Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ತಮಿಳಿನ ಜನಪ್ರಿಯ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಕೆಲವು ಅಭಿಮಾನಿ ಪೇಜ್ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಅಜಿತ್ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದು ನಿಜ ಆದರೆ ಈ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಿಬಿಡುವುದು ಬೇಡ, ಆಸ್ಪತ್ರೆಯಿಂದಲೇ ಖಚಿತ ಮಾಹಿತಿ ಹೊರಬೀಳಲಿದೆ ಎಂದು ಅಜಿತ್ ರ ಆಪ್ತರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ತಮಿಳಿನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಜಿತ್, ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ತಂದಿದೆ. ಅಜಿತ್ 1990ರಿಂದಲೂ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಜಯ್, ರಜನೀಕಾಂತ್, ಸೂರ್ಯ ರೀತಿಯಲ್ಲಿಯೇ ಭಾರಿ ದೊಡ್ಡ ಅಭಿಮಾನಿ ಬಳಗವನ್ನು ಅಜಿತ್ ಹೊಂದಿದ್ದಾರೆ. ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ಅಜಿತ್ ಕುಮಾರ್ ನೀಡಿದ್ದಾರೆ. ನಮ್ಮತುಮಕೂರಿನ…
ಕೊರಟಗೆರೆ : ಕೊರಟಗೆರೆ ಪಟ್ಟಣದಲ್ಲಿ ಹುಚ್ಚು ನಾಯಿಯ ದಾಳಿಗೆ ಸಾರ್ವಜನಿಕರು ತತ್ತರಿಸಿದ ಘಟನೆ ನಡೆದಿದ್ದು, ಕೇವಲ ಅರ್ಧ ಗಂಟೆಯಲ್ಲಿ ಹುಚ್ಚುನಾಯಿ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ. ಎದುರು ಸಿಕ್ಕಸಿಕ್ಕವರ ಮೇಲೆ ಹುಚ್ಚುನಾಯಿ ದಾಳಿ ಮಾಡುತ್ತಿದ್ದು, ಹಲವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದೆ. ಹುಚ್ಚನಾಯಿ ಕಡಿತಕ್ಕೆ ಒಳಗಾದವರಿಗೆ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರಣಾಂತಿಕ ಗಾಯಗಳಾಗಿರುವವರನ್ನು ತುಮಕೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣದ ತುಂಬಾ ಓಡಾಡಿದ ಹುಚ್ಚುನಾಯಿ, ಪಟ್ಟಣದ ಜನರಲ್ಲಿ ಭಯಸೃಷ್ಟಿಸಿದೆ. ಪ್ರತಿ ಬೀದಿಗಳಲ್ಲೂ ನಾಯಿಯ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಹುಚ್ಚುನಾಯಿ ಕಚ್ಚಿದ ಪರಿಣಾಮ ಅಜ್ಜಿಯೊಬ್ಬರ ಹಣೆಗೆ ಗಂಭೀರವಾಗಿ ಗಾಯವಾಗಿದೆ. ಒಂದೆಡೆ ಸಾರ್ವಜನಿಕರು ನಾಯಿಯ ಕಡಿತದಿಂದ ಕಂಗಾಲಾಗಿದ್ದರೆ, ತುರ್ತು ಸಮಯದಲ್ಲಿ ಬರಬೇಕಿದ್ದ 108 ತುರ್ತು ಆಂಬುಲೆನ್ಸ್ ಸಿಬ್ಬಂದಿ ತೀವ್ರ ನಿರ್ಲಕ್ಷ್ಯ ತೋರಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಸುಮಾರು 15 ನಿಮಿಷಗಳ ಕಾಲ 108 ಸಿಬ್ಬಂದಿ ಸಾರ್ವಜನಿಕರ ಕರೆಯನ್ನು ಹೋಲ್ಡ್ ಇಲ್ಲಿ ಇರಿಸಿದ್ದಾರಲ್ಲದೇ, ಆ್ಯಂಬುಲೆನ್ಸ್ ನ ಅವಶ್ಯಕತೆ ಇದೆ ಎಂದು ಕರೆ…
ಶ್ರೀನಗರ: ಜಮ್ಮು ಕಾಶ್ಮೀರವನ್ನು ಕೇವಲ ಒಂದು ಕ್ಷೇತ್ರವನ್ನಾಗಿ ನೋಡಲು ಸಾಧ್ಯವಿಲ್ಲ ಅದು ಭಾರತದ ಮಸ್ತಕ, ದೃಡವಾಗಿ ನಿಂತಿರುವ ಮಸ್ತಕ ವಿಕಾಸ ಮತ್ತು ಸಮ್ಮಾನದ ಪ್ರತೀಕವಾಗಿರುತ್ತದೆ, ಹೀಗಾಗಿ ವಿಕಸಿತ ಜಮ್ಮು ಕಾಶ್ಮೀರ ವಿಕಸಿತ ಭಾರತದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಶ್ರೀನಗರದ ಬಕ್ಷಿ ಮೈದಾನದಲ್ಲಿ ನಡೆಯುತ್ತಿರುವ ‘ವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಒಂದು ಕಾಲವಿತ್ತು ಭಾರತದಲ್ಲಿ ಒಂದು ಕಾನೂನು ಜಾರಿಯಾದರೆ ಅದು ಜಮ್ಮು ಕಾಶ್ಮೀರಕ್ಕೆ ಸೇರುತ್ತಿರಲಿಲ್ಲ, ಬಡವರಿಗಾಗಿ ಯೋಜನೆ ರೂಪಿಸಿದರೆ ಅದು ಜಮ್ಮು ಕಾಶ್ಮೀರಕ್ಕೆ ಸಿಗುತ್ತಿರಲಿಲ್ಲ ಆದರೆ ಈಗ ಹೇಗೆ ಕಾಲ ಬದಲಾಗಿದೆ ನೋಡಿ, ಶ್ರೀನಗರದಿಂದಲೇ ಹಲವು ರಾಜ್ಯಗಳಿಗೆ ಯೋಜನೆಗಳ ಚಾಲನೆ ನೀಡಲಾಗಿದೆ ಎಂದು ಹೇಳುವ ಮೂಲಕ ಆರ್ಟಿಕಲ್ 370 ವಿಧಿ ರದ್ದಾದ ವಿಚಾರ ಪ್ರಸ್ತಾಪಿಸಿದರು. ವಿಶೇಷ ಮಾನ್ಯತೆ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಕಂಡಿದೆ. ಈ ವಿಧಿಯಿಂದ…
ಬೆಂಗಳೂರು: ಲೋಕಸಭಾ ಚುನಾವಣೆಗೆ 2 ಸುತ್ತಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡುವ ಕುರಿತು ಪ್ರತಿಕ್ರಿಯೆ ನೀಡಿದರು. ರಾಜಕಾರಣದಲ್ಲಿ ಎಲ್ಲವೂ ಸಾಧ್ಯತೆಯಿದೆ. ಆದರೆ ಈಗಲೇ ಹೆಸರನ್ನು ಬಹಿರಂಗಪಡಿಸಲ್ಲ. 2 ಸುತ್ತಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ವ್ಯಕ್ತಿ ಮೇಲೆ ನಡೆಯಲ್ಲ. ವ್ಯಕ್ತಿಗಿಂತ ಹೆಚ್ಚು ಪಕ್ಷ, ಯೋಜನೆ, ಗ್ಯಾರಂಟಿಯ ಮೇಲೆ ನಡೆಯುತ್ತದೆ. ಅವರದ್ದೇ ಆದಂತಹ ಲೆಕ್ಕಾಚಾರ ಅವರೂ ಇಟ್ಕೊಂಡಿದ್ದಾರೆ. ನಮ್ಮದೇ ಆದಂತಹ ಲೆಕ್ಕಾಚಾರ ನಾವು ಇಟ್ಕೊಂಡಿದ್ದೇವೆ ಎಂದು ಹೇಳಿದರು. ಲೋಕಸಭೆ ಚುನಾವಣೆಯ ಕುರಿತು 6 ಗಂಟೆಗೆ ರಾಜ್ಯದ ಶಾಸಕ ಸಚಿವರೊಂದಿಗೆ ಹೈಕಮಾಂಡ್ ಸಭೆ ಇದೆ. ಹಾಗಾಗಿ ಎಲ್ಲರೂ ಬಂದಿದ್ದೇವೆ. ಶೇ. 50ರಷ್ಟು ಮುಗಿಯುತ್ತದೆ. ನಮ್ಮ ಚರ್ಚೆ ಮುಗಿಯುತ್ತದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 …
ಸ್ನಾಯುವಿನ ಬಲವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!: ಸ್ನಾಯುವಿನ ಬಲವನ್ನು ಹೆಚ್ಚಿಸಲು, ನೀವು ಉತ್ತಮ ಆಹಾರವನ್ನು ಸೇವಿಸಬೇಕು. ವಿಶೇಷವಾಗಿ ಬಾಳೆಹಣ್ಣು, ಕೋಳಿ ಮಾಂಸ, ಮೀನುಗಳು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸ್ನಾಯುವಿನ ಬಲವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೆಟ್ ಅಧಿಕವಾಗಿರುತ್ತದೆ. ಇದು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಹೆಚ್ಚಾಗಲು ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ. ತೂಕ ಕಡಿಮೆಮಾಡಬೇಕು ಎನ್ನುವವರಿಗೆ ರಾಗಿ ಮುದ್ದೆ ಬೆಸ್ಟ್ ಫುಡ್ !: ರಾಗಿಯಲ್ಲಿರುವ ಫೈಬರ್ ತೂಕ ಇಳಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ಹೆಚ್ಚಿನ ಫೈಬರ್ ಅಂಶವು ತೂಕ ಇಳಿಕೆಗೆ ಸಹಾಯ ಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಾರ್ಬೋಹೈಡ್ರೆಟ್‌ಗಳಿಗೆ ಹೋಲಿಸಿದರೆ ಫೈಬರ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಪೂರ್ಣತೆಯ ಭಾವನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದು ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇತರ ಧಾನ್ಯಗಳಿಗೆ ಹೋಲಿಸಿದರೆ, ರಾಗಿ ಕಡಿಮೆ ಕೊಬ್ಬಿನಂಶ ಮತ್ತು ಅಮೈನೋ ಆಮ್ಲಗಳ ಉತ್ತಮ ಮೂಲವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ. ಮೃತರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದವರಾಗಿದ್ದು, ಕುಂದಗೋಳ ದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ನವೀನ್ ಕುಂಬಾರ್ (23) ಸ್ಥಳದಲ್ಲೇ ಮೃತಪಟ್ಟರೆ, ನಾಗಪ್ಪ ಕಾಳಿ (23), ಗಂಗಪ್ಪ ಅಕ್ಕಿ (22) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟವರಾಗಿದ್ದಾರೆ. ಮೂವರು ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಪರಾರಿಯಾಗಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಲಕ್ನೋ: ಬಿಜೆಪಿ ಮುಖಂಡ ಪ್ರಮೋದ್ ಯಾದವ್ ಅವರನ್ನು ಉತ್ತರ ಪ್ರದೇಶದ ಜೌನ್ ಪುರ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ. ಪತ್ರಿಕೆ ಕೊಡುವ ನೆಪದಲ್ಲಿ ಪ್ರಮೋದ್ ಯಾದವ್ (55) ಅವರನ್ನು ತಡೆದ ದುಷ್ಕರ್ಮಿಗಳು 3 ಬಾರಿ ಗುಂಡು ಹಾರಿಸಿದ್ದು, ಬಳಿಕ ದಾಳಿಕೋರರು ಸ್ಥಳದಿಂದ ಸ್ವಲ್ಪ ದೂರದಲ್ಲಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಹಲವಾರು ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರಾಥಮಿಕ ತನಿಖೆಯಿಂದ ಕೆಲವು ಪ್ರಮುಖ ಸುಳಿವುಗಳು ದೊರೆತಿವೆ ಎಂದು ಜೌನ್ ಪುರ ಪೊಲೀಸ್ ವರಿಷ್ಠಾಧಿಕಾರಿ ಅಜೈಪಾಲ್ ಶರ್ಮಾ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದು, ಯುವಕನ ಮೇಲೆ ವಿನಾಕಾರಣ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗೈಬುಖಾನ್ ಹಕೀಮ್ (29) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಹಲ್ಲೆಗೊಳಗಾದ ಗೈಬುಖಾನ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಕುಡಿದ ಮತ್ತಿನಲ್ಲಿ ಜಗಳ ತೆಗೆದ ಕೆಲ ಪುಡಿ ರೌಡಿಗಳು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪುಂಡರ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಅನುಮಾನಾಸ್ಪದವಾಗಿ ಯುವಕನೊಬ್ಬ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಯೋಗೇಶ್(21) ಮೃತ ದುರ್ದೈವಿಯಾಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಶಿವಮೊಗ್ಗ: ಶಿವಮೊಗ್ಗದ ಸಾಗರದ ಸೊರಬ ಗೇಟ್ ಸಮೀಪ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಭೂಮಿಕಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಭೂಮಿಕಾ ಸಿರಿವಂತೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಸ್ಥಳಕ್ಕೆ ಸಾಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296