Author: admin

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ ಗ್ರಾಮದ  ಚಿಕ್ಕಬಸವಯ್ಯ ಬಿನ್ ಚನ್ನಬಸವಯ್ಯ ಎಂಬವರ ಮನೆಗೆ ದಾಳಿ ನಡೆಸಿದ ಕೊರಟಗೆರೆ ಅರಣ್ಯಧಿಕಾರಿಗಳು ಒಂದು ಕೆ.ಜಿ. 50 ಗ್ರಾಂ. ಕರಡಿಯ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದ್ದು,  ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕ ಬಳಸಿರುವ  ಆಯುಧ ಹಾಗೂ ಕರಡಿಯ ದೇಹದ ಭಾಗಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಡಿಸೆಂಬರ್ 10ರಂದು  ಬೆಳಗ್ಗೆ 9 ಗಂಟೆಯ ವೇಳೆಗೆ ಗೌಜಗಲ್ ಗ್ರಾಮದ ಚನ್ನಬಸವಯ್ಯ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕರಡಿ ಮಾಂಸ ವಶಪಡಿಸಿಕೊಂಡಿದ್ದು,  ಬಳಿಕ  11ರಂದು  ಇಲ್ಲಿಮ ಗೌಜಕಲ್ಲು ಎಂಬಲ್ಲಿನ ಖಾಸಗಿ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿರುವುದನ್ನು ಪತ್ತೆ ಹಚ್ಚಲಾಗಿದ್ದು, ಕರಡಿಯ ಇತರ ದೇಹದ ಭಾಗಗಳು ಅಲ್ಲಿ ದೊರೆತಿದ್ದು, ಕೃತ್ಯಕ್ಕೆ ಬಳಸಿರುವ ಮಚ್ಚು ಕೂಡ ಸ್ಥಳದಲ್ಲಿ ದೊರೆತಿತ್ತು. ಘಟನೆಗೆ ಸಂಬಂಧಿಸಿದಂತೆ ಚನ್ನಬಸಯ್ಯ ಸೇರಿದಂತೆ 6ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ವಿರುದ್ಧ  ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ ನಿಮ್ಮ…

Read More

ಮಧುಗಿರಿ: ಪಟ್ಟಣದ  ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಜಾಗೃತಿ ವೇದಿಕೆ, ಮಧುಗಿರಿ ತಾಲೂಕು ಘಟಕ ವತಿಯಿಂದ ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಪುಂಡರು ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟಿರುತ್ತಾರೆ, ಇಂತಹ ಕಿಡಿಗೇಡಿಗಳ ಮೇಲೆ ಸರ್ಕಾರ ಕೂಡಲೇ  ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ರಾಜ್ಯದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಸಂಘಟನೆಯನ್ನು ನಿಷೇಧಿಸಬೇಕು.  ಈ ಕೃತ್ಯ ಎಸಗಿದ ಶಿವಸೇನೆ ಮತ್ತು ಎಂ.ಇ.ಎಸ್. ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.  ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಸಾದ್, ಶಿವಲಿಂಗಯ್ಯ, ರಾಮಾಂಜಿನಮ್ಮ, ರತ್ನಮ್ಮ, ಐಡಿಹಳ್ಳಿ ಬಾಲು, ರಾಜು ರೋಹಿತ್, ಮಹೇಶ್, ಇಲಿಯಸ್, ಪ್ರಭು ಮತ್ತಿತರು ಹಾಜರಿದ್ದರು. ವರದಿ: ಅಬಿದ್ ಮಧುಗಿರಿ  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ:…

Read More

ತುಮಕೂರು: ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ನಗರದ ಊರುಕೆರೆಯ ಬಳಿಯಿಂದ ಕ್ಯಾತ್ಸಂದ್ರ ಟೋಲ್ ನ ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಹಾಗೂ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಅಡ್ಡಲಾಗಿ ಕೂತು ಪ್ರತಿಭಟನೆ ನಡೆಸಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ಪ್ರತಿ ದಿನ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರ ಗೋಳು ಹೇಳತೀರದ್ದಾಗಿದೆ. ಇದೇ…

Read More

ಬೆಳಗಾವಿ: ಎಸ್ಸಿ, ಎಸ್ಟಿ ಜನಾಂಗಗಳ ಭೂಮಿ ಹಕ್ಕು ಹೋರಾಟಕ್ಕೆ ಮರು ಚಾಲನೆ ದೊರೆತಿದ್ದು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘಗಳ ಜಂಟಿ ಆಶ್ರಯದಲ್ಲಿ, ಡಾ.ವೆಂಕಟಸ್ವಾಮಿ ನೇತೃತ್ವದಲ್ಲಿ ಬೆಳಗಾವಿ ಚಲೋ ನಡೆಯಿತು. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ನಿಂದ ಮೆರವಣಿಗೆ ನಡೆಸಿ, ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇಧ(PTCL Act-1978) ಕಾಯ್ದೆಯ ಸಮಗ್ರ ತಿದ್ದುಪಡಿ ಮಸೂದೆ ಅಂಗೀಕರಿಸಲು ಒತ್ತಾಯಿಸಲಾಯಿತು.  ಬೃಹತ್ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಭೂಮಿ ಹಕ್ಕು ಕೇಳಿ ಘೋಷಣೆ ಕೂಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಡಾ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ  ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಯಲದಬಾಗಿ ರಾಜಣ್ಣ ಮತ್ತು ಸಂಘದ ಪದಾಧಿಕಾರಿಗಳು ಭಾಗಿಯಾಗಿಯಾಗಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ದಾವಣಗೆರೆ: ಕಾರು ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಈಜುಕೊಳದ ಬಳಿಯಲ್ಲಿ ಗುರುವಾರ ನಡೆದಿದ್ದು, ಘಟನೆ ಸಂಬಂಧ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್‌ ನ ಉಂಬೆರ್‌ ಗಾವ್‌ ನಿವಾಸಿ ವಾಸುದೇವಾ ಮೊದಾನಿ ಅವರ ಪುತ್ರಿ 25 ವರ್ಷ ವಯಸ್ಸಿನ ಪ್ರಿಯಾಂಕ ಮೊದಾನಿ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಗುರುವಾರ ಬೆಳಿಗ್ಗೆ ಎಂದಿನಿಂತೆ ವಸತಿನಿಲಯದಿಂದ ಕಾಲೇಜಿಗೆ ಹೊರಟಿದ್ದರು. ಪಿ.ಜಿ. ವಿದ್ಯಾರ್ಥಿ ವಿಷ್ಣು ಎಂಬುವರು ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದಿದೆ ಎಂದ ತಿಳಿದು ಬಂದಿದೆ. ಪ್ರಿಯಾಂಕ ಹೆಲ್ಮೆಟ್‌ ಧರಿಸಿದ್ದರು. ಆದರೆ ಅದರ ಬೆಲ್ಟ್‌ ಅನ್ನು ಸಿಕ್ಕಿಸಿರಲಿಲ್ಲ. ಹಾಗಾಗಿ ಕಾರು ಡಿಕ್ಕಿಯಾದ ರಭಸಕ್ಕೆ ತಲೆಯಿಂದ ಹೆಲ್ಮೆಟ್‌ ಹಾರಿ ಹೋಗಿದೆ. ಹೀಗಾಗಿ ಅವರ ಪ್ರಾಣವೇ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದಾಗ, ಈ ರಸ್ತೆಯಲ್ಲಿ ಯುವಕರು ವೇಗವಾಗಿ ಬೈಕ್‌, ಕಾರು ಚಲಾಯಿಸಿಕೊಂಡು ಬರುತ್ತಿದ್ದು, ಇಲ್ಲಿ…

Read More

ಅಡಿಲೇಡ್’ನಾ ಓವಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಆಶಸ್ ಸರಣಿಯ ಎರಡನೇ ಪಂದ್ಯದ ಮೊದಲನೇ ದಿನದ ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 221 ರನ್ಗಳ ಸಾಧಾರಣ ಮೊತ್ತ ಗಳಿಸಿ ಸುಸ್ಥಿತಿಯಲ್ಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಯಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್’ರವರ ನಿರ್ಧಾರವನ್ನು ತಪ್ಪು ಎಂದೆನಿಸುವಂತೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು. ಆಸ್ಟ್ರೇಲಿಯಾ ತಂಡದ ಮೊತ್ತ 4 ಆಗಿದ್ದಾಗ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಹ್ಯಾರಿಸ್ 3 (28) ರವರು ಸ್ಟುವರ್ಟ್ ಬ್ರಾಡ್’ರವರ ಬೌಲಿಂಗ್’ನಲ್ಲಿ ಜೋಸ್ ಬಟ್ಲರ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರ. ನಂತರ ಒಂದಾದ ವಾರ್ನರ್ 95(167) ಮತ್ತು ಲ್ಯಾಬಶೇನ್ 102(299)* ಜೋಡಿ ಆಸಿಸ್’ನಾ ಆರಂಭಿಕ ಆಘಾತದಿಂದ ಪಾರು ಮಾಡಿ ತಂಡದ ಮೊತ್ತ ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಈ ಜೋಡಿ ಬರೋಬ್ಬರಿ 172 ರನ್’ಗಳ ಜೊತೆಯಾಟವಾಡಿತು. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 240 ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿಯಲ್ಲಿದೆ. ಕ್ರೀಸ್ನಲ್ಲಿರುವ ಲ್ಯಾಬಶೇನ್ ಶತಕ 102(299)* ಪೂರೈಸಿದ್ದಾರೆ.ಇವರಿಗೆ ಜೊತೆಯಾಗಿ ನಾಯಕ…

Read More

ಕಲಬುರ್ಗಿ: ಶಾಲೆಗೆ ಹೊರಟಿದ್ದ ಇಬ್ಬರು ಶಿಕ್ಷಕರು ಅಪಘಾತಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಲ್ಲಿ ನಡೆದಿದೆ. ಸಿದ್ದರಾಮಪ್ಪ(60), ನಾನಾಗೌಡ ಪಾಟೀಲ್ (55) ಮೃತಪಟ್ಟವರು ಎಂದು ವರದಿಯಾಗಿದೆ. ಶಿಕ್ಷಕರಿಬ್ಬರು ಶಾಲೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಿಮೆಂಟ್ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇಬ್ಬರು ಶಿಕ್ಷಕರು ಕೂಡ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದು, ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಹೇಮಾವತಿ ನಾಲಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ ಗೇಟ್ ಸಮೀಪ ನಡೆದಿದೆ. ಎಂಜಿನಿಯರ್ 55 ವರ್ಷ ವಯಸ್ಸಿನ ರಮೇಶ್ ಹಾಗೂ ಅವರ ಪತ್ನಿ 45 ವರ್ಷ ವಯಸ್ಸಿನ ಮಮತಾ ಮತ್ತು 25 ವರ್ಷ ವಯಸ್ಸಿನ ಪುತ್ರಿ ಶುಭಾ ಆತ್ಮಹತ್ಯೆಗೆ ಶರಣಾದವರು ಎಂದು ಹೇಳಲಾಗಿದ್ದು, ಮಮತಾ ಹಾಗೂ ಶುಭಾ ಅವರ ಮೃತದೇಹ ಪತ್ತೆಯಾಗಿದೆ. ರಮೇಶ್ ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ. ಸದ್ಯದ ಮಾಹಿತಿಗಳ ಪ್ರಕಾರ ಶುಭಾಗೆ ಕಳೆದ ತಿಂಗಳಷ್ಟೇ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೊಲೀಸರ ತನಿಖೆಯ ಬಳಿಕವೇ ಹೆಚ್ಚಿನ ಮಾಹಿತಿ ದೊರಕಬೇಕಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಬೆಂಗಳೂರು: ಅಸ್ಪೃಷ್ಯತೆಯ ನಿವಾರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರಿ ಟಿ.ವಿ.ಚಾನೆಲ್ ಚಂದನವಾಹಿನಿಯಲ್ಲಿ ಡಿಸೆಂಬರ್ 19ರಂದು ‘ಸಮಾನತೆಯ ಕಡೆಗೆ’ ಎಂಬ ಚಲನ ಚಿತ್ರ ಪ್ರಸಾರವಾಗಲಿದೆ. ಅಸ್ಪೃಶ್ಯತೆ ಎನ್ನುವುದು ಒಂದು ಸಾಮಾಜಿಕ ಪಿಡುಗಾಗಿದ್ದು, ಮಾನವರ ಮೆದುಳಿನಲ್ಲಿ ಕುಳಿತಿರುವ ಕೊಳೆಯಾಗಿದೆ. ಇದನ್ನು ತೆಗೆದು ಹಾಕಬೇಕಾದರೆ, ಜಾಗೃತಿಯೊಂದೇ ಮದ್ದಾಗಿದೆ. ಮುಂದಿನ ಪೀಳಿಗೆ ಅಸ್ಪೃಶ್ಯತೆಯ ಆಚರಣೆಯಿಂದ ಮುಕ್ತವಾಗಿ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಅನಿಷ್ಠ ಆಚರಣೆಗಳ ವಿರುದ್ಧ ಜನರು ಜಾಗೃತಿ ಹೊಂದಬೇಕಾಗಿದೆ. ನಮ್ಮ ದೇಹದ ಭಾಗಗಳಿಂದಲೇ ಬೇಧ ಭಾವಗಳು ಆರಂಭಗೊಂಡಿದೆ. ಎಡ ಭಾಗ ಅಶುಭ, ಬಲ ಭಾಗ ಶುಭ ಎಂದು ಆರಂಭವಾಗುವ ಈ ಬೇಧ ಭಾವಗಳು ಮುಂದುವರಿದು, ಜಾತಿ, ಧರ್ಮ, ಕೋಮು, ಬಣ್ಣ, ಬಡವ, ಶ್ರೀಮಂತ ಹೀಗೆ ಪ್ರತಿಯೊಂದರಲ್ಲಿಯೂ ಶ್ರೇಷ್ಠ ಕನಿಷ್ಠವಾಗಿ ಮಾರ್ಪಟ್ಟಿದೆ. ಇತರ ದೇಶಗಳು ಇಂದು ಸಾಮಾಜಿಕ ಸಮಾನತೆಯಿಂದ ಸರ್ವತೋಮುಖ ಬೆಳವಣಿಗೆ ಹೊಂದುತ್ತಿದ್ದರೆ, ಭಾರತದಲ್ಲಿ ಅಸ್ಪೃಶ್ಯತೆ, ಧರ್ಮಗಳ ನಡುವಿನ ಸಂಘರ್ಷಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ, ಎಲ್ಲರೂ ಸಮಾನರು ಎನ್ನುವ ಭಾವನೆ ಬರಬೇಕು. ಹೀಗಾಗಿ ಮೊದಲು…

Read More

ತುರುವೇಕೆರೆ:  ಪಟ್ಟಣದ ಅಭಿವೃದ್ಧಿಗಾಗಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಕಳೆದ ವರ್ಷ ದಬ್ಬೇಘಟ್ಟ ರಸ್ತೆಯಲ್ಲಿನ ಮಳಿಗೆಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯ್ತಿ ಆದೇಶ ನೀಡಿತ್ತು. ಅದರಂತೆ ಕೆಲ ಮಳಿಗೆಗಳು ತೆರವುಗೊಂಡಿದ್ದು, ಬಿಟ್ಟರೆ ಇನ್ನುಳಿದ ಹಲವು ಹಾಗೇ ಉಳಿದಿರುವುದರಿಂದ ರಸ್ತೆ ಅಗಲೀಕರಣ ಮತ್ತು ಪಟ್ಟಣದ ಅಭಿವೃದ್ಧಿಗೆ ‌ಅಡ್ಡಗಾಲಾಗಿವೆ. ತೆರವುಗೊಳಿಸದೇ ಇರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ , ತಾಲ್ಲೂಕು ಆಡಳಿತ ಮತ್ತು ಪಟ್ಟಣ ಪಂಚಾಯ್ತಿಯ ಕಾರ್ಯವೈಖರಿಯ ವಿರುದ್ಧ  ” ತುರುವೇಕೆರೆ ತಾಲ್ಲೂಕು ಅಭಿವೃದ್ಧಿ ವೇದಿಕೆ”  ಪ್ರತಿಭಟನೆ ಮತ್ತು ಅಹೋರಾತ್ರಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಇಲ್ಲಿನ ಜನತೆ ಪ್ರತಿಭಟನೆಯನ್ನು ನಡೆಸಿತು. ಕೆಲಹೊತ್ತು ದಬ್ಬೇಘಟ್ಟ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದ ಪ್ರತಿಭಟನಾಕಾರರು, ತಮ್ಮ ಗುರಿ ಈಡೇರುವವರೆಗೂ ಅಹೋರಾತ್ರಿ ಮುಷ್ಕರ ನಡೆಸುವುದಾಗಿ ಮಾಧ್ಯಮದ ಮೂಲಕ ಪಂಚಾಯ್ತಿಗೆ ಎಚ್ಚರಿಕೆ ರವಾನಿಸಿದರು. ಈ ಪ್ರತಿಭಟನೆಗೆ ತಾಲ್ಲೂಕು ರೈತ ಸಂಘ, ಜಯ ಕರ್ನಾಟಕ ವೇದಿಕೆ,‌ ಸಿ.ಐ.ಟಿ.ಯು, ಕನ್ನಡ ರಕ್ಷಣ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ವಕೀಲರ ಸಂಘ , ದಬ್ಬೇಘಟ್ಟ…

Read More