Subscribe to Updates
Get the latest creative news from FooBar about art, design and business.
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
Author: admin
ಸರಗೂರು: ತಾಲ್ಲೂಕು ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರ ಸಂಘದ ನೂತನ ಅಧ್ಯಕ್ಷರಾಗಿ ವಾಸುಕಿ ನಾಗೇಶ್ ವರನ್ನು ಸಂಘದ ಪದಾಧಿಕಾರಿಗಳು ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದ ಸೋಮವಾರದಂದು ಹೊರಾಂಗಣದಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಸರಗೂರು ತಾಲ್ಲೂಕು ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರು ಸೇರಿ ವಾಸುಕಿ ನಾಗೇಶ್ ರವರನ್ನು ಸರ್ವಾನುಮತದಿಂದ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು, ಗೌರವಾಧ್ಯಕ್ಷರಾಗಿ ಅನ್ನಪೂರ್ಣಶ್ವರಿ ಶಾಮಿಯಾನ ಮಾಲಿಕರಾದ ಎಸ್.ನಾರಾಯಣ್, ಉಪಾಧ್ಯಕ್ಷರಾಗಿ ಆದಿಶಕ್ತಿ ಗಣೇಶ್, ಬಸಾಪುರ ರೇವಣ್ಣ, ನ್ಯಾಷನಲ್ ಶಾಮಿಯಾನ ರಾಹೀಲ್ ಪಾಷ, ಕಾರ್ಯದರ್ಶಿ ಆಗತ್ತೂರು ಪಿ.ಜವರನಾಯಕ, ಸಹಕಾರ್ಯದರ್ಶಿ ಜನನಿ ವಿಜಯ್ ಕುಮಾರ್, ಎಸ್. ಖಜಾಂಚಿ ಚೌಡೇಶ್ವರಿ ರಂಗಸ್ವಾಮಿ, ನಿರ್ದೆಶಕರಾಗಿ ಇಟ್ನಾ ಸಿದ್ದನಾಯಕ, ಮುಳ್ಳೂರು [ಕಡಜೆಟ್ಟ]ಅಶ್ವತ್ ನಾರಾಯಣ, ಮುಳ್ಳೂರು ಪ್ರಕಾಶ್, ಮಹೇಶ್, ಬಿ.ಮಟಕೆರೆ ಮಂಜು, ಹಾಗೂ ನಂದಿಗೌಡ್ರು, ಬಸಾಪುರ ಶಿವಣ್ಣ, ಕಬಿನಿ ಸುರೇಂದ್ರ, ಶಾಂತಿಪುರ ಹರೀಶ್, ಹೊಸ ಬಿದರಹಳ್ಳಿ ಚಿನ್ನಯ್ಯ, ಬೆದ್ದಲಪುರ ಸೋಮೇಶ, ಕೊತ್ತೇಗಾಲ ನಂದಿ, ಹೊಸಬೀರ್ವಾಳ್ ಕೇಬಲ್…
ತುಮಕೂರು: ತುಮಕೂರಿನ ಗೊಲನ ಎಂಟರ್ ಪ್ರೈಸಸ್ ನಲ್ಲಿ ಇದೀಗ ಉದ್ಯೋಗಾವಕಾಶಗಳು ಲಭ್ಯವಿದ್ದು, ಆಸಕ್ತರು ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಗುತ್ತಿಗೆ ಆಧಾರಿತ ಕೆಲಸಗಳಿಗೆ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೀವು ಇಂದು ಕರೆ ಮಾಡಿದರೆ, ನಾಳೆಯೇ ಕೆಲಸಕ್ಕೆ ಸೇರ್ಪಡೆಗೊಳ್ಳಬಹುದಾಗಿದೆ. ಸೌಲಭ್ಯಗಳು: ಆಕರ್ಷಕ ವೇತನ (ಕರ್ನಾಟಕ ಕನಿಷ್ಠ ವೇತನ ಕಾಯ್ದೆ ಅನ್ವಯ) ಸರ್ಕಾರಿ ಅನುಮೋದಿತ ಸೌಲಭ್ಯಗಳು – ESI & EPF ಸುರಕ್ಷಿತ ಮತ್ತು ಉತ್ತಮ ಕೆಲಸದ ವಾತಾವರಣ ವಿದ್ಯಾರ್ಹತೆ: SSLC / PUC / ITI (ಪಾಸ್ / ಫೇಲ್ – ಎಲ್ಲರೂ ಅರ್ಜಿ ಹಾಕಬಹುದು) ಕೆಲಸದ ಸ್ಥಳಗಳು: ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು ವಸಂತನರಸಾಪುರ ಕೈಗಾರಿಕಾ ಪ್ರದೇಶ, ತುಮಕೂರು ಸಂಪರ್ಕಿಸಿ ತಕ್ಷಣ: +91 97417 17700 +91 99863 16494 +91 74831 08699 +91 73489 53684 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಇದೇ ಆಗಸ್ಟ್1ಕ್ಕೆ ತೆರೆಗೆ ಬರುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಇನ್ನೂ ಚಿತ್ರ ನೋಡಲು ಯಶ್ ಬರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪುಷ್ಪಾ ಉತ್ತರಿಸಿದ್ದಾರೆ. ಯಶ್‌ಗೆ ಹೇಳದೇ ಏನು ಮಾಡಿಲ್ಲ ಅವನಿಗೂ ಗೊತ್ತು. ಯಶ್ 25ವರ್ಷ ಆದ್ಮೇಲೆ ರಾಕಿಂಗ್ ಸ್ಟಾರ್ ಅಂತಾ ಗೊತ್ತಾಗಿದ್ದು ನಿಮಗೆ. ಅದರ ಹಿಂದೆ ಅವನು ಪಟ್ಟ ಶ್ರಮ ಎಷ್ಟಿದೆ ಅಂತಾ ನಮಗೆ ಗೊತ್ತು ಎಂದು ಅವರು ಹೇಳಿದರು. ಅವನೇ ಸಿನಿಮಾ ಪ್ರೊಡಕ್ಷನ್ ಮಾಡಲು ನಮಗೆ ಸ್ಫೂರ್ತಿ. ಮನೇಲಿರೋ ಬಾಸ್ (ಯಶ್) ಸಿನಿಮಾ ಮಾಡೋಕೆ ಸ್ಪೂರ್ತಿ ಎಂದಿದ್ದಾರೆ. ಸಿನಿಮಾ ಜನಕ್ಕೆ ಇಷ್ಟ ಆಗಲಿ ಗೆಲ್ಲಲಿ ಆಗ ಅವನು ಖುಷಿ ಪಡ್ತಾನೆ ಎಂದಿದ್ದಾರೆ. ಕೊತ್ತಲವಾಡಿ ಒಂದು ಹಳ್ಳಿಯಲ್ಲಿ ನಡೆಯುವ ಸಿನಿಮಾ. ಹಿಂದೆ ನನ್ನ ಮಗ ಯಶ್ ಕಿರಾತಕ ಸಿನಿಮಾ ಮಾಡಿದ್ದನ್ನ ಈಗಲೂ ನಮ್ಮೂರಿನ ಜನ ನೆನೆದುಕೊಳ್ತಾರೆ. ಆ ಬಗ್ಗೆ ಈಗಲೂ ಮಾತಾಡಿಕೊಳ್ತಾರೆ. ಹಾಗೆ ಈ ಕೊತ್ತಲವಾಡಿ ಸಿನಿಮಾ…
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ವಿವಿಧ ಶ್ರೇಣಿಯ 20 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂಎ ಸಲೀಂ ಆದೇಶಿಸಿದ್ದಾರೆ. ಮಂಗಳೂರು ಡಿಸಿಆರ್‌ಇ ಎಸ್‌ಪಿ ಸಿ.ಎ. ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿವೈಎಸ್‌ಪಿ ಎ.ಸಿ. ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿವೈಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್ ಇ.ಸಿ. ಸಂಪತ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಕುಸುಮಧರ್, ಶಿರಸಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ. ಸವಿತ್ರ ತೇಜ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಶಿವಶಂಕರ್, ಉತ್ತರ ಕನ್ನಡ, ಶಿರಸಿ ಎನ್ಎಂ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಅಂಕೋಲ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆರ್. ಸುಹಾಸ್, ಉತ್ತರ ಕನ್ನಡ ಮುಂಡಗೋಡ ಸಬ್‌ಇನ್‌ಸ್ಪೆಕ್ಟರ್ ವಿನೋದ್ ಎಸ್ ಕಾಳಪ್ಪನವರ್, ಮಂಗಳೂರು ಮೆಕ್ಸಾಂ…
ಪುಣೆ: ಗಂಡ ಕಾರಿಗಾಗಿ ಲೋನ್ ಮಾಡಿದ್ದು, ಇಎಂಐ ಇನ್ಸ್ಟಾಲ್ ಮೆಂಟ್ ತುಂಬುವುದಕ್ಕಾಗಿ ಹೆಂಡ್ತಿಗೆ ತನ್ನ ತವರಿನಿಂದ ಒಂದೂವರೆ ಲಕ್ಷ ರೂಪಾಯಿ ಕೇಳಿಕೊಂಡು ಬರುವಂತೆ ಕಿರುಕುಳ ನೀಡಿದ್ದಾನೆ. ಆದರೆ, ಹಣ ತರುವ ಸ್ಥಿತಿಯಲ್ಲಿಆಕೆ ಇರಲಿಲ್ಲ. ಇದರಿಂದ ಕೋಪಗೊಂಡ ಗಂಡ ಹೀನ ಕೆಲಸಕ್ಕೆ ಕೈ ಹಾಕಿದ್ದಾನೆ. ತನ್ನ ಬೇಡಿಕೆಗೆ ಬಗ್ಗದ ಪತ್ನಿಗೆ ಬುದ್ಧಿ ಕಲಿಸಲು ಪತಿ ಸ್ನಾನ ಗೃಹದಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ಆಕೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಪುಣೆಯ ಅಂಬೇಗಾಂವ್ ನಲ್ಲಿ ಈ ಘಟನೆ ನಡೆದಿದ್ದು, 4 ವರ್ಷಗಳ ಹಿಂದೆಯಷ್ಟೇ ಈ ಮಹಿಳೆ ಆರೋಪಿ ಜೊತೆಗೆ ವಿವಾಹವಾಗಿದ್ದಳು. ಸದ್ಯ ಯುವತಿ ತನ್ನ ಗಂಡ ಸೇರಿದಂತೆ 6 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಮಿಂಚುಹುಳುಗಳು ಈಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆಯಂತೆ, ನಂಬಲಸಾಧ್ಯವಾದರೂ ಇದು ಸತ್ಯ. ದೇಶದಲ್ಲಿನ ಒಟ್ಟಾರೆ ಮಿಂಚುಹುಳಗಳ ಪೈಕಿ ಶೇ.76ರಷ್ಚು ಮಿಂಚುಹುಳುಗಳು ಈಗಾಗಲೇ ನಶಿಸಿ ಹೋಗಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತೀಯ ವನ್ಯಜೀವಿ ಸಂಸ್ಥೆ (WII) ಸಹಯೋಗದೊಂದಿಗೆ ಇಬ್ಬರು ವಿಜ್ಞಾನಿಗಳು ನಡೆಸಿದ ಇತ್ತೀಚಿನ ರಾಷ್ಟ್ರವ್ಯಾಪಿ ಮಿಂಚುಹುಳುಗಳ ಜನಗಣತಿಯು ಕೇವಲ ಒಂದು ವರ್ಷದೊಳಗೆ ದೇಶಾದ್ಯಂತ ಅವುಗಳ ಸಂಖ್ಯೆಯಲ್ಲಿ ತೀವ್ರ ಮತ್ತು ಕಳವಳಕಾರಿ 76 ಪ್ರತಿಶತದಷ್ಟು ಕುಸಿತವನ್ನು ಬಹಿರಂಗಪಡಿಸಿದೆ. ಡೆಹ್ರಾಡೂನ್‌ನ ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರಸಾದ್ ಉನಿಯಾಲ್ ಮತ್ತು ಡಾ. ನಿಧಿ ರಾಣಾ ಅವರು ಪ್ರಾರಂಭಿಸಿದ ಪ್ರವರ್ತಕ ರಾಷ್ಟ್ರವ್ಯಾಪಿ ಮಿಂಚುಹುಳು ಜನಗಣತಿಯ ನಂತರ ಈ ವಾಸ್ತವಾಂಶವು ಬೆಳಕಿಗೆ ಬಂದಿದೆ. ಈ ಸಂಯೋಜಿತ ಅಂಶಗಳು ಮಿಂಚುಹುಳುಗಳ ನೈಸರ್ಗಿಕ ಜೀವನ ಚಕ್ರವನ್ನು ತೀವ್ರವಾಗಿ ಅಡ್ಡಿಪಡಿಸುತ್ತಿವೆ ಮತ್ತು ಅವುಗಳ ಜನಸಂಖ್ಯೆಯನ್ನು ತೀವ್ರವಾಗಿ ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಉನಿಯಾಲ್ ವಿವರಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಕೊಪ್ಪಳ: ಪೈಪ್ ನ ಮೇಲೆ ತುಂಗಭದ್ರಾ ಎಡದಂಡೆ ಕಾಲುವೆ ದಾಟಲು ಮುಂದಾಗಿದ್ದ ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕರೆಕಲ್ ಕ್ಯಾಂಪ್ ಬಳಿಯಲ್ಲಿ ನಡೆದಿದೆ. ಚೈತ್ರಾ ಯಾದವ್(13) ನೀರುಪಾಲಾದ ಬಾಲಕಿಯಾಗಿದ್ದಾಳೆ. ಕಾಲುವೆ ಎಡಭಾಗದಲ್ಲಿ ಬಾಲಕಿಯ ಪಾಲಕರು ಕುರಿಯ ಹಟ್ಟಿಯನ್ನು ಹಾಕಿಕೊಂಡಿದ್ದರು. ಕಾಲುವೆಗೆ ಅಡ್ಡಲಾಗಿ ಹಾಕಿರುವ ಪೈಪ್ ಮೂಲಕ ಕಾಲುವೆಯ ಬಲಭಾಗಕ್ಕೆ ಬಂದು, ತಮ್ಮ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಬಾಲಕಿಯು ಪೈಪ್ ಮೇಲಿಂದ ಕಾಲುವೆ ದಾಟಲು ಹೋಗಿದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಈ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಬೆಂಗಳೂರು: ಇಬ್ಬರು ಮಹಿಳೆಯರನ್ನು ಬಟ್ಟೆ ಬಿಚ್ಚಿಸಿ ಡಿಜಿಟಲ್ ಅರೆಸ್ಟ್ ಮಾಡಿಸಿದ ಘಟನೆ ವರದಿಯಾಗಿದೆ. ಕೆಲವು ಸೈಬರ್ ಅಪರಾಧಿಗಳು, ಮುಂಬೈ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಅವರನ್ನು ವಿವಸ್ತ್ರಗೊಳಿಸಿ ವೀಡಿಯೊ ಕರೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಜುಲೈ 17, 2025 ರಂದು ನಡೆದಿದ್ದು, ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳು ಸಂತ್ರಸ್ತ ಮಹಿಳೆಯರಿಗೆ ಕರೆ ಮಾಡಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕರೆ ಮಾಡಿದ ಆರೋಪಿಗಳು ಮಹಿಳೆಯೊಬ್ಬರು ಜೆಟ್ ಏರ್ ವೇಸ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಹಣ ವರ್ಗಾವಣೆ, ಮಾನವ ಕಳ್ಳಸಾಗಣೆ ಮತ್ತು ಕೊಲೆಗೂ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದರು. ನಿಖರವಾದ ಆಧಾರ್ ವಿವರಗಳನ್ನು ಉಲ್ಲೇಖಿಸಿ ಮತ್ತು ನಕಲಿ ಬಂಧನ ವಾರಂಟ್‌ಗಳೊಂದಿಗೆ ಬೆದರಿಕೆ ಹಾಕುವ ಮೂಲಕ, ಅವರು ಮಹಿಳೆಯರಲ್ಲಿ ಭಯವನ್ನು ಹುಟ್ಟುಹಾಕಿದರು ಮತ್ತು ಹಲವಾರು ಅವಮಾನಕರ ಮತ್ತು ಕಾನೂನುಬಾಹಿರ ಬೇಡಿಕೆಗಳಿಗೆ ಒಪ್ಪುವಂತೆ ಒತ್ತಾಯಿಸಿದರು ಎಂದು ವರದಿಯಾಗಿದೆ. ಆರ್ ಬಿಐ ಮತ್ತು ಸಿಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಪರಿಶೀಲನಾ ವಿಧಾನಗಳನ್ನು ಉಲ್ಲೇಖಿಸಿ ವಂಚಕರು ಮಹಿಳೆಯೊಬ್ಬರ…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದ್ದು, ಕರಾಮುವಿಯು ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2025–26ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಪ್ರವೇಶಾತಿಗೆ 2025ರ ಸೆಪ್ಟೆಂಬರ್ 15 ಕೊನೆಯ ದಿನಾಂಕ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಂಜೂರಾಗುವ ಶುಲ್ಕ ಪಾವತಿ ಸೌಲಭ್ಯದಡಿ ಕರಾಮುವಿಯ ಈ ಮೇಲ್ಕಂಡ ಕೋರ್ಸ್ ಗಳಿಗೆ ಸೇರ ಬಯಸುವ ಅಲ್ಪಸಂಖ್ಯಾತ ವರ್ಗದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧಿಸ್ಟ್ ಮತ್ತು ಪಾರ್ಸಿ) ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಂತರ್ಜಾಲ https://dom.karnataka.gov.in ದಲ್ಲಿರುವ ಕರಾಮುವಿಯ ಪ್ರವೇಶಾತಿ ಪೋರ್ಟಲ್…
ಬೀದರ್: ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಅವರಿಗೆ ಭಿಕ್ಷೆ ನೀಡಿ ಪ್ರೋತ್ಸಾಹಿಸದೇ ಅದನ್ನು ಬಹಿಷ್ಕರಿಸಿ, ಬೀದರ್ ಜಿಲ್ಲೆಯನ್ನು ಭಿಕ್ಷಾಟನೆ ಮುಕ್ತವಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿರುವವರು ಕಂಡು ಬಂದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿ ಅಥವಾ ಟೋಲ್ ಫ್ರೀ ಸಂಖ್ಯೆ 10581 ಮತ್ತು ಸಹಾಯವಾಣಿ ಸಂಖ್ಯೆ: 94823 00400 ಕರೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ನಡೆಯುವ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112ಗೆ ಅಥವಾ ಸಮೀಪದಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ. ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಮೂರು ತಿಂಗಳು ಕಠಿಣ ಕಾರಗೃಹವಾಸ ಹಾಗೂ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ್ದಲ್ಲಿ ಬಾಲನ್ಯಾಯ ಮಕ್ಕಳ ರಕ್ಷಣೆ…