Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ನವದೆಹಲಿ: ಈ ದೇಶದ ಸಂಪತ್ತು ಅಲ್ಪ ಸಂಖ್ಯಾತರಿಗೆ ಮಾತ್ರ ಸೇರಿದ್ದಲ್ಲ. ದಲಿತರು, ಬಡವರು, ಆದಿವಾಸಿಗಳಿಗೂ ದೇಶದ ಸಂಪತ್ತಿನ ಮೇಲೆ ಹಕ್ಕಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿರುಗೇಟು ನೀಡಿದರು. ಈ ಹಿಂದೆ ಹುಬ್ಬಳ್ಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶವೊಂದರಲ್ಲಿ ಸಿಎಂ ಸಿದ್ದರಾಮಯ್ಯ, ಈ ದೇಶದ ಸಂಪತ್ತು ನಿಮಗೂ ಸೇರಿದ್ದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದರು. ದೇಶದ ಸಂಪತ್ತಿನ ಮೇಲೆ ದಲಿತರ, ಬಡವರ, ಆದಿವಾಸಿಗಳಿಗೆ ಹಕ್ಕಿದೆ. ಕೇವಲ ಅಲ್ಪ ಸಂಖ್ಯಾತರಿಗೆ ಇಲ್ಲ. ರಾಮಮಂದಿರದ ಪ್ರಾಣ ಪ್ರತಿಷ್ಟಾಪನೆಗೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ತುಷ್ಟಿಕರಣ ರಾಜಕಾರಣಕ್ಕಾಗಿ ಪ್ರಾಣ ಪ್ರತಿಷ್ಠಾಪನೆಗೆ ಅವರು ಬರಲಿಲ್ಲ. ಆಹ್ವಾನವನ್ನು ತಿರಸ್ಕರಿಸಿ ದೇಶ ಮಹಾನ್ ಆಗುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಇದನ್ನು ದೇಶದ ಜನ ನೋಡುತ್ತಿದ್ದಾರೆ. ಆದ್ರೆ ಬಿಜೆಪಿ ತುಷ್ಟಿಕರಣ ನಂಬಲ್ಲ. ರಾಮಮಂದಿರ ನಿರ್ಮಾಣದ ಸಂಪೂರ್ಣ ಯಶಸ್ಸು ಮೋದಿಯವರಿಗೆ ಸಲ್ಲುತ್ತೆ ಎಂದು ಹಾಡಿಹೊಗಳಿದರು. ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ ಎಂದು…
ರಾಯಚೂರು: ರಾಯಚೂರಿನ ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇನ್ನೋವಾ ಕಾರ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅತ್ತೆ, ಸೊಸೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡ ಘಟನೆ ನಡೆದಿದೆ. ಕಾರ್ ನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಉಳಿದ ಐದು ಜನರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಕರ ಅಪಘಾತದ ಪರಿಣಾಮ ಇನ್ನೋವಾ ಕಾರ್ ನಲ್ಲಿದ್ದ ಮಾರಿಯಾ ಗೀತಾ (38) ಹಾಗೂ ಅಮಲ್ ಪಾಲ್ ಮೇರಿ (64) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈದರಾಬಾದ್ ನಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್, ಗದಗದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್ ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ಬಿಜೆಪಿಯ ರಾಷ್ಟ್ರೀಯ ಸಮಾವೇಶದ ಸಮಾರೋಪ ದಿನದಂದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ 100 ದಿನಗಳಲ್ಲಿ, ಪ್ರತಿಯೊಬ್ಬರು ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ವಿಶ್ವಾಸ ಮತ್ತು ಬೆಂಬಲವನ್ನು ಗಳಿಸಲು ಸದಸ್ಯರು ತಮ್ಮ ಧ್ಯೇಯವನ್ನು ಮಾಡಬೇಕು. ಭಾನುವಾರದಂದು ನಿಧನರಾದ ಜೈನ ಧರ್ಮಗುರು ಆಚಾರ್ಯ ಶ್ರೀ 108 ವಿದ್ಯಾಸಾಗರ ಜೀ ಮಹಾರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಪ್ರಧಾನಿ ಮೋದಿ, “ಮುಂದಿನ 100 ದಿನಗಳಲ್ಲಿ ನಾವೆಲ್ಲರೂ ಪ್ರತಿಯೊಬ್ಬ ಹೊಸ ಮತದಾರರನ್ನು ತಲುಪಬೇಕು. ಪ್ರತಿಯೊಬ್ಬ ಫಲಾನುಭವಿ ಮತ್ತು ಪ್ರತಿ ಸಮುದಾಯ. ನಾವು ಎಲ್ಲರ ವಿಶ್ವಾಸ ಮತ್ತು ಬೆಂಬಲವನ್ನು ಗೆಲ್ಲಬೇಕಾಗಿದೆ. ನಮ್ಮ ಪ್ರಾಮಾಣಿಕ ಕಾರ್ಯಕರ್ತರು 24×7 ಮತ್ತು ವರ್ಷಪೂರ್ತಿ ಜನರೊಂದಿಗೆ ಇರುತ್ತಾರೆ, ಅವರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಲು ಏನಾದರೂ ಅಥವಾ ಇನ್ನೊಂದನ್ನು ಮಾಡುತ್ತಾರೆ. ಆದಾಗ್ಯೂ, ಮುಂದಿನ 100 ದಿನಗಳಲ್ಲಿ, ನಾವು ಹೊಸ ಉತ್ಸಾಹ ಮತ್ತು ಚೈತನ್ಯದಿಂದ ಕೆಲಸ ಮಾಡಬೇಕಾಗಿದೆ, ಇಂದು…
ನವದೆಹಲಿ: ಮೂವರು ಹದಿಹರೆಯದವರು 11 ನೇ ತರಗತಿ ವಿದ್ಯಾರ್ಥಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು, ಎಲ್ಲಾ ಬಾಲಾಪರಾಧಿಗಳಾಗಿದ್ದಾರೆ. ತಮ್ಮಲ್ಲಿ ಒಬ್ಬನಿಗೆ ಕಿರುಕುಳ ನೀಡಿದ್ದಕ್ಕಾಗಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದಾರೆ. ದಕ್ಷಿಣ ದೆಹಲಿಯ ನೆಬ್ ಸರೈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರೋಹನ್ ಎಂಬ ವಿಧ್ಯಾರ್ಥಿ ತನ್ನ ದೇಹದ ಮೇಲೆ ಅನೇಕ ಇರಿತದ ಗಾಯಗಳೊಂದಿಗೆ ಪತ್ತೆಯಾಗಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 10ನೇ ತರಗತಿ ವಿದ್ಯಾರ್ಥಿ ಸೇರಿದಂತೆ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ. ಅವರು ಬಳಸಿದ ಎರಡು ಚಾಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಪೊಲೀಸರು ಅಪರಾಧ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ದಾಳಿಕೋರರನ್ನು ಗುರುತಿಸಿ ಬಂಧಿಸಲಾಯಿತು. ವಿಚಾರಣೆಯ ವೇಳೆ ಆರೋಪಿಗಳಲ್ಲಿ ಒಬ್ಬನು ತಾನು ಮತ್ತು ರೋಹನ್ ಒಂದೇ ಶಾಲೆಯಲ್ಲಿ ಓದಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೋಹನ್…
ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಎದುರಿಸಲು ನಾವು ಸಿದ್ಧರಾಗಿದ್ದೇವೆ. ಬಿಜೆಪಿ ಮುಖಂಡರು ಬರೀ ಬುರುಡೆ ಬಿಡುತ್ತಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಜನ ನಂಬುವುದಿಲ್ಲ. ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಸಿಎಂ, ಡಿಸಿಎಂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಸಚಿವ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರಿಗೆ ಒಲವು ಇರುತ್ತದೆಯೋ ಅವರು ಅಭ್ಯರ್ಥಿ ಆಗುತ್ತಾರೆ. ಸ್ಥಳೀಯರು ಯಾರ ಹೆಸರು ಹೇಳುತ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ. ಮಹದೇವಪ್ಪ ಅವರ ಹೆಸರು ಹೇಳಿದರೂ ಮಹದೇವಪ್ಪಗೆ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಿದರು. ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಡಾಲಿ ಧನಂಜಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ನನಗೆ ಆ ಬಗ್ಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅದರ ಬಗ್ಗೆ…
ಹೈದರಾಬಾದ್: ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದು, 2.82 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದಿಂದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತಮಾಹಿತಿ ಪಡೆದ ಚಿತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖದೀಮರನ್ನು ಸೆರೆಹಿಡಿದಿದ್ದಾರೆ. ಮೂವರನ್ನು ಬಂದಿಸಲಾಗಿದ್ದು, ಅವರಿಂದ 2 ಲಕ್ಷದ 82 ಸಾವಿರ ಮೌಲ್ಯದ ಮದ್ಯ ಹಾಗೂ 6 ಲಕ್ಷ ಮೌಲ್ಯದ ಹಾಲಿನ ವ್ಯಾನ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸ್ಕೂಟಿ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಆರೋಪಿ ಪತಿ. ಪೋಷಕರ ವಿರೋಧವಿದ್ದರೂ, ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದ ಪತಿ ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ನಿಶ್ಚಿತಾರ್ಥಕ್ಕೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ಕಲಬುರಗಿ: ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಬಳಿ ಕೆಟ್ಟು ನಿಂತಿದ್ದ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬಿಜೆಪಿ ಮುಖಂಡ ಕೃಷ್ಣ ಲಕ್ಷ್ಮಣ (35) ಮೃತ ದುರ್ದೈವಿಯಾಗಿದ್ದಾರೆ. ಮಾರ್ಗದಲ್ಲೇ ಸಿಮೆಂಟ್ ಲಾರಿಯು ಕೆಟ್ಟು ನಿಂತಿತ್ತು. ಈ ಮಾರ್ಗವಾಗಿ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದ ಬಿಜೆಪಿ ಮುಖಂಡ ಕೃಷ್ಣ ಲಕ್ಷ್ಮಣ ಅವರಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಂಡಿಲ್ಲ. ವೇಗವಾಗಿ ಬರುತ್ತಿದ್ದ ಅವರು ನೇರವಾಗಿ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಮಿರಿಯಾಣ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಿಂಚೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ ತಾರಕಕ್ಕೇರಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ, ಮಠಕ್ಕೆ ಸೇರಿದ ಹೊಲದ ಉಳುಮೆ ಮಾಡಿದ್ದಾರೆ. ಇದರಿಂದ ಭಕ್ತರ ಆಕ್ರೋಶದ ಕಟ್ಟೆ ಹೊಡೆದಿದ್ದು, ಕಲಾದಗಿ ಗುರುಲಿಂಗೇಶ್ವರ ಮಠದಲ್ಲಿ ಮಹಿಳಾ ಭಕ್ತರಾದಿಯಾಗಿ ಎಲ್ಲರೂ ಪ್ರತಿಭಟನೆಗಿಳಿದಿದ್ದಾರೆ. ಈ ವೇಳೆ ರಂಭಾಪುರಿ ಶ್ರೀ ಕಾರಿನ ಮೇಲೆ ಮಹಿಳೆಯೋರ್ವರು ಚಪ್ಪಲಿ ಎಸೆದ ಘಟನೆ ವರದಿಯಾಗಿದೆ. ರಂಭಾಪುರಿ ಶ್ರೀ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುದ್ದ ವೇಳೆ ಭಕ್ತರು, ರಂಭಾಪುರಿ ಶ್ರೀ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಹಾಕಿ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ವೇಳೆ ಮಹಿಳಾ ಭಕ್ತೆಯೋರ್ವರು ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾಳೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಲಾದಗಿಯಲ್ಲಿ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರ ವಿರೋಧದ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ರಂಭಾಪುರಿ ಜಗದ್ಗುರು ಮಾತನಾಡಿದ್ದು, ಆ ವಿಷಯ ಸಂಬಂಧ…
ಕಳೆದ 21 ವರ್ಷದಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೋಸ್ಟ್ ವಾಂಟೆಂಡ್ ನಕ್ಸಲ್ ಇದೀಗ ಸಿಕ್ಕಿ ಬಿದ್ದಿದ್ದಾನೆ. ಇದಕ್ಕೆ ಕಾರಣವಾಗಿದ್ದು ಒಂದು ಕಾಡಾನೆ ಎಂದರೆ ನಿಮಗೂ ಅಚ್ಚರಿಯಾದಿರದು. ಹಾಗಾದರೆ ಅದೆಲ್ಲಿ? ಈತ ತಪ್ಪಿಸಿಕೊಂಡು ಇಷ್ಟು ಸಮಯ ಎಲ್ಲಿದ್ದ ಅನ್ನೋದರ ಡಿಟೇಲ್ನ್ ಕೊಡ್ತೀವಿ ಓದಿ.. ಅಂಗಡಿ ಸುರೇಶ್ ಈತನ ಹೆಸರು. ಒಂದು ಕಾಡಾನೆಯಿಂದ ಪೊಲೀಸರಿಗೆ ಸಿಕ್ಕಿಬಿದ್ದ ನಕ್ಸಲ್ ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. 2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸುರೇಶ್ ಕಳೆದ 21 ವರ್ಷಗಳಿಂದ ನಾಪತ್ತೆಯಾಗಿದ್ದ. ಪೊಲೀಸರು ಈತನಿಗಾಗಿ ಭಾರಿ ಹುಡುಕಾಟ ನಡೆಸಿದ್ದಾರೆ.ಈತನಿಗಾಗಿ ಹುಡುಕಾಟ ನಡೆಸದ ಸ್ಥಳಗಳೇ ಇಲ್ಲ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಈ ಮೋಸ್ಟ್ ವಾಂಟೆಡ್ ನಕ್ಸಲ್ ಗಾಗಿ ಹುಡುಕಾಡುತ್ತಿದ್ದರು. ಆದರೆ ಕಳೆದ 21 ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೇ ಈತ ನಾಪತ್ತೆಯಾಗಿದ್ದ. ನಕ್ಸಲ್ ಸುರೇಶ್ ನ ಮೂಲ ಹೆಸರು ಪ್ರದೀಪ್. ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಬಳಿಕ ಸುರೇಶ್ ಎಂದು ಬದಲಿಸಿಕೊಂಡಿದ್ದನು. ಸುರೇಶ್…