Author: admin

ತುಮಕೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶನಿವಾರ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ವತಿಯಿಂದ ಕ್ಯಾತ್ಸಂದ್ರದ  33ನೇ ವಾರ್ಡಿನ ಎಲ್ಲ ಪೌರಕಾರ್ಮಿಕರಿಗೆ, ಹೂ ಮಾರುವ ಮಹಿಳೆಯರಿಗೆ ಹಾಗೂ ಮನೆಕೆಲಸ ಮಾಡುವ ಹೆಂಗಸರಿಗೆ ಬ್ಲಾಂಕೆಟ್ ಗಳನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ರವಿ ಜಿ.ಆರ್. ಕ್ಯಾತ್ಸಂದ್ರದ ಮುಖಂಡರು ರೋಟರಿಯ ಬಗ್ಗೆ ಮಾತನಾಡಿ, ರೋಟರಿಯ ಸೇವೆ ಶ್ಲಾಘನೀಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ  ಎಂದರು. ಈ ಸಂದರ್ಭದಲ್ಲಿ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಅಧ್ಯಕ್ಷ ಪ್ರಸಾದ್ ಕೆ.ಜೆ. ಸಹಿತ ರೋಟರಿ ಸದಸ್ಯರು ಭಾಗಿಯಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸುಗ್ಗಿ ಹಬ್ಬ ಸಂಕ್ರಾಂತಿ ಎಂದರೆ, ಎಲ್ಲಡೆ ಸಡಗರ ಸಂಭ್ರಮ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಈ ಹಬ್ಬದ ದಿನ ವಿವಿಧ ಭಕ್ಷ್ಯಗಳಾದ ವಿಶೇಷ ಕಡಲೆ, ಅವರೆ,  ಕಬ್ಬು, ಗೆಣಸು, ಉಗ್ಗಿ, ಪೊಂಗಲ್ ಬಳಸಲಾಗುವುದು. ಅದರಲ್ಲಿ ಗೆಡ್ಡೆ ಗೆಣಸು, ‌ಮರ ಗೆಣಸು ವಿಶೇಷವಾಗಿದೆ.   ಅದೇ ರೀತಿ ಬಳ್ಳಿ ಗೆಣಸು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ತಿಟ್ಟೆ ಗೆಣಸು ಎಂದು ಇದನ್ನು ಕರೆಯುತ್ತಾರೆ. ಈ ಗೆಣಸು ಸಂಕ್ರಾಂತಿ ವಿಶೇಷ ಸರಿ… ಅಲ್ಲದೇ ಈಗ ಕೋವಿಡ್ ನಂತಹ ಸಮಯದಲ್ಲಿ ಈ ಗೆಣಸು ಆರೋಗ್ಯಕ್ಕೆ ಲಾಭದಾಯಕವಾಗಿದೆ. ನಗರದ ಹನುಮಂತಪುರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ.   ಸ್ಥಳೀಯ ರೈತರು ವಿಶೇಷವಾಗಿ ಈ ಬಳ್ಳಿ ಗೆಣಸನ್ನು ಬೆಳೆಯುತ್ತಿದ್ದು, ಇದನ್ನು ಸುಗ್ಗಿ ಕಾಲಕ್ಕೆ ಮಾರಾಟ ಮಾಡುತ್ತಾರೆ. ಈ ಗೆಣಸಿನಿಂದಾಗುವ ಆರೋಗ್ಯದ ಲಾಭಗಳನ್ನು ವಿವರಿಸಿ ಮಾತನಾಡಿದ ರೈತ ಕೃಷ್ಣಪ್ಪ,  ನಾವು ನಮ್ಮ ತಾತನ ಕಾಲದಿಂದಲೂ ಬಳ್ಳಿ ಗೆಣಸು ಬೆಳೆದು…

Read More

ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊರ್ವ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ. ರಾತ್ರಿ ಹತ್ಯಾಳ ಸ್ವಾಮಿ ದೇವಸ್ಥಾನದ ಮುಂದೆ ಬೈಕ್‌ ಗಳಿಗೆ ಬೆಂಕಿ ಹಚ್ಚಿ, ಬಾಟಲ್‌ ಗಳನ್ನ ಹೊಡೆದು ಹಾರಾಟ-ಚೀರಾಟ ನಡೆಸಿದ್ದಾನೆ. ಮಾನಸಿಕ ಅಸ್ವಸ್ಥನ ರೀತಿ ಬೆತ್ತಲೆಯಾಗಿ ಆತಂಕ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಹತ್ಯಾಳು ದೇವೇಗೌಡ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಪುಂಡಾಟ ನಡೆಸಿದ್ದಾನೆ. ಪುಂಡಾಟ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿ, ಮಾಹಿತಿ ತಿಳಿದ ಕೆ.ಬಿ. ಕ್ರಾಸ್ ಪೊಲೀಸರು ಪುಂಡನನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ದೇವಸ್ಥಾನದ ಸಿಬ್ಬಂದಿಗಳು ಮೆಟ್ಟಿಲುಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೆಟ್ಟಿಲ ಮೇಲಿದ್ದ ಗಾಜುಗಳನ್ನು ತೆಗೆದು ನೀರಿನ ಮೂಲಕ ಸ್ವಚ್ಚಗೊಳಿಸಿದ್ದಾರೆ. ಸ್ಥಳಕ್ಕೆ ತಿಪಟೂರು ಎಸಿ, ದಿಗ್ವಿಜಯ ಬೋಡಕೆ, ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ…

Read More

ಚಿತ್ರದುರ್ಗ:  ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ,  ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರು ವೀಕೆಂಡ್ ಕರ್ಫ್ಯೂಗೆ ಕ್ಯಾರೇ ಅನ್ನದೇ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಸರ್ಕಾರವು ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ  5  ಘಂಟೆಯವರೆಗೂ ವೀಕೆಂಡ್ ಕರ್ಫೂ ಜಾರಿಗೊಳಿಸಿದೆ. ಆದರೆ ಹೆಸರಿಗೆ ಮಾತ್ರವೇ ಕರ್ಫ್ಯೂ ಇದ್ದು, ಸಾರ್ವಜನಿಕರು ಪೂಜೆಗಳಿಗೆ ಬೇಕಾಗುವ ಕಬ್ಬು , ಹೂ,  ತರಕಾರಿ ಕೊಂಡುಕೊಳ್ಳುವಲ್ಲಿ ನಿರತರಾದರು. ನಗರದಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸದೇ ಜನ ಎಂದಿನಂತೆಯೇ ವ್ಯವಹರಿಸುತ್ತಿರುವುದು ಕಂಡು ಬಂತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಎಂದರೆ ಎಲ್ಲೆಡೆಯೂ ಸಡಗರ ಸಂಭ್ರಮ ಅದರಲ್ಲೂ ಗ್ರಾಮೀಣ ಪ್ರದೇಶಗಳ ಸಂಕ್ರಾಂತಿ ಸೊಗಡು ಜಾತ್ರೆಯಂತೆ ಇರುತ್ತದೆ ಆದರೆ ‌ಮಹಾಮಾರಿ ಸೋಂಕು ಕೋವಿಡ್ ಹೆಚ್ಚಳದಿಂದಾಗಿ ಇಂದಿನ ವರ್ಷದ ಸುಗ್ಗಿ ಸಂಕ್ರಾಂತಿ ಕಮರಿಹೊಗಿದೆ. ಸರ್ಕಾರದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಜನರ ಸಂಕ್ರಾಂತಿ ಸಡಗರ ಸಂಭ್ರಮಕ್ಕೆ ತಣ್ಣಿರು ಎರಚಿದಂತಾಗಿದೆ.  ಸಂಕ್ರಾಂತಿ ವಿಶೇಷ ಗೋವು ಹೌದು. ಸುಗ್ಗಿ ಹಬ್ಬಕ್ಕೆ ಗೋವುಗಳನ್ನ ಸಿಂಗಾರ ಮಾಡಿ ಗೊದೋಳಿ ಸಮಯದಲ್ಲಿ ಕಿಚ್ಚು ಹಾಯಿಸುವುದು ಗ್ರಾಮೀಣ ಪ್ರದೇಶದ ಸಂಪ್ರದಾಯ ಪದ್ದತಿ. ಈ ನಡುವೆಯೂ‌ ನಗರದ ಬೆಳಗುಂಬದಲಿ ಮೀನಾಕ್ಷಿ ಧನ ಲಕ್ಷ್ಮಿ ಎಂಬುವವರ ಮನೆಯಲ್ಲಿ ಸಡಗರ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಮನೆಯ ಮಂದಿಯಲ್ಲಾ ಹೊಸ ಬಟ್ಟೆ ಧರಿಸಿ ದೇವರ ಜೊತೆಗೆ ಅಕಳನ್ನು ಪೂಜೆಸಲಾಯಿತು ಮನೆಯ ಮಕ್ಕಳು ಪ್ರೀತಿಯಿಂದ ಅಕಳಿಗೆ ಕಡಲೆ, ಅವರೆ, ಕಬ್ಬು ತಿನ್ನಿಸುವುದರ ಜೊತೆಗೆ ಸಂಭ್ರಮ ಪಟ್ಟರು. ಗೋವುನ್ನು ಪೂಜೆಸಿ ನಮಸ್ಕರಿಸಿ ಮನೆ ಮಂದಿಯಲ್ಲಾ ಸಂಭ್ರಮದ ಸಂಕ್ರಾಂತಿಯ ದಿನವನ್ನು ಆನಂದಿಸಿದರು. ಈ ನಡುವೆ ಮನೆಯ ಸದಸ್ಯ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 16ರಲ್ಲಿನ ಹೆಸರುವಾಸಿಯಾಗಿರುವ ಊರ ಆಂಜನೇಯ ಸ್ವಾಮಿಗೆ ಇಂದು ಮಕರ ಸಂಕ್ರಾಂತಿ ಹಬ್ಬ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ವಾರದ ಪೂಜೆಯ ಪ್ರಯುಕ್ತ ಹೂವಿನ ಅಲಂಕಾರ , ಮಹಾಮಂಗಳಾರತಿ ಹಾಗೂ ಭಕ್ತಾಧಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಅರ್ಚಕರ ಕುಟುಂಬಸ್ಥರು ಹಾಗೂ ಶ್ರೀ ಆಂಜನೇಯ ಸ್ವಾಮಿಯ ಭಕ್ತಾದಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ:  ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಐಡಿಹಳ್ಳಿ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ  ವಿದ್ಯಾಭ್ಯಾಸದ  ಜೊತೆಗೆ ಕೌಶಲ್ಯ ತರಬೇತಿ  ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಕೌಶಲ್ಯ ತರಬೇತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ಮಾತನಾಡಿ, ವಿದ್ಯಾರ್ಥಿಗಳು, ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿಯನ್ನು ಪಡೆದುಕೊಳ್ಳುವ ಮೂಲಕ ವಿವೇಕಾನಂದರ, ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತನ್ನು ಅನುಸರಿಸಬೇಕಿದೆ ಎಂದರು. ವಿದ್ಯಾಭ್ಯಾಸದ ನಂತರ ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ವಿವಿಧ ಕೌಶಲ್ಯಗಳು ಪ್ರಾಮುಖ್ಯ ವಾಗಿದೆ. ಆದ್ದರಿಂದ ಆಶಯದಂತೆ ವಿದ್ಯಾರ್ಥಿಗಳು ಈ ತರಬೇತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಮಂಜುನಾಥ್, ಐಡಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನರಸಿಂಹ ರೆಡ್ಡಿ,ದೀಪಿಕಾ ವೆಂಕಟೇಶ್, ಸಿಬ್ಬಂದಿಗಳಾದ ತನುಜಾ, ಪೂಜಾ, ಮಾನಸ, ಕಾವ್ಯ, ಚೇತನ್, ಅಂಜಿನಪ್ಪ ಮತ್ತು ಸ್ಥಳೀಯ ಮುಖಂಡರುಗಳು…

Read More

ತುಮಕೂರು: ಪಟ್ಟಣದ ಅಶೋಕ ನಗರದಲ್ಲಿರುವ ಮಹೇಶ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಜೆ.ಸಿ.ಐ. ತುಮಕೂರು ಮೆಟ್ರೋ, ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಹೇಶ್ ಪಿ.ಯು.‌ ಸಂಸ್ಥೆ ತುಮಕೂರು ಸಹಯೋಗದೊಂದಿಗೆ, ಜಿಲ್ಲೆಯ ಖ್ಯಾತ ಮನಶಾಸ್ತ್ರಜ್ಞೆ ಡಾ.ಪದ್ಮಾಕ್ಷಿ ಲೋಕೇಶ್ ರವರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ  ತಮ್ಮ ಜೀವನ ಶೈಲಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಅನ್ವಯ ಕೋವಿಡ್ 19 ರ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಗರದ ಸ್ನೇಹ ಮನೋ ವಿಕಾಸ ಕೇಂದ್ರದ ಮನಃಶಾಸ್ತ್ರಜ್ಞರು ಹಾಗೂ ಮನಶಾಸ್ತ್ರ ಶಿಕ್ಷಣ ತಜ್ಞರಾದ ಡಾ.ಪದ್ಮಾಕ್ಷಿ ಲೋಕೇಶ್ ಅವರು, ರಾಜ್ಯಾದ್ಯಂತ ಮಹೇಶ್ ಪಿಯು ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ಸಹ ಉತ್ತಮ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದೆ. ಈ ದಿನ ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ,ಈ ಕಾರ್ಯಕ್ರಮವನ್ನು ಆಯೋಜನೆಗೊಂಡಿರುವುದೂ ಸಂತಸದ ವಿಷಯವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇಂಟರ್ನೆಟ್ ಇನ್ನಿತರ…

Read More

ಕನ್ನಡ ಕಿರುತೆರೆ ಪಾಲಿಗೆ ಮಕರ ಸಂಕ್ರಾಂತಿಗೆ ಸೂತಕದ ಛಾಯೆ ಆವರಿಸಿ ಬಾಲ ಕಲಾವಿದೆ ಸಮನ್ವಿ (6) ನಿಧನಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಸಂಜೆ 5 ಗಂಟೆ ಸುಮಾರಿನಲ್ಲಿ ಕಿರುತೆರೆ ಕಲಾವಿದರಾದ ಅಮೃತಾ ನಾಯ್ಡು ಅವರು ಮಗಳು ಸಮನ್ವಿ ಯನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ವಾಜರಹಳ್ಳಿಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಕನಕಪುರ ಮುಖ್ಯರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ತಾಯಿ-ಮಗಳು ಇಬ್ಬರೂ ಕೆಳಗೆ ಬಿದ್ದಾಗ ಮಗಳಿಗೆ ಲಾರಿಯ ಬಂಪರ್ ಹೊಡೆದಿದ್ದರಿಂದ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಸಾರ್ವಜನಿಕರ ಸಹಾಯದಿಂದ ಮಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಮೃತಾ ಕುಟುಂಬ ಆಘಾತಕ್ಕೊಳಗಾಗಿದೆ. ಕಿರುತೆರೆ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಸಮನ್ವಿ ಎಲ್ಲರ ಮನೆ ಮಾತಾಗಿದ್ದಳು. ಮನರಂಜನಾ ಲೋಕದಲ್ಲಿ ಸಾಧನೆ ಮಾಡಬೇಕಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರುವುದು ನೋವಿನ…

Read More

ಹೆಚ್.ಡಿ.ಕೋಟೆ: ಇಲ್ಲಿನ  ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿಯೊಂದರ ಮೃತದೇಹ ಪತ್ತೆಯಾಗಿದ್ದು, ಕಬಿನಿ ಹಿನ್ನೀರಿನ ನಾಯಳ್ಳ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 7ರಿಂದ 8ವರ್ಷ ವಯಸ್ಸಿನ ಹುಲಿ ಇದಾಗಿದ್ದು, ಹುಲಿಗಳ ನಡುವಿನ ಕಾಳಗದಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಹುಲಿಯ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಹುಲಿಯ ಮೃತದೇಹ ಕಂಡು ಬಂದಿದೆ.  ಸ್ಥಳಕ್ಕೆ ಅರಣ್ಯ ಇಲಾಖೆ ಸಿ.ಎಫ್. ಕರಿಕಾಳನ್ ಸಹಿತ ಹಲವು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More