Subscribe to Updates
Get the latest creative news from FooBar about art, design and business.
- ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
- ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?
- ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ
- ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು
- ತುಮಕೂರು ಜಿಲ್ಲೆಯ ಅಸ್ತಿತ್ವ ಕಳೆಯಬೇಡಿ: ಬೆಂಗಳೂರು ಉತ್ತರ ಜಿಲ್ಲೆ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ
- ತುಮಕೂರು: ಅಕ್ರಮ ಶೆಡ್ ನಿರ್ಮಿಸಲು ಹೊರಟಿರುವವರನ್ನು ತೆರವುಗೊಳಿಸಲು ಮನವಿ
- ಕುಣಿಗಲ್: ಗ್ರಾಪಂ ಸ್ವತ್ತಿನಲ್ಲಿ ಅಕ್ರಮ ಮಳಿಗೆ: ಒತ್ತುವರಿ ಜಾಗದಲ್ಲಿ ಗ್ರಂಥಾಲಯಕ್ಕೆ ದಲಿತ ಸಂಘಟನೆ ಆಗ್ರಹ
- ತುಮಕೂರು: ಕಂಪ್ಯೂಟರ್ ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನ
Author: admin
ದೆಹಲಿ: ಬಿಜೆಪಿಯು ಆಪ್ ಶಾಸಕರಿಗೆ 25 ಕೋಟಿ ರೂ. ಆಮಿಷ ಒಡ್ಡಿ ದೆಹಲಿಯಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳು ಈಗ ಬಿಜೆಪಿ ಬಳಿ ಇವೆ. 2024ರ ವೇಳೆಗೆ ಇವೆಲ್ಲವನ್ನೂ ತನ್ನ ಖಾತೆಗೆ ಸೇರಿಸುವ ಗುರಿಯನ್ನು ಆಮ್ ಆದ್ಮಿ ಹೊಂದಿದೆ. ಇದಕ್ಕಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದನ್ನು ಮನಗಂಡ ಬಿಜೆಪಿ ವಿಧ್ವಂಸಕ ನಡೆಗಳನ್ನು ಆರಂಭಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಅರವಿಂದ್ ಕೇಜ್ರಿವಾಲ್ ಅವರ ವಾದಗಳು ಸಂಪೂರ್ಣ ಸುಳ್ಳು. ಇಡಿ ಸಮನ್ಸ್ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರು ನೀಡಿರುವ ಪ್ರತಿಕ್ರಿಯೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ ಎಂದಿದೆ. ಕೇಜ್ರಿವಾಲ್ ಸುಳ್ಳು ಆರೋಪ ಮಾಡುವ ಮೂಲಕ ಭ್ರಷ್ಟಾಚಾರದ ತನಿಖೆಯಿಂದ ತಮ್ಮ ಮುಖವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅರವಿಂದ್ ಹೇಳಿಕೆಗೆ ಬಿಜೆಪಿ ವಕ್ತಾರ ಕಪಿಲ್ ಮಿಶ್ರಾ ತಿರುಗೇಟು ನೀಡಿದ್ದಾರೆ.
ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಾಗಳು ಭಗವಾನ್ ರಾಮನ ಕಥೆಯನ್ನು ಪಠ್ಯಕ್ರಮದ ಭಾಗವಾಗಿಸಲು ಮುಂದಾಗಿವೆ.ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾಗುವ ಅಧಿವೇಶನದಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇಂಡಿಯಾ ಟುಡೇ, ಡೆಕ್ಕನ್ ಹೆರಾಲ್ಡ್ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಉತ್ತರಾಖಂಡ ಶಿಕ್ಷಣ ಮಂಡಳಿಯ ಮಾರ್ಗಸೂಚಿಗಳ ಆಧಾರದ ಮೇಲೆ ಪರಿಷ್ಕೃತ ಪಠ್ಯಕ್ರಮವನ್ನು ಮಾರ್ಚ್‌ನಿಂದ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಾಗಳಲ್ಲಿ ಪರಿಚಯಿಸಲಾಗುವುದು ಎಂದು ವಕ್ಫ್ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ಜೀವನದೊಂದಿಗೆ ಶ್ರೀರಾಮನ ಜೀವನ ಕಥೆಯನ್ನು ಮದರಸಾದ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು ಎಂದು ಹೇಳಿದರು. ಭಗವಾನ್ ರಾಮನು ಪ್ರತಿನಿಧಿಸುವ ಮೌಲ್ಯಗಳನ್ನು ಅವರ ಧರ್ಮ ಅಥವಾ ಪಂಥವನ್ನು ಲೆಕ್ಕಿಸದೆ ಎಲ್ಲರೂ ಅನುಸರಿಸಬೇಕು. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರಾರಂಭವಾಗಿರುವ ಆಧುನಿಕ ಮದರಸಾಗಳಲ್ಲಿ ಎನ್ ಸಿಇಆರ್ ಟಿ ಪಠ್ಯಕ್ರಮವನ್ನು ಕಲಿಸಲಾಗುತ್ತದೆ.…
ರೇವಾ: ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ವಿತರಿಸಲಾಗಿದ್ದ ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಸುಮಾರು 58 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಊಟ ಸೇವಿಸಿದ ಬಳಿಕ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ 58 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ಪದ್ರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಯಕ್ರಮದ ನಂತರ ಮಕ್ಕಳಿಗೆ ಮಧ್ಯಾಹ್ನದ ಊಟವನ್ನೂ ತಯಾರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪೂರಿ, ಕೋಸಂಬರಿ, ಲಡ್ಡೂ ಬಡಿಸಲಾಯಿತು. ಅನೇಕ ವಿದ್ಯಾರ್ಥಿಗಳಿಗೆ ತಿಂದ ತಕ್ಷಣ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ವೈ.ಎನ್.ಹೊಸಕೋಟೆ : ಕನ್ನಡ ಮನಸ್ಸುಗಳ ಸಹಕಾರಿ ಗುಣವೇ ಕನ್ನಡ ಬೆಳವಣಿಗೆಗೆ ಶಕ್ತಿಯಾಗಿದೆ ಎಂದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಹೊ.ಮ.ನಾಗರಾಜು ತಿಳಿಸಿದರು. ಗ್ರಾಮದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಇತ್ತೀಚೆಗೆ ಹೋಬಳಿ ಘಟಕದ ವತಿಯಿಂದ ರಂಗಸಮುದ್ರದಲ್ಲಿ ಹಮ್ಮಿಕೊಂಡಿದ್ದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಕಂಡಿದೆ. ಇದಕ್ಕೆ ರಂಗಸಮುದ್ರ ಮತ್ತು ಹೋಬಳಿಯ ಕನ್ನಡ ಮನಸುಗಳ ಸಹಕಾರ ಮತ್ತು ಸ್ಪಂದನೆಯೇ ಮೂಲ ಕಾರಣವಾಗಿದ್ದು, ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನಾಪೂರ್ವಕ ಧನ್ಯವಾದಗಳು. ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಪದಾಧಿಕಾರಿಗಳ ಮತ್ತು ಹಿರಿಯ ಕನ್ನಡ ಚೇತನಗಳ ಮಾರ್ಗದರ್ಶನ ಸಲಹೆ ಸೂಚನೆಗಳಂತೆ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ರೂಪಿಸಿದ ಪರಿಣಾಮ ಯಶಸ್ವಿ ಸಮ್ಮೇಳನ ನೆರವೇರಿಸಲು ಸಾಧ್ಯವಾಗಿದೆ. ಗಡಿಭಾಗದಲ್ಲಿ ಕನ್ನಡ ನಿರಂತರವಾಗಿ ಪಸರಿಸಲು ಪ್ರತಿಯೊಬ್ಬರ ಕೊಡುಗೆ ಅಪಾರವಾಗಿದೆ ಎಂದರು. ತಾಲ್ಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ಮಾತನಾಡಿ, ಕನ್ನಡ ಕಾರ್ಯಕ್ರಮ ರೂಪಿಸುವಲ್ಲಿ ಹಲವು ಎಡರು ತೊಡರುಗಳು ಬರುವುದು ಸಹಜ. ಅವುಗಳೆಲ್ಲವನ್ನೂ ಮೀರಿ ಹೋಬಳಿ ಪರಿಮಿತಿಯಲ್ಲಿ…
ನಿನ್ನೆಯಷ್ಟೆ ಕೆಪಿಸಿಸಿ 32 ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶಿಸಿದ್ದು ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತು ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್. ಶ್ರೀನಿವಾಸ್, ಸಿಎಂ, ಡಿಸಿಎಂ ನಂಬಿಕೆ ಇಟ್ಟು ನನ್ನ ನೇಮಕ ಮಾಡಿದ್ದಾರೆ. ನನಗೆ ಯಾವುದೇ ಅಸಮಾಧಾನವಿಲ್ಲ ನಾನು ಯಾವುದೇ ಸ್ಥಾನಮಾನ ಕೇಳಿರಲಿಲ್ಲ. ಇದರಲ್ಲಿ ಅಸಮಾಧಾನ ಪ್ರಶ್ನೆಯೇ ಉದ್ಭವಿಸಲ್ಲ. ಯಾವುದು ಕೊಟ್ಟಿದ್ದಾರೆ ಎಂದು ನಾನು ಚಿಂತಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಘಟಕ ಬಂದ್ ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಸಕ್ಕರೆ ಕಾರ್ಖಾನೆ ಮತ್ತು ಏಥೆನಾಲ್ ಘಟಕಕ್ಕೆ ಬೀಗ ಹಾಕಲು ಆದೇಶಿಸಲಾಗಿದೆ. ಕಾರ್ಖಾನೆಯ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿಯ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಅಲ್ಲದೇ ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನಲೆ ಬೀಗ ಜಡಿಯುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಫ್ಯಾಕ್ಟರಿಗೆ ನೀಡಿರುವ ವಿದ್ಯುತ್, ನೀರಿನ ಸಂರ್ಪಕ ಕಡಿತಗೊಳಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಎಚ್.ಡಿ. ಕೋಟೆ: ಭಾರತಕ್ಕೆ ಅಂಬೇಡ್ಕರ್ ಸಂವಿಧಾನವನ್ನು ನೀಡದಿದ್ದಲ್ಲಿ ಇಂದು ನಾನು ಶಾಸಕನಾಗಲು ಆಗುತ್ತಿರಲಿಲ್ಲ, ಅದೇ ರೀತ ಟೀ ಮಾರುವ ವ್ಯಕ್ತಿಯೋರ್ವ ದೇಶದ ಪ್ರಧಾನಿಯಾಗಲೂ ಸಹ ಆಗುತ್ತಿರಲಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 75 ನೇ ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗಾಗಲಿ, ಒಂದು ಧರ್ಮಕ್ಕಾಗಲಿ ಸಂವಿಧಾನವನ್ನು ನೀಡಿಲ್ಲ, ಎಲ್ಲರಿಗೂ ಸಹ ಸಮಾನವಾದ ಸಂವಿಧಾನವನ್ನು ನೀಡಿದ್ದಾರೆ ಎಂದರು. ತಾಲ್ಲೂಕಿನ ಕೆಲ ಅಧಿಕಾರಿ ವರ್ಗದವರು ಸಮಗ್ರವಾಗಿ ಗಣರಾಜ್ಯೋತ್ಸವ ಆಚರಿಸಲು ಸಹಕರಿಸಿಲ್ಲ, ಅಂತಹವರಿಗೆ ತಹಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಲಾಗುವುದು, ಮುಂದಿನ ಭಾರಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ಭಾರತವನ್ನು ಗಣರಾಜ್ಯವಾಗಲು ಅನೇಕ ದಾರ್ಶನಿಕರ ತ್ಯಾಗ ಬಲಿದಾನವು ಕಾರಣವಾಗಿದೆ. ಇದು ದೇಶದ ಗಣರಾಜ್ಯವಲ್ಲದೇ ದೇಶದ ಪ್ರಜೆಗಳು ಎಚ್ಚೆತ್ತುಕೊಳ್ಳುವ ದಿನ ಇದಾಗಿದೆ ಎಂದರು. ನಾವು ಈ ದೇಶದ…
ತುಮಕೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿರುವ ಘಟನೆ ತಿಪಟೂರು ನಗರದಲ್ಲಿ ನಡೆದಿದೆ. ಬೀದಿ ರೌಡಿಗಳಂತೆ ಹೊಡೆದಾಡಿದ ವಿದ್ಯಾರ್ಥಿಗಳು, ಇದನ್ನು ನೋಡಿದ ಸಾರ್ವಜನಿಕರು ಭೀಕರ ಹೊಡೆದಾಟದ ದೃಶ್ಯದಿಂದ ಬೆಚ್ಚಿಬಿದ್ದಿದ್ದಾರೆ. ತಿಪಟೂರು ನಗರದ ಮುಖ್ಯ ರಸ್ತೆಯಲ್ಲೇ ಪುಡಿ ರೌಡಿಗಳಂತೆ ಹೊಡೆದಾದಿಕೊಂಡಿದ್ದರೆ. ಓದೋಕೆ ಅಂತ ಕಾಲೇಜಿಗೆ ಬಂದು ಗ್ಯಾಂಗ್ ಕಟ್ಟಿಕೊಂಡು ಬಡಿದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ತಿಪಟೂರು ನಗರದ ಐಬಿ ಸರ್ಕಲ್ ನಿಂದ ಸರ್ಕಾರಿ ಜೂನಿಯರ್ ಕಾಲೇಜಿನ ವರೆಗೆ ಹೊಡೆದಾಡಿಕೊಂಡ ಸಾಗಿದ್ದಾರೆ. ವಿದ್ಯಾರ್ಥಿಗಳ ಬೀದಿ ಕಾಳಗಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದು ವಿದ್ಯಾರ್ಥಿಗಳಿಗೆ ಕೆಲ ಹೊರಗಿನ ಪುಂಡರ ಸಾತ್ ನೀಡಿ ರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಹೊರಗಿನಿಂದ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿರುವ ಸಾರ್ವಜನಿಕರು ಇಂತಹ ವಿಷ ವರ್ತುಲದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹೊಡೆದಾಡಿಕೊಂಡಿದ್ದ ಒಂದಷ್ಟು ವಿದ್ಯಾರ್ಥಿಗಳನ್ನ ಕರೆಸಿ ಬುದ್ದಿ ಹೇಳಿ ವಾಪಸ್ ಕಳಿಸಿರುವ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.…
2003ರಲ್ಲಿ ನೀಲಿ ಚಿತ್ರದ ಮೂಲಕ ಈ ಉದ್ಯಮಕ್ಕೆ ಕಾಲಿಟ್ಟ ಜಸ್ಸಿ ಜೇನ್ಸ್ ಹಾಗೂ ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಮಿತಿ ಮೀರಿದ ಮಾದಕವಸ್ತು ಸೇವನೆಯಿಂದಾಗಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ನೀಲಿ ಚಿತ್ರಗಳ ತಾರೆ ಹಾಗೂ ಬಾಯ್ ಫ್ರೆಂಡ್ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದು, ಜೇನ್ ಮತ್ತು ಅವರ ಬಾಯ್ ಫ್ರೆಂಡ್ ಶವಗಳನ್ನು ಒಟ್ಟಿಗೆ ಸಿಕ್ಕಿರುವುದರಿಂದ ಈ ಕುರಿತಂತೆ ತನಿಖೆ ಕೂಡ ನಡೆಯಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ಇಲಾಖೆಯು ತನಿಖೆಯನ್ನು ಕೈಗೆತ್ತಿಕೊಂಡಿದೆ. ಜಸ್ಸಿ ಜೇನ್ಸ್ ಅವರು ಹವಾಯಿಯನ್ ವೆಡ್ಡಿಂಗ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಇವರ ಜನಪ್ರಿಯ ಚಿತ್ರಗಳ ಲಿಸ್ಟ್ ನಲ್ಲಿವೆ. ನೀಲಿ ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ಟಿವಿ ಕಾರ್ಯಕ್ರಮಗಳಲ್ಲಿ, ಸೌಂದರ್ಯ ಸ್ಪರ್ಧೆಯಲ್ಲೂ ಇವರು ಭಾಗಿಯಾಗಿದ್ದು, ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಅದರಲ್ಲೂ ಇವರು ನಡೆಸಿಕೊಡುತ್ತಿದ್ದ ಮಿಡ್ ನೈಟ್ ಕಾರ್ಯಕ್ರಮ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಲಬುರಗಿ: ನಗರದ ಹುಮನಾಬಾದ್ ರಸ್ತೆಯಲ್ಲಿ ಆಟೋ ಟಚ್ ಆಗಿ ಬೈಕ್ ನಿಂದ ಬಿದ್ದಿದ್ದ ಸವಾರನ ಮೇಲೆ KSRTC ಬಸ್ ಹರಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೋಮಶೇಖರ್(34) ಮೃತದುರ್ದೈವಿಯಾಗಿದ್ದಾನೆ. ಕೆಲಸ ಮುಗಿಸಿ ಹೊರಟಿದ್ದಾಗ ದುರಂತ ಸಂಭವಿಸಿದೆ. ಬೀದರ್ ಕಡೆಯಿಂದ ಕಲಬುರಗಿ ಕಡೆಗೆ KSRTC ಬಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.