Subscribe to Updates
Get the latest creative news from FooBar about art, design and business.
- ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
- ತುಮಕೂರು ಜಿಲ್ಲೆಯಲ್ಲಿ 19.39 ಲಕ್ಷ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
- ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಶಶಿಧರ ಹೆಚ್.ಜಿ.
- ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
- ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
- ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
Author: admin
ತುಮಕೂರು: ಪ್ರಧಾನಿ ಸೋಲಿಸಬೇಕೆಂಬ ಇಂಡಿಯಾ ಒಕ್ಕೂಟದವರು ಹಮಾಸ್ ಉಗ್ರರಿಗೆ ಬೆಂಬಲ ನೀಡ್ತಿದ್ದಾರೆ. ಈ ಸರ್ಕಾರಕ್ಕೆ ರಾಕ್ಷಸರನ್ನು ಬೆಂಬಲಿಸುವುದು ರೂಢಿ. ಇಲ್ಲಿ ಮಹಿಷಾಸುರನನ್ನು ಬೆಂಬಲಿಸುತ್ತಾರೆ. ಅಲ್ಲಿ ಹಮಾಸ್ ಉಗ್ರರನ್ನು ಬೆಂಬಲಿಸುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ತುಮಕೂರಿನ ರಾಮ ಮಂದಿರದಲ್ಲಿ ಜನಗಣಮನ ಯಾತ್ರೆ ಕಾರ್ಯಕ್ರಮ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಒಂದು ಪಾರ್ಟಿಯ ಅಧಿನಾಯಕಿ ಎನ್ ಕೌಂಟರ್‌ನಲ್ಲಿ ಸತ್ತ ಭಯೋತ್ಪಾದಕನಿಗಾಗಿ ಕಣ್ಣೀರು ಹಾಕ್ತಾರೆ. ಈ ದೇಶದ ಮೇಲೆ ಆಕ್ರಮಣ ಮಾಡುವಂತಹ ಭಯೋತ್ಪಾದಕರನ್ನು ಬೆಂಬಲಿಸುವವರಿಗೆ, ಈ ದೇಶದ ಅಧಿಕಾರ ಕೊಡೊಕಾಗುತ್ತಾ ಎಂದರು. ಪಿ.ಚಿದಂಬರಂ ಅವರು ಈ ದೇಶದ ಹಳ್ಳಿಗರನ್ನು ದಡ್ಡರೆಂದು ಕರೆದ್ರು. ಪ್ರಧಾನಿ ಮೋದಿ ಭಾರತವನ್ನು ಡಿಜಿಟಲ್ ಎಕಾನಮಿಯಾಗಿ ಬದಲಾಯಿಸಿದರು. ಇದು ಪೊಲಿಟಿಕಲ್ ಯಾತ್ರೆ ಅಲ್ಲ. ನಮ್ಮ ಯಾತ್ರೆಗೆ ಎಲ್ಲಾ ಪಾರ್ಟಿಯವರು ಬರ್ತಾರೆ. ವ್ಯಕ್ತಿತ್ವದ ದೃಷ್ಠಿಯಿಂದ ನರೇಂದ್ರ ಮೋದಿಯೆ ಶ್ರೇಷ್ಠ ಎಂದರು. ಜನಗಣ ಮನ ಬೆಸೆಯುವ ಯಾತ್ರೆ ಯಾಗಿದೆ, ಜನರನ್ನು ಬೆಸೆಯುವ ಉದ್ದೇಶವಾಗಿದೆ. ರಾಷ್ಟ್ರವನ್ನು ಶ್ರೇಷ್ಠ ಗೊಳಿಸುವ ಉದ್ದೇಶದ ಯಾತ್ರೆ ಯಾಗಿದೇ ಎಂದು ತಿಳಿಸಿದ್ದಾರೆ.…
ಯಾಮಿ ಗೌತಮ್ ಅವರನ್ನು ಬಾಲಿವುಡ್ ನ ಬಹುಮುಖ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 2010 ರಲ್ಲಿ ‘ಉಲ್ಲಾಸ ಉತ್ಸಾಹ’ ಎಂಬ ಕನ್ನಡ ಚಲನಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ ಯಾಮಿ, ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾಳೆ ಮತ್ತು ಇದುವರೆಗಿನ ತನ್ನ ವೃತ್ತಿ ಜೀವನದಲ್ಲಿ ಹಲವಾರು ಪವರ್-ಪ್ಯಾಕ್ಡ್ ಅಭಿನಯವನ್ನು ನೀಡಿದ್ದಾರೆ. ಅವರು ಕೊನೆಯದಾಗಿ ‘OMG 2’ ನಲ್ಲಿ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಯಾಪ್ತಿ ಅವರೊಂದಿಗೆ ಕಾಣಿಸಿಕೊಂಡರು. ನಟಿ ತನ್ನ ಮುಂದಿನ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಅದರ ವಿವರಗಳು ಪ್ರಸ್ತುತ ಮುಚ್ಚಿ ಹೋಗಿವೆ. ಚಿತ್ರದ ಚಿತ್ರೀಕರಣಕ್ಕಾಗಿ ಅವರು 50 ದಿನಗಳ ಕಾಲ ಉತ್ತರ ಭಾರತದ ಪಟ್ಟಣದಲ್ಲಿ ನೆಲೆಸಿದ್ದಾರೆ. ಪ್ರಾಜೆಕ್ಟ್ ಬಗ್ಗೆ ನಿರ್ದಿಷ್ಟ ವಿವರಗಳು ಬಹಿರಂಗವಾಗದೆ ಉಳಿದಿದ್ದರೂ, ಯಾಮಿ ಗೌತಮ್ ಉತ್ತರದಲ್ಲಿ ಚಿತ್ರೀಕರಣ ಮಾಡಲು ರೋಮಾಂಚನಗೊಂಡಿದ್ದಾರೆ. “ಯಾಮಿ ಗೌತಮ್ ತಮ್ಮ ಮುಂಬರುವ ಚಿತ್ರಕ್ಕಾಗಿ ಉತ್ತರ ಭಾರತದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ ಮತ್ತು ಮುಂದಿನ 50 ದಿನಗಳ ಕಾಲ ಅಲ್ಲಿ ಚಿತ್ರೀಕರಣ ನಡೆಸಲಿದ್ದಾರೆ. ‘ಲಾಸ್ಟ್’ ಮತ್ತು…
ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಶುಕ್ರವಾರ ಅಕ್ಟೋಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಹಿಂದೆ ನೀಡಲಾಗಿದ್ದ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಯು ಸಂಜಯ್ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಸಂಜಯ್ ಸಿಂಗ್ ಅವರಿಗೆ ಜೈಲು ಶಿಕ್ಷೆ ವಿಧಿಸಿದರು. ಅಕ್ಟೋಬರ್ 4 ರಂದು ಜಾರಿ ನಿರ್ದೇಶನಾಲಯ (ಇಡಿ) ಸಿಂಗ್ ಅವರನ್ನು ಬಂಧಿಸಿತ್ತು. ಅಕ್ಟೋಬರ್ 10 ರಂದು ನ್ಯಾಯಾಲಯವು ಅಕ್ಟೋಬರ್ 13 ರವರೆಗೆ ಮೂರು ದಿನಗಳ ಕಾಲ ಇಡಿ ಬಂಧನವನ್ನು ವಿಸ್ತರಿಸಿತ್ತು.
ಬೆಂಗಳೂರು: “ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದಾದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯನ್ನೇ ತಂದು ಚರ್ಚೆ ಮಾಡಿದ್ದಾರೆ. ವಿವಿಧ ಪಕ್ಷಗಳ 42 ಕ್ಕೂ ಹೆಚ್ಚು ಮುಖಂಡರ ಅರ್ಜಿಗಳು ನನ್ನ ಮುಂದಿದೆ. ಆ ಹೆಸರುಗಳನ್ನು ಈಗ ಬಹಿರಂಗ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಮಾಜಿ ಶಾಸಕ, ಶಿರಹಟ್ಟಿಯ ರಾಮಪ್ಪ ಲಮಾಣಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:“ಸ್ಥಳೀಯ ನಾಯಕರುಗಳ ಜತೆ ಚರ್ಚೆ ಮಾಡಿ, ಒಮ್ಮತ ಮೂಡಿಸಿ ಅನ್ಯ ಪಕ್ಷಗಳ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ವಿರೋಧ ಪಕ್ಷಗಳ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗಿದೆ” ಎಂದು ಹೇಳಿದರು. “ಕೆಲವರು 2024 ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಅದರ…
ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಮತ್ತು ಜಯಂತ್ಸೋವವನ್ನು ಆರಂಭಿಸಿದೆ ಎಂದು ವಿವರಿಸಿದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ, ಬೈಲಹೊಂಗಲ ಶಾಸಕರಾದ ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.
ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ಎಂದು ಬದಲಿಸಿರುವುದಕ್ಕೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರ್ಡ್ ಮರು ವಿಂಗಡಣೆಯ ಕರಡು ಪಟ್ಟಿಯಲ್ಲಿ ಬಸವನಗುಡಿ ವಿಧಾನಸಭೆ ಕ್ಷೇತ್ರದ 198ನೇ ವಾರ್ಡ್ ಹೆಸರು ಬಸವನಗುಡಿ ಎಂದಿತ್ತು. ಆದರೆ, ಅಂತಿಮ ಅಧಿಸೂಚನೆಯಲ್ಲಿ ಇದನ್ನು ‘ದೊಡ್ಡ ಗಣಪತಿ’ ಎಂದು ಬದಲಿಸಲಾಗಿದೆ. ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಧಿಸೂಚನೆಯಾಗಿದ್ದು, ಇದನ್ನು ಕೂಡಲೇ ಬದಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಿಟ್ ಕಾಯಿನ್ ಅಕ್ರಮ ಪ್ರಕರಣದ ಪ್ರಮುಖ ಸಾಕ್ಷ್ಯ ಎನ್ನಲಾದ ಲ್ಯಾಪ್‌ಟಾಪ್ ನಾಪತ್ತೆಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ಆತನಿಗೆ ಬೇರೆ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್ ಕೊಟ್ಟಿದ್ದರು. ಅದೇ ಲ್ಯಾಪ್ ಟಾಪ್ ಬಳಸಿಕೊಂಡು ಶ್ರೀಕಿ, ಬಿಟ್ ಕಾಯಿನ್ ವರ್ಗಾವಣೆ ಮಾಡಿದ್ದನೆಂಬ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ನೇರಲಿಗೆ ಗ್ರಾಮದಲ್ಲಿ ನಡೆದಿದೆ. ಶಾಂತಿಬಾಯಿ 70 ವರ್ಷ ಹೆತ್ತ ಮಗನಿಂದಲೇ ಹತ್ಯೆಯಾದ ದುರ್ದೈವಿ. ಮಗ ಲೋಕೇಶ ನಾಯ್ಕ ಮದ್ಯವ್ಯಸನಿಯಾಗಿದ್ದು, ನಿತ್ಯವೂ ಕುಡಿದು ಬಂದು ತಾಯಿಯೊಂದಿಗೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ. ರಾತ್ರಿ ಕುಡಿದು ಬಂದಿದ್ದ ಲೋಕೇಶ ತನ್ನ ತಾಯಿ ಜೊತೆಗೆ ಜಗಳವಾಡಿ ಹೆಂಚಿನಿಂದ ತಲೆಗೆ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾಯಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟೊಮೆಟೊ ಕೆಚಪ್ ಅನ್ನು ಸಮೋಸಾ, ಬ್ರೆಡ್, ಪಕೋಡಾ ಮುಂತಾದವುಗಳನ್ನು ಸೇವಿಸುವಾಗ ಹೆಚ್ಚಿನ ಜನರು ಬಳಸ್ತಿದ್ದಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ ಟೊಮೆಟೊ ಕೆಚಪ್ ಕೆಡದಂತೆ ಕಾಪಾಡಲು ಅನೇಕ ರಾಸಾಯನಿಕಗಳನ್ನು ಬಳಸುತ್ತಾರೆ. ಹಾಗಾಗಿ ಟೊಮೆಟೊ ಕೆಚಪ್ ಅನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತದೆ. ಇದರಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಆಸ್ತಿಯ ಮಾಲಕತ್ವದಲ್ಲಿ ಬದಲಾವಣೆ ವಿಷಯದಲ್ಲಿ ಅವ್ಯಹಾರ ನಡೆಸಿದ ಆರೋಪದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಅಧಿಕಾರಿಯನ್ನು ಇಂದು ಅಮಾನತು ಗೊಳಿಸಿ ಕಲಬುರಗಿ ಪಾಲಿಕೆ ಆಯುಕ್ತರು ಆದೇಶ ಹೋರಡಿಸಿದ್ದಾರೆ. ವಿನೋದ ಕುಮಾರ ವ೦ಟಿ ಪಾಲಿಕೆಯ ವ್ಯವಸ್ಥಾಪಕರಾಗಿದ್ದ. 1966ರ ನಿಯಮ 3(i) (ii) (iii) ನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ಪ್ರಕಾರ ಶಿಸ್ತಿನ ಕ್ರಮಕ್ಕೆ ಗುರಿಯಾಗಿದ್ದಾರೆ. ಇವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.