್ನು ತಡೆಯುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹವನ್ನು ಹೈಡೇಟ್ ಮಾಡುತ್ತದೆ. ಮುಖದಲ್ಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.…
ಹರ್ಯಾಣ: ಹರ್ಯಾಣದ ರೇವಾರಿಯಲ್ಲಿ ಸರ್ಕಾರಿ ಬಸ್ ಮತ್ತು ಕಾರು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದು ಈ ದುರಂತ ನಡೆದಿದ್ದು, ಐವರು ಮೃತಪಟ್ಟಿದ್ದಾರೆ. ಮೃತರನ್ನು ಚಾರ್ಖಿ ದಾದ್ರಿಯ ಚಾಂಗ್ರೋಡ್ ಗ್ರಾಮದ ಅಜಿತ್ (45), ಸುಂದರ್ (42), ಬಿಲ್ಲು (38) ಮತ್ತು ಭಿವಾನಿ ಜಿಲ್ಲೆಯ ಸೂರತ್ (70) ಮತ್ತು ಪ್ರತಾಪ್ (55) ಎಂದು ಗುರುತಿಸಲಾಗಿದೆ. ಮೃತರೆಲ್ಲ ಹರ್ಯಾಣದ ಚಾರ್ಕಿ ದಾದ್ರಿ ನಿವಾಸಿಗಳು. ಮೃತರು ಮದುವೆ ಸಮಾರಂಭವೊಂದನ್ನು ಮುಗಿಸಿ ಬರುತ್ತಿದ್ದಾಗ ಮಹೇಂದ್ರಗಢ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಆಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. “ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮೈಸೂರಿನ ಪ್ರಲಕ್ಷ ಚಾರಿಟೇಬಲ್ ಟ್ರಸ್ಟ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಡಾ. ಮೋಹನ್ ಎನ್.ಎಸ್. ಸ್ನೇಹ ಬಳಗ, ರಾಜ್ಯ ರೈತ ಕಿಸಾನ್ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಚ್.ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆನ್ನುಹುರಿ ಮತ್ತು ಕೀಲುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಪ್ರಲಕ್ಷ ಆಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕ ಡಾ. ಮೋಹನ್ ಎನ್.ಎಸ್. ರವರು ರಚಿಸಿರುವ ‘ರೈತರೇ ಆರೋಗ್ಯವಂತರಾಗಿ’ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ರೈತ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ‘ರಾಸಾಯನಿಕಯುಕ್ತ ಅಹಾರ ಪದಾರ್ಥಗಳನ್ನು ಸೇವಿಸುತ್ತಾ ಇಂದು ಮನುಷ್ಯನ ಆಯಸ್ಸು ಕಡಿಮೆಯಾಗುತ್ತಾ ಸಾಗಿದೆ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳು ಮಾಡಬೇಕಿದೆ. ರೈತನು ಬೆಳೆದ ಸಾವಯವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು’ ಎಂದು ಒತ್ತಾಯಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ಆರ್.ಎಸ್.ಎಸ್ ನ ಮುಖಂಡ ಮ.ವೆಂಕರಾಮ್ ಜಿ ಮಾತನಾಡಿ ‘ರೈತರೇ ಆರೋಗ್ಯವಂತರಾಗಿ ಎಂಬ ಪುಸ್ತಕವನ್ನು ಅಧ್ಯಯನ ಮಾಡಿದಾಗ ರೈತರ ಹಲವಾರು ಸಮಸ್ಯೆಗಳು…
ಹೈದರಾಬಾದ್: ನವ ವಿವಾಹಿತರು ಸೇರಿ ಒಂದೇ ಕುಟುಂಬದ 5 ಮಂದಿ ಆಂಧ್ರಪ್ರದೇಶದ ನಂದ್ಯಾಳ ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರು ಹೈದರಾಬಾದ್ ಮೂಲದವರು. ಬಾಲ ಕಿರಣ್, ಕಾವ್ಯಾ, ಮಂತ್ರಿ ಲಕ್ಷ್ಮೀ, ಮಂತ್ರಿ ರವೀಂದರ್ ಮತ್ತು ಉದಯ್ ಮೃತರು. ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಈ ಕುಟುಂಬ ಹಿಂದಿರುಗುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ ಅನ್ನು ಕಾರು ಚಾಲಕ ಗಮನಿಸದೇ ಇದ್ದುದು ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಫೆಬ್ರವರಿ 29ರಂದು ಬಾಲ ಕಿರಣ್ ಮತ್ತು ಕಾವ್ಯಾ ಅವರ ವಿವಾಹ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ತಿರುಪತಿಯ ತಿರುಮಲ ದರ್ಶನಕ್ಕೆ ತೆರಳಿದ್ದರುʼʼ ಎಂದು ಅವರು ವಿವರಿಸಿದ್ದಾರೆ. ಅಪಘಾತದ ನಂತರ ಪೊಲೀಸರು ಸಂತ್ರಸ್ತರೊಬ್ಬರ ಮೊಬೈಲ್ ಫೋನ್‌ನಿಂದ ಅವರ ಸಂಬಂಧಿಕರಿಗೆ ಕರೆ ಮಾಡಿ, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. …
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದ ಬಳಿ ಆಟೋಗೆ ಲಾರಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮಲ್ಲಿಕಾರ್ಜುನ(17) ಮೃತ ವಿದ್ಯಾರ್ಥಿಯಾಗಿದ್ದಾನೆ. ಆಟೋಗೆ ಡಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಖಾಸಗಿ ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದ. ಆದರೆ, ಪೊಲೀಸರ ಚಾಣಾಕ್ಷತನದಿಂದ ಕೊಪ್ಪಳದ ಹಿಟ್ನಾಳ್ ಕ್ರಾಸ್ ಬಳಿ ಲಾರಿ ಚಾಲಕ ಸಿಕ್ಕಿಸಿದ್ದಿದ್ದಾನೆ. ಗಾಯಗೊಂಡ ಆರು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಮೂವರನ್ನು ಬಂಧಿಸಿರುವುದು ಸರಿ. ಆದರೆ, ಎಫ್‍ಎಸ್‍ಎಲ್ ವರದಿಯನ್ನು ಯಾಕಿನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ. ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಂಧಿತರು ಯಾರೋ ಚೇಲಾಗಳಿರಬೇಕು ಅಂದುಕೊಂಡಿದ್ದೆವು. ಅವರಿಗೆ ರಾಹುಲ್ ಗಾಂಧಿಯವರ ಸಂಪರ್ಕ ಇರುವುದು ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು. ಈಗ ರಾಹುಲ್ ಗಾಂಧಿಯವರ ಜೊತೆಗಿರುವ, ತಬ್ಬಿಕೊಂಡಿರುವ ಫೋಟೊ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಜಿಂದಾಬಾದ್ ನಂಟು ನಾವು ಅಂದುಕೊಂಡಿದ್ದ ರೀತಿಯನ್ನೂ ಮೀರಿದೆ. ಪಾಕಿಸ್ತಾನದ ಅಪ್ಪ, ಅಮ್ಮನಿಗೆ ಹುಟ್ಟಿದ ದೇಶದ್ರೋಹಿಗಳು ಕೂಗಿದ್ದಾರೆ ಎಂದುಕೊಂಡಿದ್ದೆವು. ದೇಶದ್ರೋಹಿಗಳಿಗೂ ಕಾಂಗ್ರೆಸ್ ನಾಯಕರಿಗೂ ಅಪ್ಪುಗೆಯ ನಂಟಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ವಿಶ್ಲೇಷಿಸಿದರು. ಅಪ್ಪುಗೆಯ ನಂಟೂ ಇರುವ ಕಾರಣ ಎಫ್‍ಎಸ್‍ಎಲ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವೇನೋ ಎಂದು ಸಂಶಯ ವ್ಯಕ್ತಪಡಿಸಿದ ಸಿ.ಟಿ…
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಟಿಪ್ಪರ್ ವಾಹನದಡಿಗೆ ಬಿದ್ದು ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಅದ್ವೈತ್ ಅಕ್ಷಯ್ ಮೃತ ಮಗುವಾಗಿದ್ದಾನೆ. ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ಶಾಬಂದರ್ ವಂಟಮೂರಿ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ರಸ್ತೆ ಬದಿಯಲ್ಲಿ ಆಡುತ್ತಿದ್ದ ಅದ್ವೈತ್ ಅಕ್ಷಯ್ ಗೆ ಡಿಕ್ಕಿಯಾಗಿದೆ. ಮಗು ಟಿಪ್ಪರ್ ನ ಚಕ್ರದಡಿಗೆ ಸಿಲುಕಿ ಮೃತಪಟ್ಟಿದೆ. ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೋಲ್ಕತ್ತಾ: ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ-ಎಸ್‌ಪ್ಲೇನೇಡ್‌ವರೆಗಿನ ಮಾರ್ಗವನ್ನು ಉದ್ಘಾಟಿಸಿದ ಮೋದಿ ಮಕ್ಕಳದೊಂದಿಗೆ ಮೆಟ್ರೋದಲ್ಲಿ ಸಂಚಾರ ಮಾಡಿದರು. ಈ ಕಾರ್ಯಕ್ರಮದಲ್ಲಿ ಮೋದಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15,400 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಲಿರುವ ವಿವಿಧ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಿದರು. ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಎರಡು ನಗರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಈ ರೈಲು ಮಾರ್ಗ 16.6 ಕಿಲೋಮೀಟರ್ ಉದ್ದವನ್ನು ಹೊಂದಿದ್ದು 6 ನಿಲ್ದಾಣಗಳನ್ನು ಇರಲಿದೆ. 6 ನಿಲ್ದಾಣಗಳ ಪೈಕಿ 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ…
ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ ನಟಿ ಸೌಮ್ಯ ಶೆಟ್ಟಿ ಇದೀಗ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದೊಂಡಪರ್ತಿ ಬಾಲಾಜಿ ರೆಸಿಡೆನ್ಸಿಯಲ್ಲಿ ನೆಲೆಸಿದ್ದ ಪ್ರಸಾದ್ ಎಂಬ ಸೇನೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ಕಳ್ಳತನವಾಗಿದ್ದು, ಈ ಪ್ರಕರಣದಲ್ಲಿ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಲಾಗಿದೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಿವೃತ್ತ ಸೇನಾ ನೌಕರ ಪ್ರಸಾದ್ ಅವರ ಮಗಳ ಜೊತೆ ಸೌಮ್ಯ ಶೆಟ್ಟಿ ಸ್ನೇಹ ಬೆಳೆಸಿದ್ದರು. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ. ಕಳೆದ ತಿಂಗಳು 23 ರಂದು ಮನೆಗೆ ನುಗ್ಗಿ ಪ್ರಸಾದ್ ಅವರ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಎಗರಿಸಿಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆಯಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ. ಮಾ.7 ರಿಂದ ಐದು ದಿನಗಳ ಕಾಲ ನಡೆಯುವ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ದತೆ. ಲಕ್ಷಾಂತರ ಜನ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಕಲ ಸಿದ್ದತೆಯಾಗಿದ್ದು, ಈಗಾಗಲೇ ಪಾದಯಾತ್ರೆ ಮೂಲಕ ಸಹಸ್ರಾರು ಭಕ್ತರು ಬರುತ್ತಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ,ರಾಮನಗರ,ಬೆಂಗಳೂರು ಗ್ರಾಮಾಂತರ ಭಾಗದಿಂದ ಹರಿದು ಬರಲಿದ್ದಾರೆ ಲಕ್ಷಾಂತರ ಭಕ್ತರು. ಬರುವಂತಹ ಭಕ್ತರಿಗೆ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗದಂತೆ ಪ್ರಾಧಿಕಾರದಿಂದ ಸಕಲ ವ್ಯವಸ್ಥೆ ಮಾಡಲಾಗಿದ್ದು, ಜಾತ್ರಾ ಮಹೋತ್ಸವ ಸಮಯದಲ್ಲಿ ದ್ವಿಚಕ್ರ ವಾಹಗಳಿಗೆ ನಿರ್ಬಂಧ ಹೇರಲಾಗಿದೆ. ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು, 400 ಕ್ಕೂ ಹೆಚ್ಚು ಪೋಲಿಸರು, 400 ಕ್ಕೂ ಹೆಚ್ಚು ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296