Author: admin

ತಿಪಟೂರು: ತಾಲೂಕಿನ ಹೊನವಳ್ಳಿ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾಲೋನಿಯಲ್ಲಿ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ನಮ್ಮತುಮಕೂರು.ಕಾಂ ವರದಿಯ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. ಗುರುಗದಹಳ್ಳಿ ವಿದ್ಯುತ್ ಕಂಬ ವಾಲಿನಿಂತಿತ್ತು. ಇದರಿಂದಾಗಿ ಇಲ್ಲಿನ ನಿವಾಸಿಗಳು ಆತಂಕದಲ್ಲಿದ್ದರು. ಮಕ್ಕಳು, ಮಹಿಳೆಯರು ಓಡಾಡುತ್ತಿದ್ದ ಸ್ಥಳದಲ್ಲಿ ಇಂತಹದ್ದೊಂದು ಅಪಾಯ ಸೃಷ್ಟಿಯಾಗಿರುವ ಬಗ್ಗೆ ನಮ್ಮ ತುಮಕೂರು.ಕಾಂ ಸವಿವರವಾದ ವರದಿಯನ್ನು ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಶೀಘ್ರವೇ ಕಂಬವನ್ನು ದುರಸ್ತಿಗೊಳಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದರು. ಇದಾಗಿ ಮೂರು ನಾಲ್ಕು ದಿನದೊಳಗೆ ಅಧಿಕಾರಿಗಳು ಕ್ರಮಕೈಗೊಂಡಿದ್ದು, ಇಂದು ಹಳೆಯ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಹೊಸ ಕಂಬವನ್ನು ಹಾಕಿದ್ದಾರೆ. ಇನ್ನೂ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಕಂಬದ ವಿಚಾರವಾಗಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ತಕ್ಷಣದಲ್ಲಿಯೇ ಇಲ್ಲಿನ ನಿವಾಸಿಗಳಿಗೆ ಬೆಸ್ಕಾಂ ಸ್ಪಂದಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ನಮ್ಮ ತುಮಕೂರು.ಕಾಂಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ವರದಿ: ಮಂಜು, ಗುರುಗದಹಳ್ಳಿ …

Read More

ತುಮಕೂರು: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 473 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ 9.5 ಕೋಟಿ ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಂದು ವಾರಸುದಾರರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್ಪಿ ರಾಹುಲ್ ಅವರ ನೇತೃತ್ವದಲ್ಲಿ ಉತ್ತಮ ಬಾಂಧವ್ಯವನ್ನು ಅಕಾರಿ, ಸಿಬ್ಬಂದಿಗಳು ಹೊಂದಿದ್ದಾರೆ ಎಂದರು. ಕಳ್ಳತನ ಎಷ್ಟೇ ನಡೆದರೂ, ಆ ಪ್ರಕರಣವನ್ನು ಪತ್ತೆ ಹಚ್ಚಲು  ಪೊಲೀಸರು ಸಮರ್ಥರಿದ್ದಾರೆ. ಅದಕ್ಕಾಗಿ ಈ ರೀತಿ ಸ್ವತ್ತು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಕೋವಿಡ್,  ಲಾಕ್ಡೌನ್ ನಂತಹ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶದ ಕೆಲವೆಡೆ ಕ್ಯಾಂಪ್ ಮಾಡಿ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಇಚ್ಛಾಶಕ್ತಿಯಿಂದ ಅಪರಾಧಗಳ ಪತ್ತೆಗೆ ಕಾರಣವಾಗಿದೆ ಎಂದರು. ಜಿಲ್ಲೆಯಲ್ಲಿ ಇದ್ದ ಸರಗಳ್ಳತನ…

Read More

ತುಮಕೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ಒಟ್ಟು 507 ಪ್ರಕರಣಗಳಲ್ಲಿ 9,47,49,862 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ 473 ಪ್ರಕರಣಗಳಲ್ಲಿ ಒಟ್ಟು 7,69,73,500 ರೂ. ಮೌಲ್ಯದ ವಸ್ತುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ವಾಪಸ್ ನೀಡಲಾಗುತ್ತಿದೆ. ಮಂಗಳವಾರ ಇಲ್ಲಿನ ಚಿಲುಮೆ ಪೊಲೀಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು  ಕೇಂದ್ರ ವಲಯ ಐಜಿಪಿ ಚಂದ್ರಸೇಖರ್ ಐ.ಪಿ.ಎಸ್. ಸುಮಾರು 9.5 ಕೋಟಿ ಮೌಲ್ಯದ  ” ಸ್ವತ್ತು ಪ್ರದರ್ಶನ  ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ವನ್ನು ನೆರವೇರಿಸಿದರು. ಚಿನ್ನಾಭರಣಗಳು: 2020ರಲ್ಲಿ 2,66,78,097 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ  2,01,86,664 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಿಯ ಆಭರಣಗಳು: 2020ರಲ್ಲಿ 4,37,500 ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2021ರಲ್ಲಿ 9,32,039 ಮೌಲ್ಯದ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ದ್ವಿಚಕ್ರ ವಾಹನಗಳು: 2020ರಲ್ಲಿ ಒಟ್ಟು 39 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 11,53,000 ಆಗಿದೆ. 2021ರಲ್ಲಿ 52 ದ್ವಿಚಕ್ರವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ ಇದರ…

Read More

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಮಂಗಳವಾರ ಬೆಳಿಗ್ಗೆಯಿಂದಲೇ ಸಾಕಷ್ಟು ಜನರು ಇಲ್ಲಿನ ಆದರ್ಶ ನಗರದ ಅವರ ನಿವಾಸದ ಮುಂದೆ ಕಾಯುತ್ತಿದ್ದರು. ತೀವ್ರ ನೂಕುನುಗ್ಗಲಿನ ನಡುವೆಯೇ ಸಿಎಂ ಕೆಲವೇ ನಿಮಿಷಗಳಲ್ಲಿ ಮನವಿ ಸ್ವೀಕರಿಸಿ ಸ್ಥಳದಿಂದ ತೆರಳಿದರು. ಕೊವಿಡ್ ಹಿನ್ನೆಲೆಯಲ್ಲಿ ಸದ್ಯ ಸುರಕ್ಷಿತ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮವನ್ನು ಸರ್ಕಾರವೇ ಮಾಡಿದೆ. ಆದರೆ, ವಿವಿಧ ಸಮಾಜದ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮನವಿ ನೀಡಲು ಬಂದಾಗ ಯಾವುದೇ ದೈಹಿಕ ಅಂತರವೂ ಇಲ್ಲದೇ ನಾ ಮುಂದು ತಾ ಮುಂದು ಎಂಬಂತೆ ಮನವಿ ನೀಡಲು ಪೈಪೋಟಿ ನಡೆಸಿದರು. ಇನ್ನು ಕೆಲವರು ಸಿಎಂ ಆಪ್ತ ಸಹಾಯಕರ ಭೇಟಿಗೆ ಅವಕಾಶ ಸಿಕ್ಕರೆ ಸಾಕು ಎಂದು ಕೂಡ ಪರದಾಡುತ್ತಿರುವ ದೃಶ್ಯ ಸ್ಥಳದಲ್ಲಿ ಕಂಡು ಬಂತು. ಬೊಮ್ಮಾಯಿ  9:30ಕ್ಕೆ ಮನೆಯಿಂದ ಹೊರಡುತ್ತಾರೆ ಎನ್ನುವುದು ತಿಳಿದಿದ್ದ ಅನೇಕರು ಬೆಳಗ್ಗೆ 7 ಗಂಟೆಯಿಂದಲೇ ಅವರ ಮನೆಯ ಮುಂದೆ ಜಮಾಯಿಸಿದ್ದರು. ಇನ್ನೂ ಮನವಿ ನೀಡುವಂತಹ ಸಂದರ್ಭದಲ್ಲಿ ದೈಹಿಕ ಅಂತರ, ಕೊವಿಡ್ ನಿಯಮಗಳು…

Read More

ತುರುವೇಕೆರೆ: ತಾಲೂಕಿನಲ್ಲಿ ಮಾಯಸಂದ್ರ ಪ್ರತಿಷ್ಠಿತ ಹೋಬಳಿಯಂದೇ ಹೆಸರಾಗಿದೆ. ಆದರೆ ಹೆಸರಿಗಷ್ಟೇ ಪ್ರತಿಷ್ಠೆ ಪ್ರತಿಷ್ಠಿತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ, ಇಂತಹ ಪ್ರತಿಷ್ಠಿತ ಮಾಯಸಂದ್ರ ಗ್ರಾಮದ ಅಂಗನವಾಡಿ ಕೇಂದ್ರ (ಡಿ) ದುಸ್ಥಿತಿಯಲ್ಲಿದ್ದು, ಅಂಗನವಾಡಿ ಕೇಂದ್ರದ ಕೊಠಡಿಯ ಮೇಲ್ಚಾವಣಿ ಭಾಗವು ಎಂತಹ ಸಂದರ್ಭದಲ್ಲೂ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೊಠಡಿಯಲ್ಲಿ ಸಣ್ಣ ಮಕ್ಕಳು ಆಟ ಪಾಠವನ್ನು ಕಲಿಯುತ್ತಿದ್ದಾರೆ. ಮಳೆಗಾಲದಲ್ಲಿ ಅದೆಷ್ಟು ಬಾರಿ ಮೇಲ್ಚಾವಣಿಯ ಹಂಚುಗಳು ಕೆಳಗೆ ಬಿದ್ದಿರುವ ಘಟನೆಗಳು ನಡೆದಿವೆ ಇಂತಹ ಕೊಠಡಿಯಲ್ಲಿ ಮಕ್ಕಳು ಕಲಿಕೆಯ ಸಂದರ್ಭದಲ್ಲಿ ಮಳೆ ಗಾಳಿಯಂತಹ ಸಂದರ್ಭ ಉದ್ಭವಿಸಿದಾಗ ಸಣ್ಣ ಮಕ್ಕಳ ಗತಿಯೇನು? ಎಂಬ ಪ್ರಶ್ನೆ ಗ್ರಾಮದ ಪ್ರಜ್ಞಾವಂತ ಯುವಕರು ಹಾಗೂ ಗ್ರಾಮದ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ. ಹಲವು ತಿಂಗಳುಗಳಿಂದ ಈ ಅಂಗನವಾಡಿ ‌ಕೇಂದ್ರವು ಇಂತಹ ದುಸ್ಥಿತಿಯಲ್ಲಿದ್ದು, ಇದರಲ್ಲಿ ಮಕ್ಕಳನ್ನು ಕೂರಿಸಿಕೊಂಡು ಆಟ-ಪಾಠಗಳನ್ನು ಕಲಿಸುತ್ತಿದ್ದಾರೆ. ಇದುವರೆಗೂ ಪರ್ಯಾಯ ವ್ಯವಸ್ಥೆಯಾಗಿ ಬೇರೊಂದು ಕೊಠಡಿಗೆ ಅಂಗನವಾಡಿ ಕೇಂದ್ರ ವರ್ಗಾಯಿಸಿಲ್ಲ. ಹಣವಂತರು ತಮ್ಮ ಮಕ್ಕಳಿಗೆ ಈ ಅಂಗನವಾಡಿ ಕೇಂದ್ರದ ದುಸ್ಥಿತಿ ಕಂಡು ಖಾಸಗಿ ಕಾನ್ವೆಂಟ್…

Read More

ತುಮಕೂರು: ಓಮಿಕ್ರಾನ್ ಆತಂಕದ ನಡುವೆ ತುಮಕೂರು ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ 10 ದಿನದಲ್ಲಿ 109 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪೈಕಿ 42 ಜನ ಮಕ್ಕಳು ಕೂಡ ಸೇರಿದ್ದಾರೆ ಎನ್ನಲಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಕಳೆದ 10 ದಿನದಲ್ಲಿ 1 ರಿಂದ 18 ವರ್ಷದೊಳಗಿನ 42 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಮಕ್ಕಳಲ್ಲಿ ಗಂಭೀರ ಸ್ವರೂಪದ ಲಕ್ಷಣ ಇಲ್ಲದೇ ಇದ್ದರೂ ಪೋಷಕರಲ್ಲಿ ಆತಂಕ ಶುರುವಾಗಿದೆ. ಈ ನಡುವೆ 3ನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂಬ ತಜ್ಞರ ಅಭಿಪ್ರಾಯವು ಪೋಷಕರಲ್ಲಿ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದ್ದ 35 ಜನರ ಸ್ವಾಬ್ ಅನ್ನು ಓಮಿಕ್ರಾನ್ ಟೆಸ್ಟ್ ಗೆ ಕಳಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಇನ್ನೊಂದೆಡೆ ಮಕ್ಕಳಿಗೆ ಶಾಲೆ ಆರಂಭವಾಗಿದ್ದು, ಮಕ್ಕಳ ಓಡಾಟದಿಂದ ಸೋಂಕು ಹೆಚ್ಚಳವಾಗುವ ಭೀತಿ ಕೂಡ ಸೃಷ್ಟಿಯಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417…

Read More

ಹುಬ್ಬಳ್ಳಿ: ಸಿದ್ದರಾಮಯ್ಯ ಮೇಲೆ ಬಹಳ ಗೌರವ ಇತ್ತು. ಆದರೆ ಇತ್ತೀಚೆಗೆ ಅವರ ಹೇಳಿಕೆಗಳಿಂದ ನಿರಾಸೆಯಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಸಿಎಂ ಬಸವರಾಜ್ ಬೊಮ್ಮಾಯಿ ಸುಳ್ಳು ಹೇಳುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೇಸರ ವ್ಯಕ್ತಡಿಸಿದ ಬೊಮ್ಮಾಯಿ, ಸಿದ್ದರಾಮಯ್ಯನವರ ಮೇಲೆ ಬಹಳ ಗೌರವವಿತ್ತು. ಆದರೆ, ಇತ್ತೀಚೆಗಿನ ಅವರ ಹೇಳಿಕೆಯಿಂದ ನಿರಾಸೆಯಾಗಿದೆ ಎಂದು ಅವರು ಹೇಳಿದರು. ಸಂಪುಟ ವಿಸ್ತರಣೆ ಬಗ್ಗೆ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಎಲ್ಲರ ಹೇಳಿಕೆಗಳಿಗೂ ನಾನು ಪ್ರತಿಕ್ರಿಯಿಸುತ್ತಾ ಇರಲು ಆಗುವುದಿಲ್ಲ ಎಂದರು. ಇನ್ನು ಕೋವಿಡ್ ಮೂರನೆ ಅಲೆ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಟೆಸ್ಟ್ ವರದಿ ಬರುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇನ್ನು ಒಮಿಕ್ರಾನ್ ವೇಗವಾಗಿ ಹರಡುತ್ತೆ ಆದರೆ ತೀವ್ರತೆ ಕಡಿಮೆ ಎಂಬ ಮಾಹಿತಿ ಇದೆ. ಜನರು ಎಚ್ಚರದಿಂದ ಇರುವುದು ಅಗತ್ಯ ಎಂದು ಹೇಳಿದರು. ನಿಮ್ಮ…

Read More

ಮಧುಗಿರಿ:  ಮಧುಗಿರಿ ಅಥವಾ ಸಿರಾ ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಚಿದಾನಂದಗೌಡ ತಿಳಿಸಿದರು. ತಾಲೂಕಿನ ಪುರವರ ಹೋಬಳಿಯ ಬಡಕನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಮಧುಗಿರಿ ಹಾಗೂ ಸಿರಾ ಕ್ಷೇತ್ರಗಳು ಆರ್ಥಿಕವಾಗಿ ಪ್ರಗತಿ ಹೊಂದಬೇಕೆಂಬ ನಿಟ್ಟಿನಲ್ಲಿ ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂದು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಕಳೆದ ಬಾರಿ ಮತದಾರರು ವಿಶ್ವಾಸವಿಟ್ಟು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಆದರೆ, ಅವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜನರಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಅನೇಕ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದು ಮತಯಾಚನೆ ಮಾಡುತ್ತಿದ್ದೇವೆ ಎಂದರು. ಕ್ಷೇತ್ರದ ಗ್ರಾಮೀಣ ಭಾಗಗಳು ತುಂಬಾ ಹಿಂದುಳಿದ ಪ್ರದೇಶಗಳಾಗಿವೆ. ಈ ಭಾರಿ ಸ್ಥಳೀಯ ಸಂಸ್ಥೆಗಳಲ್ಲಿ ಮತದಾರರು ಯುವಕರನ್ನು…

Read More

ಮಧುಗಿರಿ: ತಾಲೂಕಿನ  ಚಿನಕವಜ್ರ ವೃತ್ತದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪ್ರಗತಿಯನ್ನು  ಶಾಸಕರಾದ ಎಂ.ವಿ.ವೀರಭದ್ರಯ್ಯನವರು ವೀಕ್ಷಿಸಿದರು. ಈ ಸಂದರ್ಭದಲ್ಲಿ , ಪುರಸಭೆ ಸದಸ್ಯರಾದ ಚಂದ್ರಶೇಖರ್ ಬಾಬು, ಗಂಗರಾಜು, ಎಂ.ಆರ್.ಜಗನ್ನಾಥ್, ನಾಣಿ, ಮಾಜಿ ಸದಸ್ಯರಾದ ಶಫಿವುಲ್ಲಾ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ: ಅಬಿದ್, ಮಧುಗಿರಿ  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣದ ಹಿನ್ನೆಲೆಯಲ್ಲಿ ಹಾದನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಾಮಫಲಕದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗ್ರಾಮಸ್ಥರು ಮೇಣದ ಬತ್ತಿ ಹಚ್ಚಿ ಮೌನಚರಣೆ ನಡೆಸಿದರು. ಈ ವೇಳೆ ಗ್ರಾಮದ ಮುಖಂಡ ಮಹದೇವಯ್ಯ ಮಾತನಾಡಿ,  ಭಾರತ ದೇಶದಲ್ಲಿ ಡಿ.6 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿಬ್ಬಾಣ ಹೊಂದಿದಾಗ 193 ರಾಷ್ಟ್ರಗಳ ಧ್ವಜವನ್ನು ಕೆಳಗಿಳಿಸಿ ಗೌರವ ಸಲ್ಲಿಸಿದ್ದಾರೆ. ಅವರ ಕೊಡುಗೆ, ಸಾಧನೆ ಜಗತ್ತಿಗೆ ತಿಳಿದಿದೆ ಆದರೆ, ಭಾರತೀಯರಿಗೆ ಇನ್ನೂ ತಿಳಿದಿಲ್ಲ ಇನ್ನೂ ಜಾತಿ, ಧರ್ಮ ಎಂದು ಯೋಚಿಸುತ್ತಿದ್ದಾರೆ ಇದು ದುರಂತ ಎಂದು ಹೇಳಿದರು. ಗ್ರಾಮದ ಯುವಕ, ಯುವತಿಯರು ಮತ್ತು ಮಕ್ಕಳು ಅಂಬೇಡ್ಕರ್ ರವರ ಭಾವಚಿತ್ರವನ್ನಿಟ್ಟು ಮೇಣದ ಬತ್ತಿ ಹಚ್ಚಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಯಾಜಮಾನರು ಮಹದೇವಯ್ಯ, ಚಿಕ್ಕಣ.ಗ್ರಾಮ ಪಂಚಾಯಿತಿ ಸದಸ್ಯರು ಶಿವರಾಜ್ ಅರಸು, ಪ್ರಕಾಶ್, ರತ್ನಮ ರಾಜೇಶ್, ಗ್ರಾಮದ ಮುಖಂಡರು ಪುಟ್ಟಸ್ವಾಮಿ, ಮಹದೇವಸ್ವಾಮಿ, ನಂಜುಂಡಿ, ಚನ್ನಯ್ಯ, ಸುರೇಶ್,…

Read More