Author: admin

ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದು, ಬಹುಪತಿತ್ವದ ಸಂಪ್ರದಾಯದ ಅಡಿಯಲ್ಲಿ ಈ ವಿವಾಹ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು. ನವ ವಧು ಸುನೀತಾ ಚೌಹಾಣ್ ಮತ್ತು ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಅವರು ಯಾವುದೇ ಒತ್ತಡವಿಲ್ಲದೆ ಈ ಮದುವೆಯ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತ ಹೇಳಿದರು. ಜುಲೈ 12 ರಂದು ಸಿರ್ಮೌರ್ ಜಿಲ್ಲೆಯ ಟ್ರಾನ್ಸ್–ಗಿರಿ ಪ್ರದೇಶದಲ್ಲಿ ನಡೆದ ಮೂರು ದಿನಗಳ ಮದುವೆ ಸಮಾರಂಭಕ್ಕೆ ಸ್ಥಳೀಯ ಜಾನಪದ ಹಾಡುಗಳು ಮತ್ತು ನೃತ್ಯಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು. ಈ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.  ಇನ್ನೂ ವಧು ಕುನ್ಹಾತ್ ಗ್ರಾಮದ ಸುನೀತಾ ಈ ಮದುವೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಸಂಪ್ರದಾಯದ ಬಗ್ಗೆ ತನಗೆ ಅರಿವಿತ್ತು ಮತ್ತು ಯಾವುದೇ ಒತ್ತಡವಿಲ್ಲದೆ ತನ್ನ ನಿರ್ಧಾರವನ್ನು ತೆಗೆದುಕೊಂಡೆ ಮತ್ತು ಈ ಬಂಧವನ್ನು ನಾನು ತುಂಬಾನೇ ಗೌರವಿಸುತ್ತೇನೆ  ಎಂದು ಹೇಳಿದರು. ಶಿಲೈ ಗ್ರಾಮದ ಪ್ರದೀಪ್…

Read More

ಸರಗೂರು: ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾ ಸರಗೂರು ತಾಲೂಕು ಘಟಕದಿಂದ ಆಗಸ್ಟ್ 4 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆದಿ ಕರ್ನಾಟಕ ಮಹಾಸಭಾದ ತಾಲೂಕು ಶಿವಣ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಸಾಲಿನಲ್ಲಿಯೂ ಪ್ರತಿಭಾ ಮಕ್ಕಳನ್ನು ಪ್ರೋತ್ಸಾಹಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಸ್‌ ಎಸ್‌ಎಲ್‌ ಸಿ, ಪಿಯು ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಲ್ಲಿಕೆಗೆ ಜು.30 ಕಡೆ ದಿನವಾಗಲಿದೆ. ಹೀಗಾಗಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಂಬೇಡ್ಕರ್ ಟ್ರಸ್ಟ್ ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದರು. ಅಂಬೇಡ್ಕರ್ ಟ್ರಸ್ಟ್, ಆದಿ ಕರ್ನಾಟಕ ಮಹಾಸಭಾ ಜಂಟಿಯಾಗಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ಆ.4ರಂದು ಬೆಳಗ್ಗೆ 11ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಶಾಸಕ…

Read More

ಸರಗೂರು:  ತಾಲೂಕಿನ ಬಿ ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕವಾಡಿ ಗ್ರಾಮದ ನಾಗಪ್ಪ ಎಂಬುವರ ಮಗನಾದ ಪ್ರಸನ್ನ ಸೇರಿದ ಜಮೀನಲ್ಲಿ ಸೋಮವಾರದಂದು ಹುಲಿ ಹೆಜ್ಜೆ ಗುರುತು ಕಂಡು ಬಂಕವಾಡಿ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರಂದು ರಾತ್ರಿ ಹುಲಿ ಜಮೀನಿನಲ್ಲಿ ಕಾಣಿಸಿಕೊಂಡಿದೆ. ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತರು ಹುಲಿಯನ್ನು ಕಂಡು ಗಾಬರಿಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಗ್ರಾಮಸ್ಥರಿಗೆ ಹುಲಿ ಹೆಜ್ಜೆ ಗುರುತು ಕಂಡು ಬಂದಿದ್ದು, ಹುಲಿ ಜಮೀನಿನಲ್ಲೇ ಬೀಡು ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹುಲಿಯನ್ನು ಸೆರೆಹಿಡಿಯಲು ಮೊಳೆಯೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು  ಒತ್ತಾಯಿಸಿದ್ದಾರೆ.   ಹುಲಿ ಹೆಜ್ಜೆ ಗುರುತನ್ನು ಕಂಡು ಅತಂಕಕೊಳಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಆದರೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಗ್ರಾಮಸ್ಥರ ಮನವಿಗೆ  ಸ್ಪಂದಿಸುತ್ತಿಲ್ಲ, ಸ್ಥಳಕ್ಕೂ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಕಳೆದ ಒಂದು ತಿಂಗಳಿನಿಂದ ಹುಲಿ ಹಾಗೂ ಆನೆಗಳು ಹಾವಳಿಯಿಂದ ದಿನನಿತ್ಯ ಜಮೀನಲ್ಲಿ…

Read More

ತುಮಕೂರು : ಜಿಲ್ಲೆಯ ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದ ವಾಸಿಯಾದ ರವೀಶ ವೈ.ಟಿ.  ತಾಲ್ಲೂಕು ಮೀನುಗಾರರ ಸಹಕಾರ ಸಂಘ ನಿಯಮಿತ ಯಲಿಯೂರು ಈ ಸಂಘದ ಅಧ್ಯಕ್ಷರಾಗಿದ್ದು, ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯದ ನಿರ್ದೇಶನದಂತೆ ಈ ಹಿಂದೆ ಸಂಘದ ಬ್ಯಾಂಕಿನ ವ್ಯವಹಾರಗಳನ್ನು ತಡೆ ಹಿಡಿದಿದ್ದು, ಬ್ಯಾಂಕಿನ ವ್ಯವಹಾರ ತಡೆಹಿಡಿದಿರುವುದನ್ನು ತೆರವುಗೊಳಿಸುವಂತೆ ಬ್ಯಾಂಕಿಗೆ ಪತ್ರ ಬರೆಯಲು ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯ ಮತ್ತು  ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಪಿರ್ಯಾದಿ ರವೀಶ ವೈ ಟಿ ಇವರಿಂದ 20,000 ಸಾವಿರ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ದೂರುದಾರನಾದ ರವೀಶ.ವೈ.ಟಿ. ಲಂಚದ ಹಣ ಕೊಡಲು ಇಷ್ಟವಿಲ್ಲದೇ ದಿನಾಂಕ : 21/07/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸ್ ಇನ್ಸ್‌ ಪೆಕ್ಟರ್ ರಾಜು ಟಿ. ಮೊ.ನಂ:05/2025 ಕಲಂ–7(0) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ–1988 (ತಿದ್ದುಪಡಿ–2018) ರಂತೆ ಪ್ರಕರಣ ದಾಖಲಿಸಿಕೊಂಡು, ಟ್ರ್ಯಾಪ್ ಕಾರ್ಯಾಚರಣೆ…

Read More

ಸರಗೂರು:  ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ದೇವನಹಳ್ಳಿ ಚನ್ನರಾಯಪಟ್ಟಣ ಭೂ ಹೋರಾಟ ಸಮಿತಿಯಿಂದ ರೈತ ಹುತಾತ್ಮ ದಿನ ಆಚರಿಸಲಾಯಿತು. ಈ ವೇಳೆ  ಸರಳವಾಗಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು . ನಂತರ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನನಾಯಕ, ಶಿಕ್ಷಣ ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನವನ್ನು ಕೈಬಿಟ್ಟಿದ್ದು ಇದನ್ನು ಕೂಡಲೇ ಗೆಜೆಟ್ ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ಸು ಪಡೆಯಬೇಕು ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು. ರೈತ ಸಂಘದ ಯುವ ಘಟಕದ ಅಧ್ಯಕ್ಷ ನವೀನ್ ಹಳೆಹೆಗ್ಗುಡಿಲು ಮಾತನಾಡಿ, ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ, ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸ ಬೇಕು ಹಾಗೇನೆ ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕತಿದ್ದುಪಡಿ ಕೋಡ್ ಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ರಸ ಗೊಬ್ಬರದ ಕೊರತೆಯನ್ನು ಸರಿಪಡಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು.…

Read More

ಸರಗೂರು:  ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ 84 ನೇ ವರ್ಷದ ಹುಟ್ಟು ಹಬ್ಬವನ್ನು, ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು,  ವೈಯಕ್ತಿಕ ಜೀವನ ಮತ್ತು ರಾಜಕೀಯ ಬದುಕಿನಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ ನಲ್ಲೇ ಅತ್ಯಂತ ಹಿರಿಯರು ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜುಲೈ 21 ಸೋಮವಾರ 83 ವಸಂತಗಳನ್ನು ಪೂರೈಸಿ 84 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ರಾಜಕೀಯ ಬದುಕಿನಲ್ಲಿ 50 ವರ್ಷಗಳ ಸುದೀರ್ಘ ಹಾದಿ ಕ್ರಮಿಸಿ, ಐದು ದಶಕಗಳ ಸಾರ್ವಜನಿಕ ಬದುಕು ಪೂರೈಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ ಎಂದರು. ಪಪಂ ಸದಸ್ಯ ಹಾಗೂ ನಾಯಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, 5 ದಶಕಗಳ ಪಕ್ಷ ನಿಷ್ಠೆಯ…

Read More

ಕೊರಟಗೆರೆ : ಗೊಬ್ಬರ ತುಂಬಿದ್ದ ಲಾರಿ ಬ್ರೇಕ್ ಫೇಲ್ಯೂರ್ ಆಗಿ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಮಂಗಳವಾರ ಬೆ.12 ಗಂಟೆ ಸುಮಾರಿಗೆ ಕೋಳಾಲ ಪೋಲಿಸ್ ಠಾಣೆ ರಸ್ತೆ ಕಡೆಯಿಂದ ಬಂದ ಗೊಬ್ಬರದ ಲಾರಿ ಬ್ರೇಕ್ ಫೇಲ್ಯೂರ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬೈರವೇಶ್ವರ ಬೇಕರಿಗೆ ನುಗ್ಗಿದ್ದು, ಈ ದುರಂತದಲ್ಲಿ ಬೇಕರಿ ಮುಂದೆಯಿದ್ದ  ರಂಗಶಾಮಯ್ಯ(70), ಬೈಲಪ್ಪ(65), ಜಯಣ್ಣ(55) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾಜಿ ತಾ.ಪಂ. ಸದಸ್ಯೆ ಸಿದ್ದಗಂಗಮ್ಮ ಪ್ರಜ್ಞಾಹೀನಗೊಂಡಿದ್ದು, ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬುದು ತಿಳಿದು ಬಂದಿದೆ. ಬೇಕರಿ ಮಾಲೀಕನು ಈ ದುರಂತದಿಂದ ಪಾರಾಗಿದ್ದು. ಹಿಂದೆಯೂ ಕೂಡ ಇದೇ ರೀತಿ ನಡೆದ ಉದಾಹರಣೆ ಇದೆ. ರೋಡ್ ಹಂಪ್ ಇಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯ ಸಾರ್ವಜನಿಕರು ಸಂಭಂದಪಟ್ಟ ಅಧಿಕಾರಿಗಳ ವಿರುದ್ದ…

Read More

ಸರಗೂರು: ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಬೇಕು, ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಲಂಕೆ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ ಪಟ್ಟಣದ ಸರಗೂರು ವಲಯ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ರೈತರ ಜಮೀನುಗಳು ಕಾಡಂಚಿನ ಭಾಗಗಳಲ್ಲಿದ್ದು, ಈ ಭಾಗದಲ್ಲಿ ಬೆಳೆಯುವ ಹತ್ತಿ, ಜೋಳ, ಬಾಳೆ, ಕಬ್ಬು, ರಾಗಿ, ಭತ್ತ, ತೊಗರಿ, ತೋಟಗಾರಿಕ ಬೆಳೆಗಳು, ತರಕಾರಿ ಬೆಳೆಗಳಿಗೆ ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ. ಚಿಕ್ಕದೇವಮ್ಮನ ಬೆಟ್ಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿ ತಡೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾವಲು ಕಾಯಬೇಕು. ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು.…

Read More

ಯುವ ರಾಜ್ ಕುಮಾರ್  ನಟನೆಯ ‘ಎಕ್ಕ’ ಚಿತ್ರ ಕಳೆದ ವಾರ ತೆರೆಗಪ್ಪಳಿಸಿದೆ. ಈ ಚಿತ್ರ ಈ ಸಾಲಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪಿಆರ್‌ ಕೆ ಪ್ರೊಡಕ್ಷನ್ಸ್​​ ನ ಅಶ್ವಿನಿ ಪುನೀತ್ ರಾಜ್‌ ಕುಮಾರ್, ಜಯಣ್ಣ ಫಿಲ್ಮ್ಸ್​​​ನ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 6.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಶುಕ್ರವಾರ 1.45 ಕೋಟಿ ರೂ., ಶನಿವಾರ 1.35 ಕೋಟಿ ರೂ., ಭಾನುವಾರ 1.65 ಕೋಟಿ ರೂ., ಸೋಮವಾರ 0.78 ರೂಪಾಯಿ ಒಟ್ಟು 5.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಒಳ್ಳೆಯ ಚಿತ್ರಗಳನ್ನು ಮಾಡಿದರೆ ಜನ ಖಂಡಿತವಾಗಿಯೂ  ಸಿನಿಮಾ ಮಂದಿರಕ್ಕೆ ಬರುತ್ತಾರೆ ಎನ್ನುವುದು ಸಾಬೀತಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಮಾದೇವ ಚಿತ್ರ ಕೂಡ ದೊಡ್ಡ ಯಶಸ್ಸನ್ನು ಪಡೆದಿದೆ. ಸಿನಿಮಾ…

Read More

ಮಂಡ್ಯ: ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಮೂಲದ ಭರತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಓದಿನ ಬಗ್ಗೆ ನಿರಾಸಕ್ತಿ ಹೊಂದಿದ್ದ ಭರತ್ ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದ. ಅಲ್ಲದೇ ಕಾಲೇಜಿಗೂ ಸಹ ಭರತ್ ಸರಿಯಾಗಿ ಹೋಗುತ್ತಿರಲಿಲ್ಲ. ಫುಟ್ಬಾಲ್ ಆಟದಲ್ಲಿ ಭರತ್ ಹೆಚ್ಚಿನ ಆಸಕ್ತಿ ಹೊಂದಿದ್ದ. ಮೊದಲ ವರ್ಷ ಗೈರು ಆಗಿದ್ದ ಪರೀಕ್ಷೆಗಳನ್ನು ಈ ಬಾರಿ ಪಾಸ್ ಮಾಡಿಕೊಳ್ಳಬೇಕೆಂದು ಪರೀಕ್ಷಾ ಶುಲ್ಕವನ್ನು ಕಟ್ಟಲು ಭರತ್ ಮುಂದಾಗಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್‌ ನ ವಿದ್ಯಾರ್ಥಿಗಳೊಂದಿಗೆ ಭರತ್ ಮಾತನಾಡಿದ್ದಾನೆ. ಬಳಿಕ ತನ್ನ ಕೊಠಡಿಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ  ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More