Subscribe to Updates
Get the latest creative news from FooBar about art, design and business.
- SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!
- 10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!
- ಚಪ್ಪಲಿ ಎಸೆತ ಪ್ರಕರಣ: ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್!
- ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯ: ಡಿಸಿಎಂ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಎಸ್ ಸಿ ಮೋರ್ಚಾ ಒತ್ತಾಯ
- ಸಮಸ್ಯೆಯನ್ನು ಆಲಿಸಲು ಪ್ರತಿನಿತ್ಯ ಪೋತಿ ಖಾತೆ ಅಭಿಯಾನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ
- ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು
- ನಮ್ಮ ತುಮಕೂರು ಫಲಶ್ರುತಿ: ಕಾರ್ಮಿಕರಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣ: ಸಫಾಯಿ ಕರ್ಮಚಾರಿಗಳ ಆಯೋಗ ಸ್ಥಳಕ್ಕೆ ಭೇಟಿ
Author: admin
ಯಮಕನಮರಡಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಿಜೆಪಿ, ಜೆಡಿಎಸ್ ನ ಅಪಾರ ಸಂಖ್ಯೆಯ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲಡೆ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಜನ ಬೆಂಬಲ ನೋಡಿದರೆ ಯಮಕನಮರಡಿಯಲ್ಲಿ ಕಾಂಗ್ರೆಸ್ ಬಾವುಟ ಹಾರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ವಾಡಿ ಸಿದ್ಲ್ಯಾಳ, ದಡ್ಡಿ ಗ್ರಾಮಗಳ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ ಶಾಸಕ ಸತೀಶ್ ಜಾರಕಿಹೊಳಿಯವರು ಮತಯಾಚಿಸಿ, ಮಾತನಾಡಿದರು. ಯಮಕನಮರಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ಸುಧಾರಣೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ 2 ಕೋಟಿಯಿಂದ 5 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ. ಹಳ್ಳಿಗಳ ಗ್ರಾಮೋದ್ಧಾರಕ್ಕೆ ಶ್ರಮಿಸಿದ್ದೇನೆ ಎಂದು ತಿಳಿಸಿದರು. ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿ ಕಲ್ಪನೆಯೊಂದಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ…
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 60 ವರ್ಷದ ಐಶಿಲಾಲ್ ಜಾಮ್ ಅಲಿಯಾಸ್ ದಯಾಸಿಂಗ್ ಬಂಧಿತ ಆರೋಪಿ. ಪತ್ರದ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಕ್ರೈಮ್ ಬ್ರಾಂಚ್) ನಿಮಿಷ್ ಅಗರ್ವಾಲ್ ಹೇಳಿದ್ದಾರೆ. ಸಂಬಂಧಿತ ಘಟನೆಯು ಕಳೆದ ವರ್ಷ ನವೆಂಬರ್ 2022 ರಲ್ಲಿ ನಡೆಯಿತು. ಯಾತ್ರೆ ಮಧ್ಯಪ್ರದೇಶದ ಇಂದೋರ್ ಪ್ರವೇಶಿಸಿದ ಕೂಡಲೇ ರಾಹುಲ್ ಗಾಂಧಿಗೆ ಬಾಂಬ್ ಹಾಕುವುದಾಗಿ ಪತ್ರ ಕಳುಹಿಸಿದ್ದವರು ಬೆದರಿಕೆ ಹಾಕಿದ್ದರು. ಇಂದೋರ್‌ನ ಸಿಹಿತಿಂಡಿ ಅಂಗಡಿಯೊಂದರ ಹೊರಗೆ ಪತ್ರ ಪತ್ತೆಯಾಗಿದೆ. ನಂತರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 507 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು. ಇದೇ ವೇಳೆ ಐಶಿಲಾಲ್ ಜಾಮ್ ರೈಲಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ನಂತರ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಕ್ರೈಮ್ ಬ್ರಾಂಚ್) ನಿಮಿಷ್…
ಬಹಿರ್ದೆಸೆಗೆ ಹೋಗಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ತುಮಕೂರಿನ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ (ಪೋಕ್ಸೋ) 30 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತ ಬಾಲಕಿಯು ತನ್ನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಹೊರಗಡೆ ಬಹಿರ್ದೆಸೆಗೆ ಹೋಗುತ್ತಿದ್ದಳು. ಇದೇ ಗ್ರಾಮದ ನಿವಾಸಿಯಾದ ಅಪರಾಧಿ ಹನುಮಂತ ಎಂಬಾತ ಮದುವೆಯಾಗಿ ಮೂವರು ಮಕ್ಕಳಿದ್ದರೂ ಕೂಡ, ಪ್ರಜ್ಞಾವಂತನಾಗಿ ನಡೆದುಕೊಳ್ಳದೇ, ಬಾಲಕಿ ಬಹಿರ್ದೆಸೆಗೆ ಹೋಗುತ್ತಿದ್ದಾಗ, ಹಿಂಬಾಲಿಸುವುದು, ಮರೆಯಲ್ಲಿ ನಿಂತು ನೋಡುತ್ತಿರುವಂತಹ ಕೃತ್ಯ ನಡೆಸಿದ್ದ. ಈ ಬಗ್ಗೆ ಬಾಲಕಿಯು ತನ್ನ ಪೋಷಕರಿಗೆ ವಿಚಾರ ತಿಳಿಸಿದ್ದರು. ಬಾಲಕಿಯ ಪೋಷಕರು ಹನುಮಂತರಾಯನ ತಂದೆ ತಾಯಿಗೆ ಈ ವಿಚಾರ ತಿಳಿಸಿ, ಮಗನಿಗೆ ಬುದ್ಧಿ ಹೇಳುವಂತೆ ಕೇಳಿ ಕೊಂಡಿದ್ದರು. ಇದಾದ ನಂತರ 05–12–2021ರಂದು ಮಧ್ಯಾಹ್ನ 1:30 ಗಂಟೆಗೆ ನೊಂದ ಬಾಲಕಿಯು ದೊಡ್ಡರಾಮಣ್ಣ ಎಂಬವರ ಜಮೀನಿಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಏಕಾಏಕಿ ಅಲ್ಲಿಗೆ ಬಂದ ಹನುಮಂತರಾಯ…
ನವ ದೆಹಲಿ: ಹೆಲ್ತ್ ಡ್ರಿಂಕ್ ಬೋರ್ನ್‌ವಿಟಾದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿರುದರಿಂದ ಇದರ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದಿಂದ (NCPCR) ಬೋರ್ನ್‌ವೀಟಾ ತಯಾರಕ ( Bournvita ) ಮೋಂಡೆಲ್ಜ್ ಇಂಡಿಯಾ ಇಂಟರ್‌ನ್ಯಾಶನಲ್‌ಗೆ ನೋಟಿಸ್ ಜಾರಿಮಾಡಿದೆ. ಇದರ ಬಗ್ಗೆ ಪರಾಮರ್ಶೆ ನಡೆಸಬೇಕು ಹಾಗೂ ದಿಕ್ಕು ತಪ್ಪಿಸುವ ಜಾಹೀರಾತು ಮತ್ತು ಪ್ಯಾಕೇಜಿಂಗ್ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ (misleading advertisements) ಎನ್‌ಸಿಪಿಸಿಆರ್ ಸೂಚನೆ ನೀಡಿದೆ. ಮಕ್ಕಳ ಹಕ್ಕುಗಳ ಆಯೋಗವು ಕಂಪನಿಗೆ ನೀಡಿರುವ ನೋಟಿಸ್‌ನಲ್ಲಿ, ನಿಮ್ಮ ಉತ್ಪನ್ನದಲ್ಲಿ ಅಧಿಕ ಸಕ್ಕರೆಯ ಪ್ರಮಾಣ ಹೆಚ್ಚು ಇರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದೆ. ಇದು ಮಕ್ಕಳ ಆರೋಗ್ಯ ದ ಮೇಲೆ ತುಂಬಾ ಹಾನಿಯುಂಟಾಗುತ್ತದೆ ಇದರ ಬಗ್ಗೆ ವಿವರಣೆ ನೀಡುವಂತೆ ತಿಳಿಸಿದೆ. ಕಂಪನಿಯ ಅಧ್ಯಕ್ಷ ದೀಪಕ್ ಅಯ್ಯರ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತ ಸಂಸ್ಥೆಯು ಆಹಾರ ವಿಚಾರದಲ್ಲಿ ದಿಕ್ಕು ತಪ್ಪಿಸುವ ಜಾಹೀರಾತು ನೀಡುವ ಕಂಪನಿಗಳ ವಿರುದ್ಧ ಹೆಚ್ಚು ಕ್ರಮ ಕೈಗೊಳ್ಳಬೇಕು ಎಂದು ಎಫ್‌ಎಸ್‌ಎಸ್‌ಎಐಗೆ ಮಕ್ಕಳ ಹಕ್ಕುಗಳ ಆಯೋಗವು…
ಬೆಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದ ಪಂಜಾಬ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ಮೂಲದ ಕುಲ್ವಂತ್ ಸಿಂಗ್ ಬಂಧಿತ ಆರೋಪಿ. ಈತ ಆಸ್ಟ್ರೇಲಿಯಾಗೆ ಹೋಗಲು ನಕಲಿ ಪಾಸ್‌ಪೋರ್ಟ್ ಮಾಡಿಸಿದ್ದ. ಹಳೆ ಪಾಸ್‌ಪೋರ್ಟ್ ನಲ್ಲಿ ವೀಸಾ ರಿಜೆಕ್ಟ್ ಆಗಿದ್ದ ಕಾರಣ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈತನ ಸಹೋದರ ಕೂಡ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ತಾನೂ ಕೂಡ ಆಸ್ಟ್ರೇಲಿಯಾಗೆ ತೆರಳಿ ಹಣ ಮಾಡಲು ಈ ರೀತಿ ಅಡ್ಡ ದಾರಿ ಹಿಡಿದು ಪಾಸ್‌ಪೋರ್ಟ್ ಮಾಡಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ. ಲೇಬರ್ ವೀಸಾದಲ್ಲಿ ವಿದೇಶಕ್ಕೆ ತೆರಳಲು ಆರೋಪಿ ಬಯಸಿದ್ದ. ಅನುಮಾನಗೊಂಡ ಏರ್‌ಪೋರ್ಟ್ ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿ ತನಿಖೆ ವೇಳೆ ಎರಡು ಪಾಸ್‌ಪೋರ್ಟ್ ಇರುವುದು ಗೊತ್ತಾಗಿದೆ. ಈ ಹಿನ್ನಲೆ ಆರೋಪಿಯನ್ನ ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುಂಬೈ ಪಾಸ್‌ಪೋರ್ಟ್ ಕಚೇರಿಯಲ್ಲಿ ನಕಲಿ ಮಾಡಿರುವುದು ತಿಳಿದು…
ಬೆಳಗಾವಿ: 5 ವರ್ಷದ ಹಿಂದೆ 2018ರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.98ರಷ್ಟು ಈಡೇರಿಸಿದ್ದೇನೆ. ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ 2 ಭರವಸೆಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಅವುಗಳನ್ನೂ ಮೊದಲ ಆದ್ಯತೆಯ ಮೇಲೆ ಈಡೇರಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಯುಕ್ತ ಕಂಗ್ರಾಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅವರು ಪ್ರಚಾರ ನಡೆಸುತ್ತಿದ್ದರು. ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿದ್ದರಿಂದ ಕಳೆದ ಬಾರಿ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜೊತೆಗೆ, ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸುವ ಯೋಜನೆಯನ್ನೂ ನಾನು ಹಾಕಿಕೊಂಡಿದ್ದೆ. ಆದರೆ ನಮ್ಮ ಸರಕಾರವಿಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುತ್ತೇನೆ ಎಂದು ಅವರು…
ಬೆಂಗಳೂರು: ಲಿಫ್ಟ್‌ಗೆ ಸಿಲುಕಿ ಉತ್ತರಪ್ರದೇಶದ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಜೆ.ಸಿ ರಸ್ತೆಯ ಭರತ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಯುಪಿ ಮೂಲದ ವಿಕಾಸ್ (26) ಸಾವನ್ನಪ್ಪಿದ್ದಾರೆ. ಆಟೋಮೊಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಲಿಫ್ಟ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೇಸಿಗೆಯಲ್ಲಿ ಕಂಡುಬರುವ ಸಾಮಾನ್ಯವಾಗಿ ಕಣ್ಣಿನ ರೋಗಗಳಲ್ಲಿ ಒಂದಾದ ಕೆಂಪು ಕಣ್ಣಿನ ಸಮಸ್ಯೆ . ಇದು ಕಣ್ಣಿನಲ್ಲಿ ಬರುವಂತಹ ರೋಗವಾಗಿದೆ. ಕಾಂಜಕ್ಟಿವಾ ಎಂಬುದು ಕಣ್ಣಿನ ಹೊರಭಾಗದ ತೆಳುವಾದ ಬಿಳಿ ಪದರವಾಗಿದೆ. ಕಣ್ಣಿನ ಸಮಸ್ಯೆ ಎನ್ನುವುದು ಒಂದು ಸೋಂಕು ಮತ್ತು ಊತವಾಗಿರುತ್ತದೆ. ಈ ರೋಗವನ್ನು ಕಣ್ಣಿನ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ವೈರಸ್ ನಿಂದ ಉಂಟಾಗುತ್ತದೆ.ಬೇಸಿಗೆಯ ಸಮಯದಲ್ಲಿ ಸಾಮಾನ್ಯವಾಗಿ ಕಣ್ಣಿನಲ್ಲಿ ಕೆಂಪಾಗುವಿಕೆ, ಕಣ್ಣಿನಲ್ಲಿ ನೋವು , ಕಣ್ಣುಗಳಲ್ಲಿ ನೀರು ಬರುವುದು , ಕಣ್ಣುರೆಪ್ಪೆಗಳಲ್ಲಿ ಊತ, ತುರಿಕೆ, ಬೆಳಿಗ್ಗೆ ಎದ್ದಾಗ ಕೀವು ಇರುವುದರಿಂದ ಕಣ್ಣು ತೆರೆಯಲು ತುಂಬಾ ಕಷ್ಟವಾಗುತ್ತದೆ, ಇತ್ಯಾದಿ. ರೋಗ ಹರಡುವುದು ಹೇಗೆ ? ಬೇರೆಯವರಿಗೆ ಕೆಂಪು ಕಣ್ಣಿನ ಕಾಯಿಲೆ ಇದ್ದಾಗ ಅವರ ಕಣ್ಣಿನ ದ್ರವದಲ್ಲಿ ವೈರಸ್ ಇರುತ್ತದೆ. ಆದ್ದರಿಂದ ಬೇರೆಯವರಿಗೆ ಈ ರೋಗ ಹರಡಲು ಕಾರಣವಾಗುತ್ತದೆ. ರೋಗ ಮುಕ್ತ ಕಣ್ಣನ್ನು ಸ್ಪರ್ಶಿಸಿದಾಗ ರೋಗ ಹರಡಬಹುದು. ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಬಳಸುವ ಎಲ್ಲಾ ವಸ್ತುಗಳಲ್ಲಿ ಕೀಟಾಣುಗಳು ಇರುತ್ತವೆ. ಆದ್ದರಿಂದ ಈ ವಸ್ತುಗಳನ್ನು ಬೇರೆಯವರು…
ಚಿಕ್ಕಬಳ್ಳಾಪುರ: ಸತತ 60 ವರ್ಷಗಳ ಕಾಲ ಪರಿಶಿಷ್ಟರ ಮತಗಳನ್ನು ಪಡೆದ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿದ ಕೊಡುಗೆ ಕೇವಲ ಶೂನ್ಯ ಎಂದು ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ. ತಾಲೂಕಿನ ಅವುಲಗುರ್ಕಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿದೆ. ಈ ಭಾಗದ ರೈತರು ಹೂ ಬೆಳೆಯಲು ನೀರಿನ ಸಮಸ್ಯೆ ಹಿಂದೆ ಎಷ್ಟಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ನೀಡಿದ ಭರವಸೆಯಂತೆ ಎರಡು ವರ್ಷದಲ್ಲಿ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದಾಗಿ ರೈತರು ಸಮೃದ್ಧಿಯಾಗಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದಿಂದ ಕೇತೇನಹಳ್ಳಿವರೆಗೂ ಹೋಗಲು ಈ ಹಿಂದೆ ಸಾಹಸ ಪಡಬೇಕಿತ್ತು. ಈ ಅಲ್ಪ ದೂರವನ್ನು ಕ್ರಮಿಸಲು ಸುಮಾರು ಒಂದು ಗಂಟೆ ಸಮಯ ಬೇಕಿತ್ತು. ಅಂತಹ ಕೆಟ್ಟ ರಸ್ತೆಯನ್ನು ಈಗ ದುರಸ್ತಿ ಮಾಡಲಾಗಿದೆ. ಇದೇ ದೂರವನ್ನು ಈಗ ಕೇವಲ 15 ನಿಮಿಷದಲ್ಲಿ ಸೇರಬಹುದಾಗಿದೆ. ಅಲ್ಲದೆ ಈ ಪ್ರದೇಶದ ರೈತರು ಕೃಷಿಯನ್ನು ಬಿಡುವ…
‘ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲು ಅನುಭವಿಸಲಿದೆ ಎಂದು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿರುವುದು ಬಹಳ ಸಂತೋಷವಾಗಿದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮೋದಿ ಅವರು ತಮ್ಮ ಸರ್ಕಾರ ಜನರ ವಿಶ್ವಾಗಳಿಸಲು ವಿಫಲವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿವೆ. ಅವರು 2014ರ ಚುನಾವಣೆ ಸಮಯದಲ್ಲಿ ದೇಶದ ಮತದಾರರಿಗೆ ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಿ ಮತ ಹಾಕಿ ಎಂದಿದ್ದರು. ಈಗ ಅದನ್ನೇ ಮಾಡಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಿದ್ದೇವೆ. ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮೀಸಲಾತಿ ಎಲ್ಲಿದೆ? ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅವರು ತಮ್ಮ ಆದೇಶಕ್ಕೆ ತಡೆ…