Subscribe to Updates
Get the latest creative news from FooBar about art, design and business.
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
- ತುಮಕೂರು | ಅಂಬೇಡ್ಕರ್ ಯುವ ಸೇನೆಯಿಂದ 208ನೇ ಭೀಮ-ಕೋರೆಗಾಂವ್ ವಿಜಯ ದಿನಾಚರಣೆ
- ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು ಒತ್ತಾಯ
Author: admin
ಬೆಂಗಳೂರು: ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ದೇಗುಲಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಶ್ರೀದೇವಿಗೆ ಹರಕೆ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ದರ್ಶನ್ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹರಕೆ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ. ಅದರಂತೆ ಇದೀಗ ಅಣ್ಣಮ್ಮ ದೇವಿಗೆ ದರ್ಶನ್ ಪತ್ನಿ ಹರಕೆ ಸಲ್ಲಿಸಿದ್ದಾರೆ. ಅಣ್ಣಮ್ಮ ದೇವಿಗೆ ಸೀರೆ ಜೊತೆ ಮಡಿಲಕ್ಕಿ ತುಂಬಿ ಹರಕೆ ತೀರಿಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ‘ಡೆವಿಲ್’ ಶೂಟಿಂಗ್ ನಲ್ಲಿ ಕೂಡ ದರ್ಶನ್ ಜೊತೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಕೂಡ ಭಾಗಿಯಾಗಿದ್ದರು. ಕಳೆದ ವಾರ ಏ.4ರಂದು ಬೆಂಗಳೂರಿಗೆ ಚಿತ್ರೀಕರಣ ಮುಗಿಸಿ ವಾಪಸ್ ಬಂದಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ತುಮಕೂರು: ಯಕ್ಷದೀವಿಗೆ ಸಂಸ್ಥೆಯು ಏಪ್ರಿಲ್ 12 ಹಾಗೂ 13ರಂದು ನಗರದ ಶ್ರೀಕೃಷ್ಣಮಂದಿರದಲ್ಲಿ ಎರಡು ದಿನಗಳ ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಹಮ್ಮಿಕೊಂಡಿದೆ. ಕಮ್ಮಟವನ್ನು ಏಪ್ರಿಲ್ 12ರಂದು ಬೆಳಗ್ಗೆ 9:30ಕ್ಕೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ ಕೆಂಜೂರು ಮನೆ, ಕಾರ್ಯದರ್ಶಿ ವೆಂಕಟೇಶ ಎಂ.ಎಸ್.ಕಾರಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಕಲಾಸಕ್ತರು ಆಗಮಿಸಿ ಯಕ್ಷಗಾನದ ಮುಖವರ್ಣಿಕೆ ಮಾಡುವ ವಿಧಾನವನ್ನು ಅಭ್ಯಾಸ ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾದ ನಿಡುವಜೆ ಗೋಪಾಲಕೃಷ್ಣ ಭಟ್ ಹಾಗೂ ಪಾರ್ಥಸಾರಧಿ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷಗಾನ, ನಾಟಕ, ಭರತನಾಟ್ಯ ಇತ್ಯಾದಿ ಕಲೆಗಳಿಗೆ ಸಂಬಂಧಪಟ್ಟವರು ಈ ಕಮ್ಮಟದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು. ಆಸಕ್ತರು ಮೊಬೈಲ್ ಸಂಖ್ಯೆ 7019394988 ಅಥವಾ 9380750972 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಕಮ್ಮಟದ ಅಂಗವಾಗಿ ಯಕ್ಷದೀವಿಗೆಯ ವಿದ್ಯಾರ್ಥಿಗಳು ಸಂಜೆ 5:30ರಿಂದ ‘ಏಕಲವ್ಯ’ ಎಂಬ ತಾಳಮದ್ದಳೆಯನ್ನು ಪ್ರದರ್ಶಿಸಲಿದ್ದಾರೆ. ಸಂವೃತ ಶರ್ಮಾ, ಇಂಚರಾ,…
ತುಮಕೂರು : ಪ್ರಸ್ತುತ ಬೇಸಿಗೆ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯು ತೀವ್ರವಾಗುವ ಸಂಭವವಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಕುಡಿಯುವ ನೀರಿನ ದೂರುಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲು ಸಹಾಯವಾಣಿ ತೆರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ. ಸಹಾಯವಾಣಿಯು ಪ್ರತಿ ದಿನ ಬೆಳಿಗ್ಗೆ 8:30 ರಿಂದ ಸಂಜೆ 6:30ರವರೆಗೆ ಕಾರ್ಯ ನಿರ್ವಹಿಸಲಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 0816–2005188ಕ್ಕೆ ಕರೆ ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿಯೂ ಸಹಾಯವಾಣಿಗಳನ್ನು ತೆರೆಯಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ದೂರು ದಾಖಲಿಸಲು ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾರ್ಯ ನಿಯೋಜನೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ನಿಗಧಿಪಡಿಸಲಾಗಿದ್ದು, ಸಿಬ್ಬಂದಿಗಳು ವೇಳಾಪಟ್ಟಿಯನ್ವಯ ಮುಂದಿನ…
ತುಮಕೂರು: ಮಹಾನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 14ರಂದು ಏರ್ಪಡಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ 134ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಏಪ್ರಿಲ್ 14ರಂದು ಮಹಾನಗರಪಾಲಿಕೆ ಆವರಣದಲ್ಲಿ ಸಿದ್ಧತೆಯಾಗುತ್ತಿರುವ ಹೆಲಿಕ್ಯಾಪ್ಟರ್ ಮಾದರಿಯನ್ನೂ ಸಹ ಉದ್ಘಾಟಿಸಲಾಗುವುದು. ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರು ಆಗಮಿಸಲಿದ್ದಾರೆ. ಬೌದ್ಧ ಧರ್ಮದ ಅನುಯಾಯಿಗಳಿಂದ ಪಂಚಶೀಲಾ ಪಠನೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ಸಾಧಕರು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಲೇಸರ್…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ಪ್ರೇಮಿ, ಈಗಾಗಲೇ ಹಲವಾರು ಪಂದ್ಯಾಟಗಳನ್ನು ಸಿಎಂ ವೀಕ್ಷಿಸಿದ್ದಾರೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವನ್ನು ಸಿಎಂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಎನ್.ರಾಜಣ್ಣ ಹಾಗೂ ಬೈರತಿ ಸುರೇಶ್ ಸಾಥ್ ನೀಡಿದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ Royal Challengers Bengaluru vs Delhi Capitals ನಡುವಿನ ಪಂದ್ಯ ವೀಕ್ಷಿಸುತ್ತಾ, ಪ್ರೇಕ್ಷಕರ ಜೊತೆ ಸೇರಿ ನಮ್ಮವರನ್ನು ಪ್ರೋತ್ಸಾಹಿಸಿದೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಆರ್‌ಸಿಬಿ ಉತ್ತಮ ಬ್ಯಾಟ್ಸ್‌ಮನ್‌ಗಳು ಹಾಗೂ ಅತ್ಯುತ್ತಮ ಬೌಲರ್ ಗಳನ್ನು ಒಳಗೊಂಡ ಒಂದು ಸಮತೋಲಿತ ತಂಡವಾಗಿ ಈ ವರೆಗೆ ಪ್ರದರ್ಶನ ನೀಡುತ್ತಾ ಬಂದಿದ್ದು, ಇದೇ ರೀತಿ ಮುಂದುವರೆದರೆ ಈ ಬಾರಿ ಕಪ್ ಗೆಲ್ಲಲಿದೆ ಎನ್ನುವ ವಿಶ್ವಾಸ ನನ್ನದು ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 58 ಹಾಗೂ ತಿಪಟೂರಿನ ಶಾರದಾ ನಗರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 86 ಬದಲಿಗೆ 139 ಕೋಟಿ ರೂ. ವೆಚ್ಚದಲ್ಲಿ ರೋಡ್ ಓವರ್ ಬ್ರಿಡ್ಜ್ (ರಸ್ತೆ ಮೇಲ್ಸೇತುವೆ) ಹಾಗೂ ಸೀಮಿತ ಎತ್ತರದ ಸಬ್ ವೇಗಳ ನಿರ್ಮಾಣಕ್ಕೆ ಗುರುವಾರ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ತಿಪಟೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ಬಹು ವರ್ಷಗಳಿಂದ ಬೇಡಿಕೆ ಇದ್ದ ರೈಲ್ವೆ ಯೋಜನೆಗಳ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗುತ್ತಿದ್ದು, ತಿಪಟೂರಿನ ಶಾರದಾ ನಗರದಲ್ಲಿ 89.32 ಕೋಟಿ ರೂ. ಹಾಗೂ ಗುಬ್ಬಿ ತಾಲೂಕಿನ ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ 50.57 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಸಬ್ ವೇ ನಿರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 20 ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿದ್ದು,…
ತುಮಕೂರು: ಪೊಕ್ಸೋ ಪ್ರಕರಣದ ಆರೋಪಿಗೆ ತುಮಕೂರು ಎಸ್.ಟಿ.ಎಸ್.ಸಿ. –1 ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ರಘು ಎಂಬಾತನಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 01 ಲಕ್ಷ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2022ರ ಏಪ್ರಿಲ್ 3ರಂದು ನೊಂದ ಬಾಲಕಿಯ ತಾಯಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ರು. ನಂತರ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಎಂ.ಬಿ. ಮಹಿಳಾ ಪೊಲೀಸ್ ಠಾಣೆರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ರಘು ಎಂಬಾತನನ್ನು ಬಂಧಿಸಿದ್ರು. ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ: 328/2022 ರಲ್ಲಿ ಮಾನ್ಯ ತುಮಕೂರು ಎಸ್.ಟಿ.ಎಸ್.ಸಿ -1 ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ನಂತರ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರು ಆಶಾ ಕೆ.ಎಸ್. ರವರು ವಾದ ಮಂಡಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಬೆಂಗಳೂರು: ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಭೀಕರ ಅಪಘಾತಕ್ಕೆ ಬಲಿಯಾಗಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲೇಶ್ವರಂದ ನಿವಾಸಿಗಳಾದ ಗೋಪಾಲ(60), ಇವರ ಪತ್ನಿ ಶಶಿಕಲಾ(54) ಮತ್ತು ಇವರ ಮಗಳು ದೀಪಾ(25) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೂವರೆ ವರ್ಷದ ಹಾಗೂ 5 ವರ್ಷದ ಮಕ್ಕಳು ಆಶ್ಚರ್ಯಕರ ಸ್ಥಿತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಪಾಲ ಅವರು ಇಂದು ಬೆಳಗ್ಗೆ ಪತ್ನಿ, ಮಗಳು, ಹಾಗೂ ಇಬ್ಬರು ಮೊಮಕ್ಕಳ ಜೊತೆ ಮಲ್ಲೇಶ್ವರಂ ನಿಂದ ಹಿರಿಯೂರಿಗೆ ನಾಮಕರಣ ಕಾರ್ಯಕ್ರಮದ ನಿಮಿತ್ತ ಹೋಗುತ್ತಿದ್ದರು. 10.30ರ ಸುಮಾರಿಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಅಂಚೆ ಮನೆ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಎಡ ಭಾಗದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ…
ಕೊರಟಗೆರೆ: ಕೊರಟಗೆರೆ ತಾಲೂಕಿನ ಎಲೆರಾಂಪುರದ ಶ್ರೀ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ 4 ನೇ ವರ್ಷದ ಸಂಸ್ಕಾರ ಶಿಬಿರವು ಏಪ್ರಿಲ್ 16 ರಿಂದ ಪ್ರಾರಂಭವಾಗಲಿದೆ ಎಂದು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ, ಶಾಲಾ ಮಕ್ಕಳಿಗೆ ಬೇಸಿಗೆ ರಜಾ ನಿಮಿತ್ತ ನರಸಿಂಹಗಿರಿ ಕ್ಷೇತ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕಲಿಸುವ ಉದ್ದೇಶದಿಂದ 10 ದಿನಗಳ ಕಾಲ ಶ್ರೀ ಮಠದಲ್ಲಿ ಸಂಸ್ಕಾರ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರದಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಭಕ್ತಿಗೀತೆಗಳು, ಸಾಂಸ್ಕೃತಿಕ ಕಲೆಗಳು, ಸೇರಿದಂತೆ ಹಲವು ಚಟುವಟಿಕೆಗಳನ್ನು ಹೇಳಿ ಕೊಡಲಾಗುವುದು ಮತ್ತು ಮಕ್ಕಳಲ್ಲಿ ಗುಣಾತ್ಮಕ ಚಿಂತನೆಯನ್ನು ಮೂಡಿಸಲಾಗುವುದು ಎಂದು ತಿಳಿಸಿದರು. ಈ ಶಿಬಿರದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು, ಇಬ್ಬರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುವುದು. ಕಾರ್ಯಕ್ರಮದ ಉದ್ಘಾಟನೆಯು ಏಪ್ರಿಲ್ 16ರ ಬೆಳಗ್ಗೆ 10 ಗಂಟೆಗೆ ನಡೆಯುವುದು ಇದರ ದಿವ್ಯ ಸಾನಿಧ್ಯವನ್ನು ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ವಹಿಸುವರು, ಉದ್ಘಾಟನೆ ತುಮಕೂರು ಜಿಲ್ಲಾಧಿಕಾರಿ…
ಕೊರಟಗೆರೆ : ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗೆ ಮಧುಗಿರಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರರವರು ಜೀವಾವಧಿ ಶಿಕ್ಷೆ ಮತ್ತು ರೂ. 1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ಮೊ.ಸಂಖ್ಯೆ 56/2021 , ಎಸ್.ಸಿ. 5023/2021 ರ ಪ್ರಕರಣದಲ್ಲಿ ತಾಲೂಕಿನ ಸಿ.ಎನ್.ದುರ್ಗ ಹೋಬಳಿ ಥರಟಿ ಗ್ರಾಮದಲ್ಲಿ ಹನುಮಯ್ಯರವರ ಮಗಳು ದಿನಾಂಕ :10—03–2021ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆರೋಪಿಯಾದ ದೇವರಾಜು ಬಿನ್ ಗೋವಿಂದಪ್ಪ , (49 ವರ್ಷ) ಥರಟಿ ಗ್ರಾಮದವನಾಗಿದ್ದು, ಈತನು ತನ್ನ ಹೆಂಡತಿಯಾದ ಯಶೋಧರವರ ಮೇಲೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿ ಹಾಗೂ ತುಮಕೂರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಅನುಮಾನ ಪಟ್ಟು ತನ್ನ ಹೆಂಡತಿಯಾದ ಯಶೋಧ ರವರನ್ನು ಏನಾದರೂ ಮಾಡಿ ಕೊಲೆ ಮಾಡಿ ನಂತರ ಬೇರೆ ಮದುವೆಯಾಗಬೇಕೆಂಬ ಉದ್ದೇಶವಿಟ್ಟುಕೊಂಡು ಕೊಲೆ ಮಾಡುವ ಉದ್ದೇಶದಿಂದ, ಯಶೋಧರವರ ಬಲಭಾಗದ ತಲೆಗೆ…