Subscribe to Updates
Get the latest creative news from FooBar about art, design and business.
- ಮಧುಗಿರಿ: ದಲಿತರ ಸಮಾಧಿ ರಕ್ಷಣೆಗೆ ಆಗ್ರಹ
- ತುಮಕೂರು: ಕಾರ್ಮಿಕನ ಮೇಲೆ ಲಾರಿ ಹರಿದು ಸಾವು
- ಓಟಿಪಿ ಪಡೆದು ಮಹಿಳೆಯ ಖಾತೆಯಿಂದ 41 ಸಾವಿರ ಹಣ ದೋಚಿದ ಸೈಬರ್ ಕಳ್ಳರು!
- ರೈತರ ಸಮಸ್ಯೆಗಳ ಕುರಿತು ಸಿಎಂಗೆ ಮನವಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಿರ್ಧಾರ
- ಮಧುಗಿರಿ: ಮೇ ನಲ್ಲಿ 2 ತಿಂಗಳ ಪಡಿತರ ವಿತರಣೆ
- ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ: ಮೇ 19ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ
- ಕೆರೆಯ ಮಣ್ಣೆತ್ತಲು ರೈತರಿಗೆ ಅಡ್ಡಿಪಡಿಸುವಂತಿಲ್ಲ: ಜಿಲ್ಲಾಧಿಕಾರಿಗೆ ವಿ.ಸೋಮಣ್ಣ ಸೂಚನೆ
- ಗುರು ಶಿಷ್ಯರು: ಈ ದಿನದ ಕಥೆ
Author: admin
ಬಸವನಗುಡಿ ಠಾಣೆ ವ್ಯಾಪ್ತಿಯ ಖಾಜಿ ಸ್ಟ್ರೀಟ್ ನಲ್ಲಿ ಅರ್ಬಾಜ್ (26) ಅವರನ್ನು ಕೊಲೆ ಮಾಡಲಾಗಿದ್ದು, ಮೂವರು ಆರೋಪಿಗಳು ಕೃತ್ಯ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ‘ಸ್ಥಳೀಯ ನಿವಾಸಿ ಅರ್ಬಾಜ್ ಅವರು ಶುಕ್ರವಾರ ಮಧ್ಯಾಹ್ನ ಮನೆಯಲ್ಲಿದ್ದರು. ಬೈಕ್ ನಲ್ಲಿ ಬಂದಿದ್ದ ಮೂವರು, ಮನೆ ಎದುರು ಅರ್ಬಾಜ್ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡು ಅರ್ಬಾಜ್ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯದ ರೈತ ಸಂಘಗಳು ಹಾಗೂ ಕನ್ನಡ ಪರ ಸಂಘಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಕೆ. ಆರ್. ಎಸ್. ನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕಾವೇರಿ ಕೊಳ್ಳದ ರೈತರ ಬೆಳೆಗೆ ನೀರಿಲ್ಲ. ಬೆಂಗಳೂರು ನಗರದಲ್ಲಿ 1 ಕೋಟಿ 30 ಲಕ್ಷ ಜನರು ಕುಡಿಯುವ ನೀರಿಗಾಗಿ ಕಾವೇರಿ ನದಿ ಮೇಲೆ ಅವಲಂಬಿತರಾಗಿದ್ದಾರೆ. ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಮಾರಕವಾಗಿದೆ ಎಂದು ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 9ನೇ ಮಹಡಿಯಿಂದ ಬಿದ್ದು ವಿಜಯಲಕ್ಷ್ಮಿ (17) ಎನ್ನುವವರು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಜ್ಞಾನಭಾರತಿ ಬಳಿಯ ಜ್ಞಾನಜ್ಯೋತಿ ನಗರದಲ್ಲಿ ತಾಯಿ ಜೊತೆ ವಾಸವಿದ್ದ ವಿಜಯಲಕ್ಷ್ಮಿ, ಪಿಯು ಕಾಲೇಜೊಂದರಲ್ಲಿ ಓದುತ್ತಿದ್ದಳು. ‘ಸೆ.19 ರಂದು ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 9ನೇ ಮಹಡಿಯಿಂದ ಬಿದ್ದು ಗುರುವಾರ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ತಿಳಿಸಿದರು.
ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ 5 ಕೋಟಿ ವಂಚಿಸಿ ಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಚೈತ್ರಾ ಕುಂದಾಪುರ ಹಾಗೂ ಟೀಂ ವಿಚಾರಣೆಯನ್ನು ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಇಂದು ಚೈತ್ರಾ ಕುಂದಾಪುರ ಡ್ ಟೀಂನ ನೇರವಾಗಿ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿರುವ ಸೆರೆಮನೆಗೆ ಕಳುಹಿಸಲಿದ್ದು, ಆರೋಪಿಗಳ ಕಸ್ಟಡಿ ಅಂತ್ಯವಾಗುವ ಮತ್ತೆ ಕೋರ್ಟ್‌ಗೆ ಅವರನ್ನು ಹಾಜರುಪಡಿಸಲಿದ್ದಾರೆ.
ಉಡುಪಿ: ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರುತ್ತಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಸಚಿವರು ಮಾತನಾಡಿದರು. ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜಯಭೇರಿ ಬಾರಿಸಿದರೂ ಉಡುಪಿ ಜಿಲ್ಲೆಯಲ್ಲಿ ನೆಲಕಚ್ಚಿತು. ಪಕ್ಷದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ದಿನಗಳಲ್ಲಿ ಸಮರ್ಥವಾಗಿ ಪಕ್ಷವನ್ನು ಕಟ್ಟೋಣ ಎಂದರು. ಉಡುಪಿ ಜಿಲ್ಲೆಯಲ್ಲಿ ಶೇಕಡಾ 95% ಮಂದಿ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಮಹಿಳೆಯರು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಇದರ ಲಾಭ ಸರ್ಕಾರಕ್ಕೆ ಸಿಗುವಂತೆ ಮಾಡಬೇಕು…
ಬೆಳಗಾವಿ: 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ 14 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು ಜಿಲ್ಲಾ ಪಂಚಾಯತ್ ಕಾರ್ಯಾಲಯ ಈ ಕುರಿತು ಆದೇಶ ನೀಡಿದೆ. ಖಾನಾಪುರ – ಬೇಕವಾಡ, ಕಿತ್ತೂರು – ಉಗರಖೋಡ, ಮೂಡಲಗಿ – ರಾಜಾಪೂರ, ನಿಪ್ಪಾಣಿ – ಸಿದ್ನಾಳ, ರಾಮದುರ್ಗ – ಸುರೇಬಾನ, ರಾಯಬಾಗ – ಜಲಾಲಪೂರ, ಸವದತ್ತಿ – ಸಿಧೋಗಿ. ಅಥಣಿ – ಐಗಿಳಿ, ಬೈಲಹೊಂಗಲ – ಉಡಿಕೇರಿ, ಬೆಳಗಾವಿ – ಬಸ್ತವಾಡ, ಚಿಕ್ಕೋಡಿ – ಅಂಕಲಿ, ಗೋಕಾಕ್ – ಮಕ್ಕಳಗೇರಿ, ಹುಕ್ಕೇರಿ – ಕುರಣಿ, ಕಾಗವಾಡ – ಮಂಗಸೂಳಿ ಗ್ರಾ.ಪಂಗಳು ಆಯ್ಕೆಯಾಗಿವೆ.
ಶಿವಮೊಗ್ಗ: ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಈ ವೇಳೆ ಗಲಾಟೆಯಲ್ಲಿ 5 ಮಂದಿಗೆ ಚಾಕು ಇರಿದ ಘಟನೆ ಶಿವಮೊಗ್ಗದ ದ್ರೌಪದಮ್ಮ ಸರ್ಕಲ್ ನಲ್ಲಿ ತಡರಾತ್ರಿ ನಡೆದಿದೆ. ಪವನ್ ಹಾಗೂ ಕಿರಣ್ ಎಂಬ ಎರಡು ಗುಂಪಿನಿಂದ ಗಲಾಟೆ ನಡೆದಿದ್ದು, ಚಾಕು ಇರಿತಕ್ಕೊಳಗಾದ ಐದು ಮಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯಲ್ಲಿಂದು ರೈತರು, ಕನ್ನಡ ಸಂಘಟನೆಗಳಿಂದ ಸರಣಿ ಪ್ರತಿಭಟನೆ ನಡೆಯಲಿದೆ. ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್ಹೌಸ್ಗೆ ಕನ್ನಡಪರ ಸಂಘಟನೆಗಳ ಮುತ್ತಿಗೆ ಹಾಕಲಿದ್ದು, ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಲಿದ್ದಾರೆ.
ಬೆಂಗಳೂರು: ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದ ಅವರು; ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಬಹಳ ಅಸಡ್ಡೆ ಪ್ರದರ್ಶಿಸಿದೆ. ಕನ್ನಡನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಕಿಡಿಕಾರಿದರು. ಒಂದು ಕಡೆ ನೀರಿನಲ್ಲ ಎಂದು ಸರಕಾರವೇ ಹೇಳುತ್ತದೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ತಡವಾಗಿ ಅರ್ಜಿಯನ್ನು ಹಾಕಿದೆ ಸರಕಾರ. ರೈತರ ಬಗ್ಗೆ ಇವರಿಗೆ ಬದ್ಧತೆ ಎನ್ನುವುದು ಇದ್ದಿದ್ದರೆ ಅರ್ಜಿ ಸಲ್ಲಿಸುವ ಬಗ್ಗೆ…
ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳೆ ಮಕ್ಕಳಿಗೆ ನೀಡುವ ಊಟದ ಅಕ್ಕಿ ಕದ್ದ ದುರ್ಘಟನೆ ನಡೆದಿದೆ. ವಡ್ಡಗೆರೆಯ ಲಲಿತಮ್ಮ ಮತ್ತು ಪುಟ್ಟಮ್ಮ ಎಂಬ ಇಬ್ಬರು ಅಡುಗೆ ಸಿಬ್ಬಂದಿಗಳು ಸುಮಾರು 50 ಕೆಜಿ ಅಕ್ಕಿ ಕದ್ದಿರುವ ಆರೋಪ ಕೇಳಿ ಬಂದಿದೆ. ಲಲಿತಮ್ಮ ಎಂಬ ಅಡುಗೆ ಸಿಬ್ಬಂದಿ ತನ್ನ ಮಗನಾದ ವೆಂಕಟೇಶ್ ಎಂಬುವರನ್ನು ಶಾಲೆಯ ಆವರಣಕ್ಕೆ ಕರೆಯಿಸಿ ಕೊಂಡು ಸುಮಾರು 59 ಕೆ.ಜಿ.ಯಷ್ಟು ಅಕ್ಕಿಯನ್ನು ಕದ್ದು ದ್ವಿಚಕ್ರ ವಾಹನದಲ್ಲಿ ಕೊಟ್ಟು ಕಳಿಸಿದ್ದಾರೆ. ವೆಂಕಟೇಶ್ ತನ್ನ ತಾಯಿಯ ಜೊತೆ ಕೆಲಸ ಮಾಡುವ ಪುಟ್ಟಮ್ಮನ ಮನೆಗೆ ತೆಗೆದುಕೊಂಡು ಹೋಗುವಾಗ ಗ್ರಾಮದ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಘಟನೆ ನಡೆದಿದೆ. ಬಹಳ ದಿನಗಳಿಂದ ಇಂತಹ ಕೆಲಸ ಮಾಡುತಿದ್ದನ್ನು ಕಂಡ ಗ್ರಾಮಸ್ಥರು ಇಂದು ಮಾಲು ಸಹಿತ ಹಿಡಿದಿದ್ದಾರೆ. ಕದ್ದ ಅಕ್ಕಿಯನ್ನು ಮನೆಗೆ ಕೊಂಡೊಯ್ದ ಸಿಬ್ಬಂದಿಗಳನ್ನು ತನಿಖೆ ಮಾಡದ…