Author: admin

ತುರುವೇಕೆರೆ: ಪಟ್ಟಣದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ತುರುವೇಕೆರೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ 6ನೇ ಸಮ್ಮೇಳನವನ್ನು  ಗ್ರಾಮ ಪಂಚಾಯತಿ ನೌಕರರ ಸಂಘ ಮತ್ತು ಸಿಐಟಿಯು ಕಾರ್ಮಿಕ ಸಂಘಟನೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ತುರುವೇಕೆರೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಎಸ್ ಸತೀಶ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ತುರುವೇಕೆರೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷರಾದ ರಂಗನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗೋಪಾಲಕೃಷ್ಣ ಹರಳಹಳ್ಳಿ, ಈ ದಿನ ನಡೆಯುತ್ತಿರುವ ಸಮ್ಮೇಳವನ್ನು ವಿಜಯೋತ್ಸವವನ್ನಾಗಿ ಆಚರಿಸಬೇಕಾಗಿದೆ. ಏಕೆಂದರೆ 1994ರಲ್ಲಿ ಸರ್ಕಾರವು ಇವರ್ಯಾರು ಸರ್ಕಾರಿ ನೌಕರರೆ ಅಲ್ಲ, ಇವರಿಗೆ ಯಾವುದೇ ವೇತನವಿಲ್ಲ ಎಂದಿತ್ತು. ಆದರೆ ಇದೀಗ ಸರ್ಕಾರದ ಬೊಕ್ಕಸದಿಂದ ವೇತನ ನೀಡುತ್ತಿದೆ ಇದು ಇತಿಹಾಸದ ಸಮಾವೇಶವಾಗಿದೆ ಎಂದು ನನ್ನ ಭಾವನೆಯಾಗಿದೆ ಎಂದರು. ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ನೌಕರರು ಸಂಘಟನೆಗಳನ್ನು ಕಟ್ಟುವ ಮೂಲಕ ಸರ್ಕಾರಕ್ಕೆ ತಮ್ಮ ದುಃಖ…

Read More

ತುಮಕೂರು: ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಲಾರಿಯೊಂದು ಹೊತ್ತಿ ಉರಿದ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮುಂಜಾನೆ 3.3ರ‌ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು,  ಮೊದಲು ಲಾರಿಗೆ ಬೆಂಕಿ ಹತ್ತಿಕೊಂಡ ವೇಳೆ ಬೆಂಕಿ ನಂದಿಸಲಾಗಿತ್ತು. ಆದರೆ, 6 ಗಂಟೆಯ ವೇಳೆ ಮತ್ತೆ ಏಕಾಏಕಿ ಲಾರಿಗೆ ಬೆಂಕಿ ಹತ್ತಿಕೊಂಡಿದ್ದು, ಲಾರಿ ಹೊತ್ತಿ ಉರಿದಿದೆ. ಬೆಂಕಿಗಾಹುತಿಯಾದ ಲಾರಿ ಎಳೆ ನೀರು ಸಾಗಿಸುವ ಲಾರಿಯಾಗಿದ್ದು, ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ದುರ್ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೃಹತ್ ಬೆಂಕಿಯನ್ನು ಕಂಡು ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹೆಚ್.ಡಿ.ಕೋಟೆ: ಇಲ್ಲಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಜೆಡಿಎಸ್ ಯುವ ಮುಖಂಡ ಕೃಷ್ಣನಾಯಕ ಅವರ ನೇತೃತ್ವದಲ್ಲಿ ಮಾಡಿರುವ ಅಪ್ಪಾಜಿ ಕ್ಯಾಂಟಿನ್ ನ್ನು  ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟನೆಯನ್ನು ಮಾಡಿದರು. ತಾಲ್ಲೂಕು ಆಡಳಿತ ಮುಂಭಾಗದಲ್ಲಿ ಇಂದಿನಿಂದ ಅಪ್ಪಾಜಿ ಕ್ಯಾಂಟಿನ್ ಯಲ್ಲಿ ತಿಂಡಿ ಊಟ ಕ್ಕೆ ತಾಲ್ಲೂಕಿನ ಮುಖಂಡರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕ್ಯಾಂಟಿನ್ ಯಲ್ಲಿ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿ ಎಂದು ಸಮಾಜ ಸೇವೆಕ ಕೃಷ್ಣ ನಾಯಕ ಕ್ಯಾಂಟಿನ್ ಯನ್ನು ತೆರೆದಿದ್ದಾರೆ. ಕ್ಯಾಂಟಿನ್ ನಲ್ಲಿ ತಿಂಡಿ ಊಟದ ಬೆಲೆ 10 ರೂಪಾಯಿ ಅಷ್ಟೇ. ತಾಲ್ಲೂಕಿನ ಸಾರ್ವಜನಿಕರು ಮತ್ತು ರೈತರು ವಿವಿಧ ಗ್ರಾಮಗಳಿಂದ ಬಂದ್ದಿರುತ್ತಾರೆ ಕಡಿಮೆ ಬೆಲೆಯಲ್ಲಿ ತಿಂಡಿ ಊಟ ನೀಡುತ್ತಿರುವುದು ಜನರಿಗೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಸಿ.ವಿ.ನಾಗರಾಜು, ಹುಣಸೂರು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್, ಗ್ಯಾಸ್ ಪ್ರಕಾಶ್,  ಸಾಗರೆ ಶಂಕರ್,  ನೆನಪು ರವಿ, ಪ್ರಶಾಂತ್ ಪ್ರವೀಣ್, ಕೃಷ್ಣಪುರಶಿವಯ್ಯ, ರಘು ಇನ್ನೂ ಮುಖಂಡರು ಭಾಗಿಯಾಗಿದ್ದರು ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ…

Read More

ಕೊರಟಗೆರೆ : ಜನನ ಮತ್ತು ಮರಣ ನೊಂದಣಿ ಕಾಯಿದೆಯನ್ನು ತಿದ್ದುಪಡಿಗೊಳಿಸಿ ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಲಯದ ಬದಲು ಎ.ಸಿ. ನ್ಯಾಯಾಲಯದ ವ್ಯಾಪ್ತಿಗೆ ಬರುವಂತೆ ಸರ್ಕಾರವು ಆದೇಶಿಸಿರುವುದನ್ನು ಖಂಡಿಸಿ ಕೊರಟಗೆರೆ ತಾಲ್ಲೂಕು ವಕೀಲರ ಸಂಘ ತಹಶೀಲ್ದಾರ್ ರವರಿಗೆ ಮನವಿ ನೀಡಿದರು. ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2022 ಅನ್ನು ದಿನಾಂಕ 18/07/2022 ರಂದು ಕರ್ನಾಟಕ ರಾಜ್ಯ ಸರ್ಕಾರವು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ವ್ಯಾಪ್ತಿಯ ಬದಲು ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಗೆ ಬರುವಂತೆ ಆದೇಶಿಸಿದ್ದು, ಈ ಆದೇಶದಿಂದ ಜನಸಾಮಾನ್ಯರಿಗೆ, ಕಕ್ಷಿದಾರರಿಗೆ, ವಕೀಲರುಗಳಿಗೆ ಜನನ ಮತ್ತು ಮರಣ ದೃಢೀಕರಣ ಪತ್ರ ಪಡೆಯುವಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ  ಎಂದು ಆರೋಪಿಸಲಾಗಿದೆ. ಸರ್ಕಾರವು ಏಕಾಏಕಿ ತೀರ್ಮಾನ ತೆಗೆದುಕೊಂಡು ಆದೇಶಿಸಿರುವುದು ಸೂಕ್ತವಲ್ಲ. ಈ ಆದೇಶವನ್ನು ರದ್ದುಪಡಿಸಿ, ಯಥಾಸ್ಥಿತಿ ಜನನ ಮತ್ತು ಮರಣ ದೃಢೀಕರಣ ಕಾಯ್ದೆ 1969ರಂತೆ ತಂದು  ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿ, ತಹಶೀಲ್ದಾರ್ ನಹೀದ ಜಂ ಜಂ ಅವರಿಗೆ ಮನವಿ ಸಲ್ಲಿಸಿದರು. ವರದಿ:  ಮಂಜುಸ್ವಾಮಿ.ಎಂ.ಎನ್…

Read More

ತುರುವೇಕೆರೆ:  ವಡವನಘಟ್ಟ ಪಂಚಾಯ್ತಿ ವ್ಯಾಪ್ತಿಯ ಆಯರಹಳ್ಳಿಯಲ್ಲಿ ಸುಮಾರು 33 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಅಭಿವೃದ್ಧಿಗೆ ಶಾಸಕ  ಮಸಾಲಾ ಜಯರಾಮ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,  ಬಿಜೆಪಿ ಪಕ್ಷಕ್ಕೆ ಜೆ.ಡಿ.ಎಸ್. ಹಾಗೂ ಬೇರೆ ಪಕ್ಷಗಳಿಂದ  ಗ್ರಾ.ಪಂ. ಮಾಜಿ ಹಾಗೂ ಹಾಲಿ ಸದಸ್ಯರುಗಳು ಮತ್ತು  ಅಧ್ಯಕ್ಷರುಗಳು ಸೇರ್ಪಡೆಯಾಗಿದ್ದಾರೆ. ಗ್ರಾಮದ ಅಭಿವೃದ್ಧಿಯಾದರೆ, ಬಿಜೆಪಿಗೆ ಬರುವುದಾಗಿ ಅವರು ತಿಳಿಸಿದ್ದರು. ಅವರೆಲ್ಲರ ಆಶಯದಂತೆ ನಮ್ಮ ಗ್ರಾಮದ ಅಭಿವೃದ್ಧಿ ಮಾಡಿದ್ದು, ಕೊಟ್ಟ ಆಶ್ವಾಸನೆಯಂತೆ  ಮುಖಂಡರಾದ ಸಿದ್ದೇಗೌಡ. ಗಿರೀಶ್. ಕೇಶವ . ಕಿಶೋರ್. ಮಂಜುನಾಥ್. ರಾಮ. ರಮೇಶ್. ಕುಮಾರ್. ಚನ್ನಕೇಶವ. ಗೋಪಾಲ್. ರಂಗಸ್ವಾಮಿ. ಈಶ್ವರಯ್ಯ. ಗೋವಿಂದರಾಜ್.  ಬಿ.ಜೆ.ಪಿ. ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು. ತುರುವೇಕೆರೆ ವಿಧಾನಸಭಾ ಕ್ಷೇತ್ರ  ವ್ಯಾಪ್ತಿಯ  ಬೊಚಿಹಳ್ಳಿ, ಚಿಕ್ಕಕಲ್ಲೂರು ಮತ್ತು ಸುತ್ತಮುತ್ತಲ   ಹಳ್ಳಿಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದವು. ನಾನು ಶಾಸಕನಾದ ತಕ್ಷಣ 25ಕೋಟಿ ಅನುದಾನ ಬಿಡುಗಡೆ ಮಾಡಿಸಿ ಟಿ.ಬಿ. ಕ್ರಾಸ್ ನಿಂದ ನಿಟ್ಟೂರು ವರೆಗಿನ  ರಸ್ತೆ ಮಾಡಿಸಿದ್ದೇನೆ. ಬೋಚಿಹಳ್ಳಿ  ಸ್ಕೂಲ್  ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು.   ಅದನ್ನು ದುರಸ್ತಿ ಮಾಡಲಾಯಿತು …

Read More

ತುಮಕೂರು: ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೆರೆ ಬಳಿಯ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ಮಧ್ಯರಾತ್ರಿ ನಿಧಿಗಾಗಿ ಗುಂಡಿ ತೋಡುವಾಗ 5 ಮಂದಿಯನ್ನು ಥಳಿಸಿರುವ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶದ ಒಂಟಿರೆಡ್ಡಿಪಲ್ಲಿ ಗ್ರಾಮದ ವೆಂಕಟರವಣಪ್ಪ, ಸಾಯಿ ಮುರುಳಿ, ಮುರುಳಿ, ನಾಗರಾಜು, ಚಿನ್ನಾರೆಡ್ಡಿ ಬಂಧಿತರು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮೆಟಲ್ ಡಿಟೆಕ್ಟರ್, ಸಲಿಕೆ, ಗಡಾರಿ ಇತರೆ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಶಿವಾನಂದ ಪ್ರೌಢಶಾಲೆ ಬೀಜವರ ಶಾಲೆಗೆ ಪೋಷಕರು ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮುಖ್ಯ ಶಿಕ್ಷಕರಾದ ರಾಮಕೃಷ್ಣಯ್ಯನವರನ್ನು ತುಂಬಾಡಿ ಪ್ರೌಢ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಅವರು ನಮ್ಮ ಶಾಲೆಗೆ ಬೇಕು ಎಂದು ಒತ್ತಾಯಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಶಾಲೆ ಮುಂಭಾಗದಲ್ಲಿ ಧರಣಿ ನಡೆಸಿದರು. ಇದೇ ವೇಳೆ ಶಿಕ್ಷಣ ಇಲಾಖೆಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಶಿವಾನಂದ ಪ್ರೌಢಶಾಲೆಗೆ ರಾಮಕೃಷ್ಣಯ್ಯ ಅವರನ್ನು ಮರು ನೇಮಕ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ವರದಿ: ಅಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ ಯಾರ ಜತೆ ಚರ್ಚೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವುದು ನಮ್ಮ ಆದ್ಯತೆಯಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಭ್ರಷ್ಟಾಚಾರ ವಿಚಾರವಾಗಿ ಚರ್ಚೆಗೆ ಸಿದ್ಧ ಎಂಬ ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾನು ಭ್ರಷ್ಟಾಚಾರದ ಚರ್ಚೆಯಿಂದ ವಾಪಸ್ ಹೋಗುವುದಿಲ್ಲ. ಈ ಚರ್ಚೆಯನ್ನು ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿಗಳ ಜತೆ ಮಾಡಬೇಕೋ ಎಂದು ತೀರ್ಮಾನ ಮಾಡುತ್ತೇನೆ ಎಂದರು. ಸರ್ಕಾರ ಈಶ್ವರಪ್ಪ ಅವರ ಪ್ರಕರಣ ಮುಚ್ಚಿ ಹಾಕಿದ್ದು, ಈ ವಿಚಾರವಾಗಿ ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹಸಚಿವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ನೀವೇ ನೋಡಿ. ಬಿ ರಿಪೋರ್ಟ್ ಸಲ್ಲಿಕೆ ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಪ್ರಾರಂಭದಿಂದ ಪ್ರಯತ್ನ ಪಟ್ಟಿದ್ದನ್ನು ಸಾಬೀತುಪಡಿಸಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರು ನ್ಯಾಯಾಂಗ…

Read More

ತುಮಕೂರು: ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ನೆಪದಲ್ಲಿ ಅರಣ್ಯ ಅಧಿಕಾರಿಯೊಬ್ಬರು ರೈತರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಬ್ಬಿ ತಾಲ್ಲೂಕಿನ ಚೇಳೂರು ಯಾದವರಗಟ್ಟಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಗುಬ್ಬಿ ತಾಲ್ಲೂಕು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರು ರೈತ ಬಸವರಾಜು ಮೇಲೆ ಹಲ್ಲೆ ನಡೆಸಿ, ಕುಟುಂಬದ ಸದಸ್ಯರನ್ನು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ಗಾಯಗೊಂಡ ರೈತ ಬಸವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ರೈತನ ಕುಟುಂಬಸ್ಥರು ಚೇಳೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಯಾರೋ ನನ್ನ ಬಗ್ಗೆ ಇಲ್ಲದ ವದಂತಿ ಹಬ್ಬಿಸಿ, ಬಾಯಿಗೆ ಬಂದಂತೆ ಅಬ್ಬರಿಸಿ ಬೊಬ್ಬಿರಿದು, ನನ್ನ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ, ಅದು ಸಾಧ್ಯವಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಾನು ಹೇಳಿದ್ದು, ಕೇವಲ ಒಂದು ಸಮುದಾಯದ ಮತಗಳಿಂದ ಮುಖ್ಯಮಂತ್ರಿಗಳಾಗಲು ಸಾಧ್ಯವಿಲ್ಲ. ಎಲ್ಲ ಸಮುದಾಯದವರ ಬೆಂಬಲ, ಆಶೀರ್ವಾದ ಇದ್ದರೆ ಮಾತ್ರ ರಾಜ್ಯದ ಸಿಎಂ ಆಗಲು ಸಾಧ್ಯ ಎಂದು. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ಹೊರತು, ನಾನು ಒಗ್ಗಲಿಗರ ಬಗ್ಗೆ ಆಗಲಿ, ಅಥವಾ ಯಾವುದೇ ಸಮುದಾಯದ ಬಗ್ಗೆ ಎಲ್ಲಿಯೂ ತಪ್ಪು ಹೇಳಿಕೆ ನೀಡಿಲ್ಲ ಎಂದು ಜಮೀರ್ ಅಹ್ಮದ್ ಹೇಳಿದರು. ಒಕ್ಕಲಿಗರ ಸಮುದಾಯದ ಮೇಲೆ ನನಗೆ ಅಪಾರ ಗೌರವ, ಅಭಿಮಾನವಿದೆ. ನಾನು ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಎಐಸಿಸಿ ಯಿಂದ ನೋಟಿಸ್ ಬಂದಿದೆ ಎಂಬುದು ಸುಳ್ಳು. ನಾನು ಏನೂ ತಪ್ಪು ಮಾತನಾಡಿಯೇ ಇಲ್ಲ ಎಂದ ಮೇಲೆ ನನಗೇಕೆ ನೋಟೀಸ್ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More