ಮಧುಗಿರಿ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಜಾಗೃತಿ ವೇದಿಕೆ, ಮಧುಗಿರಿ ತಾಲೂಕು ಘಟಕ ವತಿಯಿಂದ ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಪುಂಡರು ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟಿರುತ್ತಾರೆ, ಇಂತಹ ಕಿಡಿಗೇಡಿಗಳ ಮೇಲೆ ಸರ್ಕಾರ ಕೂಡಲೇ ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ರಾಜ್ಯದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಸಂಘಟನೆಯನ್ನು ನಿಷೇಧಿಸಬೇಕು. ಈ ಕೃತ್ಯ ಎಸಗಿದ ಶಿವಸೇನೆ ಮತ್ತು ಎಂ.ಇ.ಎಸ್. ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಸಾದ್, ಶಿವಲಿಂಗಯ್ಯ, ರಾಮಾಂಜಿನಮ್ಮ, ರತ್ನಮ್ಮ, ಐಡಿಹಳ್ಳಿ ಬಾಲು, ರಾಜು ರೋಹಿತ್, ಮಹೇಶ್, ಇಲಿಯಸ್, ಪ್ರಭು ಮತ್ತಿತರು ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700