Subscribe to Updates
Get the latest creative news from FooBar about art, design and business.
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
Author: admin
ಮಧುಗಿರಿ: ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಜನಕ ಲೋಟಿ ಗ್ರಾಮದ ಹೊರಹೊಲಯದಲ್ಲಿ ಜಿಂಕೆಗಳು ಪರಸ್ಪರ ಕಾಳಗ ನಡೆಸಿಕೊಂಡಿದ್ದು ಪರಿಣಾಮವಾಗಿ ಜಿಂಕೆಯ ಎಡಭಾಗದ ಕಾಲಿಗೆ ತೀವ್ರ ತರವಾದ ಪೆಟ್ಟು ಬಿದ್ದು ರಕ್ತ ಸ್ರಾವವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುಖಂಡರಾದ ರಾಜಮೋಹನ್, ಜನಕ ಲೋಟಿ ಗ್ರಾಮದ ಲಕ್ಷ್ಮಿ ನಾರಾಯಣ್ , ಕೆ ಜಿ ಎನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜಲಾಲ್ ಭಾಷಾ, ಟ್ರಸ್ಟಿ ಗುಲಹಳ್ಳಿ ಗ್ರಾಮದ ಶಹಜಹಾನ್ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಿಸಿದ್ದಾರೆ . ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜಲಾಲ್ ಭಾಷಾ ಮಾಧ್ಯಮದೊಂದಿಗೆ ಮಾತನಾಡಿ, ಮನುಷ್ಯನ ನೆರವಿಲ್ಲದೆ ವಾಸ ಮಾಡುವ ವನ್ಯಜೀವಿಗಳ ಸಮೂಹ ಹಾಗೂ ಅವುಗಳ ಸಂಖ್ಯೆಯನ್ನು ಅವುಗಳ ಅವಾಸ ಸ್ಥಾನದಲ್ಲಿಯೇ ಸಂರಕ್ಷಣೆ ಮಾಡುವುದು ನೈಜ ಸಂರಕ್ಷಣೆಯಾಗಿದೆ ಎಂದು ತಿಳಿಸಿದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಪುರ ಗೇಟ್ ಬಳಿ ಕಾರವೊಂದು ಮರಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 A ನಲ್ಲಿರುವ ಚಿಕ್ಕಪುರ ಗೇಟ್ ನ ಕೂಗಳತೆ ದೂರದಲ್ಲಿ ಇರುವ ಹುಣಸೆ ಮರಕ್ಕೆ ಮಾರುತಿ ಬ್ರೀಝ್ KA-44 M-8276 ನೋಂದಣಿ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಭಾಗ ಪೂರ್ಣ ಜಖಂಗೊಂಡಿದ್ದು, ಈ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ತಮ್ಮ ಗ್ರಾಮವಾದ ಮುತ್ತುಗದಹಳ್ಳಿ ಯಿಂದ ಚಿಕ್ಕಪುರ ಮಾರ್ಗದಲ್ಲಿ ಸಂಚರಿಸುವಾಗ ಈ ಘಟನೆ ನಡೆದಿದೆ. ಈ ಕಾರು ಮುತ್ತುಗದಹಳ್ಳಿ ಗ್ರಾಮ ಶಿಕ್ಷಣ ಇಲಾಖೆಯಲ್ಲಿ, ಬಿ.ಆರ್.ಸಿ. ಆಗಿರುವ ರಾಜು ಎಂಬವರಿಗೆ ಸೇರಿದ್ದಾಗಿದ್ದು, ಅಪಘಾತದ ಪರಿಣಾಮ ಚಾಲಕನ ತಲೆಗೆ ತೀವ್ರ ಗಾಯವಾಗಿದ್ದು, ಗಾಯಾಳುವನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಶ್ರೀ ಆದಿಚುಂಚನಗಿರಿ ವೈದ್ಯಕೀಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ತಿಪಟೂರು : ಮನುಷ್ಯನು ರಾಗ, ದ್ವೇಷಗಳನ್ನು ಮರೆತು ಪರಸ್ಪರರ ಜೊತೆ ಪ್ರೀತಿ, ವಿಶ್ವಾಸದಿಂದ ಬೆರೆಯುತ್ತಾ ಜೀವನ ನಡೆಸಿದಾಗ ಮಾತ್ರ ಮಾನಸಿಕ ಹಾಗೂ ಆತ್ಮತೃಪ್ತಿಯು ದೊರಕುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಮರಕ ಸಂಕ್ರಾಂತಿಯ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು. ಮಾನವ ತನ್ನ ಜೀವನದಲ್ಲಿ ಹಣ, ಐಶ್ವರ್ಯದ ಸಂಪಾದನೆಗಾಗಿ ಹೆಚ್ಚು ಶ್ರಮಿಸುತ್ತಾನೆ. ಮಾನವೀಯ ಮೌಲ್ಯಗಳನ್ನು ಮರೆತು ತನ್ನ ಸುಖವೇ ಪರಮಸುಖವೆಂದು ಭಾವಿಸುತ್ತಾ ಪರಮಾತ್ಮನನ್ನು ಕಾಣುವ ಗೋಜಿಗೆ ಹೋಗದೇ ಸ್ವಾರ್ಥದಿಂದ ತನ್ನಪಾಡಿಗೆ ತಾನಿರುತ್ತಾನೆ. ಜೀವನದಲ್ಲಿ ಅಂತರಂಗದಲ್ಲಿರುವ ಪರಮಾತ್ಮನನ್ನು ಹುಡುಕದೇ ಎಲ್ಲೆಲ್ಲಿಗೋ ಹೋಗುತ್ತೇವೆ. ಆದರೆ ಪರಮಾತ್ಮ ನಮ್ಮಲ್ಲಿಯೇ ನೆಲೆಸಿರುತ್ತಾನೆ ಎಂಬುದು ತಿಳಿದೇ ಇರುವುದಿಲ್ಲ. ಮಾನವನ ಮನಸ್ಸಿನಲ್ಲಿ ಎಲ್ಲಾರೀತಿಯ ವಿಚಾರಗಳು ನೆಲೆಸಿದ್ದು ಉತ್ತಮ ವಿಚಾರಗಳನ್ನು…
ಮುಧೋಳ: ಇಂದು ಬೆಳ್ಳಂಬೆಳಗ್ಗೆ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯು ಶಿರೋಳ ಕ್ರಾಸ್ ಬಳಿ ನಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಸಿದ್ದರಾಯ ತೇಲಿ (36), ಬಾಲಪ್ಪ ಸಂಡಗಿ (34), ಹನಮಂತ ಗನಗಾರ (21), ರಿಯಾಜ ಜಾಲಗೇರ (25) ಮೃತ ದುರ್ದೈವಿಗಳು. ಇವರು ಜಮಖಂಡಿ ತಾಲೂಕಿನ ಗೋಠೆ ಗ್ರಾಮದವರೆಂದು ಹೇಳಲಾಗುತ್ತಿದೆ. ಇವರು ನ್ಯಾಯಲಯದ ವ್ಯಾಜ್ಯದ ನಿಮಿತ್ತ ಗೋಠಯಿಂದ ಧಾರವಾಡದ ಹೈಕೋರ್ಟ್ ಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಬೆಳಗಾವಿಯಿಂದ ಕಲಬುರಗಿ ಮಾರ್ಗವಾಗಿ ತೆರಳುತಿದ್ದ ಬಸ್ ಒಂದು, ಕಬ್ಬಿನ ಟ್ರ್ಯಾಕ್ಟರ್ ಓವರ್ ಟೆಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮುಂಬೈ: 10 ಕಿ.ಮೀ. ಬಸ್ ಚಲಾಯಿಸಿ ಚಾಲಕನ ಪ್ರಾಣ ಉಳಿಸಿದ ಮಹಿಳೆ. ಈ ಘಟನೆಯು ಪುಣೆಯಲ್ಲಿ ನಡೆದಿದ್ದು, ಬಸ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಸ್ ಓಡಿಸಿದ ಯೋಗಿತಾ ಸತಾವ್(42) ಇವರು ತಮ್ಮ ಮಕ್ಕಳು ಹಾಗೂ ಇತರೆ ಮಹಿಳೆಯರು ಮತ್ತು ಅವರ ಮಕ್ಕಳೊಂದಿಗೆ ಕೃಷಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳಿ ಬರುವಾಗ ಕಾಡಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಮಿನಿಬಸ್ ನ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಆಗ ಬಸ್ ನ್ನು ಪಕ್ಕಕ್ಕೆ ನಿಲ್ಲಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದರಿಂದ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು. ಈ ಸಮಯದಲ್ಲಿ ಯೋಗಿತಾ ಸಾತಾವ್ ಅವರು ಜೊತೆ ಇದ್ದ ಪ್ರಯಾಣಿಕರಿಗೆ ಧೈರ್ಯ ತುಂಬಿ ತಾವೇ 10 ಕಿ.ಮೀ. ವರೆಗೆ ಬಸ್ ಚಲಾಯಿಸಿಕೊಂಡು ಹೋಗಿ ಸಮೀಪದ ಆಸ್ಪತ್ರಗೆ ಚಾಲಕನನ್ನು ದಾಖಲಿಸಿ, ಆತನ ಪ್ರಾಣ ಕಾಪಾಡಿದ್ದಾರೆ. ಹಾಗೇ ಪ್ರಯಾಣಿಕರನ್ನು ಅವರ ಮನೆಗೆ ಬಿಟ್ಟಿದ್ದಾರೆ. ಇವರ ಧೈರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 15 ಮತ್ತು 16 ರ ಸಂತೇಪೇಟೆಯಲ್ಲಿ ನಿರ್ಮಾಣಗೊಂಡಿರುವ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಮನೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಸ್ಲಂ ಬೋರ್ಡ್ ಮನೆಗಳು ಮಂಜೂರು ಆಗಿ ನಾಲ್ಕು ವರ್ಷಗಳೂ ಕಳೆದಿದ್ದರೂ, ಇನ್ನೂ ಕಾಮಗಾರಿ ಪೂರ್ಣಗೊಳಿಸದೆ , ಅಕ್ರಮ ಎಸಗಲಾಗಿದೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ . ಮನೆಗಳಿಗೆ ದುರ್ಬಲ ತಳಪಾಯ ಹಾಕಲಾಗಿದ್ದು, ಮನೆ ನಿರ್ಮಾಣಕ್ಕೆ ಕಳಪೆ ಇಟ್ಟಿಗೆಗಳನ್ನು ಬಳಸಲಾಗಿದೆ. ಐದು ಇಂಚು ಆರ್ ಸಿ ಸಿ ಹಾಕುವ ಬದಲು ಎರಡುವರೆ ಇಂಚು ಹಾಕಲಾಗಿದೆ. ಇದರಿಂದಾಗಿ ಮೇಲ್ಛಾವಣಿಗಳು ಸೋರಿಕೆಯಾಗುತ್ತಿದೆ. ಹೊಸದಾಗಿ ಗೋಡೆಗಳು ನಿರ್ಮಾಣಗೊಂಡಿದ್ದರೂ ಮನೆ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಗೋಡೆಗಳು ಬಿರುಕು ಬಿಟ್ಟಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಸ್ಲಂ ಬೋರ್ಡ್ ಇಲಾಖೆಯ ಅಧಿಕಾರಿಯವರಿಗೆ ವಿಚಾರಿಸಿದರೆ, ಬೇಜಾವ್ದಾರಿತನದಿಂದ ಉತ್ತರ ನೀಡಿ ಕಳುಹಿಸಿದ್ದಾರೆ ಎಂದು ಅಧಿಕಾರಿಗಳ ಮೇಲೆ ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು…
ದಿನೇ ದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿರುವುದರಿಂದ ಸಿಲಿಕಾನ್ ಸಿಟಿ ಡೇಂಜರ್ ಸಿಟಿಯಾಗಿ ಪರಿವರ್ತನೆಯಾಗಿದೆ. ಇಂದು ಒಂದೇ ದಿನ 22317 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ನಿನ್ನೆ 20121 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ 22 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಲಾಗಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ.ಕಳೆದ ವಾರ ವೀಕೆಂಡ್ ಜಾರಿಯಲ್ಲಿದ್ದರೂ ನೂರಾರು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತು ನಾಳೆ ವೀಕೆಂಡ್ ಜಾರಿಯಲ್ಲಿದ್ದರೂ ನಾಳೆ ಇನ್ನೆಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುವುದೋ ಎಂಬ ಭೀತಿ ಆರಂಭವಾಗಿದೆ. ಸೋಂಕು ತಡೆಗೆ ಏನೆ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ದುಷ್ಕರ್ಮಿಗಳು ರೈಲ್ವೆ ಹಳಿಯ ಮೇಲೆ ಹಾಕಿದ್ದ ಸಿಮೆಂಟ್ ಪಿಲ್ಲರ್‌ಗೆ ರಾಜಧಾನಿ ಎಕ್ಸ್‍ಪ್ರೆಸ್ ಡಿಕ್ಕಿ ಹೊಡೆದಿದ್ದು, ಕೆಲ ಕಾಲ ಆತಂಕ ಮೂಡಿಸಿದೆ. ಗುಜರಾತ್‍ನ ದಕ್ಷಿಣ ಭಾಗದಲ್ಲಿ ಈ ದುರ್ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುಂಬೈ, ದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‍ಪೆಕ್ಸ್ ರೈಲು ಶುಕ್ರವಾರ ಸಂಜೆ 7.10ರ ಸುಮಾರಿನಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಸಿಮೆಂಟ್ ಪಿಲ್ಲರ್ ಅನ್ನು ರೈಲ್ವೆ ಹಳಿಯ ಮೇಲೆ ಹಾಕಿದ್ದಾರೆ. ರೈಲು ಢಿಕ್ಕಿ ಹೊಡೆದ ರಬಸಕ್ಕೆ ಪಿಲ್ಲರ್ ಹಳಿಯ ಮೇಲಿಂದ ಪಕ್ಕಕ್ಕೆ ತಳ್ಳಲ್ಪಟ್ಟಿದೆ.ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ರೈಲ್ವೆ ಸಂಚಾರಕ್ಕೂ ಅಡಚಣೆಯಾಗಿಲ್ಲ. ಘಟನೆಯ ಬಗ್ಗೆ ಲೋಕೋ ಪೈಲಟ್ ಸ್ಟೆಷನ್ ಮಾಸ್ಟರ್‍ಗೆ ಮಾಹಿತಿ ನೀಡಿದ್ದಾರೆ. ವಲ್ಸಾದ್ ಗ್ರಾಮೀಣ ಭಾಗದ ಪೊಲೀಸರು ಕೇಸು ದಾಖಲಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ವಿಷ ಪೂರಿತ ಮದ್ಯ ಸೇವನೆಯಿಂದ ಐವರು ಸಾವನ್ನಪ್ಪಿರುವ ಘಟನೆ ನಳಂದ ಜಿಲ್ಲೆಯಲ್ಲಿ ನಡೆದಿದ್ದು , ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಿಹಾರ್ ಕೆಲವು ರಾಜ್ಯಗಳಲ್ಲಿ ವಿಷ ಪೂರಿತ ಮದ್ಯ ಸೇವನೆಯಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ನಿನ್ನೆ ಐವರು ಸಾವನ್ನಪ್ಪಿರುವ ಘಟನೆ ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿಪಹಡಿ ಮತ್ತು ಪಹಾಡ್‍ತಲ್ಲಿ ಎಂಬ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಭಾಗೋ ಮಿಸ್ತ್ರಿ(55), ಮುನ್ನಾ ಮಿಸ್ತ್ರಿ(55), ಧರ್ಮೇಂದ್ರ(50), ನಾಗೇಶ್ವರ್(50) ಮತ್ತು ಕಾಳಿಚರಣ್ ಮಿಸ್ತ್ರಿ (50) ಮೃತಪಟ್ಟವರಾಗಿದ್ದಾರೆ.ಮದ್ಯ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಪ್ರದೇಶಗಳಿಗೆ ಡಿಎಸ್‍ಪಿ ಮತ್ತು ಎಸ್‍ಎಚ್‍ಒ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದು ಪ್ರಮುಖ ವಿಷಯವೆನೆಂದರೆ ಬಿಹಾರ್ ಸರ್ಕಾರ ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಮಾರಾಟ ಹಾಗೂ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ವರದಿ: ಆಂಟೋನಿ ಬೇಗೂರು
ಕೊರೊನಾ ಸೋಂಕು ನಾಗಾಲೋಟದಲ್ಲಿ ಸಾಗುತ್ತಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 2.7 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 225 ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರ ಜತೆಯಲ್ಲಿ 7743 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಕೊರೊನಾ ಸೋಂಕಿನಿಂದ 314 ಮಂದಿ ಸಾವನ್ನಪ್ಪಿದ್ದಾರೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಸಂಖ್ಯೆ ಶೇ.16.28ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ ಒಂದೇ ದಿನದಲ್ಲಿ 1,38,331 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 15,50,357 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 314 ಮಂದಿ ಕೋವಿಡ್‍ನಿಂದ ಮೃತಪಟ್ಟಿರುವುದು ಸೇರಿದಂತೆ ದೇಶಾದ್ಯಂತ ಈ ಸೋಂಕಿಗೆ ಸುಮಾರು 4,48,549 ಮಂದಿ ಬಲಿಯಾಗಿದ್ದಾರೆ.ನವದೆಹಲಿ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ, ಮಣಿಪುರ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು,…