Subscribe to Updates
Get the latest creative news from FooBar about art, design and business.
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
Author: admin
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಂಡರ್ 19 ಬ್ಯಾಡ್ಮಿಂಟನ್ ಆಟಗಾರರ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಭಾರತದ ತಸ್ಮಿನ್ ಮಿರ್ ನಂಬರ್ 1 ಸ್ಥಾನವನ್ನು ಅಲಂಕರಿಸುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 16 ವರ್ಷದ ತಸ್ಮಿನ್ ಮೀರ್ ಒಟ್ಟು 10,810 ಪಾಯಿಂಟ್ಸ್ಗಳನ್ನು ಕಲೆ ಹಾಕುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಸ್ಮಿನ್, ನಾನು ಪಂದ್ಯಗಳನ್ನು ಸೋತಾಗ ತುಂಬಾ ಅತ್ತಿದ್ದೇನೆ, ಆದರೆ ಕಠಿಣ ಪರಿಶ್ರಮದಿಂದಾಗಿ ನಾನು ಇಂದು ಈ ಸಾಧನೆ ಮಾಡಿದ್ದೇನೆ, ಬ್ಯಾಡ್ಮಿಂಟನ್ ಲೋಕದ ಮಹಾತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ನನಗೆ ರೋಲ್ ಮಾಡೆಲ್ ಗಳಾಗಿದ್ದಾರೆ, ನನ್ನ ಈ ಪರಿಶ್ರಮಕ್ಕೆ ನನ್ನ ತಂದೆ ಹಾಗೂ ಸಹೋದರ ತ್ಯಾಗಭಾವವೂ ಕಾರಣವಾಗಿದೆ ಎಂದು ಅವರು ತಿಳಿಸಿದರು. ಹಿರಿಯ ಬ್ಯಾಡ್ಮಿಂಟನ್ ನಲ್ಲಿ ಯಾವ ರೀತಿ ಪ್ರದರ್ಶನ ನೀಡಬೇಕೆಂಬುದು ನನಗೆ ಗೊತ್ತಿಲ್ಲವಾದರೂ, ಮುಂದೊಂದು ದಿನ ಆ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ T. ನಾಗೇನಳ್ಳಿ ಗ್ರಾಮದ ವಾಲ್ಮೀಕಿ ಸಮಾಜದ ಮುಖಂಡರು, ಹಿರಿಯ ಕಾಂಗ್ರೆಸ್ ಮುಖಂಡ ನಾಗಣ್ಣ ಅವರು, ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಗಣ್ಣರವರು ರಂಗನಾಥಪುರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ರಂಗನಾಥಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಕೂಡ ಆಗಿದ್ದರು. ನಾಗಣ್ಣ ಅವರ ನಿಧನಕ್ಕೆ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕ, ಮಾಜಿ ಸಚಿವರಾದ ಡಿ. ಸುಧಾಕರ್ ರವರು ಸಂತಾಪ ಸೂಚಿಸಿದ್ದಾರೆ. ನಾಗಣ್ಣ ಅವರ ಅಂತಿಮ ಸಂಸ್ಕಾರ ಅವರ ಸ್ವಗ್ರಾಮದಲ್ಲಿ ಇಂದು ನೆರವೇರಿದೆ. ವರದಿ: ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಕ್ರೀಡಾಳುಗಳಿಗೆ ವೈಜ್ಞಾನಿಕ ವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಾಮನ್ ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿಂದು ಆನ್ ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಅತ್ಯುತ್ತಮ ಕೋಚ್ ಗಳ ಮೂಲಕ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಹೇಳಿದರು. 72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತï ಒಕ್ಕೂಟ ವೇದಿಕೆಯಾಗಿದೆ. ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಕ್ರೀಡಾಕೂಟದ ಬ್ಯಾಟನ್ ಇಂದು 9000…
ಡಾಬಾ ನೌಕರನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆಗೆ ಸಂಚು, ಅಪಹರಣ ಮತ್ತು ಗಲಾಟೆ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ನಗರದ ಯೂಟರ್ನ್ ಡಾಬಾದಲ್ಲಿ ಕಳೆದ ಮೂರು ವರ್ಷಗಳಿಂದ ಹಾಸನ ಮೂಲದ ಮನೋಜ್(19) ಕೆಲಸ ಮಾಡಿಕೊಂಡಿದ್ದನು. ಡಿ.23ರಂದು ಈ ಡಾಬಾಗೆ ಬಂದಿದ್ದ ಆರೋಪಿಗಳು ಊಟ ಮಾಡಿದ ಬಳಿಕವೂ ತುಂಬಾ ಹೊತ್ತು ಕುಳಿತು ಮಾತನಾಡುತ್ತ್ರಿವುದನ್ನು ಗಮನಿಸಿದ ಸಿಬ್ಬಂದಿ ತಡವಾಯ್ತು ಬಾಗಿಲು ಹಾಕಬೇಕು. ಬಿಲ್ ನೀಡುವಂತೆ ಕೇಳಿದಾಗ ಸಿಬ್ಬಂದಿ ಜೊತೆ ಜಗಳವಾಗಿ ಹೋಗಿದ್ದಾರೆ. ರಾತ್ರಿ 12 ಗಂಟೆ ಸುಮಾರಿನಲ್ಲಿ ಮತ್ತೆ ಈ ಡಾಬಾ ಬಳಿ ಬಂದ ಆರೋಪಿಗಳು ಡಾಬಾದ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಆ ವೇಳೆ ನೌಕರ ಮನೋಜ್ ಶಾರ್ಟ್‍ಸಕ್ರ್ಯೂಟ್ ಆಗಿರಬಹುಹದೆಂದು ತಿಳಿದು ಬಾಗಿಲು ತೆಗೆಯುತ್ತಿದ್ದಂತೆ ಆರೋಪಿಗಳು ಈತನ…
ಪಾವಗಡ: ಪಾವಗಡ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಇಂದು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಕಡು ಬಡ ಕುಟುಂಬದ ಸುಮಾರು 50 ಮಹಿಳೆಯರಿಗೆ ದಿನಸಿ ಕಿಟ್ ಗಳನ್ನು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಮುಖಂಡ ಎಂ. ಕೆ.ನಾರಾಯಣಪ್ಪ ಹಾಗೂ ದಲಿತ ಮುಖಂಡ ಹನುಮಂತರಯಪ್ಪ, ಹೆಲ್ಪ್ ಸೊಸೈಟಿ ಕಚೇರಿ ಪ್ರಾರಂಭಗೊಂಡ ಮೊದಲನೇ ದಿನವೇ ಸಮಾಜ ಮುಖಿ ಸೇವಾ ಕಾರ್ಯ ಪ್ರಾರಂಭಿಸಿ, ಇಂದು ಸಂಕ್ರಾಂತಿ ಕೊಡುಗೆಯಾಗಿ ಪಟ್ಟಣದ ಕಡು ಬಡ ಕುಟುಂಬದ ಮಹಿಳೆಯರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರು ದಿನಸಿ ಕಿಟ್ ಗಳನ್ನು ವಿತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಶ್ರೀನಿವಾಸ್ ಮಾತನಾಡಿ, ಸದಾ ಜನ ಸೇವೆಯಲ್ಲಿ ಮಗ್ನರಾಗಿರುವ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡಕ್ಕೆ ಭಗವಂತ ಮತ್ತಷ್ಟು ಸೇವೆಯನ್ನು ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು. ಬಳಿಕ ಹೆಲ್ಪ್ ಸೊಸೈಟಿ ತಂಡಕ್ಕೆ 2022ರ ದಿನದರ್ಶಿ…
ಗುಬ್ಬಿ: ಗ್ರಾಹಕ ಪಾವತಿಸಿದ ಹಣವನ್ನು ಬೆಸ್ಕಾಂಗೆ ಪಾವತಿ ಮಾಡದೇ ವಂಚಿರುವ ಘಟನೆ ಗುಬ್ಬಿ ನಗರದ ಬೆಸ್ಕಾಂನಲ್ಲಿ ನಡೆದಿದ್ದು, ಕಿರಿಯ ಸಹಾಯಕರಾದ ಮಲ್ಲೇಶ್ ನಡೆಸಿದ ವಂಚನೆಗೆ ಗುಬ್ಬಿ ಬೆಸ್ಕಾಂ ಎಇಇ ಅನಿಲ್ ಕುಮಾರ್ ದಂಡ ಪಾವತಿಸುವಂತಾಗಿದೆ. ಗ್ರಾಹಕ ರೇಣುಕಾ ಪ್ರಸಾದ್ ಎಂಬವರು ಒಂದು ತಿಂಗಳ ಹಿಂದೆ ತಮ್ಮ ಅಂಗಡಿ ಮತ್ತು ರಾಗಿ ಮಿಲ್ ನ ಒಟ್ಟು 12,360 ರೂಪಾಯಿ ವಿದ್ಯುತ್ ಬಿಲ್ ನ್ನು ಗುಬ್ಬಿ ನಗರದ ಬೆಸ್ಕಾಂ ಕಚೇರಿಗೆ ತೆರಳಿ ಪಾವತಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಕಿರಿಯ ಸಹಾಯಕರಾದ ಮಲ್ಲೇಶ್, ಗ್ರಾಹಕ ನೀಡಿದ ಹಣವನ್ನು ಪಾವತಿಸದೇ ಪ್ರಿಂಟರ್ ಸಮಸ್ಯೆ ಇದೆ ಎನ್ನುವ ಕಾರಣ ನೀಡಿ ರಶೀದಿ ನೀಡದೇ, ಹಣವೂ ಪಾವತಿಸದೇ ವಂಚಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ತಾವು ವಂಚನೆಗೊಳಗಾಗಿರುವ ವಿಚಾರ ಗ್ರಾಹಕಗೆ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು, ಸಿಬ್ಬಂದಿ ಮಲ್ಲೇಶ್ ವಿರುದ್ದ ಬೆಸ್ಕಾಂ ಎಇಇ ಅನಿಲ್ ಕುಮಾರ್ ಗೆ ದೂರು ನೀಡಿದ್ದಾರೆ. ಅನಿಲ್ ಕುಮಾರ್ ಅವರು ಮಲ್ಲೇಶ್ ನ್ನು ವಿಚಾರಣೆ ನಡೆಸಿದಾಗ,…
ತಿಪಟೂರು: ರಾಜ್ಯದೆಲ್ಲೆಡೆ ಸುಗ್ಗಿ ಹಬ್ಬವೆಂದು ಜನಜನಿತವಾಗಿರುವ ‘ಮಕರ ಸಂಕ್ರಾಂತಿ’ ಹಬ್ಬದ ಆಚರಣೆಗೆ ನಾಡಿನ ಜನತೆ ಕೊರೊನಾ ನಡುವೆ ಭೀತಿಯಲ್ಲೂ ಹಬ್ಬಕ್ಕೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ, ಹೂ ಹಣ್ಣು ಸೇರಿದಂತೆ ಹಬ್ಬದ ಖರೀದಿ ಭರಾಟೆ ಜೋರಾಗಿದೆ ವರದಿ: ಮಂಜು ಗುರುಗದಹಳ್ಳಿ ಮಧುಗಿರಿ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನರು ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಗುಂಪಾಗಿ ಹಬ್ಬದ ಸಂತೆಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷವಾದ ಕಬ್ಬು, ಕಡಲೆಕಾಯಿ, ಗೆಣಸು, ಹೂ, ತರಕಾರಿ ಹಣ್ಣುಗಳನ್ನು ಖರೀದಿ ಮಾಡಿದರು. ಮಧುಗಿರಿ ಸಂತೆ ಮೈದಾನ ಮತ್ತು ಡೂಮ್ ಲೈಟ್ ಸರ್ಕಲ್ ಅಕ್ಕ ಪಕ್ಕದ ರಸ್ತೆ ಬೀದಿಗಳಲ್ಲಿ ರೈತರು ಮಾರಾಟ ಮಾಡುವುದುಮತ್ತು ಗ್ರಾಹಕರು ವ್ಯಾಪಾರ ವಹಿವಾಟು ನಡೆಸುವ ಸನ್ನಿವೇಶ ಕಂಡು ಬಂತು. ವರದಿ: ಮಹಾಲಿಂಗಯ್ಯ, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಸರಗೂರು: ಸರಗೂರು ಭಾಗದ ಜನರಿಗೆ ಸರಗೂರು ಬಸ್ ನಿಲ್ದಾಣದಲ್ಲಿಯೇ ಬಸ್ ಪಾಸ್ ನೀಡಬೇಕು ಎಂದು ವಿವಿದ್ದೋದ್ದೇಶ ಹಾಗೂ ಗ್ರಾಮೀಣ ನಗರ ಪುನರ್ವಸತಿ ತಾಲ್ಲೂಕು ಸಂಯೋಜಕರು ಜವರಾಜು ಮನವಿ ಮಾಡಿಕೊಂಡಿದ್ದಾರೆ. ಸರಗೂರು ತಹಶೀಲ್ದಾರ್ ಚಲುವರಾಜು ಅವರಿಗೆ ಮನವಿ ಮಾಡಿರುವ ಅವರು, ಸರಗೂರು ನೂತನ ತಾಲೂಕಾಗಿದ್ದು, ಆದರೆ ಹೆಚ್.ಡಿ.ಕೋಟೆ ಬಸ್ ನಿಲ್ದಾಣದಲ್ಲಿ ಬಸ್ ಪಾಸ್ ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ತಾಲೂಕಿನಲ್ಲಿ ಸುಮಾರು 1,225 ವಿಕಲಚೇತನರಿದ್ದು, ಇವರೆಲ್ಲರೂ ಹೆಚ್.ಡಿ.ಕೋಟೆಗೆ ಹೋಗಿ ಬಸ್ ಪಾಸ್ ಪಡೆದುಕೊಳ್ಳುವುದು ಕಷ್ಟಕರವಾಗಿದೆ ಎಂದು ಜವರಾಜು ತಿಳಿಸಿದರು. ಇನ್ನೂ ಉಪಾಧ್ಯಕ್ಷ ನಾಗರಾಜ್ ಸಾಗರೆ ಮಾತನಾಡಿ, ಸರಗೂರು ತಾಲ್ಲೂಕಿನಲ್ಲಿ ಅನೇಕ ಹಾಡಿ ಹಾಗೂ ಕಾಡಿನಂಚಿನ ಹಳ್ಳಿ ಪ್ರದೇಶಗಳಿದ್ದು. ಈ ಪ್ರದೇಶಗಳಿಂದ ಹೆಚ್.ಡಿ.ಕೋಟೆಗೆ ಬಸ್ ಪಾಸ್ ಗಾಗಿ ತೆರಳುವುದು ಕಷ್ಟಕರವಾಗಿದೆ. ಸರಗೂರು ನೂತನ ತಾಲೂಕಾದರೂ ಹೆಚ್.ಡಿ.ಕೋಟೆಯಲ್ಲಿ ಬಸ್ ಪಾಸ್ ವಿತರಿಸುವುದು ಸರಿಯಲ್ಲ. ಸರಗೂರು ಬಸ್ ನಿಲ್ದಾಣದಲ್ಲಿಯೇ ಬಸ್ ಪಾಸ್ ವಿತರಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜು ಕಂದೇಗಾಲ,…
ತಿಪಟೂರು: ಇಂದು ನಗರದ ಕೆರಗೋಡಿ ರಂಗಾಪುರ ಸುಕ್ಷೇತ್ರದಲ್ಲಿ ಇಂದು ವಿಜೃಂಭಣೆಯಿಂದ ನಡೆಯಬೇಕಾಗಿದ್ದ ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯನ್ನು ಕೋವಿಡ್ ಕಾರಣದಿಂದ ಸರಳವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಗುರುಪರದೇಶಿ ಮಹಾಸ್ವಾಮೀಜಿಗಳು ಕೆರಗೋಡಿ ರಂಗಾಪುರ, ಸಂಸದ ಜಿ.ಎಸ್.ಬಸವರಾಜ್, ಶಿಕ್ಷಣ ಸಚಿವರು ಬಿ.ಸಿ.ನಾಗೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ಶಾಂತಕುಮಾರ್, ಮಾಜಿ ಶಾಸಕ ನಂಜಮರಿ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು. ವರದಿ: ಮಂಜು ಗುರುಗದಹಳ್ಳಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಟಿ.ಬಿ.ಕ್ರಾಸ್ ಮಾಯಸಂದ್ರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಸಾಲ ಜಯರಾಮ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕಾಮಗಾರಿಯ ಅಂದಾಜು ವೆಚ್ಚ 1.25ಕೋಟಿ ಗಳದ್ದಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ರಸ್ತೆ ಕಿರಿದಾಗಿದೆ. ಹೀಗಾಗಿ ರಸ್ತೆ ಅಗಲೀಕರಣ ಹಾಗೂ ಚರಂಡಿ ವ್ಯವಸ್ಥೆ ಅನಿವಾರ್ಯವಾಗಿದೆ. ವಾಹನ ಸವಾರರು ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ರಸ್ತೆಯ ಎರಡೂ ಬದಿಯ ಚರಂಡಿ ಅಗಲೀಕರಣ ಅಗತ್ಯವಾಗಿದೆಎ ಎಂದರು. ಟಿ.ಬಿ.ಕ್ರಾಸ್ ನ ಅಂಗಡಿಯ ಮಾಲೀಕರು ಹಾಗೂ ಸಾರ್ವಜನಿಕರು ಮತ್ತು ಕ್ಷೇತ್ರದ ಮತದಾರ ಪ್ರಭುಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಈ ರಸ್ತೆ ಕಾಮಗಾರಿ ಯಶಸ್ವಿಯಾಗಿ ನಡೆಯಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ,ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ್, ಮುನಿಯೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಲಂಜಿಹಳ್ಳಿ, ತುರುವೇಕೆರೆ ಪಟ್ಟಣ ಪಂಚಾಯಿತಿ ಸದಸ್ಯರಾದ ಅಂಜನ್…