Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ತ್ರಿಪುರಾದಲ್ಲಿ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯಾಧೀಶರು ಚಿತ್ರಹಿಂಸೆ ನೀಡಲು ಯತ್ನಿಸಿದ್ದಾರೆ ಎಂದು ದೂರು. ಕಿರುಕುಳದ ದೂರಿನಲ್ಲಿ ಹೇಳಿಕೆ ದಾಖಲಿಸಲು ಬಂದಿದ್ದ ಮಹಿಳೆ ಯನ್ನು ಮ್ಯಾಜಿಸ್ಟ್ರೇಟ್ ಚೇಂಬರ್ ನಲ್ಲಿ ಕೆಟ್ಟದಾಗಿ ಸ್ಪರ್ಶಿಸಿ ಚಿತ್ರಹಿಂಸೆ ನೀಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅತಿಜೀತಾ ಅವರ ದೂರಿನ ಮೇರೆಗೆ ತ್ರಿಸದಸ್ಯ ಸಮಿತಿಯು ವಿಚಾರಣೆ ಆರಂಭಿಸಿದೆ. ಫೆಬ್ರವರಿ 16 ರಂದು ಈ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮಹಿಳೆ ಕಮಲಾಪುರದ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೊಠಡಿಗೆ ಬಂದಿದ್ದಳು. ಹೇಳಿಕೆ ದಾಖಲಿಸಿಕೊಳ್ಳುವಾಗ ನ್ಯಾಯಾಧೀಶರು ಮಹಿಳೆಯ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸಿ ಕಿರುಕುಳ ನೀಡಲು ಯತ್ನಿಸಿದ್ದಾರೆ. ಮಹಿಳೆ ಹೊರಗೆ ಬಂದು ಘಟನೆಯನ್ನು ತನ್ನ ಪತಿ ಮತ್ತು ವಕೀಲರಿಗೆ ತಿಳಿಸಿದರು. ವಕೀಲರ ಸಲಹೆ ಮೇರೆಗೆ ಮಹಿಳೆ ಕಮಲಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ಮಹಿಳೆಯ ಪತಿ ಕಮಲಾಪುರ ಬಾರ್ ಅಸೋಸಿಯೇಷನ್ ಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯ ಸಮಿತಿಯು ಅತಿಜೀತಾ…
ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿ ಎಂ ಹೊಸೂರು ಗ್ರಾಮದ ಬಳಿ ನಡೆದಿತ್ತು. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಕಾರು ಡಿವೈಡರ್ ಹಾರಿ ಮೈಸೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟಿದ್ದಾನೆ. ಇನ್ನು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೆಡಿಎಸ್ ಗೆ ನಿಗದಿತ ಪ್ರಮಾಣದ ಮತಗಳು ಇಲ್ಲ. ಗೆಲ್ಲುವ ಸಾಮರ್ಥ್ಯ ಇಲ್ಲದಿದ್ದರೂ 5ನೇ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದ್ದಾರೆ. ಕುದುರೆ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಗೆ 135 ಮತ್ತು ಮೂವರು ಪಕ್ಷೇತರರು ಸೇರಿ 138 ಶಾಸಕರ ಬೆಂಬಲವಿದೆ. ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಜೆಡಿಎಸ್ ಬಿಜೆಪಿ ರಾಜಕೀಯ ತಂತ್ರಗಾರಿಕೆ ಫಲಿಸುವುದಿಲ್ಲ. ಕುದುರೆ ವ್ಯಾಪಾರದ ಮೂಲಕ ಶಾಸಕರನ್ನ ಸೆಳೆಯುವುದನ್ನ ತಪ್ಪಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಬಿಗಿ ಪಡಿಸಬೇಕು. ಒಮ್ಮೆ ಒಬ್ಬರು ಪಕ್ಷಾಂತರ ಮಾಡಿದ ಮೇಲೆ 6 ವರ್ಷ ಚುನಾವಣೆಗೆ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ತನ್ವಿರ್ ಸೇಠ್ ತಿಳಿಸಿದರು. ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ತನ್ವಿರ್ ಸೇಠ್, ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ಅಧಿಕಾರದ ದಾಹ ಇರುವವರು ಪಕ್ಷ ತೊರೆಯುತ್ತಾರೆ. ಇದರಿಂದ ಪಕ್ಷಕ್ಕೆ ನಷ್ಟ ಏನಿಲ್ಲ. ಬದ್ಧತೆ, ತತ್ವ ಸಿದ್ಧಾಂತಗಳ ಮೇಲೆ ಕಾಂಗ್ರೆಸ್ ನಂಬಿಕೆ…
ಇತ್ತೀಚೆಗೆ ಮೊಬೈಲ್, ಇಂಟರ್ ನೆಟ್,ಸೋಶಿಯಲ್ ಮೀಡಿಯಾ, ರೀಲ್ಸ್ ಬಂದ ಮೇಲಂತು ಜನ ಫುಲ್ ಬ್ಯುಸಿಯಾಗಿದ್ದಾರೆ. ಒಂದು ವರ್ಗ ಇವುಗಳನ್ನು ನೋಡಿ ಮನರಂಜನೆ ತಕೊಂಡ್ರೆ , ಮತ್ತೊಂದು ವರ್ಗ ಮನರಂಜನೆ ಕೊಡುವಲ್ಲಿ ಬ್ಯುಸಿಯಾಗ್ಬಿಟ್ಟಿದೆ. ದಿನ ಬೆಳಗಾದ್ರೆ ಸಾಕು. ವೈರಲ್ ನ್ಯೂಸ್ ಗಳದ್ದೇ ಹವಾ… ಭಿನ್ನ ಭಿನ್ನ ರೀತಿಯ ವೈರಲ್ ವಿಡಿಯೋಗಳು ನಿಮ್ಮನ್ನ ಸ್ವಾಗತ ಮಾಡುತ್ತವೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಮಾತ್ರವಲ್ಲ ನೆಟ್ಟಿಗರಿಂದ ಬಾರಿ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಅದೇನೆಂದರೆ ಮಹಿಳೆಯೊಬ್ಬಳು ಧರಿಸಿದ ಪಿಸ್ತಾ, ಬಾದಾಮ್, ಗೇರು ಬೀಜ, ಹೀಗೆ ಡ್ರೈ ಫ್ರೂಟ್ ಗಳನ್ನು ಬಳಸಿಕೊಂಡು ಮಾಡಲಾದ ಆಭರಣ.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದ್ರೆ ಚಿನ್ನವೇ ಬೇಕಾಗಿಲ್ಲ ಅನ್ನೋದಕ್ಕೆ ಇದೊಂದು ವಿಡಿಯೋನೇ ಸಾಕ್ಷಿ.. ಡ್ರೈ ಫ್ರೂಟ್ಸ್ ಗಳಿಂದಲೂ ಇಲ್ಲೊಬ್ಬರು ಮಹಿಳೆ ತನ್ನ ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣಗಳನ್ನು ಬಳಸುವ ಬದಲು ಪಿಸ್ತಾ, ಬಾದಾಮ್, ಗೇರುಬೀಜಗಳಿಂದಲೇ ತಯಾರಿಸಲಾದ ಆಭರಣಗಳನ್ನು ಧರಿಸಿಕೊಂಡಿದ್ದಾರೆ. ಡ್ರೈ ಫ್ರೂಟ್…
ಇಂಡಿಯಾ ಟುಡೆ ಸುದ್ದಿ ವಾಹಿನಿ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, ದೇಶದ ಅತಿ ಜನಪ್ರಿಯ ಹಾಗೂ ಸ್ವೀಕಾರಾರ್ಹತೆ ಆಧಾರದಲ್ಲಿ ಕಳೆದ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಸತತವಾಗಿ ಅಧಿಕಾರದಲ್ಲಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೆಸರು ಮೊದಲ ಸ್ಥಾನದಲ್ಲಿದೆ. ಅವರ ನಂತರದ ಸ್ಥಾನವನ್ನು ಯೋಗಿ ಆದಿತ್ಯನಾಥ್ ಪಡೆದಿದ್ದಾರೆ.ಈ ಸಮೀಕ್ಷೆಯಲ್ಲಿ ದೊರಕಿದ ಸಂಪೂರ್ಣ ಅಂಕಿ ಅಂಶವನ್ನು ವಾಹಿನಿ ಹಂಚಿಕೊಂಡಿಲ್ಲ. ಹೀಗಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಮುಖ್ಯಮಂತ್ರಿಗಳ ಜನಪ್ರಿಯತೆಯ ಅಂದಾಜಿನ ವಿವರ ಲಭ್ಯವಾಗಿಲ್ಲ.. 2000 ಮಾರ್ಚ್‌ನಿಂದಲೂ ಒಡಿಶಾ ಸಿಎಂ ಆಗಿ ಅಧಿಕಾರದಲ್ಲಿರುವ 77 ವರ್ಷದ ನವೀನ್ ಪಟ್ನಾಯಕ್ ಅವರ ಜನಪ್ರಿಯತೆ ಶೇ 52.7ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ. ಬಿಜು ಜನತಾ ದಳ ಪಕ್ಷದ ಮುಖ್ಯಸ್ಥರಾಗಿರುವ ನವೀನ್ ಪಟ್ನಾಯಕ್ ಅವರು ದೇಶದಲ್ಲಿನ ಅತ್ಯಂತ ಸುದೀರ್ಘ ಸಮಯದ ಸಿಎಂಗಳಲ್ಲಿ ಒಬ್ಬರು ಎಂದೆನಿಸಿಕೊಂಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ದೇಶದ ಅತಿ ಜನಪ್ರಿಯ ಮುಖ್ಯಮಂತ್ರಿ ಯಾರು? ಎಂದು ಹೇಳಿದಾಗ ವಿಭಿನ್ನ ಅಭಿಪ್ರಾಯಗಳು ಕೇಳಿ…
ಕಮಲ್ ಹಾಸನ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ವರದಿಯಾಗಿದೆ. ಡಿಎಂಕೆ ಮೈತ್ರಿಕೂಟದಲ್ಲಿ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ. ಕಮಲ್ ಹಾಸನ್ ಇಂದು ಅಮೆರಿಕದಿಂದ ವಾಪಸಾಗಲಿದ್ದಾರೆ. ಇಂದು ಬಜೆಟ್ ಘೋಷಣೆಯಾದ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕಮಲ್ ಹಾಸನ್ ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಮಕ್ಕಳ್ ನೀತಿ ಮೈಯಂಗೆ ಡಿಎಂಕೆ ಒಂದು ಸ್ಥಾನ ನೀಡಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದಲ್ಲಿ ಕಮಲ್ ಹಾಸನ್ ಅವರು ಎಂಎನ್ ಎಂನ ಟಾರ್ಚ್‌ಲೈಟ್ ಚಿಹ್ನೆಯ ಮೇಲೆ ಚುನಾವಣೆಗೆ ಹೋಗುತ್ತಾರೆ. ಡಿಎಂಕೆ ಈಗಾಗಲೇ ತಮಿಳುನಾಡಿನ ಪ್ರಮುಖ ಸಣ್ಣ ಪಕ್ಷಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಡಿಎಂಕೆಗೆ ಆಪ್ತ ಮೂಲಗಳು ತಿಳಿಸಿವೆ. ಮಕ್ಕಳ್ ನೀತಿ ಮೈಯಂ ಪ್ರತಿನಿಧಿಗಳು ಡಿಎಂಕೆಯೊಂದಿಗೆ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 2022 ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಭಾಗವಹಿಸಿದ್ದು ದೊಡ್ಡ ಸುದ್ದಿಯಾಗಿತ್ತು. ತಮಿಳುನಾಡು ಪಿಸಿಸಿ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಾತನಾಡಿ, ತಮಿಳುನಾಡಿನಲ್ಲಿ ಮಕ್ಕಳ್ ನೀತಿ ಮೈಯಂಗೆ…
ತುಮಕೂರು: ಪ್ರೀತಿ, ವಾತ್ಸಲ್ಯ, ಕರುಣೆಯಂತಹ ಮಾನವೀಯ ಮೌಲ್ಯಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದರೆ ಸಾಕು ಪ್ರಾಣಿಗಳನ್ನೂ ಸಾಕುವವರಲ್ಲಿ ಇಂತಹ ಗುಣಗಳನ್ನು ಹೆಚ್ಚುತ್ತಿವೆ . ಇದಕ್ಕೆ ಸಾಕುಪ್ರಾಣಿಗಳು ತನ್ನ ಒಡೆಯನ ಮೇಲೆ ತೋರುವ ನಿಷ್ಕಲ್ಮಷ ಹಾಗೂ ಅಪರಿಮಿತ ಪ್ರೀತಿಯೇ ಕಾರಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಇನ್ನರ್ ವೀಲ್ ಕ್ಲಬ್ ನ ಸಂಯುಕ್ತಾಶ್ರಾಯದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 2023-24 ನೇ ಸಾಲಿನ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಅಭಿವೃದ್ದಿಯ ಹೆಸರಿನಲ್ಲಿ ಮಾನವ ಸಂಬಂಧಗಳು ನಶಿಸುತ್ತಿವೆ. ಸಾಕು ಪ್ರಾಣಿಗಳು ಮನುಷ್ಯರೊಟ್ಟಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿಕೊಂಡಿವೆ. ಶ್ವಾನ, ಬೆಕ್ಕು, ಅನೇಕ ಸಾಕುಪ್ರಾಣಿಗಳು ಮನೆಯ ಒಬ್ಬ ಸದಸ್ಯರಂತೆ ಬದುಕುತ್ತಿವೆ ಎಂದರು. ಸಾಕು ಪ್ರಾಣಿಗಳನ್ನೂ ನೋಡಿಕೊಳ್ಳುವುದು ಕೂಡ ಒಂದು ಒಳ್ಳೆಯ ಹವ್ಯಾಸ, ಅವುಗಳೊಂದಿಗೆ…
ಕುಡಿಯುವ ನೀರಿಗಾಗಿ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೋರಾಳದಲ್ಲಿ ಹಾಹಾಕಾರ ಸೃಷ್ಟಿಯಾಗಿದ್ದು, ಇಲ್ಲಿನ ಜನತೆ ದಿನನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ನೀರು ಪೂರೈಸುವ ಪೈಪ್ ಒಡೆದು ಹೋಗಿದೆ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಜನರು ವಾಸಿರುವ ಗ್ರಾಮಗಳು ಸೇರಿದಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಪ್ರದೇಶದ ಜನರು ಮೂರು ದಿನಗಳಿಂದ ನೀರಿಲ್ಲದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತ್ ಸದಸ್ಯ ಮಾದೇವ ಮಚ್ಕೂರಿ, ಜನರ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓಗೆ ನಾನು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇನೆ. ಆದ್ರೆ ಅವರು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಗ್ರಾಮಸ್ಥರ ಕಷ್ಟ ನೋಡಲಾಗದೇ ತಾನೇ ಒಂದು ಟ್ಯಾಂಕರ್ ನೀರು ತಂದು ಜನರಿಗೆ ಪೂರೈಕೆ ಮಾಡಿರುವುದಾಗಿ ತಿಳಿಸಿದರು. ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಉಮಾಕಾಂತ ಸೋನೆ ಮಾತನಾಡಿ, ನಮ್ಮ ಊರಲ್ಲಿ ಮೂರು ಸಾವಿರಕ್ಕೂ ಹೆಚ್ಚು…
ಬಿಲ್ ಕಟ್ಟಿಲ್ಲವೆಂದು ಕುಡಿಯುವ ನೀರಿನ ಪಂಪ್ ಶೆಡ್ ಗೆ ಬೀಗ ಹಾಕಿದ ಅಜ್ಜಾವರ ಗ್ರಾಮ ಪಂಚಾಯತ್ ನಡೆಯನ್ನು, ಬೊಯಂಬೊ ದಲಿತ ಕಾಲನಿ ಜನ ಕಟು ಪದಗಳಿಂದ ಖಂಡಿಸಿದ್ದಾರೆ. ಇದೀಗ ಪಂಚಾಯತ್ ವಾಹನ ಸ್ಥಳಕ್ಕೆ ಆಗಮಿಸಿದಾಗ ವಾಹನವನ್ನು ತಡೆದಿದ್ದಾರೆ. ನಾವು ಬಿಲ್ ಕಟ್ಟಿಲ್ಲವೆಂದ ಮಾತ್ರಕ್ಕೆ ನೀರು ನಿಲ್ಲಿಸುವುದೊಂದೇ ಪರಿಹಾರವೇ..?, ಕೋಟಿ..ಕೋಟಿ ಹಣ ನುಂಗಿದವರಿಗೆ ನೀವು ಮಾಫಿ ಮಾಡುತ್ತೀರಿ, ನಮ್ಮಂತ ಬಡವರು ನೀರಿಗೆ ಬಿಲ್ ಕಟ್ಟಿಲ್ಲವೆಂದು ಪಂಪ್ ಶೆಡ್ ಗೆ ಬೀಗ ಹಾಕುತ್ತೀರಿ. ಯಾವಾಗಲೂ ಬಡವರಿಗೊಂದು ನ್ಯಾಯ ದೊಡ್ಡವರಿಗೊಂದು ನ್ಯಾಯಾ.. ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ. ವೃದ್ಧರಿದ್ದಾರೆ. ಅವರ ಪರಿಸ್ಥಿತಿಯನ್ನು ನೋಡಿ ನಮಗೆ ಸ್ವಲ್ಪ ಕಾಲಾವಕಾಶ ನೀಡಬೇಕು. ಏಕಾಏಕಿ ಬೀಗ ಹಾಕಿದರೆ ನಾವು ಕುಡಿಯುವ ನೀರಿಗೆ ಏನು ಮಾಡುವುದು ಎಂದು ಕಾಲೋನಿಯ ಹಿರಿಯ ವ್ಯಕ್ತಿ ಚನಿಯ ತಿಳಿಸಿದ್ದಾರೆ.
ತುರುವೇಕೆರೆ: ತಾಲ್ಲೂಕಿನ ಅಮ್ಮಸಂದ್ರದಲ್ಲಿರುವ ಹೈಡಲ್ ಬರ್ಗ್ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಕೆಲವು ವ್ಯಕ್ಯಿಗಳು ಪ್ಲಾಂಟ್ ಹೆಡ್ ಹಾಗೂ ಹೆಚ್.ಆರ್ ಮ್ಯಾನೇಜರ್ ಮತ್ತು ಕಂಪನಿಯ ವಿರುದ್ಧ ಷಡ್ಯಂತ್ರ ಹೂಡಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎ.ಐ.ಟಿ.ಯು.ಸಿ ಸಂಘಟನೆಯ ಉಪಾಧ್ಯಕ್ಷ ರಘು ಸಿ.ಎಸ್ ಅಭಿಪ್ರಾಯ ಪಟ್ಟರು. ಅಮ್ಮಸಂದ್ರದಲ್ಲಿರುವ ಹೈಡಲ್ ಬರ್ಗ್ ಸಿಮೆಂಟ್ ಫ್ಯಾಕ್ಟರಿ ಮೇನ್ ಗೇಟ್ ಮುಂಬಾಗ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗುತ್ತಿಗೆ ನೌಕರರ ಬರಿಗೈಯಿಂದ ಆಡಳಿತ ಮಂಡಳಿಯವರು ಮಲಗುಂಡಿಯನ್ನು ಸ್ವಚ್ಛ ಮಾಡಿಸಿದೆ ಎಂದು, ಗುತ್ತಿಗೆ ನೌಕರ ಏನ್. ಹೊನ್ನಪ್ಪ ಆರೋಪಿಸಿದ ಹಿನ್ನೆಲೆಯಲ್ಲಿ, ನಾವು ಈ ಸುಳ್ಳು ದೂರನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ನಮ್ಮ ಸಂಘಟನೆಯು ಯಾವುದೇ ಕಾರಣಕ್ಕೂ ಇಂತಹವರನ್ನು ಬೆಂಬಲಿಸುವುದಿಲ್ಲ ಈ ದೂರು ಸತ್ಯಕ್ಕೆ ದೂರವಾದದ್ದು. ನಮ್ಮ ಕಂಪನಿಯಲ್ಲಿ ಮೊದಲ ಆದ್ಯತೆ ಸುರಕ್ಷತೆಗೆ ನೀಡುತ್ತದೆ. ಬರಿ ಕೈಯ್ಯಲ್ಲಿ ಮಲದ ಗುಂಡಿಯನ್ನು ಸ್ವಚ್ಛ ಮಾಡುವ ಕಾರ್ಯ ನಮ್ಮಲ್ಲಿಲ್ಲ. ಅದಕ್ಕೆ ಬೇಕಾದ ಯಂತ್ರೋಪಕರಣಗಳು ನಮ್ಮಲ್ಲಿವೆ. ಕೆಲವರು ಸ್ವಹಿತಾಸಕ್ತಿಯಿಂದ…