Author: admin

ತುಮಕೂರು:  ಮಳೆ ನೀರಿನಲ್ಲಿ ಆಟೋ ಚಾಲಕ ಕೊಚ್ಚಿ ಹೋದ ಘಟನೆ ಹಿನ್ನೆಲೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಅರಗ ಜ್ಞಾನೇಂದ್ರ ತುಮಕೂರಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಅವರು,  ಆಟೋ ಚಾಲಕ ಇನ್ನೂ ಪತ್ತೆಯಾಗಿಲ್ಲ. ಆಟೋ ಚಾಲಕ ಪತ್ತೆಯಾದ ಬಳಿಕ ಮುಂದಿನ ಕ್ರಮಕೈಗೊಳ್ಳೋಣ. ವ್ಯಕ್ತಿ ಮೊದಲು ಬದುಕಿದ್ದಾನೆ ಅಂದುಕೊಳ್ಳೋಣ. ವ್ಯಕ್ತಿ ಪತ್ತೆಯಾಗುವವರೆಗೂ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಹಿನ್ನೆಲೆಯಲ್ಲಿ ತುಮಕೂರಿನ ವಿವಿಧೆಡೆಗಳಲ್ಲಿ ಅವೈಜ್ಞಾನಿಕ ಕಾಮಕಾರಿಗಳು ನಡೆಯುತ್ತಿದ್ದು, ಇದೀಗ ಇದರ ಫಲವಾಗಿ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಈ ಬಗ್ಗೆ ಯಾವ ಕ್ರಮಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಇಲ್ಲಿ ಮಳೆ ನೀರು ತುಂಬಿತ್ತು ಎಂದು ಮಾಹಿತಿ ಇದೆ. ಅದನ್ನು ಸರಿಪಡಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ.  ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ತುಮಕೂರಿನ ವಿವಿಧ ಪ್ರದೇಶಗಳಲ್ಲಿರುವ ಅಂಡರ್ ಪಾಸ್ ಗಳಲ್ಲಿ ಇದೇ ರೀತಿಯ ಸಮಸ್ಯೆಗಳಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,…

Read More

ಕನ್ನಡ ಭಾಷೆಯ ಮೂಲ ತತ್ವಗಳನ್ನು ಮಕ್ಕಳಿಗೆ ಅರ್ಥಪೂರ್ಣ ಮತ್ತು ಕ್ರಮಬದ್ಧವಾಗಿ ಶಿಕ್ಷಕರು ಕಲಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ಅಭಿಪ್ರಾಯಪಟ್ಟರು. ತುರುವೇಕೆರೆ ಪಟ್ಟಣದ ಬಿಆರ್ ಸಿ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತುಮಕೂರು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತುರುವೇಕೆರೆ ಹಾಗೂ ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪಠ್ಯದಲ್ಲಿರುವ ಮೌಲ್ವಿಕ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಮೂಲಕ ಗುಣಾತ್ಮಕ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ತಾಲ್ಲೂಕಿನ ಪ್ರೌಢ ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆಯ ನಡುವೆಯೂ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು. ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕ ಎಚ್.ಜಿ.ಗಿರೀಶ್ 8 ಮತ್ತು 9ನೇ ತರಗತಿಯ ಮಕ್ಕಳಿಗೆ ಕಲಿಕಾ ಚೇತರಿಕೆ ಉಪಕ್ರಮಗಳ ಕುರಿತು ಮಾತನಾಡಿ, ಕೋವಿಡ್ 19ರ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸಮರ್ಪಕ ಕಲಿಕೆ ಉಂಟಾಗಿಲ್ಲ. ಹಾಗಾಗಿ ಔಪಚಾರಿಕ ಶಿಕ್ಷಣದ ಒಂದು ಉಪಕ್ರಮವಾಗಿ ಕಲಿಕಾಚೇತರಿಕೆಯನ್ನು…

Read More

ತುಮಕೂರು: ಮಳೆ ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಪತ್ತೆಗೆ ಭಾನುವಾರ ಎನ್.ಡಿ.ಆರ್.ಎಫ್ ತಂಡ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಶನಿವಾರ ಸಂಜೆ ನಗರದ ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿ ಮಳೆ ನೀರಿನ ಫೋಟೋ ತೆಗೆಯುತ್ತಿದ್ದ ಆಟೋ ಚಾಲಕ ಅಮ್ಜದ್ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದನು. ಬಳಿಕ ಆತನ ಪತ್ತೆಗೆ ಸ್ಥಳೀಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರಾದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಾಚರಣೆಗೆ ಎನ್.ಡಿ.ಆರ್.ಎಫ್ ತಂಡದ ಮೊರೆ ಹೋಗಲಾಗಿದೆ. 6 ಗಂಟೆಗೆ ಆರಂಭ; ಭಾನುವಾರ ಬೆಳಗ್ಗೆ 6 ಗಂಟೆಗೆ ಅಮ್ಜದ್ ಪತ್ತೆ ಕಾರ್ಯಾಚರಣೆಯನ್ನು ಎನ್.ಡಿ.ಆರ್.ಎಫ್ ತಂಡ ಆರಂಭಿಸಿದೆ. ಬೆಂಗಳೂರಿನಿಂದ ಬಂದಿರುವ ತಂಡದಿಂದ ರಿಂಗ್ ರಸ್ತೆಯ ರಾಜಕಾಲುವೆಯಲ್ಲಿ ಹುಡುಕಾಟ ನಡೆದಿದೆ. ಆದರೆ ಈವರೆಗೆ ಅಮ್ಜದ್ ಪತ್ತೆಯಾಗಿಲ್ಲ. ಸ್ಥಳದಲ್ಲೇ ಮೊಕ್ಕಾಂ; ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಮ್ಜದ್ ಪತ್ನಿ ಹಾಗೂ ಕುಟುಂಬ ಸದಸ್ಯರು ಕೂಡ ಕಾರ್ಯಾಚರಣೆ ಸ್ಥಳದಲ್ಲಿ ಹಾಜರಿದ್ದಾರೆ. ವರದಿ…

Read More

ತುಮಕೂರು: ಶಿಕ್ಷಕಿಯರ ಮನಸ್ತಾಪದಿಂದ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಜಡಿದ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪ್ರತಿದಿನವೂ ಶಾಲೆಗೆ ತಡವಾಗಿ ಬರುವ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಅವರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವೈಯಕ್ತಿಕ ವಿಚಾರಗಳು ಸೇರಿದಂತೆ ಶಾಲೆಗೆ ತಡವಾಗಿ ಬರುವ ವಿಚಾರಕ್ಕೆ ಜಗಳವಾಡುತ್ತಾರೆ ಎನ್ನಲಾಗಿದೆ.  ಸಹಶಿಕ್ಷಕಿಯರ ಜಗಳ ನೋಡಲಾರದೇ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಶಾಲೆಗೆ ತುಮಕೂರು ಬಿಇಒ ಹನುಮನಾಯಕ್ ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಸರಗೂರು:  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಶುಕ್ರವಾರ ರಾತ್ರಿ ಕಬ್ಬೇಪುರ ಹಾಡಿಯ ಆಶ್ರಾಮ ಶಾಲೆಯಲ್ಲಿ ವ್ಯಾಸ್ತವ್ಯ ಹೂಡಿದರು. ಬಿ ಮಟಕೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ನಂತರ ಶಾಸಕರ ಜೊತೆಗೂಡಿ ಮೊಳೆಯೂರು ಗ್ರಾಮದ ಶಾಲೆಯಲ್ಲಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಮತ್ತು ಶಾಸಕರು ಅನೀಲ್ ಚಿಕ್ಕಮಾದು ಗಣ್ಯರು ಜೊತೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷ ರು ರೂಪಾಬಾಯಿ ಉಪಾಧ್ಯಕ್ಷ ದೇವದಾಸ್ ಬೆಟ್ಟಸ್ವಾಮಿ ಸದಸ್ಯರು ಸಾಥ್ ನೀಡಿದರು. ಆ ಗ್ರಾಮದಲ್ಲಿ ಮಳೆಯಿಂದ ಮನೆಗಳು ಕುಸಿದು ಬಿದ್ದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ರಸ್ತೆಗಳು ಅಳಗುಂಡಿ ಇರುವುದನ್ನು ಗಮನಿಸಿ ಪಂಚಾಯಿತಿ ಅಧಿಕಾರಿಗಳಿಗೆ ನರೇಗಾಯಡಿ ಕಾಮಗಾರಿ ಮಾಡಲು ಸೂಚನೆ ನೀಡಿದರು. ಸರಗೂರು ತಾಲ್ಲೂಕಿನ ಬಿ ‌ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಳೆಯೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು  ಸಾರ್ವಜನಿಕರಿಂದ ಹಲವು ಅರ್ಜಿಗಳನ್ನು ಸ್ವೀಕರಿಸಿದರು. ಮತ್ತು ಸಮಸ್ಯೆಗಳಿಗೆ…

Read More

ನವದೆಹಲಿ:  ಹಬ್ಬದ ಸಂದರ್ಭದಲ್ಲಿ ಮತ್ತು ತೀವ್ರ ಮಳೆಯಾಗಿ ಬೆಳೆ ಹಾನಿಗೊಳಗಾಗುವ ಕಾರಣ ಈರುಳ್ಳಿ ಬೆಲೆ ಗಗನಕ್ಕೇರುತ್ತಿತ್ತು. ಇದೀಗ ಈ ವರ್ಷ ಗ್ರಾಹಕರನ್ನು ಇಂತಹ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. 2.5 ಲಕ್ಷ ಟನ್ ಈರುಳ್ಳಿ ಸಂಗ್ರಹಿಸಲಾಗಿದ್ದು, ಈರುಳ್ಳಿಯ ಸಮರ್ಪಕ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ 2022 -23ನೇ ಆರ್ಥಿಕ ವರ್ಷದಲ್ಲಿ 2.5 ಲಕ್ಷ ಪ್ರಮಾಣದ ಈರುಳ್ಳಿ ಸಂಗ್ರಹಿಸಿದೆ. ಇದುವರೆಗೆ ಸರ್ಕಾರ ಸಂಗ್ರಹಿಸಿದ ದಾಖಲೆಯ ಗರಿಷ್ಠ ಪ್ರಮಾಣ ಇದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗಿ ದರ ಏರಿಕೆಯಾಗುತ್ತದೆ. ಈ ಬಾರಿ ಸರ್ಕಾರ ಬೆಲೆ ಏರಿಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಾಸನ: ತೆಪ್ಪ ಮಗುಚಿ ಇಬ್ಬರು ಜಲಸಮಾಧಿಯಾಗಿರುವ ಘಟನೆ ಹಾಸನ ತಾಲೂಕು, ದುದ್ದ ಹೋಬಳಿ ತಿಮ್ಲಾಪುರದಲ್ಲಿ ಶನಿವಾರ ಸಂಭವಿಸಿದೆ. ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಬಿದ್ದಿದ್ದು,  ಭಾರಿ ಮಳೆ ನಡುವೆ ಕೆರೆಯಲ್ಲಿ ಮೀನು ಹಿಡಿಯಲು ಮೂವರು ಹೋಗಿದ್ದರು ಎನ್ನಲಾಗಿದೆ. ಕಿಶೋರ್  ಎಂಬವರು ಕೆರೆಯಲ್ಲಿ ಮೀನು ಸಾಕಿದ್ದು, ಸ್ನೇಹಿತರೊಂದಿಗೆ ಕೆರೆಗೆ ತೆಪ್ಪದಲ್ಲಿ ತೆರಳಿದ್ದರು. ಭಾರೀ ಮಳೆಯ ನಡುವೆಯೂ  ಮೀನು ಹಿಡಿಯಲು ತೆರಳಿದ ವೇಳೆ ಈ ದುರಂತ ಸಂಭವಿಸಿದೆ. ಕಿಶೋರ್ ಅವರ ಮೃತದೇಹ ಪತ್ತೆಯಾಗಿದ್ದು, ರಾಜಣ್ಣ ಎಂಬವರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುಮಕೂರು:  ಜುಲೈ  ದೇಶದಲ್ಲಿ ಇಂಧನದ ಅಬಾಧತೆಯನ್ನು ತಪ್ಪಿಸುವ ಸಲುವಾಗಿ ಕಾರುಗಳ ತಯಾರಿಕೆಯಲ್ಲಿ ಪರ್ಯಾಯ ಸಂಶೋಧನೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿ ವತಿಯಿಂದ ಪರಿಸರ ಸ್ನೇಹಿಯಾಗಿರುವ ಟಾಟಾ ಟಿಗೋರ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಎಂಬ ನೂತನ ಕಾರನ್ನು ತುಮಕೂರು ನಗರದ  ಬಿ.ಹೆಚ್.ರಸ್ತೆ, ಬಂಡಿಮನೆ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಶ್ರೀ ಆಟೋ ಕಾರ್ ಷೋರೂಮ್‌ ನಲ್ಲಿ ಇಂದು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅವರು ಮಾತನಾಡಿ, ನಮ್ಮ ದೇಶದಲ್ಲೇ ತಯಾರಾಗುತ್ತಿರುವ ಈ ಕಾರುಗಳು ವಿಶ್ವಕ್ಕೆ ಮಾದರಿಯಾಗಲಿವೆ ಎಂದು ಹೇಳಿದರಲ್ಲದೇ, ಮುಂದಿನ ದಿನಗಳಲ್ಲಿ ಈ ಕಾರುಗಳನ್ನೇ ಎಲ್ಲಾ ಜನರು ಬಳಕೆ ಮಾಡಲು ಮುಂದಾಗುತ್ತಾರೆಂದು ತಿಳಿಸಿದರು, ಅಲ್ಲದೇ ನಮ್ಮ ತುಮಕೂರಿನಲ್ಲಿ ಈ ಕಾರುಗಳನ್ನು ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆಂದು ತಿಳಿಸಿದರು. ಇನ್ನು ಈ ಕಾರುಗಳು ಸಂಪೂರ್ಣ ವಿದ್ಯುತ್ ಚಾಲಿತ ಕಾರುಗಳಾಗಿದ್ದು, ಸದ್ಯಕ್ಕೆ ತುಮಕೂರಿನ ಶ್ರೀಆಟೋ (ಟಾಟಾ ಷೋರೂಂ)ನಲ್ಲಿ ಮತ್ತು ಹಿರೇಹಳ್ಳಿ ಸಮೀಪದಲ್ಲಿ ಚಾರ್ಜಿಂಗ್ ಯೂನಿಟ್‌ಗಳಿದ್ದು, ಸದ್ಯದಲ್ಲಿಯೇ ತುಮಕೂರಿನ…

Read More

ತುಮಕೂರು:  ರೈಲ್ವೇ ಅಂಡರ್ ಪಾಸ್ ನಲ್ಲಿ ತುಂಬಿದ್ದ ನೀರಿನ ಫೋಟೋ ತೆಗೆಯುತ್ತಿದ್ದ ವೇಳೆ ಆಟೋ ಚಾಲಕರೊಬ್ಬರು  ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಕೊಂಡು ಹೋದ ಘಟನೆ ಶನಿವಾರ ನಗರದ ಹೆಗಡೆ ಕಾಲೊನಿ ರೈಲ್ವೆ ಅಂಡರ್ ಪಾಸ್ ಸಮೀಪ ನಡೆದಿದೆ. ಶಾಂತಿನಗರದ ಚಾಲಕ ಅಮ್ಜದ್ ಖಾನ್ (44)  ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವರಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ  ಶೋಧ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ದಾನ ಪ್ಯಾಲೇಸ್‌ ಕಡೆಯಿಂದ ಗುಬ್ಬಿಗೇಟ್ ಕಡೆಗೆ ತೆರಳುತ್ತಿದ್ದ ಆಟೊವನ್ನು ಚಾಲಕ ಅಮ್ಜದ್ ರೈಲ್ವೆ ಅಂಡರ್ ಪಾಸ್ ಸಮೀಪ ನಿಲ್ಲಿಸಿದ್ದಾರೆ. ಅದೇ ವೇಳೆ ಸುರಿದ ಜೋರು ಮಳೆಗೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ನೀರು ನಿಂತಿರುವ ಫೋಟೊ ತೆಗೆಯುವ ಸಮಯದಲ್ಲಿ ಮೊಬೈಲ್ ಜಾರಿ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾರೆ. ಮೊಬೈಲ್ ಹುಡುಕಾಡುತ್ತಲೇ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಗುಬ್ಬಿ: ಗುಬ್ಬಿ ಶಾಸಕ ಎಸ್.ಆರ್.ಶ್ರೀ ನಿವಾಸ್ ಬಿಜೆಪಿ ಪಕ್ಷಕ್ಕೆ ಬಂದರೆ ನಾನು ಸ್ವಾಗತಿಸಲು ಸಿದ್ದರಿದ್ದೇವೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು. ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಮಳೆಕಲ್ಲಹಳ್ಳಿ, ಪೆದ್ದನಹಳ್ಳಿ, ಕೆ ಮತ್ತಿಘಟ್ಟ . ಕಲ್ಲೂರು ಕ್ರಾಸ್ ಮತ್ತು ಸಿ.ಎಸ್.ಪುರ ಹೋಬಳಿಯ ಯರನಹಟ್ಟಿ, ಮತ್ತು ಜನ್ನೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕೆ ಆರ್ ಐ ಡಿ ಎಲ್ ವತಿಯಿಂದ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಇಂದು ಹಿಂದುಳಿದ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ 2.75 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿ ನೇರವೆರಿಸಿದ್ದು, ಸಾಕಷ್ಟು ಗ್ರಾಮಗಳಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. 240 ಹಳ್ಳಿಗಳ ಅಭಿವೃದ್ಧಿ ಗೆ 36 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪುನಃ ಮತ್ತಷ್ಟು ಗ್ರಾಮಗಳ ಅಭಿವೃದ್ಧಿ 15 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಗ್ರಾಮದಲ್ಲಿ ಕಾಮಗಾರಿ ಬಾಕಿಉಳಿದಿದ್ದೇಯೋ ಅಂತ…

Read More