Subscribe to Updates
Get the latest creative news from FooBar about art, design and business.
- ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
- ತುಮಕೂರು ಜಿಲ್ಲೆಯಲ್ಲಿ 19.39 ಲಕ್ಷ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
- ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಶಶಿಧರ ಹೆಚ್.ಜಿ.
- ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
- ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
- ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
Author: admin
ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್‌ನಲ್ಲಿ ಕಳುಹಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ. ಎಂ. ಯೋಗೇಶ್ ಆದೇಶ ಹೊರಡಿಸಿದ್ದಾರೆ. ಸ್ಪೀಡ್ ಪೋಸ್ಟ್ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೀಗ ಆಯುಕ್ತರ ಆದೇಶ ಪಾಲಿಸುವುದು ಅನಿವಾರ್ಯವಾಗಿದೆ. ಪೋಸ್ಟ್ ನಲ್ಲಿ ಕಾರ್ಡ್ ಗಳು ವಿಳಂಬವಾಗಿ ತಲುಪುವುದರಿಂದ ಸಮಸ್ಯೆಗಳಾಗುತ್ತವೆ ಎಂದು ಜನರು ಮನವಿ ಸಲ್ಲಿಸಿದ್ದರು.
ಬೆಂಗಳೂರು: “ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಹಾಗೂ ನಿವೇಶನ ನೋಂದಣಿ ವಿಚಾರವಾಗಿ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರು ಮಾಡಿದ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸಕ್ಕೆ ಶನಿವಾರ ಆಗಮಿಸಿದ್ದ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು “ಪ್ರಾಣಿಗಳ ರಕ್ಷಣೆ ಈ ತಾಯಿ ಮಗನ ನೆಚ್ಚಿನ ಹವ್ಯಾಸ. ಪಶುವೈದ್ಯಕೀಯ ಕಾಲೇಜು ಉದ್ಘಾಟನೆಗೆ ದಿನಾಂಕ ನೀಡಿ ಎಂದು ಅವರು ನನಗೆ ಕೇಳಿದ್ದಾರೆ. ನಾನು ಸಮಯ ನೋಡಿ ದಿನಾಂಕ ನೀಡುತ್ತೇನೆ. ಇನ್ನು ಅವರಿಗೆ ನಿಗದಿಯಾಗಿರುವ ನಿವೇಶನ ನೋಂದಣಿ ವಿಚಾರವಾಗಿಯೂ ಅವರು ಮನವಿ ಸಲ್ಲಿಸಿದ್ದಾರೆ. ಈ ವಿಚಾರಗಳ ಬಗ್ಗೆ ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ” ಎಂದರು. “ಹಿರಿಯರಾದ ಲೀಲಾವತಿ ಅವರನ್ನು ಕರೆದುಕೊಂಡು ಬರುವುದು ಬೇಡ, ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದೆ. ಆದರೂ ಅವರು ನನ್ನ ಮೇಲೆ ಅಭಿಮಾನವಿಟ್ಟು ಬಂದಿದ್ದಾರೆ. ಅವರಿಗೆ ಉತ್ತಮವಾದ ಆರೋಗ್ಯ…
ಬೆಂಗಳೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ಕಾರ್ಯಕ್ರಮ ನೀಡಲು ಕಮಿಷನ್ ಕೇಳಿರುವುದು ರಾಜ್ಯದ ಮಾನ ಹರಾಜು ಆಗುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಧಿಕಾರಿಗಳ ವರ್ಗಾವಣೆಗೆ, ಕಾಂಟ್ರಾಕ್ಟರ್ ಗಳಿಗೆ ಬಿಲ್ ನೀಡಲು ಕಮಿಷನ್ ಪಡೆಯುತ್ತಿದ್ದ ಈ ಸರ್ಕಾರದ ಕಮಿಷನ್ ದಂಧೆ ವಿಶ್ವ ವಿಖ್ಯಾತ ಮೈಸೂರು ದಸರಾಗೂ ವಿಸ್ತರಿಸಿದ್ದು ನಾಡಿನ ದುರಂತ. ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲು ಅಧಿಕಾರಿಗಳು ಕಮಿಷನ್ ಕೇಳಿದ್ದು ಕರ್ನಾಟಕದ ಮಾನ ಹರಾಜಾಗುವಂತೆ ಮಾಡಿದೆ. ಇಂತ ಅತಿ ಭ್ರಷ್ಟ ಸರ್ಕಾರವನ್ನು ಸ್ವಾತಂತ್ರ ಭಾರತದ ಇತಿಹಾಸಸಲ್ಲಿಯೇ ಕಂಡಿರಲಿಲ್ಲ ಎಂದು ಹೇಳಿದ್ದಾರೆ. ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರೇ ಕಮಿಷನ್ ಬೇಡಿಕೆಯನ್ನು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದು, ಕಮಿಷನ್ ಕೇಳಿದ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ…
ಪಾರ್ಟ್ ಟೈಂ ಉದ್ಯೋಗ ಕೊಡಿಸುವ ನೆಪದಲ್ಲಿ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಟಾಸ್ಕ್ ಗಳ ಮೂಲಕ ಹಣ ದ್ವಿಗುಣಗೊಳಿಸಬಹುದು ಎಂದು ಎಂಜಿನಿಯರ್ ಗೆ ಸೈಬರ್ ಕಳ್ಳರು 58.83 ಲಕ್ಷ ರೂ. ವಂಚಿಸಿದ್ದಾರೆ. ನಾಗರ ಬಾವಿಯ ವಿಶ್ವನಾಥ್ (31) ವಂಚನೆ ಗೊಳಗಾದವರು. ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಟಾಸ್ಕ್ ಗಳ ಮೂಲಕ ಕಟ್ಟಿರುವ ಹಣ ದ್ವಿಗುಣಗೊಳಿಸಬಹುದು. ಜೊತೆಗೆ ಕಮೀಷನ್ ಸಹ ಸಿಗಲಿದೆ ಎಂದು ನಂಬಿಸಿ ವಂಚಿಸಿದ್ದಾರೆ.
2036ರ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಲು ಭಾರತ ಸ್ವಯಂ ಪ್ರೇರಿತವಾಗಿದೆ. ಒಲಿಂಪಿಕ್ ಸಮಿತಿಯ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. 2029ರ ಯೂತ್ ಒಲಿಂಪಿಕ್ಸ್ ನ ಬಿಡ್ ನಲ್ಲಿ ಭಾರತ ಭಾಗವಹಿಸಲಿದೆ ಎಂದು ಪ್ರಧಾನಿ ಘೋಷಿಸಿದರು. ‘ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ. ಇದು 140 ಕೋಟಿ ಭಾರತೀಯರ ಕನಸು. ಐಒಸಿ ಬೆಂಬಲದಿಂದ ಈ ಕನಸು ನನಸಾಗಬೇಕು. ಕ್ರೀಡೆಯು ಪದಕಗಳನ್ನು ಗೆಲ್ಲಲು ಮಾತ್ರವಲ್ಲದೆ ಹೃದಯಗಳನ್ನು ಗೆಲ್ಲಲು ಉತ್ತಮ ಮಾರ್ಗವಾಗಿದೆ. ಇದು ಚಾಂಪಿಯನ್‌ಗಳನ್ನು ರೂಪಿಸುವುದು ಮಾತ್ರವಲ್ಲದೆ ಶಾಂತಿಯನ್ನು ಹೆಚ್ಚಿಸುತ್ತದೆ’ – ಮೋದಿ ಹೇಳಿದರು. ಭಾರತವು 40 ವರ್ಷಗಳ ನಂತರ IOC ಅಧಿವೇಶನವನ್ನು ಆಯೋಜಿಸುತ್ತಿದೆ. ಇದಕ್ಕೂ ಮುನ್ನ 1983ರಲ್ಲಿ ದೆಹಲಿಯಲ್ಲಿ 86ನೇ ಐಒಸಿ ಅಧಿವೇಶನ ನಡೆದಿತ್ತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಹಿಂದಿಯಲ್ಲಿ ನಮಸ್ತೆ ಹೇಳುವ ಮೂಲಕ ಭಾಷಣ ಆರಂಭಿಸಿದರು. 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಮನೆಯಲ್ಲಿ ಮಲಗಿದ್ದ 19 ವರ್ಷದ ಯುವಕನನ್ನು ಕಡಿದು ಕೊಲೆ ಮಾಡಲಾಗಿದೆ. ಬಿಹಾರದ ನಳಂದಾದಲ್ಲಿ ಈ ಘಟನೆ ನಡೆದಿದೆ. ಬಳಿಕ ಮನೆಗೆ ನುಗ್ಗಿ ಯುವಕರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ದುಷ್ಕರ್ಮಿ ಓಡಿ ಹೋಗಿದ್ದಾನೆ. ಯೂಟ್ಯೂಬ್ ಖ್ಯಾತಿಯಿಂದ ಕೊಲೆ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಹರಧನ್ ಎಂಬ 19 ವರ್ಷದ ಯುವಕ ಮೃತಪಟ್ಟಿದ್ದಾನೆ. ತಂದೆಯ ಮರಣದ ನಂತರ ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ನೋಡಿಕೊಂಡವನು ಹರದನ್. ಟ್ಯೂಷನ್ ಮತ್ತು ಯೂಟ್ಯೂಬ್ ವೀಡಿಯೋಗಳಿಂದ ಬರುವ ಆದಾಯದಿಂದ ಕುಟುಂಬವು ಬದುಕುಳಿಯಿತು. ಹರದನ್ 12ನೇ ತರಗತಿ ತೇರ್ಗಡೆಯಾಗಿ ಪದವಿ ಓದುತ್ತಿದ್ದ. ಶುಕ್ರವಾರ ರಾತ್ರಿ ಸಹೋದರಿ ತನ್ನ ಸಹೋದರನ ಕೋಣೆಯಲ್ಲಿ ಫ್ಯಾನ್ ಆಫ್ ಮಾಡಲು ಎದ್ದು ನೋಡಿದಾಗ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದು ಕಂಡು ಬಂದಿದೆ. ಬಾಲಕಿಯ ಕಿರುಚಾಟ ಕೇಳಿ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಓಡಿ ಬಂದರು. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಕುತ್ತಿಗೆ ಸೇರಿದಂತೆ ತಲೆಯ ವಿವಿಧ ಭಾಗಗಳಲ್ಲಿ…
ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿಯ ಶವ ಕೆರೆಯಲ್ಲಿ ಪತ್ತೆ. ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಬಾಲಕಿ ನಾಪತ್ತೆಯಾಗಿದ್ದಳು. ಘಟನೆಯಲ್ಲಿ ಬಾಲಕಿಯ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಚಿಕ್ಕಪ್ಪ ಕರಣ್ ಸೋನಿ ಬಾಲಕಿಯನ್ನು ಕೊಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಕ್ಟೋಬರ್ 11 ರಂದು ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಕೆರೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯ ತಾಯಿ ಕಳೆದ ಒಂದೂವರೆ ತಿಂಗಳಿನಿಂದ ಸೋನಿಯ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು. ಸನ್ನಿ ತನ್ನ ಹೆಂಡತಿ ಮತ್ತು ಅತ್ತಿಗೆಯೊಂದಿಗೆ ಕೌಟುಂಬಿಕ ಕಲಹವನ್ನು ಹೊಂದಿದ್ದನು. ಇದರಿಂದ ಕೊಲೆ ನಡೆದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಪಂಜಾಬ್ ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರು ಜಮ್ಮು ಮತ್ತು ಕಾಶ್ಮೀರದ ಮೂಲದವರು ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಜಾಬ್ ಪೊಲೀಸ್ ಮತ್ತು ಕೇಂದ್ರ ಏಜೆನ್ಸಿಯ ರಾಜ್ಯ ವಿಶೇಷ ಕಾರ್ಯಾಚರಣೆ ಸೆಲ್-ಅಮೃತಸರ ತಂಡ ಈ ಕಾರ್ಯಾಚರಣೆಯನ್ನು ನಡೆಸಿತು. ಎರಡು ಐಇಡಿಗಳು, ಎರಡು ಗ್ರೆನೇಡ್ ಗಳು, ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, 24 ಕಾರ್ಟ್ರಿಜ್‌ಗಳು, ಟೈಮರ್ ಸ್ವಿಚ್, ಎಂಟು ಡಿಟೋನೇಟರ್‌ಗಳು ಮತ್ತು ನಾಲ್ಕು ಬ್ಯಾಟರಿಗಳು ಸೇರಿದಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್-ಎ-ತೊಯ್ಬಾದ ಸಕ್ರಿಯ ಸದಸ್ಯ ಫಿರ್ದೌಸ್ ಅಹ್ಮದ್ ಭಟ್ ಭಯೋತ್ಪಾದಕ ಸಂಘಟನೆಯನ್ನು ನಿರ್ವಹಿಸುತ್ತಿದ್ದಾನೆ. ಈ ಕಾರ್ಯಾಚರಣೆಯು ಪಂಜಾಬ್‌ನಲ್ಲಿ ಶಾಂತಿಯುತ ವಾತಾವರಣವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಭಯೋತ್ಪಾದಕ ಗುಂಪಿಗೆ ಭಾರೀ ಹೊಡೆತವಾಗಿದೆ. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಮಾರ್ಷಲ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರಿಂದ ಹಣ ಪಡೆದು ನಕಲಿ ಪ್ರಮಾಣ ಪತ್ರ ನೀಡಿ ವಂಚಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ ನಿವಾಸಿ ಹರ್ಷ(23) ಬಂಧಿತ ಆರೋಪಿಯಿಂದ ಬಿಬಿಎಂಪಿ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ನಕಲಿ ನೇಮಕಾತಿ ಪತ್ರಗಳು, ಫೋನ್ ಪೇ ಮಾಡಿ ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರೀನ್ ಶಾಟ್ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.
ಆಡುಗೋಡಿ ಠಾಣೆ ವ್ಯಾಪ್ತಿಯ ಮಾಲ್ ವೊಂದರಲ್ಲಿ ರಂಪಾಟ ಮಾಡಿ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರೊಬ್ಬರ ಕೈಗೆ ಕಚ್ಚಿದ್ದ ಆರೋಪದಡಿ ಯುವತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯ 28 ವರ್ಷದ ಯುವತಿ, ನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ವಾಸವಿದ್ದರು. ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.