Author: admin

ನೀರಿನ ರಾಜಕಾರಣ ಮಾಡಿ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಗೆ ಬಿಜೆಪಿ ಟಾಂಗ್ ನೀಡಿದೆ. ಮೇಕೆದಾಟು ಯೋಜನೆ ವಿಚಾರವಾಗಿ ಮಂಗಳವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ‘ಮೇಕೆದಾಟು ಯೋಜನೆ(Mekedatu Project)ಯನ್ನು ಜಾರಿಗೊಳಿಸಲು ಬಿಡುವುದಿಲ್ಲ‌‌ವೆಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ‌ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು?’ ಅಂತಾ ಪ್ರಶ್ನಿಸಿದೆ. ‘ರಾಹುಲ್ ಗಾಂಧಿ(Rahul Gandhi)ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ(Mekedatu Padayatre) ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ?’ ಅಂತಾ ಟೀಕಿಸಿದೆ. ರಾಜಕೀಯ ಲಾಭಕ್ಕಾಗಿ ಡಿಕೆಶಿ(DK Shivakumar)ಯವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ #ಸುಳ್ಳಿನಜಾತ್ರೆ…

Read More

ತಮಿಳುನಾಡು ಮೇಕೆದಾಟು (Mekedatu) ಯೋಜನೆ ವಿಚಾರವಾಗಿ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಇಂದು ಕಾನೂನು ಹಾಗೂ ತಾಂತ್ರಿಕ ಸಲಹೆ ಪಡೆದು ನಾಳೆ ಸದನದಲ್ಲಿ ನಿರ್ಣಯ ತರಲಾಗುವುದು ಎಂದು ತಿಳಿಸಿದರು. ಶೂನ್ಯ ವೇಳೆಯಲ್ಲಿ ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರು ಹಾಗೂ ವಿದ್ಯುತ್ (Electricity) ಉತ್ಪಾದನೆಗಾಗಿ ಯೋಜನೆ ಆಗಿದ್ದು, ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ‌ ಸಮಸ್ಯೆ ಇಲ್ಲ. ತಮಿಳುನಾಡು ಹೆಚ್ಚುವರಿ ನೀರನ್ನ ಬಳಕೆ ಮಾಡಿ‌ ಯೋಜನೆ ರೂಪಿಸುತ್ತಿದ್ದಾರೆ. ಹೊಗೆನಕಲ್ ಎರಡನೇ‌ ಹಂತವನ್ನು ತೆಗೆದುಕೊಳ್ಳುವ ಮಾತು ನಮ್ಮ ನೀರಿನ‌ ಹಕ್ಕಿನ ಮೇಲೆ ಹೊಡೆತ ಆಗಿದೆ. ಅದಕ್ಕಾಗಿ ವಿರೋಧ ಮಾಡಿದ್ದೇವೆ ಮುಂದೆಯೂ ಮಾಡುತ್ತೇವೆ ಎಂದರು. ನಾವು ಕಾವೇರಿ (Kaveri Water) ನೀರನ್ನು ಬಳಕೆ ಮಾಡುವ ಎಲ್ಲ ಸಂದರ್ಭದಲ್ಲಿ ತಮಿಳುನಾಡಿನಿಂದ ಅಡ್ಡಿಯಾಗುತ್ತಿದೆ. ನಮ್ಮ ನೀರಿನ ಹಕ್ಕು ಪಡೆದುಕೊಳ್ಳಲು ನಾವು ಪರಿತಪಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಸರಿಯಲ್ಲ. ಇದನ್ನು ಪ್ರಬಲವಾಗಿ ತೆಗೆದುಕೊಂಡು‌ ಹೋಗುತ್ತೇವೆ ಎಂದರು. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ. ನಮ್ಮ ಡಿಪಿಆರ್…

Read More

ಮೈಸೂರು: ಡಾ. ಪುನೀತ್ ರಾಜ್‍ ಕುಮಾರ್ (Puneeth Rajkumar)..‌. ಈ ಹೆಸರು ಪ್ರತಿಯೊಬ್ಬರ ಉಸಿರು. ‘ಅಪ್ಪು’ ಮಾಡಿದ ಸಾಧನೆಗೆ ಇದೀಗ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಈ ಮೂಲಕ ‘ಕರುನಾಡ ರತ್ನ’ವನ್ನು ಮತ್ತೊಮ್ಮೆ ನೆನೆಯಲಾಗಿದೆ. ಮೈಸೂರು ವಿವಿ 102ನೇ ಘಟಿಕೋತ್ಸವ(102nd Convocation of University of Mysore)ದಲ್ಲಿ ನಟ ಪುನೀತ್ ರಾಜ್‍ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ‘ಅಪ್ಪು’ ಪತ್ನಿ ಅಶ್ವಿನಿಯವರು ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿವಿಯಿಂದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್(Doctorate) ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್ ಕುಟುಂಬವೇ ಹಾಜರಿತ್ತು. ಈ ವೇಳೆ ಪ್ರತಿಯೊಬ್ಬರೂ ಭಾವುಕರಾಗಿ ಅಗಲಿದ ‘ಕರುನಾಡ ರತ್ನ’ವನ್ನು ನೆನೆದರು. ಗಣ್ಯರ ಸಾಲಿನಲ್ಲಿ ಕುಳಿತುಕೊಂಡಿದ್ದ ಪುನೀತ್ ರಾಜ್‍ ಕುಮಾರ್ ಸಹೋದರಿಯರು, ‘ಅಪ್ಪು’ ಪರವಾಗಿ ಅವರ ಪತ್ನಿ ಅಶ್ವಿನಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ವರನಟ ಡಾ.ರಾಜ್…

Read More

ಮಧುಗಿರಿ:  ಪ್ರೇರಣಾ ಫೌಂಡೇಶನ್ ಮಧುಗಿರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಹಾಗೂ ಮಹೇಶ್ ಶಿಕ್ಷಣ ಸಂಸ್ಥೆ‌ ಅಶೋಕ ನಗರ ತುಮಕೂರು ವತಿಯಿಂದ ಮಧುಗಿರಿ ಕನ್ನಡ ಭವನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ನಡೆಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಎಸ್.ಆರ್. ಅವರು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಫೌಂಡೇಶನ್ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ‌ ಅನುಕೂಲವಾಗಲಿ ಎನ್ನುವ ಉದ್ದೇಶ ಹಾಗೂ ಮಧುಗಿರಿ ತಾಲ್ಲೂಕು ಮಕ್ಕಳು ರಾಜ್ಯದಲ್ಲಿ ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕು  ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಾರ್ಧನ ರವರು ಪರೀಕ್ಷಾ ಸಿದ್ಧತಾ ಕಾರ್ಯಾಗಾರದ ಬಗ್ಗೆ ವಿದ್ಯಾರ್ಥಿಗಳೂಂದಿಗೆ ಸಂವಾದ ನಡೆಸಿದ್ದರು. ಕಾರ್ಯಕ್ರಮದಲ್ಲಿ ‌ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಹನಾ ನಾಗೇಶ್, ಮಾರುತಿ ಇಂಟರ್ನೆಟ್ ಸಂಸ್ಧೆಯ ರಮೇಶ್, ಮಹೇಶ್ ಶಿಕ್ಷಣ ಸಂಸ್ಥೆ‌ಯ‌…

Read More

ಪಾವಗಡ: ಇತ್ತೀಚೆಗೆ ಪಾವಗಡ ಸಮೀಪ ಪಳವಳ್ಳಿ ಕಟ್ಟೆ ಮೇಲೆ ಬಸ್ ಅಪಘಾತವಾಗಿ 6 ಜನ ಮೃತಪಟ್ಟು, 30ಕ್ಕೂ ಹೆಚ್ಚು ಗಾಯಾಳುಗಳು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸಾವು ಬದುಕಿನ ನಡುವೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುಗಳ ಪೈಕಿ ಮಹೇಂದ್ರ ಎಂಬ ವಿದ್ಯಾರ್ಥಿಗೆ ಶಸ್ತ್ರ ಚಿಕಿತ್ಸೆಗೆ ನೆರವು ಕೋರಿ ಪಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಇಂದು ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಕೆ.ಎನ್.ಆರ್. ಅಭಿಮಾನಿ ಬಳಗ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಅರ್ಥಿಕ ಸಹಾಯವನ್ನು ಹೆಲ್ಪಿಂಗ್ ಹ್ಯಾಂಡ್ ಸಂಘಟನೆ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ನೆರವು  ವಿತರಿಸಿ ಮಾತನಾಡಿದ ಕೆ.ಎನ್.ಆರ್.ಅಭಿಮಾನ ಬಳಗದ ಅಧ್ಯಕ್ಷ ಡಿ.ಸಿ.ಸಿ. ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ ಇಪ್ಪತ್ತು ಲಕ್ಷ ಹಾಗೂ ಗಾಯಾಲುಗಳಿಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವಂತೆ ಈ ಮೂಲಕ ಒತ್ತಾಯಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡುತ್ತ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಆದರೆ,…

Read More

ತುಮಕೂರು: ಜಿಲ್ಲೆಯಲ್ಲಿ ಎರಡು ತಲೆಮಾರುಗಳಿಂದ ಭೂಮಿ ವಸತಿಗಳ ಸಮಸ್ಯೆಗಳನ್ನು ತಾಲ್ಲೂಕು ಮತ್ತು ತುಮಕೂರು ಜಿಲ್ಲಾಡಳಿತ ಬಗೆಹರಿಸಿರುವುದಿಲ್ಲ  ಈ ಹಿನ್ನೆಲೆಯಲ್ಲಿ  ಹಂದ್ರಾಳ್ ನಾಗಭೂಷನ್ ಅವರ ನೇತೃತ್ವದಲ್ಲಿ ನಿನ್ನೆಯಿಂದ ಆಹೋರಾತ್ರಿ ಧರಣಿ ಆರಂಭವಾಗಿದೆ. ಮೊದಲ ದಿನದ ಧರಣಿಗೆ ಚಾಲನೆ ನೀಡಿದ ಸಂದರ್ಭ, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಸಿರಿಮನೆ ನಾಗರಾಜು, ಬೆಂಗಳೂರು ನಗರ ಅಧ್ಯಕ್ಷರಾದ ಮರಿಯಪ್ಪ, ಚಿಂತಕರಾದ ಸಿ.ಯತಿರಾಜು, ದೊರೈರಾಜು, ಬೀದಿಬದಿ ವ್ಯಾಪಾರಿಗಳ ಜಿಲ್ಲಾದ್ಯಕ್ಷರಾದ ಭದ್ರೇಗೌಡ್ರು, ಉಪಾಧ್ಯಕ್ಷರಾದ ಮಂಜುನಾಥ್, ದಯಾನಂದ್, ಲಂ,ಕ,ನಿ,ವೇ ತುಮಕೂರು ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷರಾದ ಕುಣಿಗಲ್ ನರಸಿಂಹಮೂರ್ತಿ ಇತರರುಗಳು ಹಾಜರಿದ್ದರು. ಧರಣಿ ವೇಳೆ ಮಳೆಯಾಗಿದ್ದು, ಈ ವೇಳೆ ಮಹಾನಗರ ಪಾಲಿಕೆಯು ಧರಣಿ ಸ್ಥಳದ ಪಕ್ಕದ ಗಾಜಿನ ಮನೆಯಲ್ಲಿ ಆಶ್ರಯ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಮತ್ತು ಸಿಬ್ಬಂದಿಗೆ ಧರಣಿ ನಿರತರು ಧನ್ಯವಾದಗಳನ್ನು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪರವಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳದಲ್ಲಿ ಜಿಲ್ಲಾ ಸಂಚಾಲಕ ಹಂದ್ರಾಳ್ ನಾಗಭೂಷಣ್, ಯತಿರಾಜ್, ಸಿರಿಮನೆ ನಾಗರಾಜು,…

Read More

ಬೆಂಗಳೂರು: ಬೆಂಗಳೂರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂಎಲ್ ಎ ಸತೀಶ್ ರೆಡ್ಡಿ ಅವರ ಭಾಗದಲ್ಲಿ ರಸ್ತೆಯ ಸ್ಥಿತಿ ತೀವ್ರ ಹದಗೆಟ್ಟಿದೆ, ಬಾಲಾಜಿ ಲೇಔಟ್  ಹೊಂಗಸಂದ್ರ ಹನುಮಾನ್ ದೇವಸ್ಥಾನ ಹತ್ತಿರ ಸರ್ಕಾರಿ ಪ್ರಾಥಮಿಕ ಶಾಲೆ ಆರನೇಯ ರಸ್ತೆ ಮುಖ್ಯ ರಸ್ತೆ ಮೊದಲನೇ ಅಡ್ಡರಸ್ತೆ 1 ವಾರದ ಹಿಂದೆ ಈ ರಸ್ತೆಯನ್ನು ಅಗೆದು ಬಿಬಿಎಂಪಿ ಅಧಿಕಾರಿಗಳು ಈ ಸ್ಥಿತಿಗೆ ತಂದಿದ್ದಾರೆ. ಇಲ್ಲಿನ ಜನರು ಪ್ರತಿದಿನ ಕೆಲಸ ಕಾರ್ಯಗಳಿಗೆ ಹೋಗಲು ಬಹಳ ಕಷ್ಟಪಟ್ಟು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬಿದ್ದು ಅನೇಕರಿಗೆ ಗಾಯಗಳು ಸಂಭವಿಸಿದೆ. ಈ ರಸ್ತೆಯಲ್ಲಿ ಪ್ರಯಾಣಿಸಲು ವಾಹನ ಸವಾರರು, ಸ್ಥಳೀಯರು ಹರಸಾಹಸಪಡುವಂತಾಗಿದೆ. ಸಾಕಷ್ಟು ಸಂಖ್ಯೆಯ ಜನರು ಇಲ್ಲಿ ವಾಹನ ಚಲಾಯಿಸಲು ಸಾಧ್ಯವಾಗದೇ, ವಾಹನದಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸುವಂತಾಗಿದೆ. ಇನ್ನೂ ರಸ್ತೆ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಕೂಡ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇಲ್ಲಿನ ಶಾಸಕರು ಸತೀಶ್ ರೆಡ್ಡಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯ ಭಾರತೀಯವರು ಸಂಬಂಧಪಟ್ಟ ಅಧಿಕಾರಿಗಳ…

Read More

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಯಾವ ರೀತಿ ತಯಾರು ಮಾಡಬೇಕು ಶುಚಿತ್ವದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಮುದಾಯ ಸಂಘಟನಾ ಅಧಿಕಾರಿ ರಾಮಾಂಜಿನಪ್ಪ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲ್ಲಪ  ಹಾಗೂ ಡೇ-ನಲ್ಮ ಶಾಖೆಯ ಸಹಾಯಕರು ಆಂಜನಪ್ಪ ಎನ್.ಹೆಚ್. ಹಾಗೂ ಡೇ-ನಲ್ಮ ಶಾಖೆಯ ವ್ಯವಸ್ಥಾಪಕರು ರೇವಣ್ಣ ಅವರು ವಾರ್ಡ್ ಗೆ ಸಂಬಂಧ ಪಟ್ಟಂತೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರುಗಳಾದ ಶ್ರೀಧರ್, ರವಿ ಕುಮಾರ್, ವಸಿಮ್ ಅಕ್ರಂ, ಟಿ.ಎಸ್.ರಾಜಶೇಖರ್. ಮುತ್ತರಾಜು, ಜಿ.ಜಗದೀಶ್ ಅವರು ಹಾಗೂ ನಾರಾಯಣ, ತರಬೇತಿ ಸಂಸ್ಥೆಯ ತರಬೇತಿ ಆಯೋಜಕರು ಅಂಬರೀಷ್ ನಾರಾಯಣ್ ಹಾಗೂ ವ್ಯವಸ್ಥಾಪಕರು ಚಿದಾನಂದ ಗೌಡ ಮತ್ತು ಆಹಾರ ಪದಾರ್ಥ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು ಹಾಜರಿದ್ದರು. “ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ವಸಿಮ್ ಅಕ್ರಂ ಮಾತನಾಡಿ, ಭಾರತ ದೇಶದಲ್ಲಿ ಶೇ.50 ರಷ್ಟು ಜನ ರಸ್ತೆ ಬದಿಗಳಲ್ಲಿ ಆಹಾರ ಸೇವನೆ ಮಾಡುತ್ತಿದ್ದಾರೆ. ದೇಶದ ಜನರ ಆರೋಗ್ಯದ ದೃಷ್ಟಿಯಿಂದ …

Read More

ತುಮಕೂರು: ಕೋವಿಡ್ -19 ರ ತುರ್ತು ಪರಿಸ್ಥಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಅರೇ- ವೈದ್ಯಕೀಯ ಸಿಬ್ಬಂದಿಯನ್ನು 2022 ಮಾರ್ಚ್ 31 ನಂತರವು ಸೇವೆಯಿಂದ ಮುಂದುವರೆಸುವಂತೆ ಒತ್ತಾಯ ಕೊರೊನಾ ವಾರಿಯರ್ಸ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕೊರೊನಾ ವಾರಿಯರ್ಸ್, ಕೋವಿಡ್ -19ರ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಾವು ನಮ್ಮ ಕುಟುಂಬ, ಮನೆ-ಮಠ ಬಿಟ್ಟು, ನಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಜೊತೆಯಲ್ಲಿಯೇ ಸೇರಿದ ಕೆಲವು ಆರೋಗ್ಯ ಸಿಬ್ಬಂದಿಗಳು ಪ್ರಾಣಭಯದಿಂದ ಹಾಗೂ ಕೊರೊನ ಮಹಾ ಮಾರಿಗೆ ಹೆದರಿ ಅರ್ಧಕ್ಕೆ ಕೆಲಸವನ್ನು ಬಿಟ್ಟು ಹೋದರು. ಆದರೆ ನಮ್ಮಲ್ಲಿ ಹಲವರಿಗೆ ಹಲವು ಬಾರಿ ಕೊರೂನಾ ಪಾಸಿಟಿವ್ ಬಂದು ಸಾವಿನ ಕದ ತಟ್ಟಿ ಸಾವಿನ ಸೋಲನ್ನು ಒಪ್ಪದೆ ಪುನಃ ಕರ್ತವ್ಯಕ್ಕೆ ಮರಳಿ ಕರ್ತವ್ಯವನ್ನು ಸಲ್ಲಿಸುತ್ತಿದ್ದೇವೆ. ಜೊತೆಗೆ ಕೂರೊನಾ ಲಸಿಕಾ ಅಭಿಯಾನದಲ್ಲಿ ಭಾರತದ ಐತಿಹಾಸಿಕ ಮೈಲುಗಲ್ಲಿನ ಸಾಧನೆಯಲ್ಲಿ…

Read More

ತುಮಕೂರು: ಉಕ್ರೇನ್ ನಿಂದ ವಾಪಸಾಗಿರುವ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ನಿಂದ ವಾಪಸಾಗಿರುವ ವಿದ್ಯಾರ್ಥಿಗಳು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಭೇಟಿ ಮಾಡಿದ ವಿದ್ಯಾರ್ಥಿಗಳು ಉಕ್ರೇನ್ ನಿಂದ ವಾಪಸಾಗಲು ಸಹಕರಿಸಿದ ಜಿಲ್ಲಾಧಿಕಾರಿಗಳಿಗೆ ಗುಲಾಬಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಏಕಾಏಕಿ ಯುದ್ಧದಿಂದ ಸ್ವದೇಶಕ್ಕೆ ಆಗಮಿಸಿದ್ದು, ಈಗ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹಾಗಾಗಿ ನಮ್ಮ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ನಮ್ಮ ರಾಜ್ಯದಲ್ಲಿಯೇ ವೈದ್ಯಕೀಯ  ಶಿಕ್ಷಣ ಮುಂದುವರಿಸಲು ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಉಕ್ರೇನ್ ನಿಂದ  ವಾಪಸಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ರೂಪಶ್ರೀ, ಅಮೃತ, ಅಜಯ್ ಕುಮಾರ್,  ಗಣೇಶ್, ಗೋಕುಲ್, ಮೇಘ ರವಿತೇಜ, ರಾಮಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ವರದಿ:…

Read More