Subscribe to Updates
Get the latest creative news from FooBar about art, design and business.
- ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
- ತುಮಕೂರು ಜಿಲ್ಲೆಯಲ್ಲಿ 19.39 ಲಕ್ಷ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
- ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಶಶಿಧರ ಹೆಚ್.ಜಿ.
- ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
- ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
- ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
Author: admin
ಚೆನ್ನೈನಲ್ಲಿ ಇಬ್ಬರು ರೌಡಿ ಶೀಟರ್ ಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಎಐಎಡಿಎಂಕೆ ನಾಯಕ ಪಾರ್ತಿಬನ್ ಹತ್ಯೆ ಕೇಸ್ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಸರವಣನ್, ಮುತ್ತು ಎಂಬ ರೌಡಿ ಶೀಟರ್ ಗಳು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಆತ್ಮರಕ್ಷಣೆಗಾಗಿ ಪೊಲೀಸ್ ಗುಂಡು ಹಾರಿಸಲಾಗಿದ್ದು, ರೌಡಿ ಶೀಟರ್ ಗಳಾದ ಮುತ್ತು ಸರವಣನ್ ಸಾವನ್ನಪ್ಪಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಟ್ವಿಟರ್, ಟೆಲಿಗ್ರಾಮ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಸರಕಾರ ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್ ಇದ್ದರೆ ಅದನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಲಾಗಿದೆ. ಇಲ್ಲವಾದಲ್ಲಿ ಸುರಕ್ಷಿತ ಬಂದರಿನ ಸ್ಥಾನಮಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಸುರಕ್ಷಿತ ಬಂದರು ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಹೇಳಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳನ್ನ ಶಾಶ್ವತವಾಗಿ ಅಳಿಸಬೇಕು ಮತ್ತು ಅನುಮತಿಸಬಾರದು. ಅಲ್ಗಾರಿದಮ್ ನಲ್ಲಿ ಬದಲಾವಣೆ ಮಾಡಿ ಅಳವಡಿಸಬೇಕು ಎಂದು ತಿಳಿಸಲಾಗಿದೆ.
‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ಕೋರಿಕೆಯಷ್ಟು ಅಕ್ಕಿಯನ್ನು ಎಫ್ ಸಿಐ ನಿಗದಿಪಡಿಸಿದ ದರದಲ್ಲಿ (ಪ್ರತಿ ಕೆ. ಜಿಗೆ 1 34) ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿವೆ. ಇದೇ ತಿಂಗಳಿನಿಂದ ನಗದು ಬದಲು ಪೂರ್ಣ ಪ್ರಮಾಣದಲ್ಲಿ ಅಕ್ಕಿ ಪೂರೈಸಲು ನಿರ್ಧರಿಸಿರುವ ಇಲಾಖೆ, ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ.
ಬೆಂಗಳೂರು: ಬೆಂಗಳೂರು-ಬ್ರಾಂಡೆಂಡ್ ಹೆಸರಲ್ಲಿ ನಕಲಿ ಬಟ್ಟೆ ಮಾಫೀಯಾ ನಗರದಲ್ಲಿ ನಡೆಯುತ್ತಿದೆ. ಹೆಸರಾಂತ ಬ್ರಾಂಡೆಂಡ್ ಹೆಸರಲ್ಲಿ ಬಟ್ಟೆ ತಯಾರು ಮಾಡ್ತಿದ್ದ ಫ್ಯಾಕ್ಟರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸ್ ರಿಂದ ಎರಡು ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನ ಸೀಜ್ ಮಾಡಿದ್ದಾರೆ. ಲೊಕಾಸ್ಟೆ, ಗಾಂಟ್, ಪೋಲೋ ಬಾರ್ಬೆರಿ ಸೇರಿದಂತೆ ಇನ್ನಿತರ ಹೆಸರಲ್ಲಿ ನಕಲಿ ಬಟ್ಟೆ ಅನುಮತಿ ಇಲ್ಲದೆ ಬ್ರಾಂಡೆಂಡ್ ಲೇಬಲ್ ಬಳಸುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ.
ನಮ್ಮತುಮಕೂರು: ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸುದ್ದೇಕುಂಟೆ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ತುಮಕೂರು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ..-ಎಸ್.ಸಿ.(ಫೋಕ್ಸೋ)ವು ಕಠಿಣ ಶಿಕ್ಷೆ ವಿಧಿಸಿದೆ. ದಿನಾಂಕ 12—08—2021ರಂದು 13 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿ ತನ್ನ ಅಜ್ಜಿಯ ಜೊತೆಗೆ ಇದ್ದ ವೇಳೆ ಅದೇ ಗ್ರಾಮದ ವಾಸಿ 40 ವರ್ಷ ವಯಸ್ಸಿನ ಮಂಜುಳಾ(1ನೇ ಆರೋಪಿ) ನೊಂದ ಬಾಲಕಿಯ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಎಲ್ ಐಸಿಗೆ ಫೋಟೋ ತೆಗೆದು ವಾಟ್ಸಾಪ್ ಮಾಡಿಕೊಡು ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿನ ಮನೆಯ ಮೇಲಿನ ರೂಮಿಗೆ ಕರೆದೊಯ್ದು ರೂಮಿಗೆ ತಳ್ಳಿದ್ದಾಳೆ. ಈ ವೇಳೆ ರೂಮಿನ ಬಾಗಿಲಿನ ಹಿಂದೆ ಅಡಗಿಕೊಂಡಿದ್ದ 2ನೇ ಆರೋಪಿ ಬಲರಾಮ ಹಾಗೂ ಮೂರನೇ ಆರೋಪಿ ಸಿದ್ದಪ್ಪ ಹೊರ ಬಂದಿದ್ದು, ಮಂಜುಳಾ ಹಾಗೂ ಸಿದ್ದಪ್ಪ ಸೇರಿ ಬಾಲಕಿಯನ್ನು ವಿವಸ್ತ್ರಗೊಳಿಸಿ ಕೈ ಹಾಗೂ ಬಾಯಿಗೆ ಟೇಪ್ ನ್ನು ಕಟ್ಟಿದ್ದಾರೆ. 2ನೇ…
ಕರ್ನಾಟಕ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿದೆ. ಪ್ರಧಾನ ಕಾರ್ಯದರ್ಶಿ, ಕಾರ್ಯಕಾರಿ ನಿರ್ದೇಶಕ, ನಿರ್ದೇಶಕರು, ವಿಶೇಷ ಆಯುಕ್ತರು ಹೀಗೆ ಹಲವು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ. ಮೌನೀಶ್ ಮೌದ್ಗೀಲ್, ಪ್ರೀತಿ ಗೆಲ್ಲೋಟ್, ವಿನೋತ್ ಪ್ರಿಯ, ಸ್ನೇಹಲ್ ಆರ್., ಇಬ್ರಾಹಿಂ ಮೈಗೂರ್ ಸೇರಿ ಒಟ್ಟು 6 ಐಎಎಸ್ ಅಧಿಕಾರಿಗಳಿಗೆ ಈಗ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಅಮೆಜಾನ್ ನಿಂದ ಆಪಲ್ ಮ್ಯಾಕ್ ಬುಕ್ ಆರ್ಡರ್ ಮಾಡಿದ ನಂತರ ಗ್ರಾಹಕನೊಬ್ಬ ಮುರಿದ HP ಲ್ಯಾಪ್ ಟಾಪ್ ಸ್ವೀಕರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ರೆಡಿಟ್ ಮೂಲಕ ತಿಳಿಸಿದ್ದಾನೆ. ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಆತ ಮುರಿದ ಲ್ಯಾಪ್ ಟಾಪ್ ಫೋಟೋ ಹಂಚಿಕೊಂಡಿದ್ದಾನೆ. ನಾನು ಮ್ಯಾಕ್ಬುಕ್ ಏರ್ M1ಗಾಗಿ ಆರ್ಡರ್ ಮಾಡಿದ್ದೇ. ಆದರೆ ನಾನು ಮುರಿದ ಎಚ್ ಪಿ ಲ್ಯಾಪ್ ಟಾಪ್ ನ್ನು ಪಡೆದುಕೊಂಡಿದ್ದು, ಈ ಬಗ್ಗೆ ಅಮೆಜಾನ್ ಗೆ ದೂರು ನೀಡಿದ್ದೇನೆ ಎಂದು ಆತ ತಿಳಿಸಿದ್ದಾನೆ.
ದೇಹಕ್ಕೆ ವಿವಿಧ ರೀತಿಯ ವಿಟಮಿನ್-ಪ್ರೋಟೀನ್ ಗಳ ಅವಶ್ಯಕತೆ ಇರುತ್ತದೆ. ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ದಿನಕ್ಕೆ ಒಂದು ಮೊಟ್ಟೆ ತಿಂದರೆ, ಮೂಳೆಗಳು ಬಲಗೊಳ್ಳುವುದಲ್ಲದೆ, ಕೀಲು ನೋವಿನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ, ಬುದ್ಧಿ ಶಕ್ತಿಯು ಚುರುಕಾಗುತ್ತದೆ, ದೇಹದ ತೂಕ ಕಡಿಮೆ ಮಾಡುತ್ತದೆ, ಕಣ್ಣಿನ ರೆಟಿನಾದ ಆರೋಗ್ಯ ವೃದ್ಧಿಸುತ್ತದೆ, ದಲು ಮತ್ತು ತ್ವಚೆಯು ಕಾಂತಿಯುತವಾಗುತ್ತದೆ. ಹೀಗೆ ಇನ್ನು ಹಲವು ಆರೋಗ್ಯ ಪ್ರಯೋಜನಗಳು ಮೊಟ್ಟೆಯಲ್ಲಿವೆ.
ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ(23) ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗುವ ಮೂಲಕ ರಾಜತಾಂತ್ರಿಕರ ಕಾರ್ಯವೈಖರಿಯನ್ನು ಕಂಡುಕೊಂಡರು. ಅಲ್ಲದೇ, ಯುಕೆ-ಭಾರತದ ಪಾಲುದಾರಿಕೆಯನ್ನು ಕಾರ್ಯರೂಪಕ್ಕೆ ತರಲು ಬಯಸಿದರು. ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲು (ಅಕ್ಟೋಬರ್ 11) 2017 ರಿಂದ ಪ್ರತಿ ವರ್ಷ ‘ಹೈ ಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.
ಮಾಜಿ ಪ್ರೇಯಸಿಯ ಮೇಲೆ ಯುವಕನೊಬ್ಬ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಘಟನೆ ಬೆಂಗಳೂರಿನ ಪೂರ್ವ ವಲಯದಲ್ಲಿ ನಡೆದಿದೆ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಇಬ್ಬರ ನಡುವೇ ಲವ್ ಬ್ರೇಕಪ್ ಆಗಿದ್ದರೂ ಯುವಕ ತನಗೆ ಮೆಸೇಜ್ ಮಾಡುವಂತೆ, ಫೋನ್ ಮಾಡುವಂತೆ ಒತ್ತಡ ಹಾಕುತ್ತಿದ್ದ. ಅದರಂತೆ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾಳೆ.