Subscribe to Updates
Get the latest creative news from FooBar about art, design and business.
- SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!
- 10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!
- ಚಪ್ಪಲಿ ಎಸೆತ ಪ್ರಕರಣ: ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್!
- ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯ: ಡಿಸಿಎಂ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಎಸ್ ಸಿ ಮೋರ್ಚಾ ಒತ್ತಾಯ
- ಸಮಸ್ಯೆಯನ್ನು ಆಲಿಸಲು ಪ್ರತಿನಿತ್ಯ ಪೋತಿ ಖಾತೆ ಅಭಿಯಾನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ
- ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು
- ನಮ್ಮ ತುಮಕೂರು ಫಲಶ್ರುತಿ: ಕಾರ್ಮಿಕರಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣ: ಸಫಾಯಿ ಕರ್ಮಚಾರಿಗಳ ಆಯೋಗ ಸ್ಥಳಕ್ಕೆ ಭೇಟಿ
Author: admin
ಒಂಟಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಾವಳ್ಳಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ವಯಸ್ಸಿನ ಸಾವಿತ್ರಮ್ಮ ಕೃತ್ಯದಲ್ಲಿ ಬಲಿಯಾದ ಮಹಿಳೆಯಾಗಿದ್ದು, ಸಾವಿತ್ರಮ್ಮ ರಾಗಿ ಹಿಟ್ಟು ಆಡಿಸಲು ಹೋಗುವ ಸಂದರ್ಭದಲ್ಲಿ ಹಿಂಬಾಲಿಸಿ, ಬಲವಂತವಾಗಿ ಎಳೆದುಕೊಂಡು ಹೋಗಿ ಬಲತ್ಕಾರ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂದ ಶ್ವಾನದಳದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಆರೋಪಿಯು ಸಿಕ್ಕಿ ಬಿದ್ದಿದ್ದಾನೆ. ಇದೇ ಗ್ರಾಮದ ಮಲ್ಲಿಕಾರ್ಜುನ ಎಂಬಾತ ಹತ್ಯೆ ಆರೋಪಿಯಾಗಿದ್ದು, ಈತ ಸಾವಿತ್ರಮ್ಮನವರ ಸಂಬಂಧಿಯಾಗಿದ್ದು, ಜಮೀನು ವಿಚಾರದಲ್ಲಿ ಸಾವಿತ್ರಮ್ಮನವರಿಗೂ ಆರೋಪಿಗೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಸಾವಿತ್ರಮ್ಮನವರನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರ ತನಿಖೆಯ ಬಳಿಕ ಘಟನೆಯ ಸತ್ಯಾಸತ್ಯತೆ ತಿಳಿದು ಬರಬೇಕಿದೆ.…
ಬೆಂಗಳೂರು: ನೂರನೇ ಸಂಚಿಕೆಯ ಮನ್ ಕೀ ಬಾತ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆದರೆ, ಸದ್ಯ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುದರಿಂದ ಮೋದಿ ಭಾನುವಾರವೂ ರಾಜ್ಯದಲ್ಲೇ ಇರಲಿದ್ದಾರೆ. ಅವರು ಮನ್ ಕೀ ಬಾತ್ನ ನೂರನೇ ಸಂಚಿಕೆ ಕಾರ್ಯಕ್ರಮ ವೀಕ್ಷಣೆ ಮಾಡಲು ರಾಜ್ಯದಲ್ಲೇ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ 100 ನೇ ಸಂಚಿಕೆಯ ಪ್ರಸಾರಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗಾಗಲೇ ವಿಶೇಷ ಸಿದ್ಧತೆಗಳನ್ನು ನಡೆಸಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಬುಧವಾರ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ 105 ಜನರನ್ನು ವಿಶೇಷವಾಗಿ ಆಹ್ವಾನಿಸಲಾಗಿದ್ದು, ಅವರ ಸೃಜನಶೀಲ ಮತ್ತು ಸಾಮಾಜಿಕ ಕಾರ್ಯಗಳನ್ನು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಮೋದಿ ಇಂದು (ಶನಿವಾರ) ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಅವರು ಯಾವುದೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ರಾಜಭವನದಲ್ಲೇ ಇದ್ದುಕೊಂಡು ಮನ್ ಕೀ ಬಾತ್ನ ನೂರನೇ…
ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ ಅಥವಾ ಇನ್ನಿತರ ದೈಹಿಕ ಚಟುವಟಿಕೆಗಳಿಂದ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಂಶೋಧನೆ ನಡೆಸಿದೆ. ಇದರ ಅನುಸಾರ ಔಷಧಗಳಿಗಿಂತ ವ್ಯಾಯಾಮಗಳು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಈ ಕುರಿತು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ನಲ್ಲೂ ಪ್ರಕಟವಾಗಿದೆ. ಈ ಸಂಬಂಧ ವು 97 ಅಧ್ಯಯನ, 1039 ಪ್ರಯೋಗ ನಡೆಸಿದ್ದು, 1, 28, 119 ಭಾಗಿದಾರರ ಮೇಲೆ ಅಧ್ಯಯನ ಮಾಡಲಾಗಿದೆ. ಈ ವೇಳೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿದವರಲ್ಲಿ ದುಃಖ, ಆತಂಕ ಮತ್ತು ಖಿನ್ನತೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು 12 ವಾರಗಳ ಕಾಲ ಅಧ್ಯಯನ ನಡೆಸಲಾಗಿದೆ. ಇವರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ದೈಹಿಕ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ತಿಳಿದು ಬಂದಿದೆ. ಅದರಲ್ಲೂ ಗರ್ಭಿಣಿ ಮತ್ತು ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಡುವ ಮಾನಸಿಕ ಸಮಸ್ಯೆ, ಇನ್ನಿತರ ರೋಗಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ…
ಅಹಮದಾಬಾದ್: ಮೋದಿ ಉಪನಾಮ ಹೇಳಿಕೆ ಕುರಿತು ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದ ಕಾರಣ, ಪ್ರಕರಣ ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ. ಗೀತಾ ಗೋಪಿ ಅವರು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಜೆ ದೇಸಾಯಿ ಅವರಿಗೆ ಹಸ್ತಾಂತರಿಸುವಂತೆ ಅಥವಾ ಬೇರೆ ಪೀಠಕ್ಕೆ ನಿಯೋಜಿಸುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶನ ನೀಡಿದ್ದರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಕಳೆದ ತಿಂಗಳು, ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದಲೂ ಅನರ್ಹಗೊಳಿಸಲಾಗಿತ್ತು. ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ ಟೀಕೆ’ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಪ್ರಕರಣ ದಾಖಲಿಸಿದ್ದರು. ನಮ್ಮತುಮಕೂರು.ಕಾಂನ…
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಏಷ್ಯಾದ ಅತ್ಯಂತ ಜನಪ್ರಿಯ ಕ್ರೀಡಾ ತಂಡವಾಗಿದೆ. ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಸೌದಿ ಕ್ಲಬ್ ಅಲ್ ನಾಸರ್ ನಂತರ ಸಿಎಸ್‌ಕೆ ಮೊದಲ ಸ್ಥಾನದಲ್ಲಿದೆ. ಡಿಪೋರ್ಟೆಸ್ ಮತ್ತು ಫೈನಾನ್ಸ್‌ನ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಏಷ್ಯಾದ ಅತ್ಯಂತ ಜನಪ್ರಿಯ ಕ್ರೀಡಾ ತಂಡವಾಗಿ ಆಯ್ಕೆಯಾಗಿದೆ. ಮಾರ್ಚ್ 2023 ರಲ್ಲಿ ಟ್ವಿಟರ್ ಸಂವಹನದ ಆಧಾರದ ಮೇಲೆ ಡಿಪೋರ್ಟೆಸ್ ಮತ್ತು ಫೈನಾಂಜಾಸ್ ತಂಡಗಳನ್ನು ಶ್ರೇಣೀಕರಿಸುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ 512 ಮಿಲಿಯನ್ ಸಂವಾದಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಆದರೆ ಅಲ್-ನಾಸ್ರ್ ಎಫ್‌ಸಿ 500 ಮಿಲಿಯನ್ ಸಂವಾದಗಳೊಂದಿಗೆ ನಂತರದ ಸ್ಥಾನದಲ್ಲಿದೆ. CSK ಹೊರತುಪಡಿಸಿ, ಇತರ ಎರಡು IPL ಫ್ರಾಂಚೈಸಿಗಳು Twitter ನಲ್ಲಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪಟ್ಟಿಯಲ್ಲಿರುವ ಇತರ ಐಪಿಎಲ್ ಫ್ರಾಂಚೈಸಿಗಳೆಂದರೆ ವಿರಾಟ್ ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್. ರಾಯಲ್ ಚಾಲೆಂಜರ್ಸ್ ಬೆಂಗಳೂರು 345…
ಹಾಸನ: ಜೆಡಿಎಸ್ ಒಂದೇ ಕುಟುಂಬದ ಪಕ್ಷ, ಮಧ್ಯದಲ್ಲಿ ಒಂದು ಬೇರೆ ಮುಖ ಇರಲಿ ಎಂದು ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಹಾಸನದ ಹಳ್ಳಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರು ನಮ್ಮದು ವಂಶ ಪಾರಂಪರಿಕ ಪಕ್ಷವೆಂದು ಟೀಕೆ ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆ ಪಕ್ಷಕ್ಕೆ ಮತ್ತೆ ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿಯವರು ಹೇಳಬೇಕು. ಇದರ ನಡುವೆ ನಮ್ಮ ಸಿಸ್ಟರ್ ಭವಾನಿ ರೇವಣ್ಣ ಟಿಕೆಟ್‍ಗಾಗಿ ಹೋರಾಟ ಮಾಡಿದ್ದರು. ಮತದಾರರು ಇಂತಹ ಪಕ್ಷವನ್ನು ಬೆಂಬಲಿಸಬೇಕಾ ಎಂದು ಕುಟುಕಿದ್ದಾರೆ. ಕನಕದಾಸ ಜಯಂತಿ ಘೋಷಣೆ ಹಾಗೂ ಕಾಗಿನೆಲೆ ಪ್ರತಿಷ್ಠಾನ ಮಾಡಿದ್ದು ಯಡಿಯೂರಪ್ಪನವರು. ಇದು ಕುರುಬರ ವೋಟಿಗಾಗಿ ಅಲ್ಲ. ಕನಕದಾಸರ ವಿಚಾರಧಾರೆ ಎಲ್ಲರಿಗೂ ತಲುಪಬೇಕು ಎಂದು ಈ ಅಭಿವೃದ್ಧಿ ಮಾಡಿದ್ದಾರೆ. ಇದೇ ರೀತಿ ಎಲ್ಲಾ ಸಮಾಜಗಳಿಗೂ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ…
ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತಿ ತಡೆದಿದ್ದಕ್ಕೆ 34 ವರ್ಷದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಈ ಘಟನೆ ನಡೆದಿದೆ. ನಗರದ ಸ್ಕೀಮ್ ನಂಬರ್ 51 ಎಂಬ ಪ್ರದೇಶದಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಸಬ್ ಇನ್ಸ್‌ಪೆಕ್ಟರ್ ಉಮಾ ಶಂಕರ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬ್ಯೂಟಿಪಾರ್ಲರ್‌ಗೆ ಹೋಗುತ್ತಿದ್ದ ಪತ್ನಿಯನ್ನು ತಡೆದಿದ್ದರಿಂದ ಕೋಪಗೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತಿ ಪೊಲೀಸರಿಗೆ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಅಂತರ್ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರಿಗಾಗಿ ಆಪರೇಷನ್ ಕಾವೇರಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸುಡಾನ್‌ನಿಂದ ಭಾರತೀಯರ ಇನ್ನೂ ಎರಡು ಗುಂಪುಗಳು ಸುರಕ್ಷಿತವಾಗಿ ಜೆಡ್ಡಾಕ್ಕೆ ಬಂದಿವೆ. ಜೆಡ್ಡಾದಿಂದ ಮೂರನೇ ವಿಮಾನ ಭಾರತಕ್ಕೆ ಆಗಮಿಸಿದೆ. ಪೋರ್ಟ್ ಸುಡಾನ್‌ನಿಂದ 256 ಭಾರತೀಯರು ಇಂದು ವಾಯುಪಡೆಯ ವಿಮಾನದಲ್ಲಿ ಜೆಡ್ಡಾಕ್ಕೆ ಆಗಮಿಸಿದ್ದಾರೆ. ಹತ್ತು ಬ್ಯಾಚ್‌ಗಳಲ್ಲಿ ಇದುವರೆಗೆ 1839 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ರಾಯಭಾರಿ ಕಚೇರಿಯ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ನಾಗರಿಕ ಯುದ್ಧ ವಲಯದಿಂದ ಸಾಹಸಮಯ ರೀತಿಯಲ್ಲಿ ರಕ್ಷಿಸಲಾಯಿತು. ಸುಡಾನ್‌ನಿಂದ 392 ಜನರನ್ನು ಸ್ಥಳಾಂತರಿಸುವುದರೊಂದಿಗೆ ವಾಯುಪಡೆಯ ಗ್ಲೋಬ್‌ಮಾಸ್ಟರ್ ಸಿ-17 ವಿಮಾನದಲ್ಲಿ ಭಾರತೀಯ ಪ್ರಜೆಗಳನ್ನು ದೆಹಲಿಗೆ ಕಳುಹಿಸಲಾಯಿತು. ಇಂದು ದೆಹಲಿಗೆ ಆಗಮಿಸಿದ ಗುಂಪಿನಲ್ಲಿ ಇಬ್ಬರು ಮಲಯಾಳಿಗಳಿದ್ದಾರೆ. 362 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಮತ್ತೊಂದು ವಿಮಾನ ಬೆಂಗಳೂರಿಗೆ ಆಗಮಿಸಲಿದೆ. ಸರ್ಕಾರಿ ವೆಚ್ಚದಲ್ಲಿ ಮಲಯಾಳಿಗಳನ್ನು ಮನೆಗೆ ಕರೆತರಲಾಗುವುದು. ಎಲ್ಲಾ ಭಾರತೀಯರನ್ನು ಸ್ಥಳಾಂತರಿಸುವವರೆಗೆ ಆಪರೇಷನ್ ಕಾವೇರಿ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಬೆಳಗಾವಿ: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರ ಮೇಲೆ ನಡೆದ ಹಲ್ಲೆ ಘಟನೆಯನ್ನು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಚುನಾವಣಾ ಪ್ರಚಾರದ ರೋಡ್ ಶೋ ವೇಳೆ ದುಷ್ಕರ್ಮಿಗಳು ಜಿ. ಪರಮೇಶ್ವರ ಅವರ ಮೇಲೆ ಕಲ್ಲು ತೂರಿ ಗಂಭೀರ ಗಾಯಗೊಳಿಸಿದ್ದಾರೆ. ಇಂಥ ಘಟನೆ ಕಾನೂನು ಸುವ್ಯವಸ್ಥೆಯ ಕಗ್ಗೊಲೆಯಾಗಿದೆ ಎಂದು ಅವರು ಹೇಳಿದ್ದಾರೆ. ಡಾ.ಜಿ. ಪರಮೇಶ್ವರ ಅವರು ಅತ್ಯಂತ ಸೌಮ್ಯ, ಸರಳ ಸಜ್ಜನ ರಾಜಕಾರಣಿಯಾಗಿ ಪರಿಚಿತರು. ನಿರ್ವಿವಾದದಿಂದ ಕೂಡಿದ ರಾಜಕೀಯ ಜೀವನ ನಡೆಸುತ್ತಿರುವ ಹಿರಿಯ ರಾಜಕಾರಣಿ. ಅಂಥವರನ್ನು ಈ ರೀತಿಯ ಹಿಂಸಾತ್ಮಕ ರೀತಿಯಲ್ಲಿ ನಡೆಸಿಕೊಳ್ಳುವುದು ಯಾರಿಗೂ ಶೋಭೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವನ್ನು ವೈಯಕ್ತಿಕ ದ್ವೇಷಕ್ಕಾಗಿ ಬಳಸುವುದು ಹೀನಾಯ ಕೃತ್ಯ. ಹಿಂಸೆಯ ರೂಪದಲ್ಲಿ ರಾಜಕೀಯ ದ್ವೇಷದ ಇಂಥ ಕೃತ್ಯಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು. ಈ ಹಿಂದೆಯೂ ನಾಮಪತ್ರ…
ತುಮಕೂರು: ಮೇಕೆ ಮರಿ ಕೊಡುವುದಾಗಿ 5 ವರ್ಷದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ತುಮಕೂರಿನ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(ಪೋಕ್ಸೋ)ವು 10 ವರ್ಷ ಜೈಲು ಶಿಕ್ಷೆ ಹಾಗೂ 1.10 ಲಕ್ಷ ರೂಪಾಯಿ ದಂಡ ವಿಧಿಸಿದೆ. 2021ರಲ್ಲಿ ಈ ಘಟನೆ ನಡೆದಿತ್ತು. ನೊಂದ ಬಾಲಕಿಯ ತಾಯಿ ತನ್ನ ಎರಡನೇ ಮಗುವಿನ ಬಾಣಂತನಕ್ಕೆ ಪಾವಗಡ ತಾಲೂಕಿನ ಓಬಾಳಪುರ ಗ್ರಾಮಕ್ಕೆ ಆಗಮಿಸಿದ್ದರು. ದಿನಾಂಕ 13—01—2022ರಂದು ಬೆಳಗ್ಗೆ ಸುಮಾರು 10 ಗಂಟೆಗೆ ನೊಂದ ಬಾಲಕಿಯು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದಳು. ಈ ವೇಳೆ ಕಾವಲಪ್ಪ(45) ಎಂಬಾತ ಮೇಕೆ ಮರಿಕೊಡಿಸುವುದಾಗಿ ಕರೆದೊಯ್ದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣದ ತನಿಖಾಧಿಕಾರಿ ಎಸ್.ಆರ್.ಕಾಂತರೆಡ್ಡಿ ಅವರು ಪೋಕ್ಸೋ ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ವಿಚಾರಣೆಯಲ್ಲಿ ಅಪರಾಧಿಯ ಕೃತ್ಯ ಸಾಬೀತಾದ ಕಾರಣ, ನ್ಯಾಯಾಧೀಶರಾದ ಸಂಧ್ಯಾ ರಾವ್ ಪಿ., ಅವರು ಅಪರಾಧಿ ಕಾವಲಪ್ಪನಿಗೆ 10 ವರ್ಷ ಜೈಲುಶಿಕ್ಷೆ 1.10 ಲಕ್ಷ ರೂಪಾಯಿ…